ಮೈಸೂರು: ಭಾರತೀಯ ರೈಲ್ವೆ ಇಲಾಖೆಯೂ ಹೊಸ ವರ್ಷದ ಆರಂಭದ ಬೆನ್ನಲ್ಲೇ, ತನ್ನ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಿದ್ದು, ಮೈಸೂರಿನಿಂದ ಇತರ ನಿಲ್ದಾಣಗಳಿಗೆ ನಿರ್ಗಮಿಸುವ ಹಾಗೂ ಆಗಮಿಸುವ ಸಮಯವನ್ನು ಪರಿಷ್ಕರಿಸಲಾಗಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ 2025ರ ಜನವರಿ 1 ರಿಂದ ಈ ನಿಯಮವೂ ಜಾರಿಯಾಗಲಿದ್ದು, ಮೈಸೂರಿನ ಎಲ್ಲಾ ಪ್ರಯಾಣಿಕರು, ರೈಲು ಪ್ರಯಾಣವನ್ನು ಆರಂಭಿಸುವ ಮುನ್ನ ಈ ಕೆಳಗೆ ನೀಡಿರುವ ವೆಬ್‌ಸೈಟ್ ಲಿಂಕ್‌ನ ಸಹಾಯದಿಂದ ಹೊಸ ರೈಲು ವೇಳಾಪಟ್ಟಿಯನ್ನು ದಯಮಾಡಿ ಪರಿಶೀಲಿಸಲು ನೈರುತ್ಯ ರೈಲ್ವೆ ಮೈಸೂರು ವಿಭಾಗದ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
2025ರ ಜನವರಿ 1 ರಿಂದ ಮೈಸೂರು ಮತ್ತು ಇತರ ನಿಲ್ದಾಣಗಳಿಗೆ ನಿರ್ಗಮಿಸುವ ಮತ್ತು ಆಗಮಿಸುವ ಪರಿಷ್ಕೃತ ಸಮಯವನ್ನು ಹೊಂದಿರುವ ರೈಲುಗಳ ಪಟ್ಟಿ ಈ ರೀತಿ ಇದೆ:
1. ಮೈಸೂರಿನಿಂದ ಸಾಯಿನಗರ ಶಿರಡಿಗೆ ಹೊರಡುವ ರೈಲು ಸಂಖ್ಯೆ 16217 ದಿನಾಂಕ 06.01.2025 ರಿಂದ ಬೆಳಿಗ್ಗೆ 05:00 ಗಂಟೆಗೆ ಮೈಸೂರಿನಿಂದ ಹೊರಡಲಿದೆ.
2.ಟುಟಿಕೋರಿನ್ (ತೂತುಕುಡಿ)ನಿಂದ ಮೈಸೂರಿಗೆ ಹೊರಡುವ ರೈಲು ನಂ.16235 ಪಾಂಡವಪುರ ನಿಲ್ದಾಣಕ್ಕೆ 08:39 ಗಂಟೆಗೆ ತಲುಪುತ್ತದೆ. 08:40 ಗಂಟೆಗೆ ಹೊರಟು ಅಂತಿಮವಾಗಿ 09:30 ಗಂಟೆಗೆ ಮೈಸೂರು ತಲುಪುತ್ತದೆ.
3.ನಂಜನಗೂಡಿನಿಂದ ಮೈಸೂರಿಗೆ ಹೊರಡುವ ರೈಲು ನಂ.06299 ನಂಜನಗೂಡಿನಿಂದ 10:25 ಗಂಟೆಗೆ ಹೊರಟು 11:15 ಗಂಟೆಗೆ ಮೈಸೂರು ತಲುಪಲಿದೆ. ಮಾರ್ಗದಲ್ಲಿ ರೈಲು ಸುಜಾತಪುರಂ ಹಾಲ್ಟ್ ನಲ್ಲಿ 10:25ರಿಂದ 10.29 ಗಂಟೆಗೆ ತಾಂಡವಪುರ ಹಾಲ್ಟ್ 10:32 ರಿಂದ 10:33 ಗಂಟೆಗೆ, ಕಡಕೋಳ 10:38 – 10 ರಿಂದ 39 ಗಂಟೆಗೆ, ಅಶೋಕಪುರಂ , 10:48 ರಿಂದ 10:49 ಗಂಟೆಗೆ, ಚಾಮರಾಜಪುರಂ ನಿಲ್ದಾಣದಲ್ಲಿ 10:54 ರಿಂದ 10:55 ಆಗಮಿಸುತ್ತದೆ – ನಿರ್ಗಮಿಸುತ್ತದೆ.
4.ಮೈಸೂರಿನಿಂದ ನಂಜನಗೂಡಿಗೆ ಹೊರಡುವ ಪ್ಯಾಸೆಂಜರ್ ರೈಲು ನಂ.06300 ನಂಜನಗೂಡಿಗೆ 10:00 ಗಂಟೆಗೆ ತಲುಪಲಿದೆ.
