ಮೈಸೂರು ನಗರ

ಯುಪಿಎಸ್‌ಸಿ ಪರೀಕ್ಷೆಗೆ ಕಠಿಣ ಪರಿಶ್ರಮ ಅಗತ್ಯ : ಕಿರಣ ಕಮತೆ

ಮೈಸೂರು : ಯುಪಿಎಸ್‌ ಪರೀಕ್ಷೆ ಭೇದಿಸುವುದು ಸುಲಭವಲ್ಲ. ಅದಕ್ಕೆ ಕಠಿಣ ಪರಿಶ್ರಮ, ಸ್ಥಿರತೆ ಮತ್ತು ಸ್ಮಾರ್ಟ್ ಓದು ಅಗತ್ಯ ಎಂದು ಯುಪಿಎಸ್‌ಸಿ  ಪರೀಕ್ಷೆಯಲ್ಲಿ 53ನೇ ರ‍್ಯಾಂಕ್ ಪಡೆದು ಐಎಎಸ್‌ಗೆ ಆಯ್ಕೆಯಾಗಿರುವ ಕಿರಣ್ ಕಮತೆ ಅವರು ಯುವ ಅಭ್ಯರ್ಥಿಗಳಿಗೆ ಕಿವಿಮಾತು ಹೇಳಿದರು.

ಕೆಎಸ್‌ಓಯುನ ಸ್ಮರ್ಧಾತ್ಮಕ ಪರೀಕ್ಷಾ ಕೇಂದ್ರದಲ್ಲಿ ನಡೆಯುತ್ತಿರುವ ಐಎಎಸ್‌,ಕೆಎಎಸ್‌ ತರಬೇತಿ ಶಿಬಿರದ ವಿಶೇಷ ತರಬೇತಿ ಕಾರ್ಯಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಚಿಕ್ಕೋಡಿ ತಾಲ್ಲೂಕು ಹತ್ತರವಾಟ ಎಂಬ ಚಿಕ್ಕಗ್ರಾಮದಲ್ಲಿ ಹುಟ್ಟಿನ ನಾನು, ಈ ಹಿಂದೆ ಪಿಡಬ್ಲ್ಯೂಡಿ ಇಂಜಿನಿಯರ್ ಆಗಿದೆ. ಆದರೆ ಯುಪಿಎಸ್‌ಸಿ ಓದುವ ಹಂಬಲವಿತ್ತು. ಹೀಗಾಗಿ ತಯಾರಿ ಆರಂಭಿಸಿದೆ. ಆರು ಬಾರಿ ಪ್ರಯತ್ನಿಸಿದೆ ಕೊನೆಯಲ್ಲಿ ಯಶಸ್ಸು ಸಿಕ್ಕಿದೆ. ಇದಕ್ಕೆ ಕಠಿಣ ಪರಿಶ್ರಮ ಇರಬೇಕು ಎಂದರು.

ದಿನಕ್ಕೆ ಕನಿಷ್ಠ 9 ರಿಂದ 10 ಗಂಟೆ ಸತತ ಓದು ಅನಿವಾರ್ಯ. ಆದರೆ ಸುಮ್ಮನೆ ಓದಿದರೆ ಸಾಲದು, ಸ್ಮಾರ್ಟ್ ಓದು ಬೇಕು” ಎಂದು ಒತ್ತಿ ಹೇಳಿದ ಅವರು, ಯುಪಿಎಸ್‌ಸಿ ಪರೀಕ್ಷೆ ತಯಾರಿಗೆ ಎನ್‌ಸಿಇಆರ್‌ಟಿ ಪುಸ್ತಕಗಳನ್ನು ಓದಬೇಕು. ಜತೆಗೆ ‘ದಿ ಹಿಂದೂ’, ‘ಇಂಡಿಯನ್ ಎಕ್ಸ್‌ಪ್ರೆಸ್’ ಪ್ರಜಾವಾಣಿ ಪತ್ರಿಕೆಗಳನ್ನು ದಿನನಿತ್ಯ ಓದುವುದು ಅತ್ಯಂತ ಮುಖ್ಯ. ಪ್ರಸ್ತುತ ವಿದ್ಯಮಾನಗಳನ್ನು ಟಿಪ್ಪಣಿ ಮಾಡುವುದು, ಪ್ರಿಲಿಮ್ಸ್‌ಗೆ MCQ ಪ್ರ್ಯಾಕ್ಟಿಸ್, ಮೇನ್ಸ್‌ಗೆ ಉತ್ತರ ಬರೆಯುವ ಅಭ್ಯಾಸ ಮತ್ತು ನಿಯಮಿತ ಮಾಕ್ ಟೆಸ್ಟ್‌ಗಳು ಅಗತ್ಯ ಎಂದು ಅವರು ಸಲಹೆ ನೀಡಿದರು.

ಕೆಪಿಎಸ್‌ಸಿ ಪರೀಕ್ಷೆಗೆ ಕರ್ನಾಟಕದ ಇತಿಹಾಸ, ಭೂಗೋಳ, ಆರ್ಥಿಕತೆ, ರಾಜ್ಯ ವಿಶೇಷ ವಿಷಯಗಳ ಮೇಲೆ ಹೆಚ್ಚು ಗಮನ ಹರಿಸಬೇಕು. ರಾಜ್ಯ ಪತ್ರಿಕೆಗಳು ಮತ್ತು ಕೆಪಿಎಸ್‌ಸಿ ಮಾದರಿ ಪ್ರಶ್ನೆಪತ್ರಿಕೆಗಳನ್ನು ಅಭ್ಯಾಸ ಮಾಡಿದರೆ ಸಹಾಯವಾಗುತ್ತದೆ ಎಂದು ತಿಳಿಸಿದರು.

ಲಕ್ಷಾಂತರ ಅಭ್ಯರ್ಥಿಗಳು ಲೋಕಸೇವಾ ಆಯೋಗದ ನಾಗರೀಕ ಸೇವೆಗಳ ಪರೀಕ್ಷೆ ಬರೆಯುತ್ತಾರೆ. ಆದರೆ ಆಯ್ಕೆ ಆಗುವುದು ಮಾತ್ರ ಸಾವಿರ ಅಭ್ಯರ್ಥಿಗಳಷ್ಟು. ಕಾರಣ ಈ ಪರೀಕ್ಷೆಯ ಕಠಿಣತೆ ಅಷ್ಟರಮಟ್ಟಿಗೆ ಇರುತ್ತದೆ. ಕೆಲವರು ಒಂದು ವರ್ಷದ ಶ್ರಮದಿಂದಲೇ ಯುಪಿಎಸ್‌ಸಿ ಪರೀಕ್ಷೆ ಗೆದ್ದರೆ, ಇನ್ನು ಕೆಲವರು ನಾಲ್ಕೈದು ವರ್ಷಕ್ಕೆ ಯಶಸ್ಸನ್ನು ಮುಟ್ಟುತ್ತಾರೆ. ಇನ್ನು ಕೆಲವರು ಎರಡು-ಮೂರು ಪ್ರಯತ್ನಗಳಲ್ಲಿ ಗೆಲ್ಲುವವರು ಇದ್ದಾರೆ, ಹಾಗೆಯೇ ನಿರಂತರ ಪ್ರಯತ್ನವಿದ್ದರೂ ಗೆಲ್ಲದೇ ಯುಪಿಎಸ್‌ಸಿ ಪರೀಕ್ಷೆಯಿಂದ ಹಿಮ್ಮುಖಗೊಂಡವರು ಇದ್ದಾರೆ ಎಂದರು.

ಐಎಎಸ್‌ ಕನಸು ಕಾಣುವುದು ಸುಲಭ, ಆದರೆ ಅದನ್ನು ಸಾಕಾರಗೊಳಿಸಲು ಕಠಿಣ ಪರಿಶ್ರಮವೇ ಏಕೈಕ ಮಾರ್ಗ ಎಂದ ಅವರು ಯುಪಿಎಸ್‌ಸಿ ಹಾಗೂ ಕೆಪಿಎಸ್‌ಸಿ ಪರೀಕ್ಷೆಗಳಲ್ಲಿ ಜಯಗಳಿಸಲು ಅಗತ್ಯವಾದ ತಯಾರಿ ವಿಧಾನಗಳ ಬಗ್ಗೆ ವಿವರಿಸಿದರು.

ಕುಲಪತಿ ಶರಣಪ್ಪ ಹಲಸೆ, ಸಂಯೋಜನಾಧಿಕಾರಿ ಸತ್ಯನಾರಯಣಗೌಡ ಸೇರಿದಂತೆ ಇನ್ನಿತರರು ಇದ್ದರು.

