ಮೈಸೂರು ನಗರ

ಮೈಸೂರು | ಮಾನಸಗಂಗೋತ್ರಿಯಲ್ಲಿ ಜಾನಪದ ಝೇಂಕಾರ

ಮೈಸೂರು : ಪೂಜಾ ಕುಣಿತ, ಡೊಳ್ಳು ಕುಣಿತ, ಜಡೆ ಕೋಲಾಟ ಸೇರಿದಂತೆ ನಾನಾ ಜಾನಪದ ಕಲಾ ತಂಡಗಳು ಮಾನಸಗಂಗೋತ್ರಿ ಆವರಣದಲ್ಲಿ ಜಾನಪದ ಝೇಂಕಾರ ಮೊಳಗಿಸಿದವು.

ವಿಶ್ವ ಜಾನಪದ ದಿನಾಚರಣೆ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಜಾನಪದ ಮಡಿಲು ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್, ಮೈಸೂರು ವಿ.ವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ವತಿಯಿಂದ ಮಾನಸಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಜಾನಪದ ಸಂಭ್ರಮ, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜಾನಪದ ಸೊಬಗಿಗೆ ಸಭಿಕರು ತಲೆದೂಗಿದರು.

ತಮಟೆ ಕಲಾವಿದ ಉಮೇಶ್ ರಾಗಿಬೊಮ್ಮನಹಳ್ಳಿ ಮತ್ತು ತಂಡದವರ ಚರ್ಮವಾದ್ಯಮೇಳ, ತಮಟೆ ಕಲಾವಿದ ಎಚ್.ಕೆ.ಮೋಹನ್ ಕುಮಾರ್ ತಂಡದಿಂದ ತಮಟೆ ನಗಾರಿ ಪಾರ್ಸಿ ಸದ್ದು ಅನುರಣಿಸಿತು. ನಂದನ್ ಕುಮಾರ್ ಮತ್ತು ಡಿ.ಆರ್.ರಾಜೇಶ್ ಅವರ ತಂಡ ಪೂಜಾ ಕುಣಿತ, ಅಂತಾರಾಷ್ಟ್ರೀಯ ಜನಪದ ಕಲಾವಿದ ಆರ್.ಸಿ.ಸಿದ್ದರಾಜು ಮತ್ತು ತಂಡದಿಂದ ಡೊಳ್ಳು ಕುಣಿತ, ಉಪನ್ಯಾಸಕ ಡಾ.ಆರ್.ನಿಂಗರಾಜು ಮತ್ತು ತಂಡ ಕಂಸಾಳೆ ನೃತ್ಯ ನೋಡುಗರನ್ನು ಸೆಳೆಯಿತು.

ಎಸ್.ಆಕಾಶ್, ಹರ್ಷ, ರವಿ ಮತ್ತು ಜಯಂತ್ ತಂಡದಿಂದ ಪಟ ಕುಣಿತ, ದಿವ್ಯಶ್ರೀ ಸಿದ್ದುಜಂಗಮ, ಮಂಜು, ಶ್ರೀಕಂಠ ಮತ್ತು ಭಾಗ್ಯರಿಂದ ಜಡೆ ಕೋಲಾಟ, ಎಂ.ಆರ್.ಮಂಜು, ಎಂ.ಎಂ.ಆನಂದ್, ಸಂಜೀವಮೂರ್ತಿ ಅವರ ರಂಗಕುಣಿತ, ಕೀರಾಳು ಮಹೇಶ್ ಅವರ ವೀರಭದ್ರ ಕುಣಿತ, ಉಪನ್ಯಾಸಕ ಡಾ.ಪಿ.ಎಸ್.ಮಧುಸೂದನ್, ಹಾಡುಗಾರ ಎಂ.ಎನ್.ಶ್ರೀಕಾಂತ್ ಅವರ ಜಾನಪದ ಗೀತೆಗಳ ಗಾಯನ ಸಭಿಕರನ್ನು ಮೋಡಿ ಮಾಡಿತು.

ಜಾನಪದ ಜೀವಾಳ ಪ್ರಶಸ್ತಿ ಪುರಸ್ಕೃತರು
ಡಾ.ಎಂ.ಕೆಂಪಮ್ಮ ಕಾರ್ಕಳ್ಳಿ, ಅನಿಲ್ ರಾಜ್ ಸಿ.ಮಹದೇವಪುರ, ವಿಶ್ವನಾಥ್ ಎಲ್.ಚಂಗಚಹಳ್ಳಿ, ಲಕ್ಷ್ಮಿರಾಮ್ (ಜಾನಪದ ಕಲಾವಿದರು) , ಮನುಜ ತಳಗವಾದಿ (ಕೋಲಾಟ ಕಲಾವಿದ), ಡಾ.ಕೆ.ಜೆ.ನಾರಾಯಣ(ರಂಗ ನಿರ್ದೇಶಕ), ಎಂ.ಆರ್.ಮನೋಜ್ ಕುಮಾರ್(ತಮಟೆ ವಾದನ ಕಲಾವಿದ) ಶಿಕ್ಷಣ ಸೇವಾ ರತ್ನಪ್ರಶಸ್ತಿ ಪುರಸ್ಕೃತರು : ಕಾಡುಕೊತ್ತನಹಳ್ಳಿಯ ಅಂಬೇಡ್ಕರ್ ಸ್ಮಾರಕ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಸಿ.ಚಂದ್ರಶೇಖರ್, ಮಹಾರಾಜ ಕಾಲೇಜಿನ ಉಪನ್ಯಾಸಕ ಡಾ.ಎಸ್.ಕೃಷ್ಣಪ್ಪ ಅವರಿಗೆ ಪ್ರಶಸ್ತಿ ನೀಡಲಾಯಿತು. ಕಾರ್ಯಕ್ರಮವನ್ನು ಹಿರಿಯ ಜಾನಪದ ತಜ್ಞ ಡಾ.ಕ್ಯಾತನಹಳ್ಳಿ ರಾಮಣ್ಣ ಉದ್ಘಾಟಿಸಿದರು.

