ಮೈಸೂರು ನಗರ

ಎಂಡಿಸಿಸಿ ನಿರ್ದೇಶಕರ ಚುನಾವಣೆ ಫಲಿತಾಂಶ: ಶಾಸಕ ಅನಿಲ್ ಚಿಕ್ಕಮಾದುಗೆ ಜಯ

ಮೈಸೂರು: ಎಂಡಿಸಿಸಿ ನಿರ್ದೇಶಕರ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಕಾಯ್ದಿರಿಸಿದ್ದ ಮತ ಎಣಿಕೆಯಲ್ಲಿ ಶಾಸಕ ಅನಿಲ್ ಚಿಕ್ಕಮಾದು ಜಯಗಳಿಸಿದ್ದಾರೆ.

ಹೈಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಇಂದು ಮತ ಎಣಿಕೆ ಪ್ರಕ್ರಿಯೆ ನಡೆದಿದ್ದು, ಎಚ್.ಡಿ.ಕೋಟೆ ಕಾಂಗ್ರೆಸ್‌ ಶಾಸಕ ಅನಿಲ್‌ ಚಿಕ್ಕಮಾದು ಜಯಗಳಿಸಿದ್ದಾರೆ.

ಕಳೆದ ಜೂನ್.27ರಂದು ಚುನಾವಣೆ ನಡೆದಿತ್ತು. ಪ್ರತಿ ಸ್ಪರ್ಧಿ ಹಾಗೂ ಶಾಸಕ ಅನಿಲ್ ಚಿಕ್ಕಮಾದುಗೆ ತಲಾ 8 ಮತಗಳು ಬಂದಿದ್ದವು. ನ್ಯಾಯಾಲಯದಲ್ಲಿ ಮತದಾನದ ಹಕ್ಕು ಪಡೆದಿದ್ದ ಮತದಾರರೊಬ್ಬರ ಮತ ಎಣಿಕೆಯನ್ನು ಕಾಯ್ದಿರಿಸಲಾಗಿತ್ತು. ನಂತರ ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ಮತ ಎಣಿಕೆಗೆ ಅನುಮತಿ ನೀಡಿತ್ತು.

ಅದರಂತೆ ಇಂದು ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚುನಾವಣಾಧಿಕಾರಿ ಹಾಗೂ ಎಸಿ ಆಶಪ್ಪ ನೇತೃತ್ವದಲ್ಲಿ ಮತ ಎಣಿಕೆ ನಡೆದಿದ್ದು, ಶಾಸಕ ಅನಿಲ್ ಚಿಕ್ಕಮಾದುಗೆ ಜಯ ಒಲಿದಿದೆ.

ಆಂದೋಲನ ಡೆಸ್ಕ್

Recent Posts

ಕೊಡಗಿನಲ್ಲಿ ಹುಲಿ ದಾಳಿಗೆ ಹಸು ಬಲಿ; ಗ್ರಾಮಸ್ಥರಲ್ಲಿ ಆತಂಕ!

 ಕೊಡಗು: ಇಲ್ಲಿನ ನರಿಯಂದಡ ಗ್ರಾಮದಲ್ಲಿ ಹುಲಿ ದಾಳಿಗೆ ಹಸುವೊಂದು ಬಲಿಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿದೆ. ಚೆಯ್ಯಂಡಾಣೆ ಸಮೀಪದ ಈ ಗ್ರಾಮದಲ್ಲಿ ಶನಿವಾರ…

10 hours ago

ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಸಾಧ್ಯತೆ: ತಮಿಳುನಾಡು ಕರಾವಳಿಗೆ ಮಳೆ ಮುನ್ಸೂಚನೆ!

ನವದೆಹಲಿ: ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ರೂಪುಗೊಳ್ಳುವ ಸಾಧ್ಯತೆ ಇದೆ. ವಾಯುಭಾರ ಕುಸಿತ ತೀವ್ರಗೊಂಡಿದ್ದು, ಹವಾಮಾನ ವ್ಯವಸ್ಥೆ ವಾಯುವ್ಯ ದಿಕ್ಕಿನತ್ತ ಚಲಿಸುತ್ತಿದೆ.…

11 hours ago

ಅನ್ನಭಾಗ್ಯ ಅಕ್ಕಿ ಅಕ್ರಮಕ್ಕೆ ಕಡಿವಾಣ: ₹8.80 ಕೋಟಿ ಅಕ್ಕಿ ಜಪ್ತಿ!

ಬೆಂಗಳೂರು: ಬಡವರ ಹೊಟ್ಟೆ ತುಂಬಿಸಬೇಕಾದ ಅನ್ನಭಾಗ್ಯ ಅಕ್ಕಿ ಕಾಳಸಂತೆಗೆ! ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆಹಾರ ಇಲಾಖೆ ನಡೆಸಿದ ದಾಳಿಗಳಲ್ಲಿ ಒಂದೇ…

13 hours ago

ಓದುಗರ ಪತ್ರ: ನೆಹರೂ ಸೇವೆ ಸ್ಮರಿಸೋಣ

ರಾಜಕೀಯ ಮುತ್ಸದ್ದಿ, ದೇಶದ ಪ್ರಥಮ ಪ್ರಧಾನ ಮಂತ್ರಿ ದಿವಂಗತ ಪಂಡಿತ್ ಜವಾಹರಲಾಲ್ ನೆಹರೂರವರ ಹುಟ್ಟುಹಬ್ಬವನ್ನು ಮಕ್ಕಳ ದಿನಾಚರಣೆಯ ಹೆಸರಿನಲ್ಲಿ ಶನಿವಾರ…

14 hours ago

ಓದುಗರ ಪತ್ರ: ಪ್ರತಿ ನಗರಕ್ಕೂ ಬೇಕಾಗಿದೆ ಕಸ ಸಂಸ್ಕರಣಾ ಘಟಕ

ಸ್ವಚ್ಛತಾ ಪಟ್ಟಿಯಲ್ಲಿ ರಾಜ್ಯದಲ್ಲಿ ಮೈಸೂರು ಮಕುಟ ಧರಿಸಿರುವುದು ಹೆಮ್ಮೆಯ ಸಂಗತಿಯಾದರೂ ಶೇ.೯೦ಕ್ಕೂ ಹೆಚ್ಚು ನಗರಗಳಲ್ಲಿ ಇಂದಿಗೂ ಕಸದ ನಿರ್ವಹಣೆ ಸಮರ್ಪಕವಾಗಿಲ್ಲದಿರುವುದು…

14 hours ago

ಓದುಗರ ಪತ್ರ: ಮೋದಿಯವರ ಹೃದಯ ವೈಶಾಲ್ಯತೆಯೂ ಹಾಸ್ಯಪ್ರಜ್ಞೆಯೂ

ಪ್ರಧಾನ ಮಂತ್ರಿ ಮೋದಿ ಅವರು ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ರೈಲಿನ ಗುಲಾಬಿ ಮಾರ್ಗದ ಉದ್ಘಾಟನೆ ಹಾಗೂ ಮೈಸೂರಿನ ಚಾಮುಂಡಿ ಬೆಟ್ಟದ…

14 hours ago