ಮೈಸೂರು ನಗರ

ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಹೆಚ್ಚಿನ ಒತ್ತು ನೀಡಿ : ಸುರೇಶ್ ಕುಮಾರ್ ಜೈನ್

ಮೈಸೂರು : ರೈತರ ಕೃಷಿ ಉತ್ಪನ್ನಗಳನ್ನು ಕೈಗಾರಿಕೆಗಳ ಸಹಯೋಗದೊಂದಿಗೆ ಮೌಲ್ಯವರ್ಧನೆ ಮಾಡಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರೆ ಕೃಷಿ ಹಾಗೂ ಕೈಗಾರಿಕೆಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮೈಸೂರು ಕೈಗಾರಿಕೆಗಳ ಸಂಘದ ಪ್ರದಾನ ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್ ಅವರು ಹೇಳಿದರು.

ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರದ ವತಿಯಿಂದ ರಫ್ತು ನಿರ್ವಹಣಾ ತರಬೇತಿ ಹಾಗೂ ಕರ್ನಾಟಕ ಸರ್ಕಾರದ ರೈತ ಸಮೃದ್ಧಿ ಯೋಜನೆಯಡಿ ಕಾರ್ಯಕ್ರಮವನ್ನು ಹೊಟೇಲ್ ಪ್ರೆಸಿಡೆಂಟ್ ನಲ್ಲಿ ಉದ್ಘಾಟಿಸಿ ಮಾತನಾಡಿದರು.

ಭಾರತ ಕೃಷಿ ಪ್ರಧಾನವಾದ ದೇಶ, ರೈತರು ತಾವು ಬೆಳೆದ ಬೆಳೆಗಳನ್ನು ಮೌಲ್ಯವರ್ಧನೆ ಮಾಡಲು ಸಣ್ಣ ಕೈಗಾರಿಕೆಗಳನ್ನು ಅವಲಂಬಿಸಿದರೆ ಇಬ್ಬರೂ ದೇಶವನ್ನು ಆರ್ಥಿಕವಾಗಿ ಅಭಿವೈದ್ಧಿಯಾಗುತ್ತದೆ. ರೈತ ದೇಶದ ಬೆನ್ನೆಲುಬಿದ್ದಂತೆ, ಕೈಗಾರಿಕೆಗಳು ಪೆಕ್ಕೆಲುಬಿದ್ದಂತೆ ಎಂದು ಬಣ್ಣಿಸಿದರು.

ಕೃಷಿ ಉತ್ಪನ್ನ ಮಾರಾಟ ಕೇಂದ್ರಗಳು ಅವರ ಕಾರ್ಯಗಳ ಮಧ್ಯದಲ್ಲಿ ಮೌಲ್ಯವರ್ಧನೆಯಲ್ಲೂ ಸಕ್ರಿಯವಾಗಿ ಭಾಗವಹಿಸಿದರೆ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗುತ್ತದೆ. ದೇಶವನ್ನ ಪ್ರಗತಿ ಯತ್ತ ಕೊಂಡೊಯ್ಯಲು ಸಾಧ್ಯವಾಗುತ್ತದೆ ಎಂದರು.

ಕೃಷಿ ಇಲಾಖೆಯ ಉಪನಿರ್ದೇಶಕ ಕೆ. ನಾಗರಾಜು ಅವರು ಮಾತನಾಡಿ ಕೃಷಿ ಇಲಾಖೆಯು ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ಸಮಗ್ರ ಯೋಜನಾ ಕೃಷಿಯನ್ನು ಉತ್ತೇಜನ ಮಾಡಲು ಕೃಷಿಯೊಂದಿಗೆ ಹೈನುಗಾರಿಕೆ, ರೇಷ್ಮೆ, ಮೀನುಗಾರಿಕೆಗಳಂತಹ ಉಪಕಸುಬು ರೂಢಿಸಿಕೊಳ್ಳುವಂತೆ ಪ್ರೋತ್ಸಾಹಿಸುತ್ತಿದೆ. ರೈತರು ಉಪಕಸುಬು ರೂಢಸಿಕೊಂಡು ಸಮಗ್ರವಾಗಿ ಲಾಭವನ್ನು ಗಳಿಸಬಹುದಾಗಿದೆ ಎಂದರು.

ರೈತರು ಬೆಳೆದ ಪದಾರ್ಥವನ್ನ ಮೌಲ್ಯ ವರ್ಧನೆ ಮಾಡಿಕೊಂಡು ಮಾರಾಟ ಮಾಡುವುದರಿಂದ ರೈತನೆ ಸ್ವತ; ಲಾಭವನ್ನು ಪಡೆಯಬಹುದು ಎಂದು ಹೇಳಿದರು.

