prathap simha
ಮೈಸೂರು : 17 ಬಾರಿ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿಗೆ ಏನು ಮಾಡಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದರು.
ರಾಜ್ಯ ಬಜೆಟ್ ವಿಚಾರ ಕುರಿತು ನಗರದಲ್ಲಿ ಮಂಗಳವಾರ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರು ಅಧಿಕಾರಿಗಳು 17 ಬಾರಿ ಬರೆದು ಕೊಟ್ಟ ಬಜೆಟ್ ಓದಿದ್ದಾರೆ ಅಷ್ಟೆ. 17 ಬಜೆಟ್ ನಲ್ಲಿ ಸಿದ್ದರಾಮಯ್ಯನವರು ಇಡೀ ಮೈಸೂರಿನ ಜನ ನೆನಪಿಕೊಟ್ಟುಕೊಳ್ಳುವಂತಹ ಒಂದು ಕೆಲಸ ಮಾಡಿದ್ದಾರಾ? ಎಂದು ಕೇಳಿದರು.
ಮೂರೇ ಮೂರು ವರ್ಷಗಳಲ್ಲಿ ಶಿವಮೊಗ್ಗವನ್ನು ದೊಡ್ಡ ಮಟ್ಟದಲ್ಲಿ ಯಡಿಯೂರಪ್ಪ ಅಭಿವೃದ್ಧಿ ಮಾಡಿದ್ದಾರೆ. ಶಿವಮೊಗ್ಗದ ಜನ ತಲೆ ತಲಾಂತರ ನೆನಪಿಟ್ಟುಕೊಳ್ಳುವಂತೆ ಯಡಿಯೂರಪ್ಪ ಶಿವಮೊಗ್ಗ ಅಭಿವೃದ್ಧಿ ಮಾಡಿದ್ದಾರೆ. 17 ಬಾರಿ ಬಜೆಟ್ ಮಾಡಿದ ಸಿದ್ದರಾಮಯ್ಯ ಮೈಸೂರಿಗೆ ಏನು ಮಾಡಿದ್ದಾರೆ ಹೇಳಲಿ ಎಂದು ಆಗ್ರಹಿಸಿದರು.
ಫಿಲಂಸಿಟಿ ಅನ್ನೋದು ಮೆಗಾ ಸೀರಿಯಲ್ ಕಥೆ ಆಗಿದೆ ಅಷ್ಟೆ. ಸಿದ್ದರಾಮಯ್ಯ ಅಧಿಕಾರದಲ್ಲಿ ಇನ್ನೂ ಒಂದು ತಿಂಗಳು ಇರುತ್ತಾರೋ ಅಥವಾ ಗುದ್ದಾಡುತ್ತಾ ಅಧಿಕಾರ ಸಂಪೂರ್ಣ ಮಾಡುತ್ತಾರೋ ಗೊತ್ತಿಲ್ಲ. ಯಡಿಯೂರಪ್ಪರ ರೀತಿ ಸಿದ್ದರಾಮಯ್ಯ ಮೈಸೂರಿಗೆ ಮಾಡಿರುವ ಒಂದು ಘನ ಕಾರ್ಯ ಹೇಳಲಿ ಎಂದರು.
ಮೈಸೂರಿನಲ್ಲಿ ಜಯದೇವ ಆಸ್ಪತ್ರೆ ಮಾಡಿದ್ದು ಯಡಿಯೂರಪ್ಪ. ಮೈಸೂರಿನಲ್ಲಿ ಕಿದ್ವಾಯಿ ಆಸ್ಪತ್ರೆ ಘೋಷಣೆ ಮಾಡಿದ್ದು ಯಡಿಯೂರಪ್ಪ. ಕಿದ್ವಾಯಿ ಕಟ್ಟಡಕ್ಕೆ ಹಣ ಕೊಟ್ಟಿದ್ದು ಬಸವರಾಜ ಬೊಮ್ಮಾಯಿ. ಮೈಸೂರಿನಲ್ಲಿ ಮುಂದಿನ ತಲೆ ಮಾರು ಸಿದ್ದರಾಮಯ್ಯ ಹೆಸರು ಹೇಳುವಂತ ಒಂದು ಕೆಲಸ ಇದ್ಯಾ ಹೇಳಿ ಎಂದು ಅವರು ಪ್ರಶ್ನಿಸಿದರು.
