ಮೈಸೂರು ನಗರ

ಆಷಾಡ ಶುಕ್ರವಾರಕ್ಕೆ ಚಾಮುಂಡಿ ಬೆಟ್ಟದಲ್ಲಿ ಪೊಲೀಸ್ ಭದ್ರತೆ: ಸೀಮಾ ಲಾಟ್ಕರ್ ಮಾಹಿತಿ

ಮೈಸೂರು: ಆಷಾಡ ಶುಕ್ರವಾರಕ್ಕೆ ಚಾಮುಂಡಿ ಬೆಟ್ಟದಲ್ಲಿ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದ್ದು, ಅಹಿತಕರ ಘಟನೆ ನಡೆಯದಂತೆ ಬಂದೋಬಸ್ತ್‌ ಮಾಡಲಾಗುತ್ತದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಮಾಹಿತಿ ನೀಡಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚಾಮುಂಡಿ ಬೆಟ್ಟಕ್ಕೆ ರಸ್ತೆ ಸಂಪರ್ಕ ಕಲ್ಪಿಸುವ ಎಲ್ಲಾ ಮಾರ್ಗಗಳನ್ನು ಬಂದ್ ಮಾಡುತ್ತೇವೆ. ಗುರುವಾರ ರಾತ್ರಿ 10ರಿಂದಲೇ ಎಲ್ಲಾ ರಸ್ತೆ ಬಂದ್ ಆಗುತ್ತವೆ. ಚಾಮುಂಡಿ ಬೆಟ್ಟದ ನಿವಾಸಿಗಳಿಗೆ ಮಾತ್ರ ಬೆಟ್ಟದ ಮೇಲೆ ಹೋಗಲು ಅವಕಾಶವಿರಲಿದೆ.

4 ಡಿಸಿಪಿ, 2 ಎಎಸ್ಪಿ ಸೇರಿದಂತೆ 1470 ಪೊಲೀಸರು ಕೆಲಸ ಮಾಡುತ್ತಾರೆ. ದಿನದ 24 ಗಂಟೆ ಪೊಲೀಸ್ ಭದ್ರತೆ ಇರುತ್ತದೆ. ಹಲವೆಡೆ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದ ರೀತಿ ಭದ್ರತೆ ಮಾಡಿಕೊಂಡಿದ್ದೇವೆ ಎಂದು ಪೊಲೀಸ್‌ ಭದ್ರತೆ ಬಗ್ಗೆ ಮಾಹಿತಿ ನೀಡಿದರು.

ಆಂದೋಲನ ಡೆಸ್ಕ್

Recent Posts

ವಿನಯ್‌ ಕುಲಕರ್ಣಿಗೆ ಸುಪ್ರೀಂ ಕೋರ್ಟ್‌ ಹಿನ್ನಡೆ: ಜಾಮೀನು ರದ್ದು, ಶರಣಾಗಲು 2 ವಾರ ಗಡುವು!

ನವದೆಹಲಿ: ಯೋಗೇಶ್‌ ಗೌಡ ಕೊಲೆ ಪ್ರಕರಣದಲ್ಲಿ ವಿನಯ್‌ ಕುಲಕರ್ಣಿಗೆ ಸುಪ್ರೀಂ ಕೋರ್ಟ್‌ ಹಿನ್ನಡೆಯಾಗಿದೆ. ಹೈಕೋರ್ಟ್‌ ನೀಡಿದ್ದ ಜಾಮೀನನ್ನು ರದ್ದುಗೊಳಿಸಿರುವ ನ್ಯಾಯಾಲಯ, ಎರಡು…

23 mins ago

ಓದುಗರ ಪತ್ರ: ಬ್ರೇಕ್ ಬೀಳಬೇಕು ಅತಿಯಾಸೆಗೆ!

ಬ್ರೇಕ್ ಬೀಳಬೇಕು ಅತಿಯಾಸೆಗೆ! ಇಲ್ಲಿಂದಲ್ಲಿಗೆ ಅಲ್ಲಿಂದಿಲ್ಲಿಗೆ ಇನ್ನೆಲ್ಲಿಗೆ ಹೋಗಬೇಕೆಂಬುದು ತಿಳಿಯದೆ ವಿಲವಿಲ ಒzಡಿತು ಕಾಡಾನೆ ಪಡೆ!ಹೊಸದೇನಲ್ಲ ಮಾನವ-ವನ್ಯಜೀವಿಗಳ ಸಂಘರ್ಷ! ಬೆಳೆದಂತೆಲ್ಲ…

1 hour ago

ಓದುಗರ ಪತ್ರ: ಬಸ್‌ಗಳಲ್ಲಿ ಈ ಫಲಕ ಇನ್ನೂ ಇರಬೇಕೆ?

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳಲ್ಲಿ ಮೊದಲ ಎರಡು ಸೀಟುಗಳಲ್ಲಿ ವಿಧಾನಸಭಾ ಸದಸ್ಯರು ಮತ್ತು ಲೋಕಸಭಾ ಸದಸ್ಯರು ಹಾಗೂ…

2 hours ago

ಓದುಗರ ಪತ್ರ: ಜನಸಾಮಾನ್ಯರಿಗೂ ಸಂವಿಧಾನದ ಮಹತ್ವ ತಿಳಿಯಬೇಕು

ನವೆಂಬರ್ ೨೬ರಂದು ಆಚರಿಸಲಾಗುವ ಸಂವಿಧಾನ ದಿನಾಚರಣೆ ಕೇವಲ ಸರ್ಕಾರ, ರಾಜಕಾರಣಿಗಳು, ಜನಪ್ರತಿನಿಧಿಗಳು, ಸರ್ಕಾರಿ ಕಚೇರಿಗಳು ಹಾಗೂ ಶಾಲಾ-ಕಾಲೇಜುಗಳಿಗೆ ಸೀಮಿತವಾಗಬಾರದು. ಕಟ್ಟಕಡೆಯ…

2 hours ago

ದಸರಾಗೆ ಅದ್ಭುತ ಬ್ರ್ಯಾಂಡಿಂಗ್ ಅಗತ್ಯ

ಗಿರಿಧರ ಗುಂಜಗೋಡು, ಐಟಿ ಉದ್ಯೋಗಿ ಮತ್ತು ಪ್ರವಾಸಿ ಲೇಖಕ ಅರಮನೆ ಸುತ್ತಮುತ್ತ ಖಾಸಗಿ ವಾಹನಗಳ ನಿಷೇಧವಿರಲಿ ಮೈಸೂರಿಗರಿಗೆ ಇಲ್ಲಿನ ಇತಿಹಾಸ,…

2 hours ago

ಊನಗೊಂಡ ಕಾಲುಗಳಲ್ಲೇ ಟ್ರೆಕ್ಕಿಂಗ್ ಮಾಡಿದ ಶಿಜೋಯ್

ಪಂಜುಗಂಗೊಳ್ಳಿ ಅವರ ವಾರದ ಅಂಕಣ  ಕಾಂಬೋಡಿಯಾದಿಂದ ವಿಯಾಟ್ನಾಮ್‌ಗೆ ಸೈಕಲ್ ತುಳಿದ ಧೀರ  ಮುಂಬೈಯ ವಿಕ್ರೋಲಿ ಎಂಬಲ್ಲಿನ ಶಿಜೊಯ್  ಜಾಕೋಬ್ ಹುಟ್ಟಿದಾಗ…

2 hours ago