ವಿಟಿಪಿಸಿ ಜಂಟಿ ನಿರ್ದೇಶಕರಾದ ಸಿ.ಎಸ್.ಬಾಬು ನಾಗೇಶ್ ಅವರು ಮಾತನಾಡಿ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರದ ಸಂಸ್ಥೆಯು ರಾಜ್ಯ ಸರಕಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಯಾಗಿದ್ದು, ರಪ್ತಿ ಗಾಗಿ ಮೀಸಲಾಗಿರುವ ಸಂಸ್ಥೆಯಾಗಿದೆ, ಆದರೆ ಈ ಸಂಸ್ಥೆಯ ಬಗ್ಗೆ ರೈತರಿಗೆ ಹೆಚ್ಚಾಗಿ ಮಾಹಿತಿ ಇಲ್ಲ. ಈ ಸಂಸ್ಥೆಗೆ ಸರಕಾರವು ವಿವಿಧ ರೀತಿಯ ಸಾವಲತ್ತುಗಳನ್ನು ನೀಡುತ್ತಾ ಬಂದಿದೆ. ರೈತರು ಸದುಪಯೋಗಪಡಿಸಿಕೊಳ್ಳಿ ಎಂದು ಹೇಳಿದರು.

ಕಳೆದ ವರ್ಷದಲ್ಲಿ 2024-25 ನೆ ಸಾಲಿನಲ್ಲಿ ಕರ್ನಾಟಕ ರಾಜ್ಯದ ರಫ್ತು 25% ರಷ್ಟು ಹೆಚ್ಚಾಗಿದೆ. ಸರಕು ರಫ್ತು ಮಾಡುದರಲ್ಲಿ ಕರ್ನಾಟಕ ರಾಜ್ಯವು ದೇಶದ 4 ನೇ ಸ್ಥಾನ ದಲ್ಲಿದೆ, ಸೇವೆ ರಫ್ತು ನಲ್ಲಿ 1 ನೇ ಸ್ಥಾನ ದಲ್ಲಿದೆವೆ ಎಂದು ತಿಳಿಸಿದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕರಾದ ಸೋಮಶೇಖರ್ ಅವರು ಮಾತನಾಡಿ ರೈತರು ಬೆಳೆದಂತಹ ಬೆಳೆಗಳು ಎಲ್ಲಿ ಬೇಡಿಕೆ ಇದೆ ಎಂಬುದನ್ನ ಸಂಘ ಸಂಸ್ಥೆಗಳು ಸರಕಾರ ಸಂಸ್ಥೆಗಳ ಮುಖಂತರ ಮಾಹಿತಿಯನ್ನು ಪಡೆದು ಡಿಜಿಟಲೀಕರಣ ಮಾಡಿ ಬೇರೆ ದೇಶಗಳಿಗೆ ನಿಮ್ಮದೇ ಬ್ರಾಂಡ್ ಮೂಲಕ ರಫ್ತು ಮಾಡಿದರೆ ರೈತರಿಗೆ ಲಾಭವಾಗುತ್ತದೆ ಎಂದು ತಿಳಿಸಿದರು.

ರೈತರು ಬೆಳೆದ ಬೆಳೆಗಳಿಗೆ ಯಾವ ಕಾರಣಕ್ಕಾಗಿ ಬೆಲೆ ಸಿಗುತ್ತಿಲ್ಲ ಎಂಬುದರ ಬಗ್ಗೆ ಸಂಶೋಧನೆಗಳು ಆಗುತ್ತಿಲ್ಲ ಅದರಿಂದ ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗುವ ಬಗ್ಗೆ ಸಂಶೋಧನೆ ಆದರೆ ಎಲ್ಲಾ ವಸ್ತುಗಳಿಗಗೆ ಸೂಕ್ತ ಬೆಲೆ ಸಿಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮತ್ತು ವಿಟಿಪಿಸಿ – ರಫ್ತು ಸೌಲಭ್ಯ ಕೇಂದ್ರದ ಉಪ ನಿರ್ದೇಶಕರಾದ ಮೇಘಲಾ ಎಲ್, ಕಾರ್ಯಕ್ರಮ ಪ್ರಾಯೋಜಕರಾದ ಅರವಿಂದ ಭಟ್, ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷರಾದ ಕೆ.ಬಿ ಲಿಂಗರಾಜು, ಹಾಗೂ ಶಿಬಿರಾರ್ಥಿಗಳು ಇತರರು ಉಪಸ್ಥಿತರಿದ್ದರು

