ಮೈಸೂರು ನಗರ

ಮೈಸೂರು| ಮಾರುಕಟ್ಟೆಗೆ ಲಗ್ಗೆ ಇಟ್ಟ ಕಪ್ಪು ಸುಂದರಿ

ಮೈಸೂರಿನಲ್ಲಿ ಹಣ್ಣುಗಳ ರಾಜ ಮಾವಿನ ಹಣ್ಣಿನ ಸುವಾಸನೆ ಗಮಗಮಿಸುತ್ತಿರುವ ನಡುವೆಯೇ, ಕಪ್ಪು ಸುಂದರಿ ನೇರಳೆ ಹಣ್ಣು ಮಾರುಕಟ್ಟೆಗೆ ಲಗ್ಗೆಯಿಟ್ಟು, ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ.

ಹೌದು, ನಗರದಲ್ಲಿ ಕಳೆದ ಕೆಲ ದಿನಗಳಿಂದ ಎತ್ತ ಕಡೆ ನೋಡಿದರು ಕೇವಲ ಹಣ್ಣಿನ ರಾಜ ಮಾವು ಕಾಣಸಿಗುತ್ತಿತ್ತು. ಆದರೆ ಈ ಮಾವಿನ ಜಾಗವನ್ನು ಸ್ವಲ್ಪ ಸ್ವಲ್ಪವಾಗಿ ನೇರಳೆ ಹಣ್ಣು ಅಕ್ರಮಿಸುತ್ತಿದ್ದು, ಎತ್ತ ಕಡೆ ನೋಡಿದರು ಈಗ ನೇರಳೆ ಹಣ್ಣೆ ಕಾಣಿಸುತ್ತಿದೆ.

ರಸ್ತೆ ಬದಿಗಳಲ್ಲಿ ತಳ್ಳುವ ಗಾಡಿಗಳಲ್ಲಿ ನೇರಳೆ ಹಣ್ಣನ್ನು ಮಾರಾಟ ಮಾಡಲಾಗುತ್ತಿದೆ. ಈ ಬಾರಿ ನೇರಳೆ ಹಣ್ಣಿನ ಇಳುವರಿ ಕಡಿಮೆಯಾಗಿರುವ ಪರಿಣಾಮ ಹಣ್ಣಿನ ಬೆಲೆ ದುಪ್ಪಟ್ಟು ಏರಿಕೆಯಾಗಿದೆ. ಆದರೆ ಹಲವು ಔಷಧೀಯ ಗುಣ ಹೊಂದಿರುವುದರಿಂದ ಬೆಲೆ ಏರಿಕೆಯ ನಡುವೆಯೂ ನೇರಳೆ ಹಣ್ಣಿನ ಖರೀದಿಗೆ ಗ್ರಾಹಕರು ಮುಂದಾಗಿದ್ದು, ನೇರಳೆ ಹಣ್ಣಿನ ಮಾರಾಟ ಮೊದಲ ವಾರದಲ್ಲಿಯೇ ತುಸು ಹೆಚ್ಚಾಗಿದೆ.

ಸಾಮಾನ್ಯವಾಗಿ ನೇರಳೆ ಹಣ್ಣು ಫೆಬ್ರವರಿ ಹಾಗೂ ಮಾರ್ಚ್ ತಿಂಗಳಿನಲ್ಲಿ ಹೂ ಬಿಡುವುದಕ್ಕೆ ಶುರುಮಾಡಿ, ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಕಾಯಿ ಕಟ್ಟಿ ಜೂನ್ ಹಾಗೂ ಜುಲೈ ತಿಂಗಳಿನಲ್ಲಿ ಹಣ್ಣಾಗಿ ಹೇರಳವಾಗಿ ಹಣ್ಣು ಬಿಡುವುದಕ್ಕೆ ಶುರು ಮಾಡುತ್ತದೆ.

ಈ ಬಾರಿ ಮಾರುಕಟ್ಟೆಯಲ್ಲಿ ಒಂದು ಕೆ.ಜಿ ನೇರಳೆಗೆ 300 ರೂಗಳಿಂದ 350 ರೂ ಮಾರಾಟ ಮಾಡಲಾಗುತ್ತಿದೆ. ಕಳೆದ ಬಾರಿ ನೇರಳೆ ಹಣ್ಣನ್ನು ಕೆ.ಜಿಗೆ 250 ರಿಂದ 300 ರೂವರೆಗೆ ಮಾರಾಟ ಮಾಡಲಾಗುತ್ತಿತ್ತು. ಕಳೆದ ವರ್ಷಕ್ಕಿಂತ ಈ ವರ್ಷ ಬೆಲೆ ಸ್ವಲ್ಪ ಜಾಸ್ತಿಯಾಗಿದೆ.

