ಮೈಸೂರು ನಗರ

ಸಚಿವ ಮಹದೇವಪ್ಪಗೆ ಶಿಷ್ಟಾಚಾರದ ಬಗ್ಗೆ ಮಾತಾಡುವ ಕನಿಷ್ಟ ಸೌಜನ್ಯವೂ ಇಲ್ಲ: ಪ್ರತಾಪ್‌ ಸಿಂಹ

ಮೈಸೂರು: ಬಿ.ಎಸ್.ಯಡಿಯೂರಪ್ಪ ಅವರ ಸತತ ಪ್ರಯತ್ನ ಹಾಗೂ ಸಂಸದ ರಾಘವೇಂದ್ರ ಅವರ ಪರಿಶ್ರಮದಿಂದ ಸಿಗಂದೂರು ಸೇತುವೆ ಆಗಿದೆ ಎಂದು ಮಾಜಿ ಸಂಸದ ಪ್ರತಾಪ್‌ ಸಿಂಹ ಹೇಳಿದ್ದಾರೆ.

ಸಿಗಂದೂರು ಸೇತುವೆ ಉದ್ಘಾಟನೆ ಕುರಿತು ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ನಡುವೆ ಜಟಾಪಟಿ ಮುಂದುವರಿದಿರುವ ಬಗ್ಗೆ ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಿಷ್ಟಾಚಾರ ಅಂದರೆ ಏನೂ ಸಿಎಂ? ಎಂದು ಪ್ರಶ್ನೆ ಮಾಡಿದರು. ಕೇಂದ್ರವೂ ಸಿಎಂರನ್ನು ಕರೆದಿದೆ, ಸಂಸದ ರಾಘವೇಂದ್ರ ಅವರು ಸಿಎಂರನ್ನು ಕರೆದಿದ್ದಾರೆ. ಬೇರೆ ಇನ್ನು ಯಾವ ರೀತಿ ನಿಮ್ಮನ್ನು ಕರೆಯಬೇಕಿತ್ತು ಸಿಎಂ? ಬೆಂಗಳೂರಿನಿಂದ ಮೈಸೂರಿಗೆ ಬರಲು, ಮೈಸೂರಿನಿಂದ ತಾಲ್ಲೂಕು ಕೇಂದ್ರಕ್ಕೆ ಹೋಗಲು ಹೆಲಿಕಾಪ್ಟರ್ ಬಳಕೆ ಮಾಡುತ್ತಿರಿ. ಇಂಡಿಗೆ ಹೋಗಿ ಅಲ್ಲಿಂದ ಹೆಲಿಕಾಪ್ಟರ್‌ನಲ್ಲಿ ಹೋಗಬಹುದಿತ್ತಲ್ಲ ಎಂದು ಪ್ರಶ್ನೆ ಮಾಡಿದರು.

ಇನ್ನು ಬಿ.ಎಸ್.ಯಡಿಯೂರಪ್ಪ ಅವರ ಸತತ ಪ್ರಯತ್ನ, ಸಂಸದ ರಾಘವೇಂದ್ರ ಅವರ ಪರಿಶ್ರಮದಿಂದ ಸೇತುವೆ ಆಗಿದೆ. ಜನರ ಖುಷಿ ನೋಡಲು ಸಿಎಂ ಅಲ್ಲಿಗೆ ಹೋಗಬೇಕಿತ್ತು. ಬೀಗರ ಊಟಕ್ಕೆ ಬರ್ತಿರಲ್ಲ, ಸೇತುವೆ ಉದ್ಘಾಟನೆಗೆ ಯಾಕೆ ಹೋಗಲಿಲ್ಲ? ಸಿಎಂ‌ ಅವರೇ ನೀವು ಯಾವ ಶಿಷ್ಟಾಚಾರ ಪಾಲಿಸುತ್ತಿದ್ದಿರಿ? ಸಚಿವ ಮಹದೇವಪ್ಪಗೆ ಶಿಷ್ಟಾಚಾರದ ಬಗ್ಗೆ ಮಾತಾಡುವ ಕನಿಷ್ಟ ಸೌಜನ್ಯವೂ ಇಲ್ಲ ಎಂದರು.

