ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ವಿಜಯದಶಮಿ ಜಂಬೂಸವಾರಿ ಮೆರವಣಿಗೆ ನಾಳೆ ವಿಜೃಂಭಣೆಯಿಂದ ನಡೆಯಲಿದೆ.
ಈ ಹಿನ್ನೆಲೆಯಲ್ಲಿಂದು ಮೈಸೂರು ನಗರದ ಚಾಮರಾಜ ಮೊಹಲ್ಲಾದಲ್ಲಿರುವ ಹಜರತ್ ಇಮಾಮ್ ಶಾ ವಲೀ ದರ್ಗಾಕ್ಕೆ ದಸರಾ ಆನೆಗಳು ಬಂದು ಸಲಾಂ ಮಾಡಿದವು.
ಸೂಫಿ ಸಂತ ಇಮಾಮ್ ಶಾ ವಲೀ ಅವರಿಗೆ ಹಾಗೂ ಚಾಮುಂಡೇಶ್ವರಿ ದೇವಿಗೆ ಜನತೆ ಜಯಕಾರ ಹಾಕಿದರು.
ಕಳೆದ 83 ವರ್ಷಗಳಿಂದಲೂ ವಿಜಯದಶಮಿಯ ಮುನ್ನಾ ದಿನ ಆನೆಗಳು ಇಲ್ಲಿಗೆ ಬರುತ್ತವೆ.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಅವಧಿಯಲ್ಲಿ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಆನೆಯೊಂದಕ್ಕೆ ಆರೋಗ್ಯದ ಸಮಸ್ಯೆ ಕಾಣಿಸಿಕೊಂಡಿತ್ತು.
ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿ, ಆಶೀರ್ವಾದ ಪಡೆದ ನಂತರ ಆನೆಯ ಆರೋಗ್ಯ ಸುಧಾರಿಸಿತು. ಅಂದಿನಿಂದ ಇಂದಿನವರೆಗೂ ದಸರಾ ಆನೆಗಳು ಪ್ರತಿ ದಸರಾದಲ್ಲೂ ದರ್ಗಾಗೆ ಭೇಟಿ ನೀಡುವುದು ವಾಡಿಕೆಯಾಗಿದೆ.
ಈ ಹಿನ್ನೆಲೆಯಲ್ಲಿ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ದಸರಾ ಆನೆಗಳನ್ನು ದರ್ಗಾಗೆ ಕರೆತಂದು, ಧೂಪಾರತಿ ಮಾಡಿದ ನಂತರ ವಿಭೂತಿಯನ್ನು ಹಣೆಗೆ ಹಚ್ಚಲಾಯಿತು. ದರ್ಗಾದ ಚಾದರ ಮೇಲಿಟ್ಟಿದ್ದ ನವಿಲುಗರಿಯಿಂದ ಆಶೀರ್ವಾದವನ್ನು ದರ್ಗಾದ ಮುಖ್ಯಸ್ಥ ಮೊಹಮ್ಮದ್ ನಖೀಬುಲ್ಲಾ ಷಾ ಖಾದ್ರಿ ಮಾಡಿದರು. ಬಳಿಕ ಎಲ್ಲಾ ಆನೆಗಳು ಸೊಂಡಿಲೆತ್ತಿ ದರ್ಗಾಗೆ ನಮಸ್ಕರಿಸಿದವು
ಬೆಂಗಳೂರು: ಸಾರ್ವಜನಿಕರಿಗೆ ಪಿಎಫ್ ಹಣ ವಂಚನೆ ಮಾಡಿದ ಪ್ರಕರಣದಲ್ಲಿ ನನ್ನ ಪಾತ್ರ ಏನೂ ಇಲ್ಲ ಎಂದು ಭಾರತ ಕ್ರಿಕೆಟ್ ತಂಡದ…
ಮಂಡ್ಯ: 88ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಬಳ್ಳಾರಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ. ಈ ಮೂಲಕ 66ವರ್ಷದ ಬಳಿಕ ಗಣಿನಾಡಿಗೆ ನುಡಿತೇರು…
ಬೆಳಗಾವಿ: ಚಳಿಗಾಳದ ಅಧಿವೇಶನ ಸಂದರ್ಭದಲ್ಲಿ ಪಂಚಮಶಾಲಿಗಳು ತಮ್ಮ ಮೀಸಲಾತಿಗಾಗಿ ಸುವರ್ಣ ಸೌಧದ ಹತ್ತಿರ ಹೋರಾಟ ಮಾಡುವಾಗ ಪೊಲೀಸರು ಲಾಠಿ ಚಾರ್ಜ್…
ಕಲಬುರ್ಗಿ: ನಗರದ ಏಳು ಎಕರೆ ಪ್ರದೇಶದಲ್ಲಿ ನೂತನವಾಗಿ ನಿರ್ಮಿಸಿರುವ ಜಯದೇವ ಹೃದ್ರೋಗ ವಿಜ್ಞಾನ ಹಾಗೂ ಸಂಶೋಧನಾ ಸಂಸ್ಥೆಯ ಕಟ್ಟಡವನ್ನು ಇಂದು…
ಮಂಡ್ಯ: ವಿದೇಶದಲ್ಲಿ 40 ಲಕ್ಷಕ್ಕೂ ಅಧಿಕ ಕನ್ನಡಿಗರಿದ್ದು ಅವರಲ್ಲಿ 5 ಲಕ್ಷಕ್ಕೂ ಅಧಿಕ ಕನ್ನಡಿಗರು ಅಮೆರಿಕಾದಲ್ಲೇ ಇದ್ದಾರೆ. ಅಕ್ಕ ಸಮೇಳನದ…
ಬೆಂಗಳೂರು: ಕಾಂಗ್ರೆಸ್ ಸರ್ಕಾರದಿಂದ ಕನ್ನಡದ ಉದ್ಧಾರ ಸಾಧ್ಯವೇ ಇಲ್ಲ, ಕನ್ನಡ ಶಾಲೆಗಳ ಅಸ್ತಿತ್ವ ಉಳಿಯುವ ಭರವಸೆ ಇಲ್ಲ ಎಂದು ಬಿಜೆಪಿ…