ಮೈಸೂರು ನಗರ

ಮೈಸೂರು ಮುಡಾದಲ್ಲಿ ಅಕ್ರಮ ಆಗಿರೋದು ನಿಜ: ಶಾಸಕ ಟಿ.ಎಸ್.ಶ್ರೀವತ್ಸ

ಮೈಸೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಡಾ ಮಾಜಿ ಆಯುಕ್ತ ದಿನೇಶ್‌ ಕುಮಾರ್‌ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಡಾ ಮಾಜಿ ಆಯುಕ್ತ ದಿನೇಶ್‌ ಕುಮಾರ್‌ ಬಂಧನವನ್ನು ಸ್ವಾಗತಿಸಿದರು. ನಾನು ಈ ಹಿಂದೆಯೇ ಹೇಳಿದ್ದೆ. ಮುಡಾದಲ್ಲಿ ಅಕ್ರಮ ಆಗಿರೋದು ನಿಜ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನು ಅನೇಕರ ಬಂಧನ ಆಗಬೇಕು.

ಈ ಹಿಂದಿನ ಅಧ್ಯಕ್ಷರು, ಆಯುಕ್ತರು, ಅಧಿಕಾರಿಗಳ ಬಂಧನ ಆಗಬೇಕು. ಅಕ್ರಮವಾಗಿ ಸಾವಿರಾರು ಸೈಟುಗಳನ್ನು ಹಂಚಿದ್ದಾರೆ. ಕೇವಲ ದಿನೇಶ್ ಕುಮಾರ್ ಬಂಧನ ಆದ್ರೆ ಸಾಲಲ್ಲ. ಇನ್ನು ಅನೇಕರ ವಿರುದ್ಧ ತನಿಖೆ ಆಗಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ನಡೆಯುತ್ತಿರುತ್ತದೆ ಎಂದು ಎಚ್ಚರಿಕೆ ನೀಡಿದರು.

ಇದನ್ನು ಓದಿ : ಎಸ್‌ಟಿ ಪಟ್ಟಿಗೆ ಕುರುಬ ಸಮುದಾಯ ಸೇರ್ಪಡೆ ವಿಚಾರ: ಸಂಸದ ಯದುವೀರ್‌ ಒಡೆಯರ್‌ ಅಸಮಾಧಾನ

ಇನ್ನು ಕೆ.ಆರ್.ಮೊಹಲ್ಲಾದ ಗಾಡಿ ಚೌಕ ದರ್ಗಾ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಅಲ್ಲಿ ಈಗಾಗಲೇ ದರ್ಗಾವಿದೆ. ಇನ್ನೊಂದು ದರ್ಗಾಕ್ಕೆ ಆಯುಕ್ತರು ಯಾಕೆ ನೋಟಿಫಿಕೇಷನ್ ಕೊಟ್ಟಿದ್ದಾರೆ?‌ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲಿ ಇರುವ ದರ್ಗಾದ ಬಗ್ಗೆ ನಾವು ಪ್ರಶ್ನೆ ಮಾಡಲ್ಲ. ಅದು ಅಕ್ರಮ ಸಕ್ರಮ ಅದನ್ನು ಈಗ ಚರ್ಚೆ ಮಾಡಲ್ಲ.

ದರ್ಗಾ ಇದ್ರು ಕೂಡ ಇನ್ನೊಂದು ದರ್ಗಾ ಯಾಕೆ ಅನ್ನೋದು ನಮ್ಮ ಪ್ರಶ್ನೆ. ಅಲ್ಲಿ ಆಟೋಗಳನ್ನು ನಿಲ್ಲಿಸುತ್ತಾರೆ. ಬೆಂಕಿ ಹಚ್ಚಿ ನಮ್ಮ ಮೇಲೆ ಹಾಕಿದ್ರೆ ಯಾರು ಹೊಣೆ? ಈ ಬಗ್ಗೆ ಕಮಿಷನರ್‌ಗೆ ದೂರು ಕೊಡುತ್ತೇನೆ. ಈ ಕೂಡಲೇ ಅಲ್ಲಿ ಇರುವ ಎಲ್ಲವನ್ನೂ ಖಾಲಿ ಮಾಡಿಸಬೇಕು. ಒಂದು ಧಾರ್ಮಿಕ ಕೇಂದ್ರವಿದೆ. ಅದನ್ನು ಬಿಟ್ಟು ಮಿಕ್ಕಿದ್ದು ಏನು ಕೂಡ ಅಲ್ಲಿರೋದು ಬೇಡ. ದರ್ಗಾ ಇರುವ ಬಗ್ಗೆ ಯಾವ ಮ್ಯಾಪ್‌ನಲ್ಲೂ ಉಲ್ಲೇಖ ಇಲ್ಲ. ಏನಾದ್ರೂ ಇದ್ರೆ ದಾಖಲೆಗಳನ್ನು ಕೊಡಲಿ ಎಂದು ಸವಾಲು ಹಾಕಿದರು.