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಡಿಜಿಪಿ ರಾಸಲೀಲೆ ವಿಡಿಯೋ ಪ್ರಕರಣಕ್ಕೆ ವಿಪಕ್ಷ ತೀವ್ರ ಟೀಕೆ : ಕ್ರಮಕ್ಕೆ ಸಿಎಂ ಸೂಚನೆ

ಬೆಂಗಳೂರು : ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ ವಿಡಿಯೋ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಕರ್ತವ್ಯದ ಸಮಯದಲ್ಲೇ ಬೆಂಗಳೂರಿನಲ್ಲಿರುವ ಡಿಜಿಪಿ…

38 mins ago

ಸಿಎಂ ಸೇರಿ 140 ಶಾಸಕರೂ ನನ್ನ ಬೆಂಬಲಕ್ಕಿದ್ದಾರೆ : ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು : ಮುಖ್ಯಮಂತ್ರಿ ಸೇರಿ ಕಾಂಗ್ರೆಸ್ ಪಕ್ಷದ 140 ಶಾಸಕರೂ ನನ್ನ ಬೆಂಬಲಕ್ಕೆ ಇದ್ದಾರೆ. ನಮ್ಮ ನಡುವೆ ಏನು ಚರ್ಚೆಯಾಗಿದೆ…

2 hours ago

ಕೃಷಿಯಷ್ಟೆ ಪಾತ್ರ ವಹಿಸುವ ಮೀನುಗಾರಿಗೆ ಉತ್ತೇಜನ ನೀಡಿ : ಜಿಲ್ಲಾಧಿಕಾರಿ

ಮಂಡ್ಯ : ರೈತರ ಆದಾಯ ಹೆಚ್ಚಿಸುವಲ್ಲಿ ಕೃಷಿಯಷ್ಟೆ ಮಹತ್ವದ ಪಾತ್ರವನ್ನು ಮೀನುಗಾರಿಕೆಯು ವಹಿಸುತ್ತದೆ. ಮೀನು ಸಾಕಾಣಿಕೆ ಕುರಿತು ರೈತರಿಗೆ ತರಬೇತಿ…

2 hours ago

ಕಾಲೇಜಿ ವಿದ್ಯಾರ್ಥಿನಿಯರಿಗೂ ಮಧ್ಯಾಹ್ನದ ಬಿಸಿಯೂಟ : ಶಾಸಕ ಜಿ.ಟಿ.ದೇವೇಗೌಡ ಚಾಲನೆ

ಮೈಸೂರು : ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಯ ಬಡಾವಣೆಗಳು,ಹಳ್ಳಿಗಳಿಂದ ಆಗಮಿಸಿ ವ್ಯಾಸಂಗ ಮಾಡುವ ಬಡ ವಿದ್ಯಾರ್ಥಿನಿಯರು ಮಧ್ಯಾಹ್ನದ ಹೊತ್ತು ಹಸಿವಿನಿಂದ ಇರಬಾರದೆಂದು…

3 hours ago

ಕಚೇರಿಯಲ್ಲೇ DGP ರಾಮಚಂದ್ರರಾವ್‌ ರಾಸಲೀಲೆ ; ವಿಡಿಯೋ ವೈರಲ್‌

ಬೆಂಗಳೂರು : ರಾಜ್ಯದ ಗೃಹ ಇಲಾಖೆಯಲ್ಲಿ ಹಿಂದೆಂದೂ ಕಂಡು ಕೇಳರಿಯದ ರಾಸಲೀಲೆ ಪ್ರಕರಣ ಹೊರಬಂದಿದ್ದು, ಕಾನೂನು ರಕ್ಷಣೆ ಮಾಡಬೇಕಾದ ಹಿರಿಯ…

3 hours ago

ಲಕ್ಕುಂಡಿಯಲ್ಲಿ ಮುಂದುವರಿದ ಉತ್ಖನನ : ಪ್ರಾಚ್ಯಾವಶೇಷಗಳು ಪತ್ತೆ

ಲಕ್ಕುಂಡಿ : ಕಳೆದ ಮೂರು ದಿನಗಳಿಂದ ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ಉತ್ಖನನ ಕಾರ್ಯದಲ್ಲಿ ಈಗಾಗಲೇ ಶಿವಲಿಂಗ ಮತ್ತು…

4 hours ago