ಮೈಸೂರು ನಗರ

ಲೋಕಾಯುಕ್ತ ಅಧಿಕಾರಿಗಳ ವಿರುದ್ಧ ಇ-ಮೇಲ್‌ ಮೂಲಕ ರಾಜ್ಯಪಾಲರಿಗೆ ದೂರು

ಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ತಪ್ಪಿತಸ್ಥರಿಗೆ ಸರ್ಚ್‌ ವಾರೆಂಟ್‌ ನೀಡಲು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಇ-ಮೇಲ್‌ ಮೂಲಕ ರಾಜ್ಯಪಾಲರಿಗೆ ಆರ್‌ಟಿಐ ಕಾರ್ಯಕರ್ತ ಗಂಗರಾಜು ದೂರು ನೀಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಲೋಕಾಯುಕ್ತ ಅಧಿಕಾರಿಗಳು, ಸಚಿವ ಭೈರತಿ ಸುರೇಶ್‌, ವಿಶೇಷ ಕರ್ತವ್ಯಾಧಿಕಾರಿ ಮಾರುತಿ ಬಗಲಿ, ಮುಡಾದ ಹಳೆಯ ಆಯುಕ್ತರಾದ ನಟೇಶ್‌ ಮತ್ತು ದಿನೇಶ್‌ ವಿರುದ್ಧ ರಾಜ್ಯಪಾಲರಿಗೆ ಇ-ಮೇಲ್‌ ಮತ್ತು ಅಂಚೆ ಪತ್ರದ ಮುಖಾಂತರ ದೂರು ಸಲ್ಲಿಕೆ ಮಾಡಿದ್ದಾರೆ.

ಈ ಬಗ್ಗೆ ದೂರುದಾರ ಗಂಗರಾಜು ದೂರಿನಲ್ಲಿ ಉಲ್ಲೇಖಿಸಿದ್ದು, ಈ ಹಿಂದೆ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ಒಂದು ಸಾವಿರ ಪುಟಗಳಷ್ಟು ದಾಖಲೆ ಸಂಗ್ರಹಿಸಿದ್ದರು. ಅಲ್ಲದೇ ಲೋಕಾಯುಕ್ತ ಇನ್ಸ್‌ಪೆಕ್ಟರ್‌ ರವಿಕುಮಾರ್‌ ನೇತೃತ್ವದ ತಂಡ ಸಾಕ್ಷಿಯನ್ನು ಕೂಡ ಸಂಗ್ರಹಿಸಿತ್ತು. ನಂತರ ಅಂದಿನ ಲೋಕಾಯುಕ್ತ ಎಸ್‌ಪಿಗೆ ಸರ್ಚ್‌ ವಾರೆಂಟ್‌ ನೀಡಲು ಮನವಿ ಸಲ್ಲಿಸಲಾಗಿತ್ತು. ಆದರೆ, ಎಸ್‌ಪಿ ಉದ್ದೇಶ ಪೂರ್ವಕವಾಗಿ ವಿಳಂಬ ಮಾಡಿ ಸರ್ಚ್‌ ವಾರೆಂಟ್‌ ನೀಡಿದ್ದರು. ಕೆಲವು ಅಧಿಕಾರಿಗಳಿಂದ ಸರ್ಕಾರಕ್ಕೆ ಈ ಮಾಹಿತಿ ಸೋರಿಕೆಯಾಗಿತ್ತು. ಹೀಗಾಗಿ ಸಚಿವ ಭೈರತಿ ಸುರೇಶ್‌ ಅವರು ಆ ಸಂದರ್ಭದಲ್ಲಿ ಮುಡಾದಿಂದ ಬೆಂಗಳೂರಿಗೆ ಕಡತಗಳನ್ನು ತರಿಸಿಕೊಂಡಿದ್ದಾರೆ. ಅದಕ್ಕೆ ಅಧಿಕಾರಿಗಳು ಸಹ ಶಾಮೀಲಾಗಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಆಂದೋಲನ ಡೆಸ್ಕ್

