mda sitemda site
ಮೈಸೂರು : ಮೈಸೂರು ಅಭಿವೃದ್ಧಿ ಪ್ರಾಧಿಕಾರ ರಚನೆಯಾದ ಬಳಿಕ ಇದೇ ಮೊಟ್ಟ ಮೊದಲ ಬಾರಿ ಕರೆದಿದ್ದ ನಿವೇಶನಗಳ ಬಹಿರಂಗ ಹರಾಜು ಪ್ರಾಧಿಕಾರಕ್ಕೆ ಬಂಪರ್ ಮೊತ್ತ ಸಂಗ್ರಹಿಸಲು ನೆರವಾಗಿದೆ. ನಿವೇಶನಗಳ ಹರಾಜು ದಾಖಲೆ ಮೊತ್ತಕ್ಕೆ ಮಾರಾಟವಾಗಿರುವುದು ರಿಯಲ್ ಎಸ್ಟೇಟ್ ಉದ್ಯಮಿಗಳನ್ನು ಉಬ್ಬೇರಿಸುವಂತೆ ಮಾಡಿದೆ.
ಕೆಲ ದಿನಗಳ ಹಿಂದಷ್ಟೆ ಆನ್ ಲೈನ್ ಹರಾಜು ಆಹ್ವಾನಿಸಲಾಗಿತ್ತು. ಈ ಹರಾಜಿನಲ್ಲಿ ಆಸಕ್ತಿ ವಹಿಸಿ ಅನೇಕರು ಬಿಡ್ ನಲ್ಲಿ ಭಾಗವಹಿಸಿದ್ದರು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹೆಸರು ಬದಲಾಗಿ ಮೈಸೂರು ಅಭಿವೃದ್ಧಿ ಪ್ರಾಧಿಕಾರವಾದ ಮೇಲೆ ಇದೇ ಮೊದಲ ನಿವೇಶನಗಳ ಬಹಿರಂಗ ಹರಾಜು ಪ್ರಕ್ರಿಯೆಯಾಗಿತ್ತು. ಎಂಡಿಎ ನೂತನ ಆಯುಕ್ತರಾಗಿ ಕೆ.ಆರ್. ರಕ್ಷಿತ್ ಅವರನ್ನು ನೇಮಕಗೊಳಿಸಲಾಗಿತ್ತು. ಅಧಿಕಾರ ವಹಿಸಿಕೊಂಡ ಬಳಿಕ ಪ್ರಾಧಿಕಾರದ ವ್ಯವಸ್ಥೆಯನ್ನು ಸರಿದಾರಿಗೆ ತರುವಲ್ಲಿ ಶ್ರಮಿಸಿದ ರಕ್ಷಿತ್ ಕೆಲ ದಿನಗಳಲ್ಲೇ ಖಾಲಿ ನಿವೇಶನಗಳ ಪಟ್ಟಿ ಸಿದ್ಧಪಡಿಸಿ ಬಹಿರಂಗ ಹರಾಜಿಗೆ ಪ್ರಕಟಣೆ ಹೊರಡಿಸಿದರು.
ಈ ನಿರ್ಧಾರದಿಂದ ಈಗ ಪ್ರಾಧಿಕಾರಕ್ಕೆ ಕೋಟ್ಯಾಂತರ ರೂ. ಆದಾಯ ಸಂಗ್ರಹಗೊಂಡಿದೆ.
ಮಾಹಿತಿಗಳ ಪ್ರಕಾರ ದಾಖಲೆ ಮೊತ್ತಕ್ಕೆ ಹರಾಜುಗೊಂಡ ನಿವೇಶನಗಳ ಮಾಹಿತಿ ಹೀಗಿದೆ.
ವಿಜಯನಗರ 4 ನೇ ಹಂತ, 2 ನೇ ಫೇಸ್ ನ ನಿವೇಶನ ಸಂಖ್ಯೆ 109/4 (600 sqft – 20 X 30 ) ಹರಾಜು ಮೊತ್ತ 2 ಕೋಟಿ ರೂ. ನಿವೇಶನದ ಚದರ ಅಡಿ ಮೊತ್ತ 33,000 ರೂ.
ಅದೇ ರೀತಿ ವಿಜಯನಗರ 4 ನೇ ಹಂತ, 2 ನೇ ಫೇಸ್ ನ ನಿವೇಶನ ಸಂಖ್ಯೆ 10298 (4000 sqft- 50X80) ಹರಾಜು ಮೊತ್ತ 9 ಕೋಟಿ ರೂ. ನಿವೇಶನದ ಚದರ ಅಡಿ ಮೊತ್ತ 22500 ರೂ.