ಆಷಾಢ ಶುಕ್ರವಾರಕ್ಕೆ ಬೆಟ್ಟಕ್ಕೆ ಬಂದ ಸಚಿವ ಮಹದೇವಪ್ಪ ಮಂಗಳಾರತಿ ಕೊಟ್ಟರೆ ಮಂಗಳರಾತಿ ತೆಗೆದುಕೊಳ್ಳುವುದಿಲ್ಲ. ನಂಬಿಕೆ ಇಲ್ಲ ಅಂದರೆ ನೀವು ಯಾಕೆ ದೇವಸ್ಥಾನಕ್ಕೆ ಬರ್ತಿರಾ? ಶಾಸಕ ತನ್ವೀರ್ ಸೇಠ್ ಬೆಟ್ಟಕ್ಕೆ ಬಂದರೆ ಪೂಜೆ ಮಾಡುತ್ತಾರೆ, ಕುಂಕುಮ ಹಚ್ಚುತ್ತಾರೆ. ನೀವು ಮಾತ್ರ ಹಂಗೆ ಹೋಗ್ತಿರಿ? ಈ ಸಂಪತ್ತಿಗೆ ಬೆಟ್ಟಕ್ಕೆ ಯಾಕೆ ಬರ್ತಿರಿ?
ಸಿಗಂಧೂರು ಸೇತುವೆ ಡಿಪಿಆರ್ ಮಾಡಿಸಿದ್ದು ನಾನೇ ಎಂದು ಮಹದೇವಪ್ಪ ಹೇಳಿದ್ದಾರೆ.

ಯಾರೋ ಗೊತ್ತಿಲ್ಲದವರಿಗೆ ಈ ಕಥೆ ಹೇಳಿ ಮಹದೇವಪ್ಪ ಅವರೇ. ಡಿಪಿಆರ್ ಕೂಡ ಮಾಡಿಸೋದು ಕೇಂದ್ರ ಸರ್ಕಾರ ಅನ್ನೋದು ಎಲ್ಲರಿಗೂ ಗೊತ್ತಿದೆ. ಸಿದ್ದರಾಮಯ್ಯ ಮೈಸೂರಿಗೆ ಬಂದಾಗ ಮಹದೇವಪ್ಪ ಮೈಸೂರಿಗೆ ಬರುತ್ತಾರೆ. ಅಮೇಲೆ ಕೈಗೆ ಸಿಗಲ್ಲ. ಮೈಸೂರಿನಲ್ಲಿ ಎಷ್ಟು ಕೆಡಿಪಿ ಸಭೆ ಮಾಡಿದ್ದಿರಾ ಹೇಳಿ? ಹಿರಿಯ ಪತ್ರಕರ್ತ ಕೆ.ಬಿ.ಗಣಪತಿ ಅವರಿಗೆ ಪೊಲೀಸ್ ಗೌರವ ಕೊಡುವ ಸೌಜನ್ಯವೂ ಸಿಎಂಗೆ ಹಾಗೂ ಮಹದೇವಪ್ಪ ಇಲ್ಲ. ಕೆ.ಬಿ.ಗಣಪತಿಗೆ ಪೊಲೀಸ್ ಗೌರವ ಯಾಕೆ ಕೊಡಲಿಲ್ಲ? 50 ವರ್ಷ ನಿರಂತರವಾಗಿ ಪತ್ರಿಕೋದ್ಯಮ ಮಾಡಿದ ಕೆ.ಬಿ.ಗಣಪತಿ ಅವರಿಗೆ ಪೊಲೀಸ್ ಗೌರವ ಕೊಡಬೇಕಿತ್ತು ತಾನೇ? ಹಿರಿಯ ಪತ್ರಕರ್ತರಾದ ರಾಜಶೇಖರ ಕೋಟಿ, ದಲಿತ ಹೋರಾಟದ ಮುಖಂಡ ನಿಧನರಾದಾಗ ಪೊಲೀಸ್ ಗೌರವ ಕೊಡಲಾಗಿತ್ತು. ಈಗ ಕೆ.ಬಿ.ಗಣಪತಿ ಅವರಿಗೆ ಯಾಕೆ ಕೊಡಲಿಲ್ಲ ಎಂದು ಮಹದೇವಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.

ಆಂದೋಲನ ಡೆಸ್ಕ್

Recent Posts

ತಿರುವಿನಲ್ಲಿ ಉರುಳಿಬಿದ್ದ ಲಾರಿ: ತಪ್ಪಿದ ಭಾರೀ ಅನಾಹುತ

ಕೊಡಗು: ಕೊಡಗು ಜಿಲ್ಲೆ ಶನಿವಾರಸಂತೆ ಬಳಿಯ ಗುಡುಗಳಲೆಯಲ್ಲಿ ಸಿಮೆಂಟ್ ತುಂಬಿದ್ದ ಲಾರಿ ಉರುಳಿಬಿದ್ದಿದೆ. ಶನಿವಾರಸಂತೆ–ಅರಕಲಗೂಡು ರಸ್ತೆಯ ಗುಡುಗಳಲೆ ತಿರುವಿನಲ್ಲಿ ಘಟನೆ…

11 hours ago

ದುಬಾರೆ ಆನೆ ಶಿಬಿರದಲ್ಲಿ19 ವರ್ಷದ ಗಂಡಾನೆ ಸಾವು

ಕುಶಾಲನಗರ: ದುಬಾರೆ ಆನೆ ಶಿಬಿರದಲ್ಲಿದ್ದ ಸುಮಾರು 19 ವರ್ಷ ಪ್ರಾಯದ ಗಂಡಾನೆಯೊಂದು ಐದು ತಿಂಗಳಿಗೂ ಹೆಚ್ಚು ಕಾಲ ನಿರಂತರ ಚಿಕಿತ್ಸೆ…

12 hours ago

ಪ್ರೀತಿಗೆ ನಿರಾಕರಣೆ: ಮೈಸೂರಿನಲ್ಲಿ ಬೆಚ್ಚಿಬೀಳಿಸಿದ ಒನ್‌ ಸೈಡ್‌ ಲವ್‌ ಕೃತ್ಯ

ಮೈಸೂರು: ಪ್ರೀತಿಗೆ ನಿರಾಕರಿಸಿದ ಪರಿಣಾಮ ಯುವಕನೋರ್ವ ಯುವತಿಯನ್ನು ತಬ್ಬಿಕೊಂಡು ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮೈಸೂರಿನ ವಿಜಯನಗರದ ಬಳಿ…

14 hours ago

ಮನ್​​ಮುಲ್​ ಹಾಲಿನ ಪುಡಿ ಕಲಬೆರಕೆ ಪ್ರಕರಣ: ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಅಧ್ಯಕ್ಷ ಶಿವಕುಮಾರ್ ಅರೆಸ್ಟ್​!

ಮಂಡ್ಯ: ಮನ್​​ಮುಲ್​ ಹಾಲಿನ ಪುಡಿ ಕಲಬೆರಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಮನ್ ಮುಲ್ ಅಧ್ಯಕ್ಷ ಶಿವಕುಮಾರ್(ಶಿವಪ್ಪ)…

15 hours ago

ಭಾರೀ ಮಳೆಗೆ ರೈತರ ಬೆಳೆ ನಾಶ: ಲಕ್ಷಾಂತರ ರೂ. ನಷ್ಟ, ಮನೆ ಗೋಡೆ ಕುಸಿತ

ಹನೂರು: ಸೋಮವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಕ್ಷೇತ್ರದ ಹಲವು ಜಮೀನುಗಳಲ್ಲಿ ಬೆಳೆದಿದ್ದ ಬೆಳೆಗಳು ಸಂಪೂರ್ಣ ಜಲಾವೃತಗೊಂಡು ಲಕ್ಷಾಂತರ ರೂಪಾಯಿ…

16 hours ago

ಸ್ಕೂಲ್ ಬಸ್‌ ಹರಿದು ಒಂದೂವರೆ ವರ್ಷದ ಮಗು ಸಾವು

ಮೈಸೂರು: ಜಿಲ್ಲೆಯ ಹುಣಸೂರು ತಾಲೂಕಿನ ನಂಜಾಪುರ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ರಸ್ತೆ ಬದಿ ನಿಂತಿದ್ದ ಒಂದೂವರೆ ವರ್ಷದ ಪುಟ್ಟ…

16 hours ago