shreevathsav
ಮೈಸೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಡಾ ಮಾಜಿ ಆಯುಕ್ತ ದಿನೇಶ್ ಕುಮಾರ್ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಡಾ ಮಾಜಿ ಆಯುಕ್ತ ದಿನೇಶ್ ಕುಮಾರ್ ಬಂಧನವನ್ನು ಸ್ವಾಗತಿಸಿದರು. ನಾನು ಈ ಹಿಂದೆಯೇ ಹೇಳಿದ್ದೆ. ಮುಡಾದಲ್ಲಿ ಅಕ್ರಮ ಆಗಿರೋದು ನಿಜ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನು ಅನೇಕರ ಬಂಧನ ಆಗಬೇಕು.
ಈ ಹಿಂದಿನ ಅಧ್ಯಕ್ಷರು, ಆಯುಕ್ತರು, ಅಧಿಕಾರಿಗಳ ಬಂಧನ ಆಗಬೇಕು. ಅಕ್ರಮವಾಗಿ ಸಾವಿರಾರು ಸೈಟುಗಳನ್ನು ಹಂಚಿದ್ದಾರೆ. ಕೇವಲ ದಿನೇಶ್ ಕುಮಾರ್ ಬಂಧನ ಆದ್ರೆ ಸಾಲಲ್ಲ. ಇನ್ನು ಅನೇಕರ ವಿರುದ್ಧ ತನಿಖೆ ಆಗಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ನಡೆಯುತ್ತಿರುತ್ತದೆ ಎಂದು ಎಚ್ಚರಿಕೆ ನೀಡಿದರು.
ಇದನ್ನು ಓದಿ : ಎಸ್‌ಟಿ ಪಟ್ಟಿಗೆ ಕುರುಬ ಸಮುದಾಯ ಸೇರ್ಪಡೆ ವಿಚಾರ: ಸಂಸದ ಯದುವೀರ್ ಒಡೆಯರ್ ಅಸಮಾಧಾನ
ಇನ್ನು ಕೆ.ಆರ್.ಮೊಹಲ್ಲಾದ ಗಾಡಿ ಚೌಕ ದರ್ಗಾ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಅಲ್ಲಿ ಈಗಾಗಲೇ ದರ್ಗಾವಿದೆ. ಇನ್ನೊಂದು ದರ್ಗಾಕ್ಕೆ ಆಯುಕ್ತರು ಯಾಕೆ ನೋಟಿಫಿಕೇಷನ್ ಕೊಟ್ಟಿದ್ದಾರೆ? ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲಿ ಇರುವ ದರ್ಗಾದ ಬಗ್ಗೆ ನಾವು ಪ್ರಶ್ನೆ ಮಾಡಲ್ಲ. ಅದು ಅಕ್ರಮ ಸಕ್ರಮ ಅದನ್ನು ಈಗ ಚರ್ಚೆ ಮಾಡಲ್ಲ.
ದರ್ಗಾ ಇದ್ರು ಕೂಡ ಇನ್ನೊಂದು ದರ್ಗಾ ಯಾಕೆ ಅನ್ನೋದು ನಮ್ಮ ಪ್ರಶ್ನೆ. ಅಲ್ಲಿ ಆಟೋಗಳನ್ನು ನಿಲ್ಲಿಸುತ್ತಾರೆ. ಬೆಂಕಿ ಹಚ್ಚಿ ನಮ್ಮ ಮೇಲೆ ಹಾಕಿದ್ರೆ ಯಾರು ಹೊಣೆ? ಈ ಬಗ್ಗೆ ಕಮಿಷನರ್‌ಗೆ ದೂರು ಕೊಡುತ್ತೇನೆ. ಈ ಕೂಡಲೇ ಅಲ್ಲಿ ಇರುವ ಎಲ್ಲವನ್ನೂ ಖಾಲಿ ಮಾಡಿಸಬೇಕು. ಒಂದು ಧಾರ್ಮಿಕ ಕೇಂದ್ರವಿದೆ. ಅದನ್ನು ಬಿಟ್ಟು ಮಿಕ್ಕಿದ್ದು ಏನು ಕೂಡ ಅಲ್ಲಿರೋದು ಬೇಡ. ದರ್ಗಾ ಇರುವ ಬಗ್ಗೆ ಯಾವ ಮ್ಯಾಪ್‌ನಲ್ಲೂ ಉಲ್ಲೇಖ ಇಲ್ಲ. ಏನಾದ್ರೂ ಇದ್ರೆ ದಾಖಲೆಗಳನ್ನು ಕೊಡಲಿ ಎಂದು ಸವಾಲು ಹಾಕಿದರು.
ಗೋಲ್ಡ್ ಕೋಸ್ಟ್ (ಆಸ್ಟ್ರೇಲಿಯಾ) : ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಏಷ್ಯಾ ಮಹಿಳಾ ಫುಟ್ಬಾಲ್ ಕಪ್ 2026ನಲ್ಲಿ ಭಾಗವಹಿಸಿದ್ದ ಇರಾನ್ ರಾಷ್ಟ್ರೀಯ ಮಹಿಳಾ…
ಹೊಸದಿಲ್ಲಿ : ಇರಾನ್ ಮೇಲಿನ ಅಮೆರಿಕಾ-ಇಸ್ರೇಲ್ ದಾಳಿಗಳು ಮತ್ತು ಇರಾನ್‌ಗೆ ಹೊಸ ಸುಪ್ರೀಂ ಲೀಡರ್ ನೇಮಕದ ನಂತರ ಮಧ್ಯಪ್ರಾಚ್ಯದಲ್ಲಿ ತೀವ್ರ…
ಹೊಸದಿಲ್ಲಿ : ಮಧ್ಯಪ್ರಾಚ್ಯದಲ್ಲಿ ಇರಾನ್-ಇಸ್ರೇಲ್-ಅಮೆರಿಕಾ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ವಾಯುಪ್ರದೇಶದಲ್ಲಿ ತುರ್ತು ನಿರ್ಬಂಧಗಳು ಜಾರಿಯಾಗಿರುವುದರಿಂದ ದೆಹಲಿಯಿಂದ ಮ್ಯಾಂಚೆಸ್ಟರ್‌ಗೆ ಹೋಗುತಿದ್ದ ಇಂಡಿಗೊ…
ಮೈಸೂರು : ಮೈಸೂರು ಅಭಿವೃದ್ಧಿ ಪ್ರಾಧಿಕಾರ (MDA) ಈ ಬಾರಿಯ ಆರ್ಥಿಕ ವರ್ಷದ ಬಜೆಟ್‌ನಲ್ಲಿ ನಗರದ ಸಮಗ್ರ ಅಭಿವೃದ್ಧಿಗೆ ತೀವ್ರ…
ಮೈಸೂರು : ಮನೆಗಳ್ಳತನ, ವಾಹನ ಕಳ್ಳತನ, ದರೋಡೆ ಸೇರಿದಂತೆ ಕಳೆದ ಎರಡು ತಿಂಗಳಲ್ಲಿ ಜಿಲ್ಲೆಯಲ್ಲಿ ನಡೆದಿದ್ದ 24 ಅಪರಾಧ ಪ್ರಕರಣಗಳನ್ನು…
ಮೈಸೂರು : ರಾಜ್ಯ ಸರ್ಕಾರದ ʻಪಂಚ ಗ್ಯಾರಂಟಿʼ ಯೋಜನೆಗಳಿಂದ ಮಹಿಳಾ ಸಬಲೀಕರಣ ಸಾಧ್ಯವಾಗಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ…