ನಾನು ಸಹ ಸಚಿವ ಸ್ಥಾನದ ಆಕಾಂಕ್ಷಿ: ಶಾಸಕ ಎ.ಆರ್.ಕೃಷ್ಣಮೂರ್ತಿ

ಮೈಸೂರು: ಕೊಳ್ಳೇಗಾಲದ ಶಾಸಕ ಎ.ಆರ್‌.ಕೃಷ್ಣಮೂರ್ತಿ ಅವರು ನಾನು ಸಹ ಸಚಿವ ಸ್ಥಾನದ ಆಕಾಂಕ್ಷಿ ಎಂದು ತಿಳಿಸಿದ್ದು, ಸಚಿವ ಸಂಪುಟ ಪುನರ್‌ ರಚನೆಯ ಬಗ್ಗೆ ಸುಳಿವು ನೀಡಿದರು.

ಈ ಕುರಿತು ಮೈಸೂರಿನಲ್ಲಿ ಇಂದು( ನ.22) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೂ ಸಚಿವ ಸ್ಥಾನ ನಿಭಾಯಿಸುವ ಬುದ್ಧಿಶಕ್ತಿಯಿದೆ. ರಾಜ್ಯಸರ್ಕಾರದ ಸಚಿವ ಸಂಪುಟ ಪುನರ್‌ ರಚನೆ ವಿಚಾರ ಈಗಾಗಲೇ ಮುನ್ನೆಲೆಗೆ ಬಂದಿದ್ದು, ಸಂಪುಟ ಪುನರ್‌ ರಚನೆ ಆದರೂ ಆಗಬಹುದು ಎಂದರು.

ಇದೇ ವೇಳೆ ಕಾಂಗ್ರೆಸ್‌ ಶಾಸಕರಿಗೆ 50 ಕೋಟಿ ಆಫರ್‌ ವಿಚಾರ ಕುರಿತು ಮಾತನಾಡಿದ ಅವರು, ನನಗೆ ಬಿಜೆಪಿಯಿಂದ ಯಾವುದೇ ಆಫರ್‌ ಬಂದಿಲ್ಲ. ಆಫರ್‌ ಬಂದರು ನಾನು ಹೋಗುವುದಿಲ್ಲ, ಏಕೆಂದರೆ ನಾನು ಬಿಜೆಪಿ ಪಕ್ಷದಲ್ಲಿದ್ದಾಗ ಅನಂತ್‌ ಕುಮಾರ್‌ ಹೆಗ್ಡೆ ಹೇಳಿಕೆಗಳನ್ನು ಖಂಡಿಸಿದ್ದೇನೆ. ಅಲ್ಲದೇ ನನ್ನ ಸಮುದಾಯದ ಸ್ವಾಭಿಮಾನಕ್ಕೆ ಧಕ್ಕೆ ಬರುತ್ತದೆ ಎಂದು ಭಾವಿಸಿ ಬಿಜೆಪಿಯನ್ನೇ ಬಿಟ್ಟು ಬಂದಿದ್ದೇನೆ. ಹೀಗಾಗಿ ಯಾವುದೇ ಆಫರ್‌ ಬಂದರು ನಾನು ಬಿಜೆಪಿಗೆ ಹೋಗುವುದಿಲ್ಲ ಎಂದು ಹೇಳಿದರು.

 

ಅರ್ಚನ ಎಸ್‌ ಎಸ್

Recent Posts

ಓದುಗರ ಪತ್ರ: ಸರ್ಕಾರಿ ಕಚೇರಿಗಳಲ್ಲಿ ಮೊಬೈಲ್ ನಿಷೇಧಿಸಿ

ಇತ್ತೀಚಿನ ದಿನಗಳಲ್ಲಿ ಸರ್ಕಾರಿ ನೌಕರರು ಕೆಲಸದ ವೇಳೆಯಲ್ಲಿ ಅತಿಯಾಗಿ ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ಸಾರ್ವಜನಿಕರು ತಮ್ಮ ಕೆಲಸಕ್ಕೆಂದು ಕಚೇರಿಗಳಿಗೆ ಹೋದರೆ…

36 seconds ago

ಓದುಗರ ಪತ್ರ: ಬಸ್ ವ್ಯವಸ್ಥೆ ಕಲ್ಪಿಸಿ

ಎಚ್.ಡಿ.ಕೋಟೆ ತಾಲ್ಲೂಕಿನಿಂದ ಹ್ಯಾಂಡ್‌ಪೋಸ್ಟ್ ಮಾರ್ಗವಾಗಿ ಮಾದಾಪುರ ಕಡೆಯಿಂದ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳು ಬೆಳಿಗ್ಗೆ ೬.೩೦ಕ್ಕೆ , ಮಧ್ಯಾಹ್ನ…

3 mins ago

ಓದುಗರ ಪತ್ರ: ಎಸ್‌ಎಸ್‌ಎಲ್‌ಸಿ ಗಣಿತ ವಿಷಯಕ್ಕೆ ಕೃಪಾಂಕ ನೀಡಿ

ಇತ್ತೀಚಿನ ಎಸ್‌ಎಸ್‌ಎಲ್‌ಸಿ ಗಣಿತ ಪರೀಕ್ಷೆಯಲ್ಲಿ ಸುಮಾರು ೩೭ ಅಂಕಗಳ ಪ್ರಶ್ನೆಗಳು ಪಠ್ಯಕ್ರಮಕ್ಕೆ ಹೊರತಾಗಿರುವುದು ಅಥವಾ ಅತೀವ ಕ್ಲಿಷ್ಟಕರವಾಗಿರುವುದು ಶಿಕ್ಷಣ ಇಲಾಖೆಯ…

6 mins ago

ಪಿಎನ್‌ಜಿ ಗ್ರಾಹಕರ ಎಲ್‌ಪಿಜಿ ಸಿಲಿಂಡರ್ ಮೇಲೆ ‘ಕೇಂದ್ರ’ ಕಣ್ಣು?

ಕೆ.ಬಿ.ರಮೇಶನಾಯಕ ಮೈಸೂರು: ಮಧ್ಯಪ್ರಾಚ್ಯ ದೇಶಗಳ ನಡುವಿನ ಯುದ್ಧದಿಂದಾಗಿ ಪಿಎನ್‌ಜಿ (ಪೈಪ್ಡ್ ನ್ಯಾಚುರಲ್ ಗ್ಯಾಸ್) ಸಂಪರ್ಕ ಹೊಂದಿದ್ದವರ ಮನೆಗಳಲ್ಲಿರುವ ಎಲ್‌ಪಿಜಿ ಸಿಲಿಂಡರ್‌ಗಳನ್ನು…

1 hour ago

ಮೈಸೂರು ಜನತೆಗೆ ನೀರಿನ ಕರ ಏರಿಕೆಯ ಬರೆ

ಹೆಚ್.ಎಸ್. ದಿನೇಶ್‌ಕುಮಾರ್ ಚುನಾಯಿತ ಪ್ರತಿನಿಧಿಗಳಿಲ್ಲದ ನಗರಪಾಲಿಕೆಯಲ್ಲಿ ಅಧಿಕಾರಿಗಳ ದರ್ಬಾರು ಮೈಸೂರು: ಜವಾಬ್ದಾರಿಯುತ ಹಾಗೂ ಜನರ ಪರ ಆಲೋಚಿಸುವ ಜನಪ್ರತಿನಿಧಿಗಳಿಲ್ಲದಿದ್ದಲ್ಲಿ ಏನೆಲ್ಲಾ…

1 hour ago