ಮೈಸೂರು ನಗರ

ಅರಮನೆ ಅಂಗಳದಲ್ಲಿ ಫಲಪುಷ್ಪ ಪ್ರದರ್ಶನ ಆರಂಭ : ವರ್ಣರಂಜಿತ ಚಾಲನೆ

ಮೈಸೂರು : ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಸಂಭ್ರಮಕ್ಕೆ ಮುನ್ನುಡಿಯಾಗಿ ಅರಮನೆ ಫಲಪುಷ್ಪ ಪ್ರದರ್ಶನ ಭಾನುವಾರದಿಂದ ವರ್ಣರಂಜಿತವಾಗಿ ಆರಂಭಗೊಂಡಿದೆ.

ಮೈಸೂರು ಅರಮನೆ ಮಂಡಳಿ ವತಿಯಿಂದ ಡಿ. 21ರಿಂದ 31ರವರೆಗೆ 10 ದಿನಗಳ ಫಲಪುಷ್ಪ ಪ್ರದರ್ಶನ ನಡೆಯಲಿದೆ. ದೇಶ-ವಿದೇಶಗಳಿಂದ ಆಗಮಿಸುವ ಪ್ರವಾಸಿಗರಿಗೆ ಮುದ ನೀಡಲು ಆಯೋಜಿಸಿರುವ ಫಲಪುಷ್ಪ ಪ್ರದರ್ಶನದಲ್ಲಿ ಲಕ್ಷಾಂತರ ಹೂವುಗಳಿಂದ ನಿರ್ಮಿಸಿರುವ ‘ಶೃಂಗೇರಿ ದೇವಸ್ಥಾನ’ ಮಾದರಿ ಸೇರಿದಂತೆ ಇನ್ನಿತರ ಮಾದರಿಗಳು ಸಾರ್ವಜನಿಕರನ್ನು ಆಕರ್ಷಿಸುತ್ತಿವೆ. ವೈವಿಧ್ಯಮಯ ಮಾದರಿಗಳೊಂದಿಗೆ ಅರಮನೆ ಅಂಗಳವೂ ಪುಷ್ಪಲೋಕವಾಗಿ ಮಾರ್ಪಟ್ಟಿದೆ.

ಧಾರ್ಮಿಕ, ಪರಂಪರೆ, ದೇಶಪ್ರೇಮ, ಕ್ರೀಡೆ, ಮನರಂಜನೆ ವಿಭಾಗಗಳಲ್ಲಿ ನಿರ್ಮಿಸಿರುವ ಮಾದರಿಗಳು ಮೈಮನಕ್ಕೆ ಮುದ ನೀಡಲಿವೆ. ಅರಮನೆಯ ದೀಪಾಲಂಕಾರದಲ್ಲಿ ಸಂಗೀತಯಾನವೂ ಚಳಿಗೆ ಹಿತಾನುಭವ ನೀಡಲಿದೆ. ಭವ್ಯವಾದ ಅರಮನೆ ಅಂಗಳದಲ್ಲಿ ನಾಡಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶೃಂಗೇರಿ ಶಾರದದೇವಿಯ ದೇಗುಲವೂ ಬಗೆ ಬಗೆಯ ಹೂಗಳಲ್ಲಿ ಮೈದಳೆದಿದೆ. 50 ಅಡಿ ಅಗಲದ ಶೃಂಗೇರಿ ದೇವಸ್ಥಾನವೂ ಮುಖ್ಯ ಆಕರ್ಷಣೆಯಾಗಿದೆ.
8 ಸಾವಿರ ಮರಗಳನ್ನು ತನ್ನ ಮಕ್ಕಳಂತೆ ಪೋಷಿಸಿದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರಿಗೆ ವಿಶೇಷ ಗೌರವ ಸಲ್ಲಿಸಲಾಗಿದೆ. ತಿಮ್ಮಕ್ಕನವರ ಭಾವಚಿತ್ರವನ್ನು ಹೂ, ಸಿರಿಧಾನ್ಯದಿಂದ ಅಲಂಕರಿಸಿ ವೃಕ್ಷ ಮಾದರಿಯನ್ನು ನಿರ್ಮಿಸಲಾಗಿದ್ದು, ಪರಿಸರ ಜಾಗೃತಿ ಮೂಡಿಸುತ್ತಿದೆ.

ಇದನ್ನು ಓದಿ: ಜೋಹಾನ್ಸ್‌ಬರ್ಗ್‌ನಲ್ಲಿ ಗುಂಡಿನ ದಾಳಿ : 10 ಮಂದಿ ಸಾವು, 10 ಜನರಿಗೆ ಗಾಯ

ದೇಶಪ್ರೇಮ ಮೂಡಿಸು ಮಾದರಿಗಳು
ಯುದ್ಧದ ಟ್ಯಾಂಕರ್ ಮುಂದೆ ನಿಂತ ಕರ್ನಲ್ ಸೋಫಿಯಾ ಖುರೇಷಿ, ಯುದ್ಧದ ವಿಮಾನದ ಎದುರು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್, ನೌಕಪಡೆಯ ಯುದ್ಧ ನೌಕೆಯೊಂದಿಗೆ ಕಮಾಂಡರ್ ಪ್ರೇರಣಾ ಡಿ ಅವರ ಭಾವಚಿತ್ರಗಳು ಭಾರತದ ಸೇನೆಯ ಶೌರ್ಯದ ಪ್ರತೀಕವಾಗಿವೆ. ಆಪರೇಷನ್ ಸಿಂಧೂರದಲ್ಲಿ ಈ ಮೂವರು ಪ್ರದರ್ಶಿಸಿದ ಶೌರ್ಯಕ್ಕೆ ಗೌರವ ಸಮರ್ಪಿಸಲಾಗಿದೆ. ಬಾಬಾ ಸಾಹೇಬ ಬಿ.ಆರ್. ಅಂಬೇಡ್ಕರ್ ಭಾವಚಿತ್ರದೊಂದಿಗೆ ಭಾರತ ಸಂವಿಧಾನದ ಘೋಷವಾಕ್ಯ ಪುಸ್ತಕ ರೂಪದಲ್ಲಿ ಹೂಗಳು ಅಲಂಕರಿಸಿದೆ. ಉಯ್ಯಾಲೆಯಲ್ಲಿ ಕುಳಿತು ವಿಹರಿಸುತ್ತಿರುವ ಕೃಷ್ಣ, ರಾಧೆ ಫಲ ಪುಷ್ಪ ಪ್ರದರ್ಶನದ ಮತ್ತೊಂದು ಆಕರ್ಷಣೆಯಾಗಿದೆ. 2025ರಲ್ಲಿ ಮಹಿಳಾ ಕ್ರಿಕೆಟಿಗರು ಗೆದ್ದ ಟ್ರೋಫಿ, ಖೋ ಖೋ, ಕಬಡ್ಡಿ, ಅಂಧರ ಕ್ರಿಕೆಟ್ ಆಟಗಾರರ ಭಾವಚಿತ್ರ ಡಿಜಿಟಲ್ ಬೋರ್ಡ್‌ನಿಂದ ಅಲಂಕರಿಸಲಾಗಿದೆ.

ಎರಡು ದ್ವಾರಗಳಲ್ಲಿ ನವಿಲು, ಮಕ್ಕಳನ್ನು ಆಕರ್ಷಿಸಲು ಛೋಟಾಭೀಮ್, ಕಾಳಿಂಗ ಮರ್ಧನ, ಅಳಿಲು ಸೈಕಲ್, ಹಂಸ ಮಾದರಿಯ ಸೆಲಿ ಪಾಯಿಂಟ್ ನಿರ್ಮಿಸಲಾಗಿದೆ. ವಿವಿಧ ಹಣ್ಣು ಮತ್ತು ತರಕಾರಿ ಕೆತ್ತನೆಗಳಿಂದ ಗಣ್ಯ ವ್ಯಕ್ತಿಗಳು ಮತ್ತು ಪ್ರಾಣಿ ಪಕ್ಷಿಗಳು ಸಾಧನೆಯ ಕತೆಗಳನ್ನು ಹೇಳುತ್ತಿವೆ.

ಅರಮನೆ ದೀಪಾಲಂಕಾರದಲ್ಲಿ ಫಲಪುಷ್ಪ ಪ್ರದರ್ಶನ ಜಗಮಗಿಸಲಿದೆ. 50 ರೂ. ಪ್ರವೇಶ ನಿಗದಿಪಡಿಸಲಾಗಿದೆ. ಮೊದಲ ದಿನವಾದ ಭಾನುವಾರವೇ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಸಾವಿರಾರು ಜನರು ಭೇಟಿ ನೀಡಿ ಸಂತಸ ವ್ಯಕ್ತಪಡಿಸಿದರು.

ಆಂದೋಲನ ಡೆಸ್ಕ್

Recent Posts

ಉಪಸಭಾಪತಿಗೆ ಚಿತ್ರಹಿಂಸೆ ಆರೋಪ : ಐಪಿಎಸ್‌ ಅಧಿಕಾರಿ ಬಂಧನ

ಅಮರಾವತಿ : ಹಿಂದಿನ ವೈಎಸ್‍ಆರ್‍ಸಿಪಿ ಆಡಳಿತದ ಅವಧಿಯಲ್ಲಿ ಆಂಧ್ರ ವಿಧಾನಸಭೆಯ ಪ್ರಸ್ತುತ ಉಪಸಭಾಪತಿ ಕೆ. ರಘುರಾಮ ಕೃಷ್ಣ ರಾಜು ಅವರ…

6 hours ago

ಮಾರ್ಚ್‌ 11ರಿಂದ ವೈದ್ಯಾಧಿಕಾರಿಗಳ ಮುಷ್ಕರ : ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ

ಬೆಂಗಳೂರು : ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘವು ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾರ್ಚ್ 11ರಿಂದ…

6 hours ago

ಟ್ರಂಪ್‌ ಜಾಗತಿಕ ಸುಂಕ ರದ್ದು : ವರದಿ

ವಾಷಿಂಗ್ಟನ್ : ಕಾನೂನುಬಾಹಿರವಾಗಿ ಟ್ರಂಪ್ ವಿಧಿಸಿದ್ದ ಆಮದು ಸುಂಕ ಸಂಗ್ರಹವನ್ನ ಅಮೆರಿಕ ನಿಲ್ಲಿಸಲಿದೆ ಎಂದು ಯುಎಸ್ ಕಸ್ಟಮ್ಸ್ ಮತ್ತು ಗಡಿ…

7 hours ago

ಸಫಾರಿ ಆದಾಯದ ಶೇ.35 ಭಾಗ ಕಾಡಿನಂಚಿನ ಜನಕಲ್ಯಾಣಕ್ಕೆ ಬಳಕೆ : ಖಂಡ್ರೆ

ಬೆಂಗಳೂರು : ಸಫಾರಿಯಿಂದ ಬರುವ ಆದಾಯದಲ್ಲಿ ಶೇ.35ರಷ್ಟನ್ನು ಕಾಡಿನಂಚಿನ ಗ್ರಾಮದ ಜನರ ಕಲ್ಯಾಣಕ್ಕಾಗಿ ಬಳಸಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಗ್ರಾಮಗಳಲ್ಲಿ…

7 hours ago

ವನ್ಯಜೀವಿ ಸಂಚಾರ | ಕಾಡಂಚಿನ ಗ್ರಾಮದ ಮುಖಂಡರಿಗೆ ಮಾಹಿತಿ ರವಾನಿಸಲು ಖಂಡ್ರೆ ಸೂಚನೆ

ಬೆಂಗಳೂರು : ಅರಣ್ಯದಂಚಿನ ಜಮೀನುಗಳಲ್ಲಿ ವನ್ಯಜೀವಿಗಳ ಸಂಚಾರದ ಬಗ್ಗೆ ಕಮಾಂಡ್ ಕೇಂದ್ರಕ್ಕೆ ಮಾಹಿತಿ ಬಂದ ಕೂಡಲೇ ತೋಟದ ಬೆಳೆಗಾರರ ಸಂಘಟನೆ…

7 hours ago

ಮನರೇಗಾ ನಾಶ | ಜನರ ಅನ್ನ ಕಿತ್ತುಕೊಳ್ಳುತ್ತಿರುವ ಕೇಂದ್ರ ; ಸಿಎಂ ಸಿದ್ದರಾಮಯ್ಯ

ಚಿಕ್ಕಬಳ್ಳಾಪುರ : ಗ್ರಾಮೀಣ ಜನರ ಉದ್ಯೋಗದ ಹಕ್ಕನ್ನು ಕಸಿಯುತ್ತಿರುವ ವಿಬಿಜಿರಾಮ್ ಜಿ ಕಾಯ್ದೆಯನ್ನು ರದ್ದುಪಡಿಸಿ, ಮನರೇಗಾ ಮರುಸ್ಥಾಪಿಸುವವರೆಗೆ ದೇಶಾದ್ಯಂತ ಕಾಂಗ್ರೆಸ್…

7 hours ago