ಮೈಸೂರು ನಗರ

ಮೈಸೂರಿನ ಸಮಗ್ರ ಅಭಿವೃದ್ಧಿಗೆ ಆದ್ಯತೆ

ನಗರಪಾಲಿಕೆಯಲ್ಲಿ 2026-27ನೇ ಸಾಲಿನ ಆಯವ್ಯಯ ಮಂಡನೆ

ಮೈಸೂರು : ರಾಜಧಾನಿ ಬೆಂಗಳೂರು ನಂತರ ವೇಗವಾಗಿ ಬೆಳೆಯುತ್ತಿರುವ ಸಾಂಸ್ಕೃತಿಕ ನಗರಿಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಮೈಸೂರು ಮಹಾನಗರಪಾಲಿಕೆಯು ಬಜೆಟ್‌ನಲ್ಲಿ ಹಲವಾರು ಹೊಸ ಕಾರ್ಯಕ್ರಮಗಳನ್ನು ಘೋಷಿಸಿದೆ.

ಬೃಹತ್ ಮೈಸೂರು ಮಹಾನಗರಪಾಲಿಕೆಯಾಗಿರುವ ಕಾರಣಕ್ಕಾಗಿ ಮೂಲ ಸೌಕರ್ಯಗಳ ಅಭಿವೃದ್ಧಿಗೂ ಗಮನಹರಿಸಿ ಅನುದಾನ ಕಾಯ್ದಿರಿಸಲಾಗಿದೆ.

ನಗರಪಾಲಿಕೆ ಸಭಾಂಗಣದಲ್ಲಿ ಬುಧವಾರ ನಡೆದ ವಿಶೇಷ ಸಭೆಯಲ್ಲಿ ಆಡಳಿತಾಧಿಕಾರಿ ನಿತೇಶ್ ಪಾಟೀಲ್ ಅವರು 2026-27ನೇ ಸಾಲಿನ ಆಯವ್ಯಯವನ್ನು ಮಂಡಿಸಿದರು. 2025-26ನೇ ಸಾಲಿನ ಆಯವ್ಯಯ ದಲ್ಲಿ 933.20 ಕೋಟಿ ರೂ.ಗಳ ಜಮೆಗಳನ್ನು ನಿರೀಕ್ಷಿಸಲಾಗಿತ್ತಾ ದರೂ ಡಿಸೆಂಬರ್ ಅಂತ್ಯಕ್ಕೆ 615.86 ಕೋಟಿ ರೂ. ಜಮೆಗಳನ್ನು ಸ್ವೀಕರಿಸಲಾಗಿದೆ.

2025-26ನೇ ಸಾಲಿನ ಆಯವ್ಯಯದಲ್ಲಿ 1234.06 ಕೋಟಿರೂ.ಗಳನ್ನುಪಾವತಿಸಲು ಅವಕಾಶಮಾಡಲಾಗಿತ್ತು. ಆದರೆ, ನಗರಪಾಲಿಕೆಯು ಸ್ವಯಂ ಸಂಪನ್ಮೂಲಗಳ ಕ್ರೋಢೀಕರಣದ ಹಾಗೂ ಸರ್ಕಾರದಿಂದ ಬಿಡುಗಡೆ ಯಾಗುವ ಅನುದಾನಗಳ ಆಧಾರದ ಮೇಲೆ ವೆಚ್ಚ ಭರಿಸ ಬೇಕಾಗಿರುವುದರಿಂದ ಸ್ವಯಂ ಸಂಪನ್ಮೂಲಗಳ ಹಾಗೂ ಅನುದಾನಗಳ ಲಭ್ಯತೆಗೆ ಅನುಸಾರವಾಗಿ ಡಿಸೆಂಬರ್ ಅಂತ್ಯಕ್ಕೆ 598.50 ಕೋಟಿ ರೂ.ಗಳನ್ನು ಪಾವತಿಸಲಾಗಿದೆ. ಹಾಗಾಗಿ, 2026-27ನೇ ಸಾಲಿನಲ್ಲಿ ಯಾವುದೇ ಸಂಸ್ಥೆಯು ಪರಿಣಾಮಕಾರಿ ಹಾಗೂ ದಕ್ಷತೆಯಿಂದ ಕಾರ್ಯನಿರ್ವಹಿಸಬೇಕಾದರೆ ಹಣಕಾಸಿನ ಲಭ್ಯತೆ ಅತ್ಯವಶ್ಯಕವಾಗಿರುವುದರಿಂದ ಪಾಲಿಕೆಯ ಜಮೆಗಳ ಕ್ರೋಢೀಕರಣಕ್ಕೆ ಸಂಬಂಧಿಸಿದಂತೆ ಹಲವಾರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದಾಯ ಸಂಗ್ರಹಕ್ಕೆ ಸರಳೀಕರಣವನ್ನೂ ಮಾಡಲಾಗಿದೆ ಎಂದು ಪ್ರಕಟಿಸಿದರು.

