ಮೈಸೂರು ನಗರ

ಎಲ್ಲದಕ್ಕೂ ಆರ್‌ಎಸ್ಎಸ್‌ ಕಾರಣ: ಇದು ಕಾಂಗ್ರೆಸ್‌ ರೆಡಿಮೇಡ್ ಉತ್ತರ ಎಂದ ಎಂಎಲ್‌ಸಿ ಸಿ.ಟಿ.ರವಿ

ಮೈಸೂರು: ಕಾಂಗ್ರೆಸ್‌ನವರು ಒಂದು ರೆಡಿಮೇಡ್‌ ಉತ್ತರ ರೆಡಿಮಾಡಿಕೊಂಡಿದ್ದು, ಎಲ್ಲಾ ಗಲಭೆಗೂ ಆರ್‌ಎಸ್‌ಎಸ್‌ ಕಾರಣ ಎನ್ನುತ್ತಿದ್ದಾರೆ ಎಂದು ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಕಿಡಿಕಾರಿದ್ದಾರೆ.

ರಾಜ್ಯದಲ್ಲಿ ಹೆಚ್ಚುತ್ತಿರುವ ಗಲಭೆ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರ ಗಲಭೆ ಮೂಲ ಯಾವುದು ಎಂದು ಪತ್ತೆ ಹಚ್ಚುವ ಕೆಲಸ ಮಾಡಿಲ್ಲ. ಸುಹಾಸ್ ಶೆಟ್ಟಿ, ಶರತ್ ಮಡಿವಾಳ, ಪ್ರವೀಣ್ ನೆಟ್ಟಾರು ಹತ್ಯೆಗೆ ಆರ್‌ಎಸ್‌ಎಸ್‌ ಕಾರಣನಾ ಎಂದು ಪ್ರಶ್ನಿಸಿದರು.

ಇನ್ನು ಕಾಂಗ್ರೆಸ್ ನಾಯಕರು ಒಂದು ರೆಡಿಮೇಡ್ ಉತ್ತರ ರೆಡಿ ಇಟ್ಟುಕೊಂಡಿದ್ದಾರೆ. ಎಲ್ಲಾ ಘಟನೆಗೂ ಆರ್‌ಎಸ್‌ಎಸ್‌ ಕಾರಣ ಎಂದು ಹೇಳುತ್ತಿದ್ದಾರೆ. ಅವರೆಲ್ಲರೂ ಇದನ್ನು ದಕ್ಷಿಣದ ಕಾಶ್ಮೀರದ ರೀತಿ ನೋಡುತ್ತಿದ್ದಾರೆ. ಅದಕ್ಕಾಗಿ ಇಲ್ಲಿ ಹಿಂದೂಗಳನ್ನು ಅದೇ ರೀತಿ ನೋಡುತ್ತಿದ್ದಾರೆ. ಇವರನ್ನು ತಡೆಯೋದು ಆರ್.ಎಸ್.ಎಸ್ ಹಾಗೂ ವಿಹೆಚ್‌ಪಿ. ಹಾಗಾಗಿ ಎಲ್ಲದಕ್ಕೂ ಆರ್.ಎಸ್.ಎಸ್ ಕಾರಣ ಅಂತಾರೆ. ಬಿನ್ ಲಾಡೆನ್ ಹುಟ್ಟು ಹಾಕಿದ್ದು ಯಾರು? ಎಂದು ಪ್ರಶ್ನಿಸಿದ ಅವರು, ಸತ್ಯ ಗೊತ್ತಿದ್ರೂ ವೋಟ್ ಬ್ಯಾಂಕ್ ಆಸೆಯಿಂದ ಈ ರೀತಿ ಮಾಡುತ್ತಿದ್ದಾರೆ. ವಸ್ತು ನಿಷ್ಠೆಯಿಂದ ನೋಡಿದ್ರೆ ಸತ್ಯ ಗೊತ್ತಾಗುತ್ತೆ ಎಂದು ಕಾಂಗ್ರೆಸ್‌ ನಾಯಕರು ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

ಇದನ್ನೂ ಓದಿ:- ದೇಶದಲ್ಲಿ ಕಾಂಗ್ರೆಸ್‌ ಇಲ್ಲ ಅಂದ್ರೂ ಆಕಾಶ ಕಳಚಿ ಬೀಳಲ್ಲ: ಸತೀಶ್‌ ಜಾರಕಿಹೊಳಿಗೆ ಸಿ.ಟಿ.ರವಿ ಟಾಂಗ್‌

ಇನ್ನು ಹೇಮಾವತಿ ನೀರಿಗಾಗಿ ತುಮಕೂರಿನಲ್ಲಿ ಹೋರಾಟ ನಡೆಯುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನೀರಾವರಿ ವಿಚಾರದಲ್ಲಿ ಹೋರಾಟ ಮಾಡುತ್ತಿದ್ದವರ ಮೇಲೆ ಪೊಲೀಸ್ ಮೊಕದ್ದಮೆ ಹಾಕಿರೋದು ತಪ್ಪು. ಈ ಮೂಲಕ ರಾಜ್ಯ ಸರ್ಕಾರ ಬೆದರಿಸುವ ತಂತ್ರ ಮಾಡುತ್ತಿದೆ. ಇದು ಸರಿಯಾದ ನಿರ್ಧಾರವಲ್ಲ ಈ ಕೂಡಲೇ ಮೊಕದ್ದಮೆ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ಆಂದೋಲನ ಡೆಸ್ಕ್

