ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ೫೦:೫೦ ಅನುಪಾತದಲ್ಲಿ ಸೈಟ್ ಹಂಚಿಕೆ ಮಾಡಿರುವ ವಿಚಾರದಲ್ಲಿ ದೊಡ್ಡ ಅಕ್ರಮವೇ ನಡೆದಿದೆ ಎಂಬ ವಿಚಾರ ಈಗಾಗಲೇ ಸಾಕಷ್ಟು ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲೆ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿಗೂ ಭಾರೀ ಪ್ರಮಾಣದ ಭೂಮಿ ದೊರಕಿರುವ ದಾಖಲೆಗಳು ಸಿಕ್ಕಿದೆ.
ಸಿದ್ದರಾಮಯ್ಯ ಪತ್ನಿ ಪಾರ್ವತಿ ಹೆಸರಿನಲ್ಲಿದ್ದ ಜಾಗವನ್ನು ೧೯೯೭ ರಲ್ಲಿ ಮೈಸೂರು ಮುಡಾ ವಶಕ್ಕೆ ಪಡೆದು ಆ ಭೂಮಿಗೆ ೨೦೨೧ ರಲ್ಲಿ ಪರಿಹಾರ ಸಹ ಕೊಟ್ಟಿದೆ. ಆದರೂ ಸಹ ಸಿಎಂ ಪತ್ನಿಗೆ ೫೦ : ೫೦ ಅನುಪಾತದಲ್ಲಿ ಪರಿಹಾರ ನೀಡಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
೧೯೯೭ ರ ಆಗಸ್ಟ್ ೨೦ ರಂದು ತಾಲೂಕಿನ ಕೆಸರೆ ಗ್ರಾಮದ ಸರ್ವೆ ನಂಬರ್ ೪೬೪ರಲ್ಲಿ ೩.೧೬ ಎಕರೆ ಭೂಮಿ ನೋಟಿಫೈ ಮಾಡಲಾಗಿತ್ತು. ಆ ಕಾಲದಲ್ಲಿ ೩,೨೪,೭೦೦ ರೂ ವೈಯಕ್ತಿಕ ಅವಾರ್ಡ್ ನೀಡಲಾಗಿತ್ತು. ಆದರೆ ೨೦೧೪ ರ ಜೂನ್ ೨೩ರಲ್ಲಿ ಮುಡಾಗೆ ಬದಲಿ ನಿವೇಶನ ನೀಡುವಂತೆ ಪಾರ್ವತಿ ಪತ್ರ ಬರೆದಿದ್ದರು. ಈ ಸಂಬಂಧವಾಗಿ ೨೦೧೭ ಡಿಸೆಂಬರ್ ೧೫ ಹಾಗೂ ೨೦೧೪ರ ಡಿಸೆಂಬರ್ ೩೦ ರಂದು ಅರ್ಜಿದಾರರ ಭೂಮಿಗೆ ಸಮನಾಗಿ ಅಭಿವೃದ್ಧಿ ಪಡಿಸಿದ ಜಮೀನನ್ನು ನೀಡಲು ಪ್ರಾಧಿಕಾರದ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಆದರೆ ಇದಕ್ಕೂ ಒಪ್ಪದ ಸಿಎಂ ಪತ್ನಿ೨೦೨೧ ರ ಅಕ್ಟೋಬರ್ ೨೫ ರಂದು ಮುಡಾ ಗೆ ಮತ್ತೆ ಪತ್ರ ಬರೆದು ೫೦;೫೦ ಅನುಪಾತದಲ್ಲಿ ಬದಲಿ ನಿವೇಶನ ನೀಡಲು ಕೋರಿದ್ದಾರೆ. ಇವರ ಕೋರಿಕೆಯಂತೆ ೨೦೨೧ರ ಅಕ್ಟೋಬರ್ ೨೯ರಂದು ೫೦ :೫೦ ಅನುಪಾತದಲ್ಲಿ ಅಭಿವೃದ್ಧಿಪಡಿಸಿದ ೩೮೨೮೪ ಚದರ ಅಡಿ ಅಳತೆಯ ನಿವೇಶನವನ್ನು ಆಯುಕ್ತರು ನೀಡಿದ್ದರು. ಇದರೊಂದಿಗೆ ೧೯೯೭ ರಲ್ಲಿ ಕಳೆದುಕೊಂಡ ಭೂಮಿಗೆ ೨೦೨೧ ರಲ್ಲಿ ಸಿಎಂ ಪತ್ನಿ ಪಾರ್ವತಿಗೆ ಪರಹಾರ ಪಡೆದಿರುವ ದಾಖಲೆಗಳು ಬಯಲಾಗಿದೆ.
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದೆಹಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ಕೈಗೊಂಡಿದ್ದು, ಕೆಮಿಕಲ್ ಘಟಕದಲ್ಲಿ ಲೇಬಲ್ ಇಲ್ಲದ ಖಾಲಿ ಬಾಟಲ್‌ಗಳನ್ನು…
ಜಗಕೆ ಮಾದರಿ! ಭಲೆ ಭಲೇ ಅಂಕೇಗೌಡರೆ ಜಗಕೆ ಮಾದರಿ ನಿಮ್ಮ ಪುಸ್ತಕಪ್ರೀತಿ ಅರಿವಿನ ಆಕರಗಳು ಪುಸ್ತಕಗಳು! ದುಡಿದ ಲಕ್ಷಾಂತರ ಹಣವನು…
ಮೈಸೂರಿನ ವಿವೇಕಾನಂದ ನಗರದ ವೃತ್ತದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಸ್ಥಾಪಿಸಲಾಗಿದ್ದು, ಪ್ರತಿಮೆಯನ್ನು ಪ್ಲಾಸ್ಟಿಕ್ ಕವರ್‌ನಿಂದ ಮುಚ್ಚಲಾಗಿದೆ. ಜ.೧೨ರಂದು ಸ್ವಾಮಿ ವಿವೇಕಾನಂದರ…
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರದಲ್ಲಿರುವ ಶಿಡ್ಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟ (ಮಲ್ಲಯ್ಯನ ಬೆಟ್ಟ) ಪ್ರಸಿದ್ಧ ಪ್ರವಾಸಿ ಮತ್ತು ಧಾರ್ಮಿಕ…
ಚಾಮರಾಜನಗರದ, ಸಿಂಹ ಚಲನಚಿತ್ರಮಂದಿರದ ಎದುರಿರುವ ಎಲ್‌ಐಸಿ ಕಚೇರಿಯ ಮುಂಭಾಗದಲ್ಲಿ ನಂಜನಗೂಡು-ಮೈಸೂರು ಸೇರಿದಂತೆ ವಿವಿಧ ಮಾರ್ಗಗಳ ಬಸ್‌ಗಳು ಸಂಚರಿಸುತ್ತವೆ. ಈ ಸ್ಥಳದಲ್ಲಿ…
ಚಾಮರಾಜನಗರ ಜಿಲ್ಲೆ ಮುಕ್ಕಡಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದ ಮಾಯಮ್ಮ ದೇವಿ ರಥೋತ್ಸವದ ವೇಳೆ ರಥದ ಚಕ್ರದ ದಂಡ ಮುರಿದ ಪರಿಣಾಮ…