ugrappa caste census BJP
ಮೈಸೂರು: ಜಾತಿ ಗಣತಿ ವರದಿ ಅವೈಜ್ಞಾನಿಕ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್.ಉಗ್ರಪ್ಪ ಪ್ರತಿಕ್ರಿಯೆ ನೀಡಿದ್ದು, ಇದೊಂದು ಸಮೀಕ್ಷೆ, ಜಾತಿಗಣತಿ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮೈಸೂರಿನ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಕಮಿಷನ್ ಪ್ರಕಾರ ಸೆಕ್ಷನ್ 9 ಸಬ್ ಕ್ಲಾಸ್ 2ರ ಪ್ರಕಾರ ಜಾತಿಗಣತಿ ನಡೆಸುವ ಹಾಗೇ ಇಲ್ಲ. ಯಾರನ್ನ ಸೇರಿಸಬೇಕು ಯಾರನ್ನ ತೆಗೆಯಬೇಕು ಎಂದು ಒಂದು ಸಮೀಕ್ಷೆ ಮಾತ್ರ ಮಾಡಿದ್ದಾರೆ. ಆದ್ದರಿಂದ ಇದೊಂದು ಸಮೀಕ್ಷೆ. ಜಾತಿ ಜನಗಣತಿ ಅಲ್ಲ. ಅವಶ್ಯಕತೆ ಬಿದ್ದರೆ ಮೀಸಲಾತಿ ಪ್ರಮಾಣವನ್ನ ಹೆಚ್ಚಳ ಮಾಡುವ ದೃಷ್ಟಿಯಿಂದ ಗಣತಿ ಅವಶ್ಯಕತೆ ಇದೆ. ನಾನೇ ಇದುವರೆಗೆ ಸಂಪೂರ್ಣವಾಗಿ ಜಾತಿಗಣತಿ ವರದಿ ಓದಿಲ್ಲ.
ಇದನ್ನೂ ಓದಿ:- ಆರ್‌ಎಸ್‌ನವರೇ ಮೋದಿಯನ್ನು ತೆಗೆಯಬೇಕು ಎಂದುಕೊಂಡಿದ್ದಾರೆ: ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್.ಉಗ್ರಪ್ಪ
ಮೊದಲು ಈ ವಿಚಾರಕ್ಕೆ ಕೈ ಹಾಕಿದವರು ಸಿದ್ದರಾಮಯ್ಯನವರು ಬಳಿಕ ಬಿಹಾರ್‌ನಲ್ಲೂ ಶುರು ಮಾಡಿದರು. ದೇಶವಾರು ಜಾತಿ ಗಣತಿ ಆಗಬೇಕು ಎಂಬ ಒತ್ತಾಯ ಕೂಡ ಇದೆ.
ಈ ಹಿನ್ನೆಲೆಯಲ್ಲಿ ಇದರ ಬಗ್ಗೆ ವೈಜ್ಞಾನಿಕವಾಗಿ ಚರ್ಚೆ ನಡೆಯುತ್ತಿದೆ. ರಾಜ್ಯದ ಹಿತದೃಷ್ಟಿಯಿಂದ ಏನು ಮಾಡಬೇಕೆಂದು ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಸೂಕ್ತ ನಿರ್ಧಾರ ಮಾಡುತ್ತಾರೆ ಎಂಬ ವಿಶ್ವಾಸ ಇದೆ. ಈಗಾಗಲೇ ಸಿಎಂ ಸಿದ್ದರಾಮಯ್ಯ 95% ಸಮೀಕ್ಷೆ ಆಗಿದೆ ಎಂದು ಹೇಳುತ್ತಾರೆ ಎಂದರು.
ಇದನ್ನೂ ಓದಿ:- ದೇಶ ಕಂಡ ಅತ್ಯಂತ ದುರ್ಬಲ ಪ್ರಧಾನಿ ನರೇಂದ್ರ ಮೋದಿ: ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್.ಉಗ್ರಪ್ಪ
ಇನ್ನು ಕೋಣನನ್ನು ನೀರಿಗೆ ತಳ್ಳಿ ಕೊಂಬನ್ನ ನೋಡಿ ವ್ಯಾಪಾರ ಮಾಡಿದಂತಾಗುತ್ತದೆ ಎಂದು ಗಾದೆ ಮಾತು ಹೇಳುವ ಮೂಲಕ ಜಾತಿ ಗಣತಿ ವರದಿ ಅಧ್ಯಯನ ಮಾಡದೇ ವಿರೋಧ ಮಾಡೋದು ಸರಿಯಲ್ಲ ಎಂದು ವಿರೋಧಿಗಳಿಗೆ ಟಾಂಗ್ ಕೊಟ್ಟರು.
ಹೈದರಾಬಾದ್: ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರ ಹೈದರಾಬಾದ್‌ನಲ್ಲಿ ಅವರ ಮನೆಗೆ ಅಧಿಕಾರಿಗಳು ಬೀಗ ಹಾಕಿದ್ದಾರೆ. 2016ರಲ್ಲಿ ನಿಧನರಾದ ಜಯಲಲಿತಾ…
ಬೆಂಗಳೂರು: ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಪಕ್ಕಾ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ…
ಬೆಂಗಳೂರು: ಇಲ್ಲಿನ ಯಲಹಂಕ ಠಾಣೆ ಪೊಲೀಸರು, ಸುಮಾರು 2 ಕೋಟಿ ರೂ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದು, ನೈಜೀರಿಯಾ ಮೂಲದ…
ಕೋಲ್ಕತ್ತಾ: ಪಶ್ಚಿಮ ಬಂಗಾಳ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಭಾರತೀಯ ಟೆನಿಸ್ ಐಕಾನ್ ಲಿಯಾಂಡರ್ ಪೇಸ್ ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.…
ಬೆಂಗಳೂರು: ಖಾಸಗಿ ಶಾಲೆಗಳು ಪರೀಕ್ಷೆಗಳು ಮುಗಿಯುತ್ತಿದ್ದಂತೆಯೇ 2026-27ನೇ ಸಾಲಿನ ಶುಲ್ಕವನ್ನು 5-10%, ಮತ್ತೆ ಕೆಲವು 10-15% ವರೆಗೆ ಏರಿಕೆ ಮಾಡಿವೆ.…
ಬೆಂಗಳೂರು: ಚಾಮರಾಜನಗರ ಜಿಲ್ಲೆ ಬೂದಿಪಡಗ ಆನೆ ಶಿಬಿರದಲ್ಲಿ ಒಂಟಿಯಾಗಿದ್ದ 63 ವರ್ಷದ ಗಜೇಂದ್ರ ಆನೆಯನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ…