ಮೈಸೂರು: ಶಾಸಕ ಜಿ.ಟಿ.ದೇವೇಗೌಡ ಜೆಡಿಎಸ್ ಪಕ್ಷದಿಂದ ದೂರ ಉಳಿದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಸುದ್ದಿಗೋಷ್ಠಿ ವೇಳೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಮುಂದೆ ಪದೇ ಪದೇ ಜಿಟಿ ದೇವೇಗೌಡ ಹೆಸರನ್ನ ಹೇಳ್ಬೇಡಿ. ಜಿಟಿ ದೇವೇಗೌಡರು ಕಾರ್ಯಕರ್ತರ ಜೊತೆ ಇಲ್ಲಾ. ಮಾಧ್ಯಮದಲ್ಲಿ ಮಾತನಾಡುವಾಗ ಸಿದ್ದರಾಮಯ್ಯ ಅವರನ್ನು ಮೇಲಕ್ಕೆ ಕರ್ಕೊಂಡು ಹೋಗ್ತಾರೆ. ಚಾಮುಂಡೇಶ್ವರಿ ಕ್ಷೇತ್ರಕ್ಕೆ ಸಾಕಷ್ಟು ಅಭ್ಯರ್ಥಿಗಳು ಇದ್ದಾರೆ. ನನ್ನನ್ನ ರಾಜೀನಾಮೆ ಕೊಟ್ಟು ಬಿಡಿ ಅಂತ ಹೇಳ್ತಾರೆ. ರಾಜೀನಾಮೆ ಕೊಡುವಂತಹ ತಪ್ಪು ನಾನು ಏನೂ ಮಾಡಿದ್ದೆ. ಜಿಟಿ ದೇವೇಗೌಡರವರು ಯಾವಾಗ ಯಾರನ್ನ ಮೆರೆಸುತ್ತಾರೋ ಗೊತ್ತಿಲ್ಲ. ಇವಾಗ ಯಾರನ್ನೋ ಮೆರೆಸಲಿಕ್ಕೆ ಹೋಗ್ತಿದ್ದಾರೆ. ನನ್ನ ಪಕ್ಷದ ಕಾರ್ಯಕರ್ತರಿಗೆ ನೋವಾಗಬಾರದು ಎಂದು ಹೇಳುತ್ತಿದ್ದೇನೆ. ಚಾಮುಂಡೇಶ್ವರಿ ಕ್ಷೇತ್ರ ಮೇಲೆ ನನಗೆ ಅಪಾರ ಗೌರವ ಇದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಯಾರೇ ಸ್ಪರ್ಧೆ ಮಾಡಿದ್ರು ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚೆನ್ನೈ: ತಮಿಳುನಾಡಿನ ನೂತನ ಸಿಎಂ ವಿಜಯ್ ಅವರಿಂದು ಮಾಜಿ ಸಿಎಂ ಎಂ.ಕೆ.ಸ್ಟಾಲಿನ್ ಅವರನ್ನು ಭೇಟಿಯಾದರು. ಸದ್ಯ ಇಂದಿನ ಸಭೆಯಲ್ಲಿ ಇಬ್ಬರು…
ಚಾಮರಾಜನಗರ: ನಾಗಮಲೆಯಲ್ಲಿ ಚಿರತೆ ದಾಳಿಗೆ ಮೃತಪಟ್ಟ ಬಾಲಕನ ಕುಟುಂಬಕ್ಕೆ ಸರ್ಕಾರ 20 ಲಕ್ಷ ರೂ ಪರಿಹಾರ ಘೋಷಣೆ ಮಾಡಿದೆ. ಭಾನುವಾರ…
ಮೈಸೂರು: ಮಿರರ್ ರಿಫ್ಲೆಕ್ಷನ್ ಯಶಸ್ವಿಯಾಗಿದೆ. ಆದರೆ ಇದೇ ಪರಿಹಾರವಲ್ಲ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್…
ಬೆಂಗಳೂರು: ತಮಿಳುನಾಡು ನೂತನ ಸಿಎಂ ವಿಜಯ್ ದಳಪತಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರು ಕರೆ…
ವಾಷಿಂಗ್ಟನ್: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಆಹ್ವಾನದ ಮೇರೆಗೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇ.13ರಿಂದ 15ರವರೆಗೆ ಚೀನಾಗೆ…
ಚೆನ್ನೈ : ಜೋಸೆಫ್ ವಿಜಯ್ ತಮಿಳುನಾಡಿನ 9ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಬೆನ್ನಲ್ಲೇ ಅವರ ಆಪ್ತ ಸ್ನೇಹಿತೆ, ನಟಿ…