ಯಾಕಾಗಿ ಜನ ಸಿದ್ದರಾಮಯ್ಯರನ್ನು ನೆನಪಿಸಿಕೊಳ್ಳಬೇಕು? ಅಭಿವೃದ್ಧಿ ಕಲ್ಪನೆಯೆ ಸಿದ್ದರಾಮಯ್ಯಗೆ ಇಲ್ಲ. ಬೆಂಗಳೂರು-ಮೈಸೂರು ಹೈವೆ ರಸ್ತೆ ಸಿದ್ದರಾಮಯ್ಯ ಮಾಡಿದ್ದಾ? ಮೈಸೂರು ರಿಂಗ್ ರಸ್ತೆ ಮಾಡಿದ್ದು ಸಿದ್ದರಾಮಯ್ಯನಾ? ಮೈಸೂರಿಗೆ ಸಿದ್ದರಾಮಯ್ಯರ ಒಂದೇ ಒಂದು ಶಾಶ್ವತ ಕೊಡುಗೆ ಏನು ಹೇಳಿ ಎಂದರು.
ಬೃಹತ್ ಮಹಾ ನಗರ ಪಾಲಿಕೆ ಹೆಸರಿನಲ್ಲಿ ಸಿದ್ದರಾಮಯ್ಯ ತಮ್ಮ ತೋಟದ ಜಾಗಗಳ ಮೌಲ್ಯ ಹೆಚ್ಚು ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಜಾತಿ ಬಾಂಧವರ ಜಾಗವನ್ನು ಪಾಲಿಕೆ ವ್ಯಾಪ್ತಿಗೆ ತಂದು ಆಸ್ತಿ ಮೌಲ್ಯ ಹೆಚ್ಚಳ ಮಾಡಿಕೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಆಯುಕ್ತರ ಮನೆ ಮುಂದೆ ಹಾಕುತ್ತೇವೆ : ನಗರದಲ್ಲಿ ಫ್ಲೆಕ್ಸ್ ತೆಗೆಸದಿದ್ದರೆ ನಾವೇ ಫ್ಲೆಕ್ಸ್ ಗಳನ್ನು ಕಿತ್ತು ನಗರ ಪಾಲಿಕೆ ಆಯುಕ್ತರ ಮನೆ ಮುಂದೆ ಹಾಕುತ್ತೇವೆ ಎಂದು ಎಚ್ಚರಿಸಿದರು.
ಬೆಂಗಳೂರು : ಕರ್ನಾಟಕ ವಿಧಾನಪರಿಷತ್‌ನ ನಾಲ್ಕು ಕ್ಷೇತ್ರಗಳ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಮೈತ್ರಿ ಪಕ್ಷ ಜೆಡಿಎಸ್‌ಗೆ ಒಂದು…
ಬೆಂಗಳೂರು : ಅಂತರರಾಷ್ಟ್ರೀಯ ಮಹಿಳಾ ದಿನದಂದೆ ಗ್ಯಾಸ್ ಸಿಲಿಂಡರ್ ಬೆಲೆಯನ್ನ ಕೇಂದ್ರ ಸರ್ಕಾರ 60 ರೂಪಾಯಿ ಏರಿಕೆ ಮಾಡಿದೆ. ಜೊತೆಗೆ…
ಗುಂಡ್ಲುಪೇಟೆ : ಜಮೀನಿನಲ್ಲಿ ಮೇಯುತ್ತಿದ್ದ ಹಸುವಿನ ಮೇಲೆ ಹುಲಿಯೊಂದು ದಾಳಿ ನಡೆಸಿದೆ. ಈ ವೇಳೆ ರೈತ ತನ್ನ ಹಸು ರಕ್ಷಿಸಲು…
ಹೊಸದಿಲ್ಲಿ : ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ಇಂಧನ ಪೂರೈಕೆಯ ಮೇಲೆ ಹೆಚ್ಚುತ್ತಿರುವ ಒತ್ತಡದ ನಡುವೆ, ದೇಶೀಯ ಇಂಧನ ಮಾರುಕಟ್ಟೆಯನ್ನು…
ಹೊಸದಿಲ್ಲಿ : ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ (ಎನ್‌ಸಿಇಆರ್‌ಟಿ) ಇತ್ತೀಚೆಗೆ ಪ್ರಕಟಿಸಿದ್ದ 8ನೇ ತರಗತಿಯ ಸಮಾಜ ವಿಜ್ಞಾನ…
ಅಹ್ಮದಾಬಾದ್ : ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ-20 ವಿಶ್ವಕಪ್ ಫೈನಲ್ ಪಂದ್ಯ…