ಗಗನಕ್ಕೇರಿದ ಬೆಲೆ
ಈ ಹರಾಜು ಪ್ರಕ್ರಿಯೆಯಿಂದ ಈಗ ಮೈಸೂರು ನಗರದಲ್ಲಿ ನಿವೇಶನಗಳ ಬೆಲೆ ಗಗನಕ್ಕೇರಿದಂತಾಗಿದೆ. ರಾಜಧಾನಿ ಬೆಂಗಳೂರು ನಗರದಲ್ಲಿ ಈಗಾಗಲೇ ನಿವೇಶನಗಳ ಬೆಲೆ ಮುಗಿಲು ಮುಟ್ಟಿದ್ದು ಮಧ್ಯಮ ವರ್ಗದವರಿಗೆ ನಿವೇಶನ ಖರೀದಿ ಗಗನ ಕುಸುಮವಾಗಿದೆ. ಈಗ ಮೈಸೂರು ನಗರದಲ್ಲೂ ಮುಂಬರುವ ದಿನಗಳಲ್ಲಿ ಅದೇ ಸ್ಥಿತಿ ನಿರ್ಮಾಣವಾಗುವ ಲಕ್ಷಣಗಳು ಈ ಹರಾಜು ಪ್ರಕ್ರಿಯೆಯಿಂದ ಗೋಚರಿಸುತ್ತಿದೆ.
ಪ್ರಾಧಿಕಾರ ಹರಾಜು ಮಾಡಿದ ನಿವೇಶನಗಳ ಮೊತ್ತ ಈ ಮಟ್ಟದಲ್ಲಿ ಏರಿಕೆಗೊಂಡಿರುವ ಕಾರಣ, ಇನ್ಮುಂದೆ ಮೈಸೂರಿನ ಇತರೆ ನಿವೇಶನಗಳ ಮಾರಾಟದ ಮೇಲೆ ಪರಿಣಾಮ ಬೀರುತ್ತದೆ ಎಂದು ರಿಯಲ್ ಎಸ್ಟೇಟ್ ಉದ್ಯಮಿಗಳು ಅಭಿಪ್ರಾಯಿಸಿದ್ದಾರೆ.
ಅನುಮತಿಗಾಗಿ ಕಾಯುತ್ತಿರುವ ಮತ್ತೆರಡು ಹಡಗುಗಳು ಹೊಸದಿಲ್ಲಿ : ಸುಮಾರು 46,000 ಮೆಟ್ರಿಕ್ ಟನ್‌ಗಳಿಗೂ ಹೆಚ್ಚು ಇಂಧನ ಹೊತ್ತ ದೊಡ್ಡ ದ್ರವೀಕೃತ…
ಬೆಂಗಳೂರು : ರಾಜ್ಯದಲ್ಲಿ ಗ್ಯಾಸ್ ಸಿಗದೆ ಆಟೋ ಚಾಲಕರು ರಾತ್ರಿಯಿಡೀ ಕ್ಯೂ ನಿಲ್ಲುತ್ತಿದ್ದರೆ, ಜನಪ್ರತಿನಿಧಿಗಳಾದ ಶಾಸಕರು ಮಾತ್ರ ಐಪಿಎಲ್ ಟಿಕೆಟ್‌ಗಳ…
ಬಾಗಲಕೋಟೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಬಿಜೆಪಿಯವರಿಗೆ ಸೋಲಿನ ಭಯ ಕಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು…
ಬೆಂಗಳೂರು: ಗ್ಯಾಸ್ ಸಿಗದೇ ಆಟೋ ಚಾಲಕರು ಪರದಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಡಿಸಿಎಂ ಡಿ.ಕೆ.ಶಿವಕುಮಾರ್ ತೀವ್ರ ಆಕ್ರೋಶ…
ದಾವಣಗೆರೆ: ಗ್ಯಾರಂಟಿ ಯೋಜನೆಗಳನ್ನು ನಿಭಾಯಿಸುವ ಜೊತೆಗೆ ಅಭಿವೃದ್ಧಿಗೂ ಪ್ರತಿ ಕ್ಷೇತ್ರಕ್ಕೆ ನೂರು ಕೋಟಿ ರೂ.ಗಳಿಗೆ ಹೆಚ್ಚಿನ ಅನುದಾನವನ್ನು ಸಿದ್ದರಾಮಯ್ಯ ಅವರು…
ಚೆನ್ನೈ: ತಾವು ಈ ಬಾರಿ ತಮಿಳುನಾಡಿನ ವಿಧಾನಸಭಾ ಚುನಾವಣೆಯ ಸ್ಪರ್ಧೆಯಲ್ಲಿ ಇಲ್ಲ. ಇದರ ಬಗ್ಗೆ ಅನಗತ್ಯವಾಗಿ ಗೊಂದಲಗಳು ಬೇಡ ಎಂದು…