ಮೈಸೂರು ನಗರ

ಪುಸ್ತಕ ಪ್ರೀತಿಸದೇ ಇರುವವರು ಪುಸ್ತಕವನ್ನು ಓದಲಿಕ್ಕೆ ಸಾಧ್ಯವಾಗುವುದಿಲ್ಲ: ಡಾ. ಕುಮಾರ

ಮೈಸೂರು: ಯಾರಿಗೆ ಪುಸ್ತಕದ ಮೇಲೆ ಪ್ರೀತಿ ಇದೆಯೋ ಅವರು ಸಾಧನೆ ಮಾಡಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬರು ಸಹ ಪುಸ್ತಕವನ್ನು ಪ್ರೀತಿಸಬೇಕು. ಪುಸ್ತಕ ಪ್ರೀತಿಸದೇ ಇರುವವರು ಪುಸ್ತಕವನ್ನು ಓದಲಿಕ್ಕೆ ಸಾಧ್ಯವಾಗುವುದಿಲ್ಲ ಎಂದು ಮಂಡ್ಯ ಜಿಲ್ಲಾಧಿಕಾರಿಗಳಾದ ಡಾ. ಕುಮಾರ ಅವರು ಹೇಳಿದರು.

ಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ “ಮಾನಸ ಯುವ ಸಂವರ್ಧನೆ-2025” (ಔದ್ಯೋಗಿಕ ಮತ್ತು ಯುವ ಸಬಲೀಕರಣ ಕಾರ್ಯಾಗಾರ) ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಬ್ಬರು ಮೊದಲು ಪುಸ್ತಕದ ಪ್ರೇಮಿ ಆಗಬೇಕು. ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಬೇಕು ಮೊಬೈಲ್‌ಗಳನ್ನು ನೋಡುವ ಬದಲು ಪುಸ್ತಕವನ್ನು ಓದಿದರೆ ಅದು ನಿಮ್ಮನ್ನು ತಲೆಯೆತ್ತಿ ನಡೆಯುವಂತೆ ಮಾಡುತ್ತದೆ ಎಂದು ತಿಳಿಸಿದರು.

ಗುರಿಯನ್ನು ದಾಟಲು ಹಲವಾರು ಅಡೆತಡೆಗಳು ಬರಬಹುದು ಬಂದರು ನಾವು ಕುಗ್ಗದೆ ನಾವು ಹಿಗ್ಗಬೇಕು, ಹೆಮ್ಮೆಪಡಬೇಕು. ನಾವು ಸಮಸ್ಯೆಗಳನ್ನು ಸ್ವಾಗತ ಮಾಡಬೇಕು. ಏಕೆಂದರೆ ಆಗಲೇ ನಮಗೆ ಎಷ್ಟು ಸಾಮರ್ಥ್ಯ ಶಕ್ತಿ ಇದೆ ಎಂದು ತಿಳಿಯುವುದು ಎಂದು ಹೇಳಿದರು.

ನೀವು ಯಾವುದೇ ರೀತಿ ಸಮಸ್ಯೆಗಳನ್ನು ತಲೆಗೆ ಹಾಕಿಕೊಳ್ಳದೆ ಇದ್ದರೆ ಸಮಸ್ಯೆಗಳನ್ನು ಎದುರಿಸದೆ ಇದ್ದರೆ ನಿಮಗೆ ಹೇಗೆ ತಿಳಿಯುತ್ತದೆ ನಿಮಲ್ಲಿ ಎಷ್ಟು ಸಾಮರ್ಥ್ಯ ಶಕ್ತಿ ಇದೆ ಎಂದು. ಅದಕ್ಕೆ ಸಮಸ್ಯೆಗಳನ್ನು ಸ್ವಾಗತ ಮಾಡಬೇಕು. ನಿಮಲ್ಲಿ ಆಂತರ್ಯ ಶಕ್ತಿಯ ಬಗ್ಗೆ ತಿಳಿಯಬೇಕು ಎಂದು ತಿಳಿಸಿದರು.