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ಎಂ.ನಂಜಯ್ಯ ಹೊಂಗನೂರು ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕಿ ನಿರ್ಮಲ ಮಠಪತಿ, ನಿವೃತ್ತ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಜಾನಪದ ವಿದ್ವಾಂಸ ವ.ನಂ.ಶಿವರಾಮು, ಜಾನಪದ ಮಡಿಲು ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಡಾ.ಸಿ.ಸುಂದರೇಶ್, ಜಾನಪದ ಕಲಾವಿದ ಆರ್.ಸಿ.ಸಿದ್ದರಾಜು, ಉಪನ್ಯಾಸಕ ಎಚ್.ಪಿ.ಮಂಜು, ಜನಪದ ಸಂಘಟಕ ಕೆ.ಎಂ.ಕೃಷ್ಣೇಗೌಡ ಮತ್ತಿತರರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

 

ಆಂದೋಲನ ಡೆಸ್ಕ್

Recent Posts

ಕೋಲ್ಕತ್ತಾ ದುರ್ಗಾಪೂಜೆ ಪೆಂಡಾಲ್‌ನಲ್ಲಿ ಕಾಲ್ತುಳಿತ: ಸಾವಿನ ಸಂಖ್ಯೆ 19ಕ್ಕೆ ಏರಿಕೆ

ಕೋಲ್ಕತ್ತಾ: ದುರ್ಗಾಪೂಜೆ ಸಂಭ್ರಮದ ನಡುವೆ ಭೀಕರ ದುರಂತ ಸಂಭವಿಸಿದೆ. ಉತ್ತರ ಕೋಲ್ಕತ್ತಾದ ಚೋರ್‌ಬಗಾನ್‌ನ ಜನಪ್ರಿಯ ದುರ್ಗಾಪೂಜೆ ಪೆಂಡಾಲ್‌ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ…

10 hours ago

ಪಾಣಾಜೆಯಲ್ಲಿ ಅತ್ಯಧಿಕ ಮಳೆ: 16.7 ಸೆಂಟಿಮೀಟರ್ ದಾಖಲು!

ದಕ್ಷಿಣ ಕನ್ನಡ: ಜಿಲ್ಲೆಯ ಪುತ್ತೂರು ತಾಲೂಕಿನ ಪಾಣಾಜೆಯಲ್ಲಿ ಭಾರೀ ಮಳೆಯಾಗಿದ್ದು, ರಾಜ್ಯದಲ್ಲೇ ಅತ್ಯಧಿಕ 16.7 ಸೆಂಟಿಮೀಟರ್ ಮಳೆ ದಾಖಲಾಗಿದೆ. ಶನಿವಾರ…

10 hours ago

ಅಕ್ರಮ ಕೇರಳ ಲಾಟರಿ ಮಾರಾಟ: ಓರ್ವ ಬಂಧನ

ಗುಂಡ್ಲುಪೇಟೆ: ಅಕ್ರಮವಾಗಿ ಕೇರಳ ಲಾಟರಿ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬರನ್ನು ಗುಂಡ್ಲುಪೇಟೆ ಠಾಣೆ ಪೊಲೀಸರು ಬಂಧಿಸಿ, ಲಾಟರಿ ಟೆಕೆಟ್‌ಗಳನ್ನು ವಶಕ್ಕೆ…

13 hours ago

ಮೈಸೂರಿನ ಜೆಕೆ ಮೈದಾನದಲ್ಲಿ ಶ್ವಾನಗಳ ಕಲರವ: ಗಮನ ಸೆಳೆದ ವೈವಿಧ್ಯಮಯ ತಳಿಗಳು

ಮೈಸೂರು: ಇಲ್ಲಿನ ಜೆಕೆ ಮೈದಾನದಲ್ಲಿ ಆಯೋಜಿಸಿರುವ ಶ್ವಾನ ಪ್ರದರ್ಶನವು ಶ್ವಾನಪ್ರಿಯರ ಗಮನ ಸೆಳೆಯುತ್ತಿದೆ. ಪ್ರದರ್ಶನದಲ್ಲಿ 50ಕ್ಕೂ ಹೆಚ್ಚು ತಳಿಗಳ ಸಾವಿರಕ್ಕೂ…

13 hours ago

ಹವಾಮಾನ ವೈಪರೀತ್ಯಕ್ಕೆ ದಸರಾ ಏರ್ ಶೋ ಮೊಟಕು: ಪ್ರೇಕ್ಷಕರಿಗೆ ನಿರಾಸೆ

ಮೈಸೂರು: ದಸರಾದ ಏರ್ ಶೋ ವೀಕ್ಷಿಸಲು ಕಾತುರದಿಂದ ಕಾಯುತ್ತಿದ್ದ ಸಾವಿರಾರು ಪ್ರೇಕ್ಷಕರಿಗೆ ಹವಾಮಾನ ವೈಪರೀತ್ಯ ನಿರಾಸೆ ಉಂಟುಮಾಡಿದೆ. ಭಾರತೀಯ ವಾಯುಪಡೆಯ…

13 hours ago

ಓದುಗರ ಪತ್ರ: ಹೆಚ್‌ಡಿಕೆಯವರೇ, ಟೀಕೆ ಮಾಡುವಾಗ ಎಚ್ಚರಿಕೆ ಇರಬೇಕಲ್ಲವೇ?

ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರು ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಏಕವಚನ…

15 hours ago