somanna
ಮೈಸೂರು: ನಂಬಿಕೆಗೆ ಮತ್ತೊಂದು ಹೆಸರು ಚಾಮುಂಡಿ ಬೆಟ್ಟ. ಆದರೆ ರಾಜ್ಯ ಸರ್ಕಾರ ಪದೇ ಪದೇ ಯಡವಟ್ಟು ಮಾಡುತ್ತಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಅಸಮಾಧಾನ ಹೊರಹಾಕಿದ್ದಾರೆ.
ಈ ಕುರಿತು ಮೈಸೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಡಹಬ್ಬ ದಸರಾ ಮಹೋತ್ಸವ ಉದ್ಘಾಟನಾ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದರು. ನಾನೂ ಕೂಡ ಒಂದು ಬಾರಿ ಉಸ್ತುವಾರಿ ಸಚಿವನಾಗಿ ದಸರಾ ನಿರ್ವಹಿಸಿದ್ದೇನೆ. ನಂಬಿಕೆಗೆ ಮತ್ತೊಂದು ಹೆಸರು ಚಾಮುಂಡಿ ಬೆಟ್ಟ. ಆದರೆ ರಾಜ್ಯ ಸರ್ಕಾರ ಪದೇ ಪದೇ ಯಡವಟ್ಟು ಮಾಡ್ತಿದೆ.
ಇದನ್ನು ಓದಿ:ಬಾನು ಮುಷ್ತಾಕ್ ದಸರಾ ಉದ್ಘಾಟಿಸಲು ವಿರೋಧವೇಕೆ?
ಸಾಮಾಜಿಕ, ಧಾರ್ಮಿಕವಾಗಿ ಪೂರ್ವಜರು ನೀಡಿದ ರೀತಿ ನಡೆದುಕೊಳ್ಳಿ. ಯಾರನ್ನೋ ತೃಪ್ತಿಪಡಿಸಲು ಈ ರೀತಿ ಮಾಡುವುದು ಸರಿಯಲ್ಲ. ಯಾರನ್ನ ಮಾಡಿದ್ದೀರಿ ಅವರಿಗೆ ತಾಯಿಯ ಮೇಲೆ ಗೌರವ ಇರಬೇಕು. ಅವರು ಎಷ್ಟರ ಮಟ್ಟಿಗೆ ಅರ್ಹರು ಎಂಬುದನ್ನು ಚರ್ಚಿಸಲ್ಲ. ಸರ್ಕಾರ ಉದ್ಘಾಟಕರ ವಿಚಾರದಲ್ಲಿ ಗೊಂದಲ ಮಾಡಬಾರದು. ರಾಜ್ಯ ಸರ್ಕಾರ ಶಿಷ್ಠಾಚಾರವನ್ನು ಪಾಲಿಸಬೇಕು. ಸರ್ಕಾರಕ್ಕೆ ಸದ್ಭುದ್ಧಿ ಕೊಡಲಿ ಎಂದು ಬೇಡಿಕೊಳ್ತೀನಿ. ತಾಯಿ ಮನಸು ಗೆದ್ದರೆ ರಾಜ್ಯಕ್ಕೂ ಒಳಿತು, ಸರ್ಕಾರಕ್ಕೂ ಒಳಿತು ಎಂದು ಹೇಳಿದರು.