ಆಂದೋಲನ ಡೆಸ್ಕ್

Recent Posts

ಇರಾನ್‌ ಮೇಲೆ ರಣಭೀಕರ ದಾಳಿಗೆ ಅಮೆರಿಕ ಪ್ಲ್ಯಾನ್‌

ವಾಷಿಂಗ್ಟನ್‌ : ಅಮೆರಿಕ ತನ್ನ ಮೇಲೆ ಮಾಡುತ್ತಿರುವ ದಾಳಿಗೆ ಪ್ರತಿಯಾಗಿ ಇರಾನ್, ಇಸ್ರೇಲ್ ಮತ್ತು ಗಲ್ಫ್ ದೇಶಗಳಲ್ಲಿನ ಅಮೆರಿಕದ ಮಿಲಿಟರಿ…

3 mins ago

ಗ್ಯಾರಂಟಿ ಯೋಜನೆಗಳಿಂದ ಮಹಿಳಾ ಸಬಲೀಕರಣ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಬೆಂಗಳೂರು : ಮಹಿಳೆಯರನ್ನು ಸಬಲೀಕರಣ ಮಾಡುವ ಕೆಲಸವನ್ನು ನಮ್ಮ ಸರ್ಕಾರ ಪ್ರಾಮಾಣಿಕವಾಗಿ ಮಾಡುತ್ತಿದೆ. ಮಹಿಳೆ ಸ್ವಾಭಿಮಾನದಿಂದ ಬದುಕಲಿ ಎಂಬ ಉದ್ದೇಶದಿಂದ…

1 hour ago

ಕಾಡಾನೆ ದಾಳಿ ; ಜಮೀನಿನ ಶೀಟಿನ ಮನೆ, ಟೊಮೆಟೊ ಬೆಳೆ ನಾಶ

ಗುಂಡ್ಲುಪೇಟೆ : ತಾಲ್ಲೂಕಿನ ಮಂಚಹಳ್ಳಿ ಗ್ರಾಮದ ಮಂಜುನಾಥ ಎಂಬವರ ಜಮೀನಿಗೆ ಶನಿವಾರ ರಾತ್ರಿ ಕಾಡಾನೆ ನುಗ್ಗಿ ಕಟಾವು ಮಾಡಿ ಜಮೀನಿನ…

2 hours ago

ಏಪ್ರಿಲ್.‌11ರಂದು ಬೆಂಗಳೂರಿನಲ್ಲಿ ಜೆಡಿಎಸ್‌ ಜನತಾ ಸಮಾವೇಶ

ಬೆಂಗಳೂರು: ಹಾಸನ ಹಾಗೂ ವಿಜಯಪುರದಲ್ಲಿ ನಡೆಸಿದ ಮಾದರಿಯಲ್ಲೇ ಬೆಂಗಳೂರಿನಲ್ಲೂ ಜೆಡಿಎಸ್ ಪಕ್ಷದ ರಜತ ಮಹೋತ್ಸವ ಹಾಗೂ ಜನತಾ ಸಮಾವೇಶವನ್ನು ನಡೆಸಲು…

3 hours ago

ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನ: ಇಬ್ಬರು ಸಾವು

ಬೆಂಗಳೂರು: ಸಾಲಗಾರರ ಕಾಟದಿಂದ ಮನನೊಂದ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದು ತಾಯಿ-ಮಗಳು ಸಾವನ್ನಪ್ಪಿದರೆ, ಮತ್ತಿಬ್ಬರು ಸಾವು ಬದುಕಿನ ನಡುವೆ…

3 hours ago

ತಮಿಳುನಾಡು ಚುನಾವಣೆ: ಎರಡು ಕ್ಷೇತ್ರಗಳಿಂದ ನಟ ವಿಜಯ್‌ ಸ್ಪರ್ಧೆ

ಚೆನ್ನೈ: ಏಪ್ರಿಲ್.23ರಂದು ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಎರಡು ಕ್ಷೇತ್ರಗಳಿಂದ ಸ್ಪರ್ಧೆ ಮಾಡುವುದಾಗಿ ನಟ ವಿಜಯ್‌ ಘೋಷಣೆ ಮಾಡಿದ್ದಾರೆ. ಚೆನ್ನೈನ…

3 hours ago