ಆಂದೋಲನ ಡೆಸ್ಕ್

Recent Posts

ಭಾರೀ ಮಳೆಗೆ ಕೊಚ್ಚಿ ಹೋದ ಚೆಕ್ ಡ್ಯಾಂ: 15 ಅಡಿಗೂ ಹೆಚ್ಚು ಪ್ರವಾಹ

ಹನೂರು: ತಾಲ್ಲೂಕಿನ ಶಾಗ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಾಜರ್ ದೊಡ್ಡಿ ಗ್ರಾಮದಲ್ಲಿ ಒಡಿಪಿ ಸಂಸ್ಥೆಯಿಂದ ನಿರ್ಮಾಣ ಮಾಡಿದ್ದ ಚೆಕ್ ಡ್ಯಾಂ…

7 hours ago

ಭಾರೀ ಮಳೆಗೆ ಮನೆ ಕುಸಿತ: ಲಕ್ಷಾಂತರ ರೂ. ನಷ್ಟ

ಹನೂರು: ತಾಲ್ಲೂಕಿನ ಎಲ್ಲೇಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೈಶಂಪಾಳ್ಯ ಗ್ರಾಮದಲ್ಲಿ ಭಾನುವಾರ ರಾತ್ರಿ ಸುರಿದ ಭಾರೀ ಮಳೆಗೆ ಮನೆ ಸಂಪೂರ್ಣ…

8 hours ago

ಧರ್ಮಸ್ಥಳ ಸೌಜನ್ಯ ಪ್ರಕರಣ: ಮರು ತನಿಖೆಗೆ ಸುಪ್ರೀಂಕೋರ್ಟ್ ಮಹತ್ವದ ಆದೇಶ

ನವದೆಹಲಿ: ಧರ್ಮಸ್ಥಳ ಸೌಜನ್ಯ ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ನವದೆಹಲಿಯಲ್ಲಿ ನಡೆದ ವಿಚಾರಣೆಯಲ್ಲಿ, ಹಲವು…

9 hours ago

ಕಾಡಾನೆ ದಾಳಿ: ವ್ಯಕ್ತಿ ಸಾವು

ಸರಗೂರು: ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಸರಗೂರು ತಾಲ್ಲೂಕಿನ ಕಾಡಗೆರೆ ಗ್ರಾಮದ…

11 hours ago

ಗಣೇಶ ವಿಸರ್ಜನೆ ಮೆರವಣಿಗೆ ರಾಜಕೀಯ ದಾಳವಾಗದಿರಲಿ…

ಬ್ರಿಟೀಷರ ವಿರುದ್ಧ ಸಮಾಜವನ್ನು ಅದರಲ್ಲೂ ಯುವಜನರನ್ನು ಸಂಘಟಿಸಿ, ದೇಶಭಕ್ತಿಯನ್ನು ಜಾಗೃತಿಗೊಳಿಸುವ ಮೂಲಕ ಅವರನ್ನು ಸ್ವಾತಂತ್ರ್ಯಸಂಗ್ರಾಮಕ್ಕೆ ಸಜ್ಜುಗೊಳಿಸುವ ಉದ್ದೇಶದಿಂದ ಆರಂಭವಾದ ಸಾರ್ವಜನಿಕ…

15 hours ago

ಕಾಂಗ್ರೆಸ್‌ನಲ್ಲೀಗ ಆತಂಕದ ಕಾರ್ಮೋಡ…

ಬೆಂಗಳೂರು ಡೈರಿ: ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಕಳೆದ ಮೂರು ವರ್ಷಗಳಿಂದ ಅಧಿಕಾರ ಹಂಚಿಕೆಯ ಸಂಘರ್ಷದಲ್ಲಿ ಮುಳುಗಿದ್ದ ಆಡಳಿತಾರೂಢ ಕಾಂಗ್ರೆಸ್…

15 hours ago