ಯಾವ್ಯಾವ ಮೂಲಗಳಿಂದ ಆದಾಯ?:
ಆಸ್ತಿ ತೆರಿಗೆ ಹಾಗೂ ಖಾತಾ ವರ್ಗಾವಣೆ ಶುಲ್ಕ, ಖಾತಾ ಪ್ರತಿಗಳ ಶುಲ್ಕ, ಜಾಹೀರಾತು ಶುಲ್ಕದಿಂದ 286.72 ಕೋಟಿ ರೂ., ನೀರಿನ ತೆರಿಗೆ ಹಾಗೂ ಒಳಚರಂಡಿ ನಿರ್ವಹಣಾ ಕರದಿಂದ115.35 ಕೋಟಿ ರೂ., ಯೋಜನೆಗಳು ಮತ್ತು ನಿಬಂಧನೆಗಳು, ನಗರ ಮತ್ತು ಪಟ್ಟಣ ಯೋಜನೆಯಿಂದ 17.50 ಕೋಟಿ ರೂ., ಉದ್ದಿಮೆ ಪರವಾನಗಿ ಶುಲ್ಕದಿಂದ 8.84 ಲಕ್ಷ ರೂ., ನಗರಪಾಲಿಕೆ ಆಸ್ತಿಗಳಿಂದ ಬರುವ ಬಾಡಿಗೆಯಿಂದ 6.49 ಕೋಟಿ ರೂ., ಜಾಹೀರಾತು ಶುಲ್ಕದಿಂದ 2 ಕೋಟಿ ರೂ.ಗಳ ಆದಾಯ ನಿರೀಕ್ಷಿಸಲಾಗಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಹೊರಗುತ್ತಿಗೆ ಪೌರಕಾರ್ಮಿಕರ ಹಾಗೂ ವಿಶೇಷ ನೇಮಕಾತಿಯಡಿ ನೇಮಕವಾಗಿರುವ ಪೌರ ಕಾರ್ಮಿಕರ ವೇತನಕ್ಕಾಗಿ 33.47 ಕೋಟಿ ರೂ., ರಾಜ್ಯ ಸರ್ಕಾರದಿಂದ ಬೀದಿ ದೀಪ ಹಾಗೂ ನೀರು ಸರಬರಾಜು ಸ್ಥಾವರಗಳ ವಿದ್ಯುತ್ ಬಿಲ್ ಪಾವತಿಗಾಗಿ 96.36 ಕೋಟಿ ರೂ., ರಾಜ್ಯ ಹಣಕಾಸು ಆಯೋಗದಿಂದ ಪಾಲಿಕೆ ಕಾಯಂ ಅಧಿಕಾರಿ, ನೌಕರರ ವೇತನ, ನಿವೃತ್ತ ನೌಕರರ ಪಿಂಚಣಿ ವಂತಿಕೆ ಅನುದಾನವಾಗಿ 90.38 ಕೋಟಿ ರೂ., 16ನೇ ಹಣಕಾಸು ಆಯೋಗದಿಂದ 110.3 ಕೋಟಿ ರೂ.ಗಳ ಅನುದಾನವನ್ನು ಸರ್ಕಾರದಿಂದ ನಿರೀಕ್ಷಿಸಲಾಗಿದೆ.

ನಗರದ ಸರ್ವತೋಮುಖ ಅಭಿವೃದ್ಧಿಯ ಬಗ್ಗೆ ಕಾಳಜಿ ಹೊಂದಿರುವ ಲೋಕಸಭಾ, ವಿಧಾನಸಭಾ, ವಿಧಾನ ಪರಿಷತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಿಂದ 45 ಲಕ್ಷ ರೂ, ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ರಸ್ತೆಗಳ ಅಭಿವೃದ್ಧಿಗೆ 57.3 ಕೋಟಿ ರೂ. ನಿರೀಕ್ಷಿಸಲಾಗಿದೆ. ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ 1ರಡಿ 100 ಕೋಟಿ ರೂ., ಮಹಾತ್ಮಗಾಂಧಿ ನಗರ ಏಕಾಸ ಯೋಜನೆ 2ರಡಿ 100 ಕೋಟಿ ರೂ., ಕೇಂದ್ರ ಸರ್ಕಾರದ ಸ್ವಚ್ಛಭಾರತ್ 2 ಅನುದಾನದಡಿ 132.8 ಕೋಟಿ ರೂ., ಕೇಂದ್ರ ಪುರಸ್ಕೃತ ಅಮೃತ್ 2.0 ಯೋಜನೆಯಡಿ ಉದ್ಯಾನವನಗಳು ಮತ್ತು ಜಲಸಂಪನ್ಮೂಲ ಅಭಿವೃದ್ಧಿಗಾಗಿ 150 ಕೋಟಿ ರೂ., ರಾಜ್ಯ ವಿಪತ್ತು ಉಪಶಮನ ನಿಧಿಯಿಂದ 1 ಕೋಟಿ ರೂ., ನಗರದಲ್ಲಿ ಸಂಗ್ರಹಣೆಯಾಗುತ್ತಿರುವ ಪಾರಂಪರಿಕ ತ್ಯಾಜ್ಯದ ವೈಜ್ಞಾನಿಕ ನಿರ್ವಹಣೆಗಾಗಿ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯಿಂದ 260.6 ಕೋಟಿ ರೂ. ನಿರೀಕ್ಷಿಸಲಾಗಿದೆ.

