ಮೈಸೂರು ನಗರ

ಮೊದಲು ಮುಸುಕುಧಾರಿಗೆ ಮಂಪರು ಪರೀಕ್ಷೆ ಆಗಬೇಕು: ಶಾಸಕ ತನ್ವೀರ್‌ ಸೇಠ್‌

ಮೈಸೂರು: ಧರ್ಮಸ್ಥಳ ಪ್ರಕರಣ ಮೈಸೂರು ಭಾಗದ ಭಕ್ತರ ಭಾವನೆಗೆ ಚ್ಯುತಿ ತಂದಿದೆ ಎಂದು ಶಾಸಕ ತನ್ವೀರ್‌ ಸೇಠ್‌ ಅಸಮಾಧಾನ ಹೊರಹಾಕಿದ್ದಾರೆ.

ಈ ಕುರಿತು ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜಕೀಯವಾಗಿ ಅನೇಕರು ಅವರ ಬೇಳೆ ಬೇಯಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಎಸ್‌ಐಟಿ ತನಿಖೆ ಮಾಡಿ ಸತ್ಯ ಹೊರ ತರುವ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ. ಆದರೆ ಎಸ್‌ಐಟಿ ಸ್ವಾಗತ ಮಾಡಿದವರು ತನಿಖೆಗೆ ಮುಕ್ತ ಅವಕಾಶ ನೀಡದೆ ಮಧ್ಯ ಪ್ರವೇಶ ಮಾಡಿ ಜನರ ಭಾವನೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಭಕ್ತರ ಭಾವನೆಯಂತೆ ಮಂಜುನಾಥನ ದರ್ಶನಕ್ಕೆ ಹೊರಟಿದ್ದಾರೆ. ಇದಕ್ಕೆ ಕಾಂಗ್ರೆಸ್ ಎನ್ನಬೇಡಿ, ಜನರ ಯಾತ್ರೆ.. ಪಕ್ಷದ ವತಿಯಿಂದ ಇಲ್ಲಿ ಯಾತ್ರೆ ಕೈಗೊಂಡಿಲ್ಲ ಎಂದರು.

ಇದನ್ನು ಓದಿ: ಧರ್ಮಸ್ಥಳ ಪ್ರಕರಣಕ್ಕೆ ಇಡಿ ಎಂಟ್ರಿ: ಕೆಲವರಿಗೆ ತನಿಖೆಯ ಬಿಸಿ ಎದುರಾಗುವ ಸಾಧ್ಯತೆ

ಇನ್ನು ಮೊದಲು ಮುಸುಕುಧಾರಿಗೆ ಮಂಪರು ಪರೀಕ್ಷೆ ಆಗಬೇಕು. ಕನಿಷ್ಟ ಎಸ್‌ಐಟಿ ಮಧ್ಯಂತರ ವರದಿಯಾದರೂ ಹೊರ ಬರಬೇಕು. ಗೊಂದಲಗಳುಗೆ ತೆರೆ ಎಳೆಯಬೇಕು ಎಂದು ಗೃಹಸಚಿವರಿಗೆ ಕೇಳಿದ್ದೇನೆ ಎಂದು ಹೇಳಿದರು.

ಇನ್ನು ಷಡ್ಯಂತ್ರಕ್ಕೆ ವಿದೇಶಿ ಹಣ ಹರಿದು ಬಂದಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಇದಕ್ಕೆ ನಾನು ಉತ್ತರ ಕೊಡಲ್ಲ. ಯಾವುದೇ ವಿದೇಶಿ ಹಣ ಬರಬೇಕು ಅಂದರೆ ಕೇಂದ್ರದ ಮೂಲಕವೇ ಬರಬೇಕು. ತನಿಖೆ ವೇಳೆ ಇದೂ ಕೂಡ ತನಿಖೆ ಆಗಲಿ. ವಿರೋಧ ಪಕ್ಷದವರು ಬಟ್ಟೆ ಬದಲಿಸಿದಂತೆ ಹೆಳಿಕೆ ನೀಡಿದರೆ ಮಾಡಲು ಸಾಧ್ಯ ಇಲ್ಲ.
ಮೊದಲು ಎಸ್‌ಐಟಿ ತನಿಖೆ ವರದಿ ಬರಲಿ. ಮುಂದೆ ನೋಡೋಣ. ಮುಸುಕುದಾರಿ ಹಿನ್ನೆಲೆಯ ಬಗ್ಗೆ ತನಿಖೆ ಆಗಬೇಕು. ಆತ ಹೇಳಿರುವ ಹೆಸರುಗಳ ಬಗ್ಗೆ ಕೂಡ ತನಿಖೆ ಆಗಬೇಕು.
ಇದು ಯಾವುದೇ ರಾಜಕೀಯ ಯಾತ್ರೆಯಲ್ಲ, ಭಕ್ತರ ಯಾತ್ರೆಯಾಗಿದೆ ಎಂದು ಧರ್ಮಸ್ಥಳ ಯಾತ್ರೆ ಬಗ್ಗೆ ಮಾಹಿತಿ ನೀಡಿದರು.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಸಾಂಘಿಕ ಪ್ರದರ್ಶನದಿಂದ ಭಾರತದ ಮುಡಿಗೆ ಟಿ-೨೦ ವಿಶ್ವಕಪ್

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಟಿ-೨೦ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ತಂಡದ ಸಾಂಘಿಕ ಪ್ರದರ್ಶನದಿಂದ ನ್ಯೂಜಿಲೆಂಡ್…

6 mins ago

ಓದುಗರ ಪತ್ರ: ಅನುಭವಿ ಮೌಲ್ಯಮಾಪಕರಿಗೆ ಆದ್ಯತೆ ನೀಡಿ

ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಜೀವನದ ಪ್ರಮುಖ ಘಟ್ಟವಾಗಿದೆ. ವಿದ್ಯಾರ್ಥಿಗಳು ವರ್ಷವಿಡೀ ಶ್ರದ್ಧೆಯಿಂದ ಓದಿ ಪರೀಕ್ಷೆ ಬರೆದರೂ ಪ್ರತಿ ವರ್ಷವೂ…

8 mins ago

ಓದುಗರ ಪತ್ರ: ಆಟೋ ಚಾಲಕರಿಂದ ಅರವಟ್ಟಿಗೆ ಸೌಲಭ್ಯ

ಬೇಸಿಗೆ ಆರಂಭವಾಗುತ್ತಿದ್ದಂತೆಯೇ ಬಿಸಿಲಿನ ತಾಪ ಹೆಚ್ಚಾಗಿ ಜನರು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ಉಂಟಾಗುತ್ತದೆ. ಇಂತಹ ಸಂದರ್ಭದಲ್ಲಿ ಮೈಸೂರಿನ ರಾಮಸ್ವಾಮಿ…

10 mins ago

ಓದುಗರ ಪತ್ರ: ಯುದ್ಧ: ಎಂಎಲ್‌ಸಿಗೆ ಸ್ಪಂದಿಸದ ಕೇಂದ್ರ ಸರ್ಕಾರ?

ಇಸ್ರೇಲ್- ಅಮೆರಿಕ ಹಾಗೂ ಇರಾನ್ ನಡುವಿನ ಯುದ್ಧ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಭಾರತದಿಂದ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಿಂದ ಕಾರ್ಯನಿಮಿತ್ತ…

12 mins ago

ಪಂಜುಗಂಗೊಳ್ಳಿ ಅವರ ವಾರದ ಅಂಕಣ: ಸ್ಲಮ್ ವಾಸಿಗಳಿಗೆ ಬದುಕು ಕಟ್ಟಿ ಕೊಟ್ಟ ಆರ್ಕಿಟೆಕ್ಟ್‌

ಕೊಳೆಗೇರಿಗಳ ೨೭,೦೦೦ ಮನೆಗಳಿಗೆ ಶೌಚಾಲಯ ಸೌಲಭ್ಯ ಪೂನಾದ ಇಂದಿರಾ ವಸಾಹತ್ ಎಂಬ ಪ್ರದೇಶದ ಒಂದು ಸ್ಲಮ್ಮಿನಲ್ಲಿ ವಾಸಿಸುವ ಲತಾ ರತನ್…

15 mins ago

ಮರಿಗಳೊಂದಿಗೆ ಹುಲಿ ಕಂಡು ಪುಳಕಿತರಾದ ಪ್ರವಾಸಿಗರು

ಮಹೇಂದ್ರ ಹಸಗೂಲಿ ತಾಯಿ ಹುಲಿ ನಾಪತ್ತೆಯಾಗಿದ್ದರಿಂದ ಮರಿಗಳನ್ನು ಪಾಲನೆ ಮಾಡಿದ್ದ ಅರಣ್ಯ ಇಲಾಖೆ  ಗುಂಡ್ಲುಪೇಟೆ: ಬಂಡೀಪುರದ ಸಫಾರಿಗೆ ಹೋಗಿದ್ದ ಪ್ರವಾಸಿಗರು…

45 mins ago