ಮೈಸೂರು ನಗರ

ಮುಡಾ ಹಗರಣ: ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಇಲ್ಲದಿದ್ದರೆ ಮತ್ತೊಬ್ಬ ಕೇಜ್ರಿ ಆಗ್ತಾರೆ: ಛಲವಾದಿ ನಾರಾಯಣಸ್ವಾಮಿ

ಮೈಸೂರು: ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ನೀಡಿದ ಅನುಮತಿಯನ್ನು ಹೈಕೋರ್ಟ್ ಎತ್ತಿಹಿಡಿದ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು. ಇಲ್ಲದಿದ್ದರೆ ಮತ್ತೊಬ್ಬ ಅರವಿಂದ್ ಕೇಜ್ರೀವಾಲ್ ಆಗ್ತಾರೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ಮೈಸೂರುನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಸಿಎಂ ಕುಟುಂಬವೇ ಮುಡಾ ಅವ್ಯವಹಾರದಲ್ಲಿ ತೊಡಗಿತ್ತು. ತನ್ನ ಭೂಮಿಯೇ ಅಲ್ಲದಿದ್ದರೂ ಪರಿಹಾರ ಪಡೆದುಕೊಂಡಿದ್ದರು. ಬಿಜೆಪಿ ಹೋರಾಟಕ್ಕೆ ಸಿಎಂ ಗೌರವ ಕೊಟ್ಟರಲಿಲ್ಲ. ರಾಜ್ಯಪಾಲರು ಮಧ್ಯಪ್ರವೇಶ ಮಾಡಬೇಕಾಯಿತು ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷಣವೇ ರಾಜೀನಾಮೆ ಕೊಡಬೇಕು. ಕೊಡದಿದ್ದರೆ ಮತ್ತೊಬ್ಬ ಕೇಜ್ರಿವಾಲ್ ಆಗುತ್ತಾರೆ. ಹೊಸದಿಲ್ಲಿಯಲ್ಲಿ ಪೊಲೀಸ್ ವ್ಯವಸ್ಥೆ ಸಿಎಂ ಬಳಿ ಇಲ್ಲ. ಕರ್ನಾಟಕದಲ್ಲಿ ಪೊಲೀಸ್ ಅಧಿಕಾರಿಗಳು ಸಿಎಂ ಅಧೀನದಲ್ಲಿದ್ದಾರೆ. ತನಿಖೆ ನಡೆಸುವ ಅಧಿಕಾರಿಯ ಮುಂದೆ ಹಾಜರಾಗುವಾಗ ಯಾವ ಮುಖ ಹೊತ್ತು ಹೋಗುತ್ತಾರೆ ಎಂದು ಟೀಕಿಸಿದರು. ಮೌಲ್ಯ ಎತ್ತಿಹಿಡಿಯಲು ಸಿಎಂ ರಾಜೀನಾಮೆ ಕೊಡಬೇಕು. ಸಿಎಂ ಸ್ಥಾನದಲ್ಲಿ ಮುಂದುವರಿಯಲು ಸಾಧ್ಯವಿಲ್ಲ. ಹೈಕಮಾಂಡ್ ಬೆಂಬಲಕ್ಕೆ ನಿಂತರೂ ಸಾಧ್ಯವಾಗಲ್ಲ. ೧೩೬ ಶಾಸಕರ ಬೆಂಬಲ ಇದ್ದರೂ ಕೂಡ ನ್ಯಾಯಾಲಯದ ತೀರ್ಪು ಬೇರೆಯಾಗಿದೆ. ಕಾನೂನಿನ ಮುಂದೆ ಶರಣಾಗಬೇಕು. ಹೈಕಮಾಂಡ್‌ಗೂ-ಸಿಎಂವಿರುದ್ದದ ತೀರ್ಪಿಗೂ ಸಂಬಂಧವಿಲ್ಲ ಎಂದು ನುಡಿದರು.

ಕೆ.ಬಿ. ರಮೇಶ ನಾಯಕ

ಪ್ರಸ್ತುತ ಆಂದೋಲನ ದಿನಪತ್ರಿಕೆಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿರುವ ನಾನು ಮೂಲತಃ ಚಾಮರಾಜನಗರ ತಾಲ್ಲೂಕು ಮತ್ತು ಜಿಲ್ಲೆಯ ಕಣ್ಣೇಗಾಲ ಗ್ರಾಮದವನು. ಚಾಮರಾಜನಗರ ತಾಲ್ಲೂಕಿನ ಆಲೂರು ಗ್ರಾಮದಲ್ಲಿ ಪ್ರಾಥಮಿಕ,ಪ್ರೌಢಶಿಕ್ಷಣ, ಚಾಮರಾಜನಗರದಲ್ಲಿ ಪಿಯುಸಿ ವ್ಯಾಸಂಗ ಮಾಡಿದ ನಾನು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದೇನೆ. 1992ರಿಂದ 2002ರವರೆಗೆ ಮೈಸೂರು ಮಿತ್ರ ಪತ್ರಿಕೆಯಲ್ಲಿ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಸೇವೆ ಸಲ್ಲಿಸಿದ ಬಳಿಕ 2002ರಿಂದ 2012ರವರೆಗೆ ಸಂಯುಕ್ತ ಕರ್ನಾಟಕ ಮೈಸೂರು ಪ್ರಾದೇಶಿಕ ಕಚೇರಿಯಲ್ಲಿ ವರದಿಗಾರನಾಗಿ, 2013ರಿಂದ 2015ರವರೆಗೆ ಹಾಸನ ಮತ್ತು ಮೈಸೂರಿನಲ್ಲಿ ವಿಜಯ ಕರ್ನಾಟಕ ಹಿರಿಯ ವರದಿಗಾರನಾಗಿ, 2015ರಿಂದ 2017ರವರೆಗೆ ಸಂಯುಕ್ತ ಕರ್ನಾಟಕ ಮುಖ್ಯ ವರದಿಗಾರನಾಗಿ, 2017ರಿಂದ 2020 ಜೂನ್‌ವರಗೆ ವಿಶ್ವವಾಣಿ ಮೈಸೂರು ಬ್ಯೂರೋ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸಿದ್ದೇನೆ.

