ನಮ್ಮ ಮೈಸೂರ ದಸರಾ 2025

ಯುವ ದಸರೆಗೆ ವರ್ಣರಂಜಿತ ಚಾಲನೆ : ಮೋಡಿ ಮಾಡಿದ ಅರ್ಜುನ್‌ ಜನ್ಯ ಸಂಗೀತ

ಮೈಸೂರು : ಹೊರವಲಯದ ಉತ್ತನಹಳ್ಳಿಯ ಬಳಿ ನಡೆಯುತ್ತಿರುವ ʻಯುವ ದಸರಾʼದ ಮೊದಲ ದಿನವಾದ ಭಾನುವಾರ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ ಹಾಡುಗಳು ಪ್ರೇಕ್ಷಕರನ್ನು ಮೋಡಿ ಮಾಡಿದವು. ಸೊಂಪಾದ ಆಲಾಪ, ಹುಚ್ಚೆದ್ದು ಕುಣಿಸುವ ಹಾಡುಗಳ ಮಿಶ್ರಣವು ಪ್ರೇಕ್ಷಕರಿಗೆ ಮುದ ನೀಡಿದೆ.

ಇದನ್ನು ಓದಿ : Mysuru dasara | ಅರಮನೆಯಲ್ಲಿ ಥೈಕ್ಕುಡಂ ಬ್ರಿಡ್ಜ್‌ ಸಂಗೀತದ ಹೊಳೆ

ವೇದಿಕೆ ಮೇಲೆ ನೃತ್ಯಗಾರ್ತಿಯರು ನೃತ್ಯ ಪ್ರದರ್ಶಿಸುತ್ತಿದ್ದಂತೆ ಆಕಾಶದಲ್ಲಿ ಬಾಣಬಿರುಸುಗಳನ್ಬು ಸಿಡಿಸುತ್ತಿದ್ದಂತೆ ಅರ್ಜುನ್ ಜನ್ಯ ಎಂಟ್ರಿಕೊಟ್ಟರು. ಬಳಿಕ ಕನ್ನಡ ಚಿತ್ರರಂಗಕ್ಕೆ ಮೈಸೂರಿನ ಕೊಡುಗೆ ಅಪಾರ ಎನ್ನುತ್ತಲೇ ಮಾತು ಶುರುಮಾಡಿದ ಅರ್ಜುನ್ಯ ಜಗವೇ ನೀನು ಗೆಳತಿಯೇ ನನ್ನ ಜೀವದ ಒಡತಿಯೇ… ಊಸಿರೇ ನೀನು ಗೆಳತಿಯೇ…. ಹಾಡನ್ನು ಹಾಡುತ್ತಿದ್ದಂತೆ ಎದುರುಗಡೆ ಇದ್ದ ಸಹಸ್ರಾರು ಜನರು ದನಿಗೂಡಿಸಿದರು. ಬಳಿಕ ಒಂದೂವರೆ ಗಂಟೆಗಳ ಕಾಲ ತಮ್ಮದೇ ಸಂಗೀತ ರಚನೆಯ ಹಾಡುಗಳನ್ನು ಹಾಡಿ ಮೋಡಿ ಮಾಡಿದರು.

ನಂತರ, ಗಾಯಕ ಸುನೀಲ್- ನೀ ನಗೊವರೆಗೂ ನಿನ್ನೆ ಮೊನ್ನೆವರೆಗೂ ಸೊನ್ನೆಯಾಗಿದ್ದೇನಾ, ನಿನ್ನ ಕಂಡು ಮರೆತೆ ನನ್ನ ನಾ… ಮೈಸೂರಿನ ಪ್ರತಿಭೆ ಗಾಯಕರಾದ ಇಂದು ನಾಗರಾಜ್ ಅವರು ಅರಳದ ಮಲ್ಲಿಗೆ ಬಾಡಿತೆ ಮೆಲ್ಲಗೆ ಅಳುತಿದೆ ತುಸು ಮೆಲ್ಲಗೆ ಹಾಡನ್ನು ಹಾಡಿದರೆ, ಮತ್ತೊಬ್ಬ ಗಾಯಕಿ ಐಶ್ವರ್ಯ ರಂಗರಾಜನ್ ಹೂವಿನ ಬಾಣದಂತೆ ಯಾರಿಗೂ ಕಾಣದಂತೆ ಹಾಡು ಹೇಳುವ ಮೂಲಕ ಕುಣಿಯುವಂತೆ ಮಾಡಿದರು.