ಇನ್ನು ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸಾವಿರ ಸರಿ ಸುಳ್ಳು ಹೇಳಿದರೂ ಸತ್ಯ ಆಗಲ್ಲ. ಈ ಮಾತಿಗೆ ಧರ್ಮಸ್ಥಳ ಪ್ರಕರಣವೇ ತಾಜ ನಿದರ್ಶನ. ಯಾರ್ ಯಾರೋ, ಏನ್ ಏನೋ ಹೇಳಿದ್ರು. ಆದರೆ ಸತ್ಯ ಏನು ಅಂತ ಹೊರಗೆ ಬಂದಿದೆ. ಎಸ್‌ಐಟಿ ರಚನೆಯಾದಾಗ ಮೊದಲು ಸ್ವಾಗತಿಸಿದ್ದೆ ನಾನು. ಧರ್ಮಸ್ಥಳಕ್ಕೆ ಅಂಟಿರುವ ಕಳಂಕ ದೂರವಾಗುತ್ತಿದೆ. ಅಣ್ಣಪ್ಪಸ್ವಾಮಿ, ಮಂಜುನಾಥಸ್ವಾಮಿ ಕೆಡಕು ಬಯಸಿದರೆ ಸದ್ಭುದ್ಧಿ ಕೊಡಲಿ. ಆ ದೇವರಿಗೆ ನಮ್ಮ ಪ್ರಣಾಮಗಳು. ಈಗ ಆಗಿರುವುದೇ ಸಾಕು. ಸರ್ಕಾರ ಪಶ್ಚಾತ್ತಾಪ ಪಟ್ಟುಕೊಳ್ಳಲಿ. ಮುಂದೆಯಾದರೂ ಧಾರ್ಮಿಕ ತಾಣಗಳ ಬಗ್ಗೆ ಯಾರೇ ಮಾತನಾಡುವಾಗಲೂ ಎಚ್ಚರಿಕೆ ವಹಿಸಬೇಕು. ನಾನು ಮೊದಲಿನಿಂದಲೂ ಕೂಡ ಧರ್ಮಸ್ಥಳದ ಪರ ನಿಂತಿದ್ದೆ ಎಂದರು.
ಹನೂರು: ತಾಲ್ಲೂಕಿನ ಶಾಗ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಾಜರ್ ದೊಡ್ಡಿ ಗ್ರಾಮದಲ್ಲಿ ಒಡಿಪಿ ಸಂಸ್ಥೆಯಿಂದ ನಿರ್ಮಾಣ ಮಾಡಿದ್ದ ಚೆಕ್ ಡ್ಯಾಂ…
ಹನೂರು: ತಾಲ್ಲೂಕಿನ ಎಲ್ಲೇಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೈಶಂಪಾಳ್ಯ ಗ್ರಾಮದಲ್ಲಿ ಭಾನುವಾರ ರಾತ್ರಿ ಸುರಿದ ಭಾರೀ ಮಳೆಗೆ ಮನೆ ಸಂಪೂರ್ಣ…
ನವದೆಹಲಿ: ಧರ್ಮಸ್ಥಳ ಸೌಜನ್ಯ ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ನವದೆಹಲಿಯಲ್ಲಿ ನಡೆದ ವಿಚಾರಣೆಯಲ್ಲಿ, ಹಲವು…
ಸರಗೂರು: ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಸರಗೂರು ತಾಲ್ಲೂಕಿನ ಕಾಡಗೆರೆ ಗ್ರಾಮದ…
ಬ್ರಿಟೀಷರ ವಿರುದ್ಧ ಸಮಾಜವನ್ನು ಅದರಲ್ಲೂ ಯುವಜನರನ್ನು ಸಂಘಟಿಸಿ, ದೇಶಭಕ್ತಿಯನ್ನು ಜಾಗೃತಿಗೊಳಿಸುವ ಮೂಲಕ ಅವರನ್ನು ಸ್ವಾತಂತ್ರ್ಯಸಂಗ್ರಾಮಕ್ಕೆ ಸಜ್ಜುಗೊಳಿಸುವ ಉದ್ದೇಶದಿಂದ ಆರಂಭವಾದ ಸಾರ್ವಜನಿಕ…
ಬೆಂಗಳೂರು ಡೈರಿ: ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ ಕಳೆದ ಮೂರು ವರ್ಷಗಳಿಂದ ಅಧಿಕಾರ ಹಂಚಿಕೆಯ ಸಂಘರ್ಷದಲ್ಲಿ ಮುಳುಗಿದ್ದ ಆಡಳಿತಾರೂಢ ಕಾಂಗ್ರೆಸ್…