ಮೈಸೂರು ನಗರ

ಮೈಸೂರಿನಲ್ಲಿ 40 ಮರಗಳ ಹನನ: ವಾಟಾಳ್‌ ನಾಗರಾಜ್‌ ಆಕ್ರೋಶ

ಮೈಸೂರು: ರಸ್ತೆ ಅಗಲೀಕರಣಕ್ಕೆಂದು 40 ಮರಗಳನ್ನು ಕಡಿದು ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮೈಸೂರಿನಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, 40 ಮರಗಳನ್ನು ಕಡಿದ ಇಂತಹ ನಗರದಲ್ಲಿ ದೊಡ್ಡವರ್ಯಾರು ಇಲ್ಲವೇ ಎಂದು ಪ್ರಶ್ನಿಸಿದ ಅವರು, ರಾಜಕಾರಣಿಗಳು ಹಾಗೂ ಮೈಸೂರು ಮಹಾರಾಣಿ ಏನು ಮಾಡುತ್ತಿದ್ದಾರೆ. ಮರಗಳ ಹನನ ಖಂಡಿಸಿ ಸ್ಥಳದಲ್ಲೇ ಮಹಾರಾಣಿ ಅವರು ಕೂರಬೇಕಿತ್ತು. ಅದನ್ನ ಬಿಟ್ಟು ಚಾಮರಾಜನಗರದಲ್ಲಿ ಜಾಗ ಬೇಕು ಎಂದು ಹೋಗಿದ್ದಾರೆ. ಅದು ಈ ಹಿಂದೆ ರಾಜರು ಕೊಟ್ಟಿರುವ ಜಾಗ. ಅದಕ್ಕೆ ತಾವೇ ಮುಂದೆ ನಿಂತು ಜಾಗದ ಹಕ್ಕು ಪತ್ರ ಕೊಡಲು ಹೇಳಬೇಕು. ಯಾರ್ ಯಾರು ಎಲ್ಲೆಲ್ಲಿ ಇದ್ದಾರೋ ಅದು ಅವರದ್ದೇ ಜಾಗ. ಈ ವಿಷಯದಲ್ಲಿ ಮಹಾರಾಣಿಯವರು ಜನರಿಗೆ ಆ ಜಾಗಗಳನ್ನು ಬಿಟ್ಟು ಕೊಡಬೇಕು ಎಂದು ಆಗ್ರಹಿಸಿದರು.

ಆಂದೋಲನ ಡೆಸ್ಕ್

Recent Posts

ಪೊಲೀಸರಿಗೆ ಎಲ್ಲ ವಿಷಯ ಗೊತ್ತಾಗಿದೆ!

ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ ನಯವಾಗಿ ಮಾಹಿತಿ ಪಡೆದು ಬಿಡದಿ ಟೋಲ್ ಬಳಿ ಲಾಕ್ ಮಾಡಿದ ಪೊಲೀಸರು ಏನಿದು ನಿಜ…

1 min ago

ದುಬಾರೆ ‘ಪ್ರಶಾಂತ’ನೀಗ ಅಂಬಾರಿ ಸಾರಥಿ

ಚಿರಂಜೀವಿ ಎಸ್.ಹುಲ್ಲಹಳ್ಳಿ ದಸರಾ ಹಬ್ಬಗಳಲ್ಲಿ ಸಾಲಾನೆಯಾಗಿದ್ದವನು; ೧೮ ವರ್ಷಗಳ ಬಳಿಕ ಚಿನ್ನದ ಅಂಬಾರಿ ಹೊರುವ ಅವಕಾಶ ಮೈಸೂರು: ಕಾಡಾನೆ, ಹುಲಿ…

9 mins ago

ದಸರಾ: ಸಂಚಾರ ದಟ್ಟಣೆಗೆ ಜನ ಹೈರಾಣ

ದಿನೇಶ್ ಕುಮಾರ್ ಎಚ್.ಎಸ್ ಮೂರು ದಿನಗಳಲ್ಲಿ ಚಾಮುಂಡಿಬೆಟ್ಟ, ಅರಮನೆ, ಮೃಗಾಲಯಗಳಿಗೆ ಸಾವಿರಾರು ಜನರ ಭೇಟಿ ಮೈಸೂರು: ನಾಡಹಬ್ಬ ದಸರಾದ ಪ್ರಮುಖ…

15 mins ago

ನಮ್ಮ ತಂದೆ ಯಾವುದೇ ತಪ್ಪು ಮಾಡಿಲ್ಲ: ಯತೀಂದ್ರ ಸಿದ್ದರಾಮಯ್ಯ

ಮೈಸೂರು: “ನಮ್ಮ ತಂದೆ ಯಾವುದೇ ತಪ್ಪು ಮಾಡಿಲ್ಲ. ಹಾಗಾಗಿಯೇ ಅವರು ಧೈರ್ಯವಾಗಿ ಮಾತನಾಡುತ್ತಿದ್ದಾರೆ!” ಸ್ಟಿಂಗ್ ಕಾರ್ಯಾಚರಣೆ ವಿಚಾರವಾಗಿ ಮೈಸೂರಿನಲ್ಲಿ ಯತೀಂದ್ರ…

18 hours ago

ನಮ್ಮದು ಸೌಜನ್ಯದ ಭೇಟಿಯಷ್ಟೇ: ಮಾಜಿ ಸಿಎಂ ಸಿದ್ದರಾಮಯ್ಯ

ಮೈಸೂರು:  ಭೇಟಿ ಮಾಡೋಕೆ ಬರ್ತಾರೆ ಕಣಯ್ಯ… ಅದರಲ್ಲೇನು?” ರಮೇಶ್ ಜಾರಕಿಹೊಳಿ ಹಾಗೂ ನರೇಂದ್ರ ಸ್ವಾಮಿ ಭೇಟಿ ವಿಚಾರವಾಗಿ ಮಾಧ್ಯಮಗಳು ಕೇಳಿದ…

18 hours ago