ಆಂದೋಲನ ಡೆಸ್ಕ್

Recent Posts

ಕೊಡಗು ; ವ್ಯಕ್ತಿ ಬಲಿ ಪಡೆದಿದ್ದ ರೌಡಿ ಆನೆ ಕೊನೆಗೂ ಸೆರೆ

ಕೊಡಗು : ಕಳೆದ ಕೆಲ ದಿನಗಳಿಂದ ಉಪಟಳ ನೀಡುವ ಜತೆಗೆ ವ್ಯಕ್ತಿಯ ಮೇಲೆ ದಾಳಿ ಮಾಡಿ ಬಲಿ ಪಡೆದಿದ್ದ ಕಾಡಾನೆಯನ್ನು…

5 hours ago

ಸೋಮವಾರದಿಂದಲೇ ತಂಬಾಕು ಖರೀದಿ : ಗೋಯಲ್‌ ಭರವಸೆ

ಬೆಂಗಳೂರು : ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ತಂಬಾಕು ಬೆಳೆಗಾರರ ಸಮಸ್ಯೆಗಳ ಬಗ್ಗೆ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ…

5 hours ago

ಸೃಜನಶೀಲತೆಗೆ  ʻಎಐʼ ಕುತ್ತು : ಲೇಖಕ ನಾಗಭೂಷಣ ಸ್ವಾಮಿ

ಬೆಂಗಳೂರು : ಸಾಹಿತ್ಯದಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆಯಿಂದ ಸಾಕಷ್ಟು ಅಪಾಯಗಳು ಎದುರಾಗುತ್ತವೆ, ಮನುಷ್ಯನ ಸೃಜನಶೀಲ ಚಿಂತನೆಗೆ ಎಐ ತಂತ್ರಜ್ಞಾನ ಮಾರಕವಾಗಲಿದೆ…

6 hours ago

ಊಹಾ ಪತ್ರಿಕೋದ್ಯಮ ಬಿಟ್ಟು, ಸತ್ಯವನ್ನೇ ಬರೆಯಿರಿ : ಪತ್ರಕರ್ತರಿಗೆ ಮುಖ್ಯಮಂತ್ರಿ ಸಲಹೆ

ಬೆಂಗಳೂರು : ನಾವು ಯಾರ ಪರವಾಗಿ ಇದ್ದೇವೆ ಎನ್ನುವ ಸ್ಪಷ್ಟ ಅರಿವು ಮಾಧ್ಯಮದವರಿಗೆ ಇರಬೇಕು. ಸರ್ಕಾರ ಕಟ್ಟ ಕಡೆಯ ಮನುಷ್ಯರ…

6 hours ago

ಕೈ ಸಾಲವಾಗಿ 25 ಕೋಟಿ ನೀಡುವ ಆಮಿಷ : ಹುಬ್ಬಳ್ಳಿಯ ವ್ಯಕ್ತಿಗೆ ಮೈಸೂರಿನ ಐವರಿಂದ ಲಕ್ಷಾಂತರ ರೂ. ವಂಚನೆ

ಮೈಸೂರು : ಹುಬ್ಬಳ್ಳಿಯ ಹರ್ಷ ಎಂಬುವವರಿಗೆ ಕೈ ಸಾಲವಾಗಿ 25 ಕೋಟಿ ರೂ. ನೀಡುತ್ತೇವೆ ಎಂದು ಆಮಿಷವೊಡ್ಡಿ ಮೈಸೂರು ಮೂಲದ…

6 hours ago

ಮಹಿಳೆಯರಿಗೆ ಋತುಚಕ್ರದ ರಜೆ ಕಡ್ಡಾಯ : ನಾಗಲಕ್ಷ್ಮೀ ಚೌಧರಿ

ಮೈಸೂರು : ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ದುಡಿಯುತ್ತಿರುವ ಮಹಿಳೆಯರಿಗೆ ಋತುಚಕ್ರದ ರಜೆ ಕಡ್ಡಾಯವಾಗಿ ಕೊಡಬೇಕು. ಇಲ್ಲದಿದ್ದರೆ ಶಿಸ್ತು ಕ್ರಮ…

7 hours ago