ಮೈಸೂರು ನಗರ

ಮಿರರ್ ರಿಫ್ಲೆಕ್ಷನ್‌ ಯಶಸ್ವಿಯಾಗಿದೆ, ಆದರೆ ಇದೇ ಪರಿಹಾರವಲ್ಲ: ಪಾಲಿಕೆ ಆಯುಕ್ತ ಶೇಖ್ ತನ್ವಿರ್ ಆಸೀಫ್

ಮೈಸೂರು: ಮಿರರ್ ರಿಫ್ಲೆಕ್ಷನ್‌ ಯಶಸ್ವಿಯಾಗಿದೆ. ಆದರೆ ಇದೇ ಪರಿಹಾರವಲ್ಲ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಶೇಖ್‌ ತನ್ವೀರ್‌ ಆಸಿಫ್‌ ಹೇಳಿದ್ದಾರೆ.

ಸಬರ್ಬನ್ ಬಸ್ ನಿಲ್ದಾಣದ ಬಳಿ ಮೂತ್ರ ವಿಸರ್ಜನೆ ತಡೆಗಟ್ಟಲು ಮಿರರ್ ಅಳವಡಿಕೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಆ ಜಾಗದಲ್ಲಿ ಸಾರ್ವಜನಿಕರು ಎಷ್ಟು ಹೇಳಿದರೂ ಮೂತ್ರ ವಿಸರ್ಜನೆ ಮಾಡೋದನ್ನು ಬಿಡುತ್ತಿರಲಿಲ್ಲ. ಪಾಲಿಕೆ ಸಿಬ್ಬಂದಿಗಳ ಜೊತೆ ಸಭೆ ಮಾಡುವಾಗ ಮಿರರ್ ಅಳವಡಿಕೆ ಬಗ್ಗೆ ಚರ್ಚೆ ಮಾಡಲಾಯಿತು. ಹೀಗಾದರೂ ತಡೆಗಟ್ಟಬಹುದಾ ಎಂದು ಪ್ರಾಯೋಗಿಕವಾಗಿ ಒಂದು ಪ್ರಯತ್ನ ಮಾಡೋಣ ಎಂದು ತೀರ್ಮಾನ ಮಾಡಲಾಯಿತು. ಅದು ತುಂಬಾನೆ ಯಶಸ್ವಿಯಾಗಿ ದೊಡ್ಡ ಸುದ್ದಿನೂ ಆಗಿದೆ. ಇದೇ ಪರಿಹಾರ ಅಲ್ಲ. ಜನಸಾಮಾನ್ಯರು ಸ್ವಯಂ ಪ್ರೇರಣೆಯಿಂದಲೇ ಬದಲಾಗಬೇಕು. ನಾಗರಿಕ ಪ್ರಜ್ಞೆ ಎನ್ನುವುದನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಬಯಲು ಮೂತ್ರ ವಿಸರ್ಜನೆ ಮಾಡುವುದನ್ನು ತಪ್ಪಿಸಲು ಗಿಡ ನೆಡುವುದು, ಚಿತ್ರಗಳನ್ನು ಬಿಡಿಸುವುದು ಮತ್ತು ಬೇರೆ ಬೇರೆ ಕಾರ್ಯಕ್ರಮಗಳ ಮೂಲಕ ತಡೆಗಟ್ಟುವ ಕೆಲಸ ಮಾಡಿದ್ದೆವು. ಆದರೂ ಆಗ ಇದನ್ನು ಪ್ರಾಯೋಗಿಕ ಮಾಡಿದ್ದೇವೆ. ಅನಿವಾರ್ಯ ಬಿದ್ದರೆ ಬೇರೆ ಕಡೆಯೂ ಅಳವಡಿಸುವ ಬಗ್ಗೆ ಸಾರ್ವಜನಿಕರ, ತಜ್ಞರ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ ಮಾಡಲಾಗುತ್ತದೆ ಎಂದು ಹೇಳಿದರು.

ಇನ್ನು ಇ- ಟಾಯ್ಲೆಟ್ ಮತ್ತು ಸ್ಥಗಿತ ಆಗಿರುವ ಸಾರ್ವಜನಿಕ ಶೌಚಾಲಯ ಪುನರಾರಂಭ ಮಾಡಲು ಕ್ರಮ ವಹಿಸಲಾಗಿದೆ. ಈಗಾಗಲೇ ಸ್ಥಗಿತವಾಗಿರುವ ಸುಮಾರು 112 ಶೌಚಾಲಯಗಳನ್ನು ಪುನರಾಂಭ ಮಾಡಲಾಗಿದೆ. ಇನ್ನು ಕೆಲವು ಕಡೆ ನಿರ್ವಹಣೆ ಮಾಡಲು ಅತ್ಯಂತ ಕಡಿಮೆ ಬಿಡ್ ಸಾರಿದರೂ ಯಾರೂ ಮುಂದೆ ಬರ್ತಾ ಇಲ್ಲ. ಇ- ಟಾಯ್ಲೆಟ್‌ಗಳದ್ದು ಇದೇ ಸಮಸ್ಯೆ. ಅವಶ್ಯಕತೆ ಇಲ್ಲ ಎನ್ನುವ ಕಡೆ ನಿರುಪಯುಕ್ತವಾಗಿ ಬಿದ್ದಿವೆ. ಕೆಲವು ಕಡೆ ನೀರು ಮತ್ತು ಎಲೆಕ್ಟ್ರಿಕಲ್ ಸಮಸ್ಯೆಯಿಂದ ದುರಸ್ತಿಗೊಂಡಿವೆ. ನಿರ್ವಹಣೆಗೆ ಯಾರೂ ಮುಂದೆ ಬಾರದ ಕಾರಣ ನೆನೆಗುದಿಗೆ ಬಿದ್ದಿವೆ. ಮುಂದಿನ ದಿನಗಳಲ್ಲಿ ಸೂಕ್ತ ನಿರ್ವಹಣೆಗೆ ಕ್ರಮವಹಿಸಲಾಗುತ್ತದೆ ಎಂದು ಹೇಳಿದರು.

ಆಂದೋಲನ ಡೆಸ್ಕ್

Recent Posts

ನೇಪಾಳದಲ್ಲಿ ಮತ್ತೆ ಪ್ರವಾಹ, ಭೂಕುಸಿತ

ಕಠ್ಮಂಡು: ನೇಪಾಳದಲ್ಲಿ ಮತ್ತೆ ಪ್ರವಾಹ, ಭೂಕುಸಿತದ ಆರ್ಭಟ ಮುಂದುವರಿದಿದ್ದು, ಕೇವಲ 8 ಸೆಕೆಂಡ್‌ಗಳಲ್ಲಿ ಪರ್ವತವೇ ಕುಸಿದು ಬಿದ್ದಿದೆ! ವಿವಿಧೆಡೆ ಸಂಭವಿಸಿದ…

12 hours ago

ಕಾಡುಹಂದಿ ದಾಳಿ: ರೈತನಿಗೆ ಗಂಭೀರ ಗಾಯ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಪಳನಿಮೇಡ್ ಗ್ರಾಮದಲ್ಲಿ ರೈತನ ಮೇಲೆ ಕಾಡುಹಂದಿ ದಾಳಿ ಮಾಡಿದ್ದು,…

12 hours ago

ಶೀಘ್ರದಲ್ಲೇ ಅಕ್ರಮ ಸೈಟ್‌ಗಳ ಪಟ್ಟಿ ಬಿಡುಗಡೆ: ಸಚಿವ ಯತೀಂದ್ರ ಸಿದ್ದರಾಮಯ್ಯ

ಮೈಸೂರು: ಮುಡಾ 50:50 ಸೈಟ್‌ ವಿಚಾರದಲ್ಲಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಮಹತ್ವದ ಮಾಹಿತಿ ನೀಡಿದ್ದಾರೆ. ಶೀಘ್ರದಲ್ಲೇ ಅಕ್ರಮ ಸೈಟ್‌ಗಳ…

13 hours ago

ಮೈಸೂರು ದಸರಾ ಉದ್ಘಾಟನೆ ಆಹ್ವಾನ ತಿರಸ್ಕರಿಸಿಲ್ಲ: ಗವಿಸಿದ್ಧೇಶ್ವರ ಶ್ರೀಗಳಿಂದ ಸ್ಪಷ್ಟನೆ

ಕೊಪ್ಪಳ: ಮೈಸೂರು ದಸರಾ ಉದ್ಘಾಟನೆ ಕುರಿತು ಹರಿದಾಡುತ್ತಿದ್ದ ವದಂತಿಗಳಿಗೆ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ ತೆರೆ ಎಳೆದಿದ್ದಾರೆ. ಮೈಸೂರು ದಸರಾ ಉದ್ಘಾಟನೆಗೆ…

15 hours ago

ಬ್ಯಾಂಕ್‌ ಗ್ರಾಹಕರಿಗೆ ಗುಡ್‌ನ್ಯೂಸ್‌: ಇಂದಿನಿಂದ 3 ದಿನ ಕರೆ ನೀಡಿದ್ದ ಬ್ಯಾಂಕ್‌ ಮುಷ್ಕರ ಮುಂದೂಡಿಕೆ

ನವದೆಹಲಿ: ಬ್ಯಾಂಕ್‌ ಗ್ರಾಹಕರಿಗೆ ಯಾವುದೇ ಆತಂಕ ಬೇಡ. ಇಂದಿನಿಂದ ನಡೆಯಬೇಕಿದ್ದ 3 ದಿನಗಳ ಬ್ಯಾಂಕ್‌ ಮುಷ್ಕರ ಮುಂದೂಡಿಕೆಯಾಗಿದೆ. ಬ್ಯಾಂಕ್‌ ಸೇವೆಗಳಲ್ಲಿ…

15 hours ago

ಎಸ್‌ಐಆರ್: ಜನಾಗ್ರಹಕ್ಕೆ ದೊರೆಯಲಿ ಮನ್ನಣೆ

ಪ್ರಜಾತಂತ್ರ ವ್ಯವಸ್ಥೆಯ ಭಾರತದಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ಸಂಸತ್ತು ಮತ್ತು ವಿಧಾನಸಭೆಗಳಿಗೆ ಮುಕ್ತ ಮತ್ತು ನಿಷ್ಪಕ್ಷಪಾತ ಚುನಾವಣೆಯನ್ನು ನಡೆಸುವ ಮೂಲಕ…

19 hours ago