ಗುರಿ ತಲುಪಲು ಅನಗತ್ಯ ಆಕಾಂಕ್ಷೆ, ಆಸೆಗಳನ್ನು ಬಿಡಬೇಕು. ಆಗ ಮಾತ್ರ ಗುರಿಯ ಕಡೆಗೆ ತಲುಪಲು ಸಾಧ್ಯ. ಸಾಧನೆಯನ್ನು ಮಾಡಬೇಕು ಎಂದರೆ ಕಂಫರ್ಟ್ ಝೋನ್ ಇಂದ ಹೊರಗೆ ಮೊದಲು ಬರಬೇಕು. ನಿಮ್ಮಲ್ಲಿ ನಿಮಗೆ ನಂಬಿಕೆ ಇರಬೇಕು. ಆಗ ಮಾತ್ರ ಸಾಧನೆ ಮಾಡಲಿಕ್ಕೆ ಸಾಧ್ಯವಾಗುತ್ತದೆ. ಕುವೆಂಪು ಅವರು ಹೇಳಿರುವ ಮಾತಿನಂತೆ “ಎಷ್ಟು ದೇವರನ್ನು ನಂಬಿದರೇನಂತೆ ನಿನ್ನನು ನೀನು ನಂಬದೆ ಇದ್ದಾಗ” ಎನ್ನುವ ಮಾತಿನಂತೆ ನಿಮ್ಮನ್ನು ನೀವು ಮೊದಲು ನಂಬಬೇಕು ಎಂದು ಹೇಳಿದರು.

ನಮ್ಮ ವೈಯಕ್ತಿಕ ಜೀವನದ ಮೇಲೆ ಹೆಮ್ಮೆ ಇರಬೇಕು. ನಿಮ್ಮ ಮೌಲ್ಯಗಳ ಮೇಲೆ ಹೆಮ್ಮೆ ಇರಬೇಕು. ನಮ್ಮನ್ನು ನಾವು ಇಷ್ಟ ಪಡಬೇಕು. ಬೇರೆಯವರು ಇಷ್ಟಪಟ್ಟಿಲ್ಲ ಅಂತ ಯಾವುತ್ತು ಚಿಂತಿಸಬಾರದು. ಅಂತರ್ ಶಕ್ತಿಗೆ ಒಪ್ಪಿಗೆ ಆಗುವ ರೀತಿಯಲ್ಲಿ ದಿನ ಬದುಕಬೇಕು ಎಂದು ತಿಳಿಸಿದರು.

ಯಾವುದೇ ರೀತಿಯಿಂದ ಸಮಯ ವ್ಯರ್ಥ ಮಾಡದೆ ಜೀವನದಲ್ಲಿ ಹಲವಾರು ರೀತಿಯಿಂದ ವಿಷಯವನ್ನು ಕಲಿಯಬೇಕು ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮಯ ಒಂದು ಸಲಾ ಕಳೆದು ಹೋದರೆ ಮತ್ತೆ ಬಾರದು. ಸರಿಯಾದ ಸಮಯವನ್ನು ಉಪಯೋಗ ಮಾಡಿಕೊಳ್ಳಬೇಕು. ಗುರಿಯ ಕಡೆಗೆ ತಲುಪುವುದಕ್ಕೆ ಹೆಚ್ಚಾಗಿ ಧನಾತ್ಮಕವಾಗಿ ಯೋಜನೆಯನ್ನು ಮಾಡಬೇಕು ಎಂದು ಹೇಳಿದರು.

ಮೈಸೂರು ವಿವಿ ಕುಲಪತಿ ಎನ್.ಕೆ.ಲೋಕನಾಥ್ ಅವರು ಮಾತನಾಡಿ, ವಿದ್ಯೆ ಎಂಬುದು ಬಹಳ ಮುಖ್ಯವಾಗುತ್ತದೆ. ಹಾಗಾಗಿ ಪುಸ್ತಕಗಳನ್ನು ಹೆಚ್ಚಾಗಿ ಓದಿ ಜ್ಞಾನವನ್ನು ಬೆಳೆಸಿಕೊಳ್ಳಬೇಕು. ಜೊತೆಗೆ ಆರೋಗ್ಯ ಕೂಡ ಬಹಳ ಮುಖ್ಯವಾಗುತ್ತದೆ. ಆರೋಗ್ಯದ ಕಡೆ ಹೆಚ್ಚಿನ ಗಮನವನ್ನು ಕೊಡಬೇಕು. ಹಾಗೆ ಗುರಿಯ ಕಡೆಯು ಗಮನವನ್ನು ನೀಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾಲಯದ ಕುಲ ಸಚಿವರಾದ ಎಂಕೆ ಸವಿತಾ, ಕುಲ ಸಚಿವ (ಪರೀಕ್ಷಾಂಗ) ಎನ್‌.ನಾಗರಾಜ, ವಿವಿಯ ಹಣಕಾಸು ಅಧಿಕಾರಿಗಳಾದ ಕೆ.ಎಸ್‌.ರೇಖಾ ಉಪಸ್ಥಿತರಿದ್ದರು.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ | ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಸಂಭ್ರಮದಿಂದ ಬರೆಯಿರಿ

ಮಾ.18ರಿಂದ ಏ.2ರ ವರೆಗೆ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆ ವಿದ್ಯಾರ್ಥಿಗಳ ಜೀವನದ ಪ್ರಮುಖ ಘಟ್ಟವಾಗಿದೆ. ಪರೀಕ್ಷೆಯ…

1 hour ago

ಮೈಮುಲ್ : ಆಡಳಿತಾಧಿಕಾರಿ ನೇಮಕಕ್ಕೆ ಹೈ ತಡೆ

ಚುನಾವಣೆ ನಡೆಯುವ ತನಕ ಹಾಲಿ ಆಡಳಿತ ಮಂಡಳಿ ಮುಂದುವರಿಕೆ ಕೆ.ಬಿ.ರಮೇಶನಾಯಕ ಮೈಸೂರು: ಐದು ವರ್ಷಗಳ ಅವಧಿ ಮುಗಿದ ಮೈಸೂರು ಜಿಲ್ಲಾ…

1 hour ago

ಶಾಲಾ ಮಕ್ಕಳಿದ್ದ ವಾಹನಕ್ಕೆ ಟಿಪ್ಪರ್‌ ಡಿಕ್ಕಿ : 9 ಮಕ್ಕಳಿಗೆ ಪೆಟ್ಟು

ಗುಂಡ್ಲುಪೇಟೆ : ತಾಲ್ಲೂಕಿನ ಚಿಕ್ಕತುಪ್ಪೂರು ಗೇಟ್ ಬಳಿ ಶಾಲಾ ಮಕ್ಕಳನ್ನು ಕರೆದೋಯ್ಯುತಿದ್ದ ಟಾಟಾ ಏಸ್ ವಾಹನಕ್ಕೆ ಟಿಪ್ಪರ್ ಡಿಕ್ಕಿಯಾದ ರಭಸಕ್ಕೆ…

1 hour ago

ಮಾದಕ ವಸ್ತು ಪತ್ತೆ ; ನಾಲ್ವರು ಸಿಸಿಬಿ ವಶಕ್ಕೆ

ಮೈಸೂರು : ಮಾದಕ ವ್ಯಸನ ಮುಕ್ತ ಮೈಸೂರು ವಿಮುಕ್ತಿ ಅಭಿಯಾನದ ಮುಂದುವರಿದ ಕಾರ್ಯಾಚರಣೆಯಲ್ಲಿ ಸಿಸಿಬಿ ಪೊಲೀಸರು ನಾಲ್ವರನ್ನು ಬಂಧಿಸಿ ಸುಮಾರು…

14 hours ago

ಏಳು ವಿದೇಶಿಯರ ಬಂಧಿಸಿದ ಎನ್‌ಐಎ

ಹೊಸದಿಲ್ಲಿ : ಭಾರತೀಯ ದಂಗೆಕೋರ ಗುಂಪುಗಳೊಂದಿಗೆ ಸಂಬಂಧ ಹೊಂದಿರುವ ಜನಾಂಗೀಯ ಯುದ್ಧ ಗುಂಪುಗಳನ್ನು ಸಂಪರ್ಕಿಸಲು ಮತ್ತು ತರಬೇತಿ ನೀಡಲು ಅಕ್ರಮವಾಗಿ…

16 hours ago

ಮೈಸೂರು | ಆಕಸ್ಮಿಕ ಬೆಂಕಿಗೆ ವ್ಯಕ್ತಿ ಸಜೀವ ದಹನ

ಮೈಸೂರು : ಸ್ಥಗಿತಗೊಂಡಿದ್ದ ಚಿತ್ರಮಂದಿರದ ಆವರಣದಲ್ಲಿ ಸಂಭವಿಸಿದ ಆಕಸ್ಮಿಕ ಅಗ್ನಿ ಅವಘಡದಲ್ಲಿ ಅಲ್ಲಿನ ವಾಚ್‌ಮನ್ ಒಬ್ಬರು ಸಜೀವ ದಹನಗೊಂಡ ದಾರುಣ…

16 hours ago