5.ಮೈಸೂರಿನಿಂದ ಚಾಮರಾಜನಗರಕ್ಕೆ ಹೋಗುವ ಪ್ಯಾಸೆಂಜರ್ ರೈಲು ನಂ.60276 ಮೈಸೂರಿನಿಂದ 11:45 ಗಂಟೆಗೆ ನಿರ್ಗಮಿಸುತ್ತದೆ ಮತ್ತು ಚಾಮರಾಜನಗರಕ್ಕೆ 13:30 ಗಂಟೆಗೆ ತಲುಪುತ್ತದೆ. ಮಾರ್ಗದಲ್ಲಿ ರೈಲು ಚಾಮರಾಜಪುರಂನಲ್ಲಿ 11:50-11:51, ಅಶೋಕಪುರಂ 11:56-11:55, ಕಡಕೋಳ 12:08-12:09, ತಾಂಡವಪುರ ಹಾಲ್ಟ್ 12:14-12:15, ಸುಜಾತಪುರಂ ಹಾಲ್ಟ್ 12:18-12:19, ನಂಜನಗೂಡು ಟೌನ್ 12:23-12:25, ಚಿನ್ನದಗುಡಿ ಹುಂಡಿ ಹಾಲ್ಟ್ 12:35-12:36, ನರಸಾಂಬುಧಿ ಹಾಲ್ಟ್ 12:38-12:39, ಕವಲಂದೆ ಹಾಲ್ಟ್ 12:44-12:45, ಕೊಣ್ಣನೂರು ಹಾಲ್ಟ್ 12:50-12:51, ಬದನಗುಪ್ಪೆ ಹಾಲ್ಟ್ 12:56-12:57, ಮರಿಯಾಲ ಹಾಲ್ಟ್ 13:03-13:04 ಗಂಟೆಗೆ ಆಗಮಿಸುತ್ತದೆ – ನಿರ್ಗಮಿಸುತ್ತದೆ.
6.ಚಾಮರಾಜನಗರದಿಂದ ಮೈಸೂರಿಗೆ ಹೊಗುವ ಪ್ಯಾಸೆಂಜರ್ ರೈಲು ನಂ.06234 ಅಶೋಕಪುರಂಗೆ 11:53 ಕ್ಕೆ ತಲುಪುತ್ತದೆ ಮತ್ತು 11:55 ಕ್ಕೆ ನಿರ್ಗಮಿಸುತ್ತದೆ ಹಾಗು ಚಾಮರಾಜಪುರಂಗೆ 12:01 ಕ್ಕೆ ಆಗಮಿಸಿ 12:02 ಕ್ಕೆ ನಿರ್ಗಮಿಸುತ್ತದೆ.
7.ಚಾಮರಾಜನಗರದಿಂದ ತುಮಕೂರು ಪ್ಯಾಸೆಂಜರ್ ರೈಲು ನಂ.07345 ಚಿನ್ನದಗುಡಿ ಹುಂಡಿಯಲ್ಲಿ 07:51- 07:52, ನಂಜನಗೂಡು ಟೌನ್ 08:02-08:04, ಸುಜಾತಪುರಂ ಹಾಲ್ಟ್ 08:08 – 08:09, ತಾಂಡವಪುರ ಹಾಲ್ಟ್ 08:13 – 08:14, ಕಡಕೋಳ 08:19-08:20, ಅಶೋಕಪುರಂ 08:33-08:34 ಮತ್ತು ಚಾಮರಾಜಪುರಂ 08:39-08:40 ಗಂಟೆಗೆ ತಲುತ್ತದೆ ಎಂದು ರೈಲ್ವೆ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಚುನಾವಣಾ ಆಯೋಗದ ವಿರುದ್ಧ ವಿಪಕ್ಷಗಳು ಹಾಗೂ ಕೆಲವು ಸಂಘಟನೆಗಳು ಪ್ರತಿಭಟನೆಗಳನ್ನು ಮಾಡುತ್ತಿರುವುದು ಪ್ರಸ್ತುತ ರಾಜಕೀಯ ಮತ್ತು ಸಾಮಾಜಿಕ ವಾತಾವರಣ ದಲ್ಲಿ…
ಮೈಸೂರಿನಲ್ಲಿ ಇ-ಖಾತಾ ಹಾಗೂ ಸಿ ಆರ್ ವಿತರಣೆ ಸಂಬಂಧ ಸಾರ್ವಜನಿಕರಿಂದ ಕುಂದು ಕೊರತೆ ಆಲಿಸಿದ ನಂತರ ಮೈಸೂರು ನಗರ ಪಾಲಿಕೆಯ…
ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟ ಕಾರಣ, ರಾಜ್ಯದಲ್ಲಿ ತೀವ್ರ ಸ್ವರೂಪದ ಬರ ಕಾಣಿಸಿಕೊಂಡಿದೆ. ರಾಜ್ಯ ಸರ್ಕಾರ ಈಗಾಗಲೇ ಸುಮಾರು ೧೭೦…
ತಮ್ಮ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದ ಮಹಾತ್ಮಗಾಂಧಿಯವರನ್ನುಬ್ರಿಟಿಷರು ಬಂಧಿಸಲಿಲ್ಲ . ಏಕೆಂದರೆ ಗಾಂಧಿಜಿ ಯವರು ನ್ಯಾಯಯುತವಾಗಿ ಅಹಿಂಸಾ ತ್ಮಕವಾಗಿ ಸ್ವಾತಂತ್ರ್ಯ ಕೇಳುತ್ತಿದ್ದರು,…
ವಸಂತಕುಮಾರ್ ಮೈಸೂರಮಠ್, ಪರಿಸರವಾದಿ ಮತ್ತು ಸಾಮಾಜಿಕ ಕಾರ್ಯಕರ್ತ, ಮೈಸೂರು ಹೊರೆಯನ್ನು ಕಡಿಮೆ ಮಾಡಲು ಪರ್ಯಾಯ ಮಾರ್ಗವಿಲ್ಲವೇ? ಮೈಸೂರಿನ ಮಹಾನ್ ಯದುಕುಲ…
ಕೆ.ಬಿ.ರಮೇಶ ನಾಯಕ ಮೈಸೂರು: ಐದು ವರ್ಷಗಳಿಗೂ ಹೆಚ್ಚು ಕಾಲದಿಂದ ಚುನಾಯಿತ ಪ್ರತಿನಿಧಿಗಳಿಲ್ಲದ ಜಿಪಂ, ತಾಪಂ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸಲು…