arun kumar
ಮೈಸೂರು: ಕೂಡಲೇ ನಾಗಮೋಹನ್ ದಾಸ್ ವರದಿ ಬಿಡುಗಡೆಯಾಗಬೇಕು ಎಂದು ಸಾಮಾಜಿಕ ನ್ಯಾಯ ಪರ ವಕೀಲರ ಸಂಘದಿಂದ ಆಗ್ರಹಿಸಿದೆ.
ಈ ಕುರಿತು ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ವಕೀಲ ಅರುಣ್ ಕುಮಾರ್ ಅವರು, ಈ ರಾಜ್ಯದಲ್ಲಿ ಮಾದಿಗರೇ ಜನಸಂಖ್ಯೆಯಲ್ಲಿ ನಂಬರ್ ಒನ್. ಎಲ್ಲಾ ವರದಿಗಳಲ್ಲೂ ನಾವೇ ನಂಬರ್ ಒನ್ ಆಗಿದ್ದೇವೆ. ಜಸ್ಟಿಸ್ ನಾಗಮೋಹನ್ ದಾಸ್ ವರದಿ ಯಥಾವತ್ತಾಗಿ ಜಾರಿಗೆ ತನ್ನಿ ಎಂದು ಆಗ್ರಹಿಸಿದರು.
ಇನ್ನು ನಾಗಮೋಹನ್ ದಾಸ್ ಸಮಿತಿ 6,60,583 ಪುಟಗಳ ವರದಿ ಸಲ್ಲಿಸಿದೆ. ಆದರೆ ಅದರಲ್ಲಿ ಕೇವಲ 1667 ಪುಟಗಳ ವರದಿ ಸಲ್ಲಿಸಿದ್ದಾರೆ. ಅದರಲ್ಲೂ 332 ಪುಟಗಳನ್ನು ಮಾತ್ರ ಹೊರಗಡೆ ಬಿಟ್ಟಿದ್ದಾರೆ. ಒಬ್ಬ ಹೊಲಯನು ನಮಗೆ ಬೇಡ. ಸತ್ಯವನ್ನು ಗಟ್ಟಿಯಾಗಿ ನೇರವಾಗಿ ಹೇಳಿದ್ದೇವೆ. ಹೊಲೆಯರಿಗೆ ಸಮೀಕ್ಷೆ ನಡೆಯುವ ಸಂದರ್ಭದಲ್ಲಿ ಯಾವುದೇ ವಿರೋಧವಿರಲಿಲ್ಲ.
ನಾಗಮೋಹನ್ ದಾಸ್ ಕಮಿಷನ್ ಆಗಬೇಕು ಎಂದವರು ಹೊಲೆಯ ಸಮುದಾಯವರು. ಪ್ರತಿಭಟನೆ ಮಾಡುವ ಸ್ವಾಮೀಜಿ ಕೂಡ ಸದಾಶಿವ ಅವರನ್ನೇ ನೇಮಕ ಮಾಡಿ ಎಂದಿದ್ದರು. ಮಾದಿಗರು ಹೊಲೆಯರು ಅಣ್ಣ ತಮ್ಮಂದಿರು ಎಂದು ಹೇಳುತ್ತೀರಾ. ಇದೇನಾ ಅಣ್ಣ ತಮ್ಮ ನಡೆದುಕೊಳ್ಳುವ ರೀತಿ. ಒಬ್ಬ ಹೊಳೆಯನು ಮಾದಿಗ ಗುಂಪಿಗೆ ಬೇಡ. ಮೀಸಲಾತಿ ವರ್ಗಿಕರಣದ ಊಟದಲ್ಲಿ ಮಾದಿಗರಿಗೆ ಕಸ ಕಡ್ಡಿಯೂ ಸಿಕ್ಕಿಲ್ಲ. ಹೊಲೆಯರನ್ನ ನಮ್ಮ ಗುಂಪಿಗೆ ಸೇರಿಸಿ ಅನುಕೂಲ ಪಡೆದುಕೊಳ್ಳುತ್ತಿವಾ? ಪರಿಶಿಷ್ಟ ವರ್ಗದ ವರ್ಗೀಕರಣ ಸರಿಯಾಗಿ ಹಂಚಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ. ಕೂಡಲೇ ನಾಗಮೋಹನ್ ದಾಸ್ ವರದಿ ಯಥಾವತ್ತಾಗಿ ಬಿಡುಗಡೆಯಾಗಲಿ ಎಂದು ಆಗ್ರಹಿಸಿದರು.
ಮಹಾದೇಶ್ ಎಂ ಗೌಡ ಹನೂರು: ಮಳೆಯನ್ನೇ ಆಶ್ರಯಿಸಿ ಬೆಳೆಯಬೇಕಿದ್ದ ಸ್ಥಿತಿ, ಕುಸಿಯುತ್ತಿರುವ ಅಂತರ್ಜಲದಿಂದ ಪಡಿಪಟಾಲು ಪಡುತ್ತಿದ್ದ ರೈತರ ಕಷ್ಟ ಕೊನೆಗೂ…
ಪಂಜು ಗಂಗೊಳ್ಳಿ ನೂರಾರು ಜನ ವಿಶೇಷಚೇತನರಿಗೆ ಫೋಟೋಗ್ರಫಿ ತರಬೇತಿ ಎವ್ಗನ್ ಬಾವ್ಚಾರ್ ೧೯೪೬ರಲ್ಲಿ ಸ್ಲೊವೇನಿಯಾ (ಆಗ ಯುಗೊಸ್ಲೇವಿಯಾ)ದಲ್ಲಿ ಹುಟ್ಟಿದರು. ಏಳು…
ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಅಕ್ರಮ ಸಿಗರೇಟ್ ಮಾರುಕಟ್ಟೆಯು ವಾರ್ಷಿಕವಾಗಿ ಸುಮಾರು ರೂ.೧೫,೦೦೦ ಕೋಟಿಗೂ ಅಧಿಕ ನಷ್ಟವನ್ನು ಸರ್ಕಾರಕ್ಕೆ ಉಂಟುಮಾಡುತ್ತಿದೆ.…
ದ್ವಿಚಕ್ರ ವಾಹನಗಳಿಗೆ ಸಂಚಾರ ನಿಯಮದಂತೆ ಎರಡೂ ಕಡೆ ದರ್ಪಣವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ಯಾರು ಈ ನಿಯಮವನ್ನು ಉಲ್ಲಂಘಿಸುತ್ತಾರೋ ಅವರಿಗೆ ಸಂಚಾರ…
ಮೈಸೂರಿನ ಕುವೆಂಪುನಗರದ ನೃಪತುಂಗ ರಸ್ತೆಯ ಶಾಂತಿ ಸಾಗರ್ ಕಾಂಪ್ಲೆಕ್ಸ್ ನ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ಮದ್ದೂರು ವಡೆ ಸೆಂಟರ್ ಮತ್ತು…
ಪ್ರಶಾಂತ್ ಎಸ್. ಮೈಸೂರು: ನಗರ ಹೊರವಲಯದ ಶ್ರೀರಾಂಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹಲವೆಡೆ ರಸ್ತೆಗಳ ದುಸ್ಥಿತಿಯಿಂದಾಗಿ ವಾಹನಗಳ ಸವಾರರು ಜೀವವನ್ನು…