Recent Posts

ಹೊರ್ಮುಜ್‌ ಜಲಸಂಧಿ | ಮನವಿ ತಿರಸ್ಕರಿಸಿದ ಮಿತ್ರ ರಾಷ್ಟ್ರಗಳು : ಟ್ರಂಪ್‌ಗೆ ಹಿನ್ನಡೆ

ವಾಷಿಂಗ್ಟನ್‌ : ಇರಾನ್ ವಿರುದ್ಧದ ಅಮೆರಿಕಾ-ಇಸ್ರೇಲ್ ಯುದ್ಧದ ಪರಿಣಾಮ ಪ್ರಪಂಚದ ಅತಿ ಮುಖ್ಯ ತೈಲ ಮಾರ್ಗ ಹೊರ್ಮುಜ್‌ ಜಲಸಂಧಿಯ ಮೂಲಕ…

17 mins ago

ನಿರ್ವಹಣೆ ಇಲ್ಲದೆ ಸೊರಗಿದ ಸ್ಮಶಾನ!

ಮಂಚೇಗೌಡನಕೊಪ್ಪಲಿನ ಸ್ಮಶಾನ ಸರಿಪಡಿಸಲು ನಿವಾಸಿಗಳ ಆಗ್ರಹ ಎಚ್. ಎಸ್. ದಿನೇಶ್‌ಕುಮಾರ್ ಮೈಸೂರು : ದುರ್ವಾಸನೆ ಬೀರುವ ಶೌಚಾಲಯ.., ಎಲ್ಲೆಂದರಲ್ಲಿ ಹರಡಿಕೊಂಡಿರುವ…

1 hour ago

ಓದುಗರ ಪತ್ರ | ಬೀದಿನಾಯಿಗಳ ಹಾವಳಿ ನಿಯಂತ್ರಿಸಿ

ಮೈಸೂರಿನ ಜೆ.ಪಿ.ನಗರದ ಸಾಯಿಬಾಬಾ ದೇವಸ್ಥಾನದ ಹಿಂಭಾಗದ ರಸ್ತೆಯಲ್ಲಿ ಬೀದಿನಾಯಿಗಳ ಹಾವಳಿ ವಿಪರೀತವಾಗಿದೆ. ರಾತ್ರಿಯ ಹೊತ್ತಿನಲ್ಲಿ ಒಂದೇ ಸಮನೆ ಬೊಗಳುತ್ತಿರುತ್ತವೆ. ದ್ವಿಚಕ್ರವಾಹನ…

1 hour ago

ಗುಂಡ್ಲುಪೇಟೆ | ವಿದ್ಯುತ್ ಸ್ಪರ್ಶಿಸಿ ಹುಲಿ ಸಾವು

ಗುಂಡ್ಲುಪೇಟೆ : ತಾಲೂಕಿನ ಪಡಗೂರು ಗ್ರಾಮದಲ್ಲಿ ವಿದ್ಯುತ್ ಸ್ಪರ್ಶಿಸಿ ಹುಲಿಯೊಂದು ಸಾವನ್ನಪ್ಪಿರುವ ಘಟನೆ ನಡೆದಿದೆ. ಗ್ರಾಮದ ಅಡವಿ ಮಠದ ಸಮೀಪವಿರುವ…

2 hours ago

ಓದುಗರ ಪತ್ರ | ಪ್ರಾಣಿ, ಪಕ್ಷಿಗಳಿಗೆ ನೀರು ಕೊಡಿ

ಬೇಸಿಗೆ ಆರಂಭವಾಗುವುದೇ ತಡ ಪ್ರತಿಯೊಬ್ಬರಿಗೂ ಬಾಯಾರಿಕೆ ಹೆಚ್ಚಾಗಿ, ಜಾಸ್ತಿ ನೀರು ಕುಡಿಯಬೇಕಾಗುತ್ತದೆ. ಬಿಸಿಲಿನ ಬೇಗೆ ಹೆಚ್ಚಾಗುವುದರಿಂದ ಎಂತಹವರಿಗೂ ವಿವಿಧ ರೀತಿಯ…

2 hours ago

ಓದುಗರ ಪತ್ರ | ಸರ್ಕಾರಿ ಶಾಲೆಗಳಿಗೆ ಲ್ಯಾಪ್ ಟಾಪ್, ವೈಫೈ ಸೌಲಭ್ಯ ಕಲ್ಪಿಸಿ

ಈಗ ಶಾಲೆಯಲ್ಲಿ ಶಿಕ್ಷಕರು ಕೇವಲ ಪಠ್ಯ ಬೋಧಕರಾಗಿ ಮಾತ್ರ ಉಳಿದಿಲ್ಲ. ಬೋಧನೆಯ ಜೊತೆ ಜೊತೆಗೆ ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳುವುದು, ಮಧ್ಯಾಹ್ನದ…

3 hours ago