Recent Posts

‘ದೇವರು ರುಜು ಮಾಡಿದನು’ ಎಂದ ಸಿಂಪಲ್ ಸುನಿ; ಶೀರ್ಷಿಕೆ ಅನಾವರಣ

ಈ ವರ್ಷ ಬಿಡುಗಡೆಯಾದ ವಿನಯ್‍ ರಾಜಕುಮಾರ್‍ ಅಭಿನಯದ ‘ಒಂದು ಸರಳ ಪ್ರೇಮಕಥೆ’ ಚಿತ್ರದ ನಂತರ ಒಂದಿಷ್ಟು ಹೊಸ ಚಿತ್ರದ ಕೆಲಸಗಳಲ್ಲಿ…

8 mins ago

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಹೋದರ ಗೋಪಾಲ್ ಜೋಶಿ ಅರೆಸ್ಟ್

ಬೆಂಗಳೂರು: ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಸಹೋದರ ಗೋಪಾಲ್‌ ಜೋಶಿಯನ್ನು ಪೊಲೀಸರು ಬಂಧಿಸಿದ್ದಾರೆ. ಎಂಎಲ್‌ಸಿ ಟಿಕೆಟ್‌ಗಾಗಿ…

45 mins ago

ರಾಜ್ಯದಲ್ಲಿ ಹಿಂದಿ ಹೇರಿಕೆ: ತಮಿಳುನಾಡು ರಾಜ್ಯಪಾಲ ರವಿ ವಿರುದ್ಧ ಧ್ವನಿ ಎತ್ತಿದ ಎಂ.ಕೆ.ಸ್ಟಾಲಿನ್

ಚೆನ್ನೈ: ಹಿಂದಿ ಮಾಸಾಚರಣೆ ನೆಪದಲ್ಲಿ ಕೇಂದ್ರ ಸರ್ಕಾರದಿಂದ ನೇಮಕವಾದ ರಾಜ್ಯಪಾಲರು ದೇಶದ ಏಕತೆಯನ್ನು ಮರೆತು, ಕೇಂದ್ರ ಯೋಜನೆಗಳು ಮತ್ತು ಘೋಷಣೆಗಳಂತೆ…

55 mins ago

ಮುಡಾ ಫೈಲ್ ಸುಟ್ಟು ಹಾಕಿರುವ ಭೈರತಿ ಸುರೇಶ್ ರನ್ನು ತಕ್ಷಣ ಬಂಧಿಸಿ: ಶೋಭಾ ಕರಂದಾಜ್ಲೆ ಆಗ್ರಹ

ಬೆಂಗಳೂರು: ಸಚಿವ ಭೈರತಿ ಸುರೇಶ್‌ ಅವರು ಮುಡಾದಿಂದ ಫೈಲ್‌ಗಳನ್ನು ತಂದು ಸುಟ್ಟು ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಸುರೇಶ್‌ರನ್ನು ತಕ್ಷಣ ಬಂಧಿಸಬೇಕು…

1 hour ago

ಕೆಂಪೇಗೌಡರು ಕಟ್ಟಿದ ಕೆರೆಗಳನ್ನೆಲ್ಲಾ ಹಣದ ದಾಹಕ್ಕೆ ನುಂಗಿದ್ದಾರೆ: ಕೇಂದ್ರ ಸಚಿವ ಕುಮಾರಸ್ವಾಮಿ ಆರೋಪ

ಮಂಡ್ಯ: ಬೆಂಗಳೂರಿನಲ್ಲಿ ನಾಡಪ್ರಭು ಕೆಂಪೇಗೌಡರು ಕಟ್ಟಿದ ಕೆರೆ-ಕಟ್ಟೆಗಳನ್ನು ಹಣದ ದಾಹಕ್ಕೆ ನುಂಗಿ ಹಾಕಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ವಿರುದ್ಧ ಕೇಂದ್ರ…

1 hour ago

ಮಾಜಿ ಸಿಎಂ ಎಸ್.ಎಂ.ಕೃಷ್ಣ ಮಣಿಪಾಲ್ ಆಸ್ಪತ್ರೆಗೆ ದಾಖಲು

ಬೆಂಗಳೂರು: ಮಾಜಿ ಸಿಎಂ ಎಸ್‌.ಎಂ.ಕೃಷ್ಣ ಅವರು ಅನಾರೋಗ್ಯದಿಂದ ಮಣಿಪಾಲ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಆಸ್ಪತ್ರೆಗೆ…

2 hours ago