ನೇರಳೆ ಅನೇಕ ರೋಗಕ್ಕೆ ಮದ್ದು:
ನೇರಳೆ ಕೇವಲ ಒಂದು ಹಣ್ಣು ಮಾತ್ರವಲ್ಲ. ಈ ಹಣ್ಣು ಅನೇಕ ಔಷಧಿಯ ಗುಣಗಳನ್ನು ಹೊಂದಿದೆ. ಈ ನೇರಳೆ ಹಣ್ಣನ್ನು ಸೇವಿಸುವುದರಿಂದ ಮಧುಮೇಹ ನಿಯಂತ್ರಣ, ತೊದಲುವಿಕೆ ನಿವಾರಣೆ, ಜೀರ್ಣಕ್ರಿಯೆ, ಗಂಟಲು ನೋವು, ಬಾಯಿ ದುರ್ಗಂಧ, ಗೂರಲು, ಉಬ್ಬಸ ತಡೆಗೆ ರಾಮಬಾಣದಂತೆ ಉಪಯುಕ್ತವಾಗಿದೆ ಎನ್ನುತ್ತಾರೆ ವೈದ್ಯರು.

ಆಂದೋಲನ ಡೆಸ್ಕ್

Recent Posts

ಮಲ್ಲಯ್ಯನಪುರದಲ್ಲಿ ನಿರಂತರವಾಗಿ ಕಾಡಾನೆಗಳ ಹಾವಳಿ

ಲಕ್ಷಾಂತರ ರೂ. ಫಸಲು ನಾಶವಾಗುತ್ತಿದೆ ಎಂದು ರೈತರ ಅಳಲು; ಸೂಕ್ತ ಕ್ರಮಕ್ಕೆ ಅರಣ್ಯ ಇಲಾಖೆಗೆ ಆಗ್ರಹ ಹನೂರು: ತಾಲ್ಲೂಕಿನ ಕಾವೇರಿ…

4 hours ago

ಸಣ್ಣ ಕಾಲುವೆಗಳನ್ನು ಮುಚ್ಚಿ ಒತ್ತುವರಿ: ಆರೋಪ

ಹನೂರು: ಉಡುತೊರೆ ಹಳ್ಳ ಜಲಾಶಯದಿಂದ ರೈತರ ಜಮೀನುಗಳಿಗೆ ನೀರು ಹರಿಸಲು ನಿರ್ಮಾಣ ಮಾಡಿದ್ದ ಸಣ್ಣ ಸಣ್ಣ ಕಾಲುವೆಗಳನ್ನು ಮುಚ್ಚಿ ಜಮೀನು…

4 hours ago

‘ಲಾ-ನಿನಾ’ ಚಳಿ: ಜನರ ಆರೋಗ್ಯದ ಮೇಲೆ ದುಷ್ಪರಿಣಾಮ

ಗಿರೀಶ್ ಹುಣಸೂರು ಜ್ವರ, ಶೀತ, ಕೆಮ್ಮು ಕಾಯಿಲೆಗಳ ಭೀತಿ; ಆಸ್ಪತ್ರೆಗಳಿಗೆ ಎಡತಾಕುವ ಪರಿಸ್ಥಿತಿ ಮೈಸೂರು: ರಾಜ್ಯದಲ್ಲಿ ತಾಪಮಾನ ಕುಸಿತದಿಂದಾಗಿ ಚಳಿಯ…

4 hours ago

ಶಾಮನೂರು ಶಿವಶಂಕರಪ್ಪ-ಕಪಿಲಾ ತೀರದ ನಡುವೆ ಇತ್ತು ಅವಿನಾಭಾವ ಸಂಬಂಧ!

ಎಸ್.ಎಸ್.ಭಟ್ ನಂಜನಗೂಡು: ಭಾನುವಾರ ನಿಧನರಾದ ಆಧುನಿಕ ದಾವಣಗೆರೆಯ ನಿರ್ಮಾತೃ ಶಾಮನೂರು ಶಿವಶಂಕರಪ್ಪ ಅವರಿಗೂ ಹಾಗೂ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ…

4 hours ago

ಖಾಸಗಿ ಶಾಲೆಗಳಲ್ಲಿ ಕಡ್ಡಾಯವಾಗಿ ಕನ್ನಡ ಕಲಿಸದೇ ಹೋದರೆ ಕ್ರಮ: ಸಚಿವ ಮಧು ಬಂಗಾರಪ್ಪ

ಬೆಂಗಳೂರು: ರಾಜ್ಯದ ಎಲ್ಲಾ ಮಾದರಿ ಬೋರ್ಡ್‌ಗಳು ಕಡ್ಡಾಯವಾಗಿ ಕನ್ನಡ ಭಾಷೆ ಕಲಿಸಬೇಕು. ಇಲ್ಲದೇ ಹೋದರೆ ಅಂತಹ ಶಾಲೆಗಳ ಮೇಲೆ ಕ್ರಮ…

15 hours ago