 

ಆಂದೋಲನ ಡೆಸ್ಕ್

Recent Posts

ಇರಾನ್‌ನ ಇಸ್ಫಹಾನ್‌ನಲ್ಲಿ ಸರಣಿ ಸ್ಫೋಟ

ಟೆಹರಾನ್:‌ ಇರಾನ್‌ ಮೇಲೆ ಅಮೇರಿಕಾ ಹಾಗೂ ಇಸ್ರೇಲ್‌ ತನ್ನ ಪ್ರತೀಕಾರ ಮುಂದುವರಿಸಿದೆ. ಇರಾನ್‌ನ ಇಸ್ಪಹಾನ್‌ ನಗರದಲ್ಲಿರುವ ಮಿಲಿಟರಿ ಕೇಂದ್ರದ ಮೇಲೆ…

5 mins ago

ಓದುಗರ ಪತ್ರ: ಟೋಲ್ ದರ ಹೆಚ್ಚಳ ಗಾಯದ ಮೇಲೆ ಬರೆ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಏಪ್ರಿಲ್‌ನಿಂದ ಅನ್ವಯವಾಗುವಂತೆ ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್ ದರವನ್ನು ೩೦೦೦ ರೂ.ನಿಂದ ೩೦೭೫ ರೂ. ಗೆ ಏರಿಸಿರುವುದು…

55 mins ago

ಓದುಗರ ಪತ್ರ: ಐಪಿಎಲ್ ಟಿಕೆಟ್‌ಗೆ ಗೋಗರೆಯುತ್ತಿರುವ ಶಾಸಕರು

ಬೆಂಗಳೂರು ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ ಕ್ರಿಕೆಟ್ ಪಂದ್ಯಕ್ಕೆ ಟಿಕೆಟ್ ಕೊಡಿಸಿ ಎಂದು ಎಲ್ಲಾ ಪಕ್ಷಗಳ ಕೆಲವು ಶಾಸಕರು…

58 mins ago

ಓದುಗರ ಪತ್ರ: ಹಿಂದಿ ಭಾಷೆ ಬಗ್ಗೆ ತಾತ್ಸಾರ ಸಲ್ಲದು

ಎಸ್‌ಎಸ್‌ಎಲ್‌ಸಿ ಹಿಂದಿ ಭಾಷೆಯ ಪರೀಕ್ಷೆ ಮಾ.೩೧ರಂದು ನಡೆಯಲಿದ್ದು, ಪರೀಕ್ಷೆ ಸಂದರ್ಭದಲ್ಲಿಯೇ ಸರ್ಕಾರ ಹಿಂದಿ ವಿಷಯದಲ್ಲಿ ಅಂಕಗಳನ್ನು ಪರಿಗಣಿಸುವುದಿಲ್ಲ, ಬದಲಾಗಿ ಗ್ರೇಡ್…

1 hour ago

ಓದುಗರ ಪತ್ರ: ಶಾಸಕ ದರ್ಶನ್ ಮಾದರಿ ನಡೆ

ಜನರಿಂದ ಚುನಾಯಿತರಾದ ಜನಪ್ರತಿನಿಧಿಗೆ ತನ್ನ ಕ್ಷೇತ್ರಕ್ಕೆ ಮಾಡಬೇಕಾಗಿರುವ ಯೋಜನೆಗಳ ಬಗ್ಗೆ ಸಾಕಷ್ಟು ಒಲವಿರಬೇಕು ಹಾಗೂ ಬದ್ಧತೆ ಇರಬೇಕು ಎನ್ನುವುದಕ್ಕೆ ತಮಗೆ…

1 hour ago

‘ಮೋದಿ ವಿದೇಶ ನೀತಿ ದೇಶದ ಹಿತಕ್ಕೆ ಮಾರಕ’

‘ಸಾಮ್ರಾಜ್ಯಶಾಹಿ ದಾಳಿ ಹಾಗೂ ಅದರ ಪರಿಣಾಮಗಳು’ ಕುರಿತ ವಿಚಾರಸಂಕಿರಣ  ಹೊಸದಿಲ್ಲಿ: ಪಶ್ಚಿಮ ಏಷ್ಯದಲ್ಲಿ ತಲೆದೋರಿರುವ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತದ ಬದಲಾದ…

1 hour ago