Recent Posts

ಮಡಿಕೇರಿ | ನಿಯಂತ್ರಣ ತಪ್ಪಿ ಕಂಬಕ್ಕೆ ಡಿಕ್ಕಿ ಹೊಡೆದ ಬಸ್‌ ; ತಪ್ಪಿದ ಭಾರೀ ಅನಾಹುತ

ಮಡಿಕೇರಿ : ಸರ್ಕಾರಿ ಬಸ್‌ವೊಂದು ನಿಯಂತ್ರಣ ತಪ್ಪಿ ಬಸ್ ನಿಲ್ದಾಣದಲ್ಲಿದ್ದ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ನಗರದ ಕೆಎಸ್‌ಆರ್‌ಟಿಸಿ ಬಸ್…

31 mins ago

ಪ್ರೇಯಸಿಯ ಕೊಂದು, ಶವವನ್ನು ತುಂಡರಿಸಿ ಫ್ರಿಡ್ಜ್‌ನಲ್ಲಿಟ್ಟ ನೌಕಾಪಡೆ ಅಧಿಕಾರಿ!

ವಿಶಾಖಪಟ್ಟಣ : ಭಾರತೀಯ ನೌಕಾಪಡೆಯ ಅಧಿಕಾರಿಯೊಬ್ಬರು ತನ್ನ ಪ್ರೇಯಸಿಯನ್ನು ಕೊಲೆ ಮಾಡಿ, ಆಕೆಯ ದೇಹವನ್ನು ತುಂಡಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟಿದ್ದಾನೆ. ಅಲ್ಲದೇ,…

45 mins ago

ಎಸ್‌ಎಸ್ಎಲ್‌ಸಿ ಪರೀಕ್ಷೆ-1ರ ಮೌಲ್ಯಮಾಪನ ಏಪ್ರಿಲ್.8ರಿಂದ ಪ್ರಾರಂಭ

ಬೆಂಗಳೂರು: ಎಸ್.ಎಸ್.ಎಲ್.ಸಿ ಪರೀಕ್ಷೆ-1ರ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಏಪ್ರಿಲ್.8ರಿಂದ ಪ್ರಾರಂಭವಾಗಲಿದೆ. ರಾಜ್ಯದ ಎಲ್ಲಾ 35 ಶೈಕ್ಷಣಿಕ ಜಿಲ್ಲೆಗಳಲ್ಲಿ ಏಕಕಾಲಕ್ಕೆ…

2 hours ago

ಐಪಿಎಲ್‌ ಆಸಕ್ತಿ ಇರೋರು ಕಾಸು ಕೊಟ್ಟು ಟಿಕೆಟ್‌ ತಗೋಳಿ: ಮಾಜಿ ಸಂಸದ ಡಿ.ಕೆ.ಸುರೇಶ್‌

ಬೆಂಗಳೂರು: ಶಾಸಕರು ಐಪಿಎಲ್‌ ಟಿಕೆಟ್‌ ಕೇಳೋದು ತಪ್ಪು. ಐಪಿಎಲ್‌ ಆಸಕ್ತಿ ಇರೋರು ಕಾಸು ಕೊಟ್ಟು ಟಿಕೆಟ್‌ ತಗೋಳಿ ಎಂದು ಮಾಜಿ…

2 hours ago

ಇಂದಿನಿಂದ ರಾಜ್ಯದಲ್ಲಿ ಐದು ದಿನ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ಇಂದಿನಿಂದ ರಾಜ್ಯದಲ್ಲಿ ಐದು ದಿನಗಳ ಕಾಲ ಗುಡುಗು-ಮಿಂಚು ಸಹಿತ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.…

3 hours ago

ವಿಧಾನಪರಿಷತ್‌ ಸದಸ್ಯತ್ವಕ್ಕೆ ಬಿಹಾರ ಸಿಎಂ ನಿತೀಶ್‌ ಕುಮಾರ್‌ ರಾಜೀನಾಮೆ

ಪಾಟ್ನಾ: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸೋಮವಾರ ತಮ್ಮ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಇತ್ತೀಚೆಗೆ ರಾಜ್ಯಸಭೆಗೆ…

3 hours ago