ಮೈಸೂರು : ನಕರಾತ್ಮಕ ಭಾವನೆಗಳಿಂದ ಮಾನಸಿಕ ಕ್ಲೇಶ, ಅನಾರೋಗ್ಯ ಉಂಟಾಗುತ್ತದೆ. ಹಾಗಾಗಿ ಸಕರಾತ್ಮಕ ಚಿಂತನೆಗಳನ್ನು ಬೆಳೆಸಿಕೊಂಡು ಅಭಿವೃದ್ಧಿ ಪಥದತ್ತ ಸಾಗಬೇಕು ಎಂದು ಬೌದ್ಧ ಸಾಹಿತಿ ಕಲ್ಲಾರೆಪುರ ಮಹಾದೇವಯ್ಯ ಹೇಳಿದರು.
ವಿಜಯನಗರ ಒಂದನೇ ಹಂತದ ಡಿ.ಸಂಜೀವಯ್ಯ ಸ್ಮಾರಕ ಶಿಕ್ಷಣ ಸಂಸ್ಥೆ ಆವರಣದಲ್ಲಿರುವ ಸಿದ್ದಾರ್ಥ ಬುದ್ಧ ವಿಹಾರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಧಮ್ಮ ಧೀಕ್ಷಾ ಕಾರ್ಯಕ್ರಮದಲ್ಲಿ ಭಗವಾನ್ ಬುದ್ಧ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮಗೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ವಸ್ತು ವಿಷಯ, ಚಿತ್ರಪಟ, ಮೂರ್ತಿಗಳು, ವಿಗ್ರಹಗಳ ಮೇಲೆ ನಮ್ಮ ಗಮನವನ್ನು ಕೇಂದ್ರೀಕರಿಸುವುದನ್ನು ಧ್ಯಾನ ಎನ್ನುತ್ತೇವೆ. ಆದರೆ ಬುದ್ಧರು ಬಳಸಿದ ಸಮತ ಭಾವನಾ ಎಂಬ ಪದವು ಮನಸ್ಸಿನ ಪರಿಶುದ್ಧತೆ, ಸಂರಕ್ಷಣೆ, ವಿಕಾಸವನ್ನು ಬಯಸುತ್ತದೆ. ಹಾಗಾಗಿ ಬದುಕಿನ ಬದಲಾವಣೆಗಾಗಿ ಮನಸ್ಸನ್ನು ಕೇಂದ್ರೀಕರಿಸಿಕೊಂಡು ಸನ್ಮಾರ್ಗದತ್ತ ಹೆಜ್ಜೆ ಇಡಬೇಕು ಎಂದು ಹೇಳಿದರು.
ಧರ್ಮ ಎಂದರೆ ನಂಬಿಕೆ, ವಿಷಯದ ಮೇಲೆ ಜನರನ್ನು ಬಂಧಿಸುವುದು. ಆದರೆ ಬುದ್ಧಧಮ್ಮವು ಅಸ್ತಿತ್ವದ ಅಂತಿಮ ಸತ್ಯ, ವಾಸ್ತವ ಸತ್ಯವನ್ನು ತಿಳಿಸುವುದಾಗಿದೆ. ಹಾಗಾಗಿ ವಾಸ್ತವ ಜಗತ್ತಿನತ್ತ ನಾವು ಸಾಗಬೇಕಿದೆ. ವಿದೇಶಿಗರು ಬುದ್ಧರು ಬೋಧಿಸಿದ ಪಂಚಶೀಲಗಳನ್ನು ಅಳವಡಿಸಿಕೊಂಡಿದ್ದರಿಂದ ಅಭಿವೃದ್ಧಿಯತ್ತ ಸಾಗುತ್ತಿದ್ದಾರೆ. ಆದರೆ ಭಾರತದಲ್ಲಿ ಹುಟ್ಟಿದ ಬುದ್ಧರನ್ನು ತಾಯ್ನಾಡಿನ ಜನರು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಸಮ್ಮುಖ ವಹಿಸಿದ್ದ ಕೊಳ್ಳೇಗಾಲ ಜೇತವನ ಬುದ್ಧ ವಿಹಾರದ ಮನೋರಕ್ಕಿತ ಬಂತೇಜಿ ಮಾತನಾಡಿ, ಯುದ್ಧದಿಂದ ಎರಡೂ ದೇಶಗಳ ಸಂಪತ್ತು, ಆಸ್ತಿ, ಜೀವಹಾನಿ ಸಂಭವಿಸುತ್ತದೆ. ಆದ್ದರಿಂದ ಜಗತ್ತನ್ನು ನಾವು ದ್ವೇಷದಿಂದ ಗೆಲ್ಲಲು ಸಾಧ್ಯವಿಲ್ಲ. ಬುದ್ಧರು ಬೋಧಿಸಿದ ಪ್ರೀತಿ, ಮೈತ್ರಿ, ಕರುಣೆಯಿಂದ ಗೆಲ್ಲಬಹುದು ಎಂದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಆರ್ ಮಹದೇವಪ್ಪ ಮಾತನಾಡಿ, ಸಮಾಜದಲ್ಲಿ ಬೆರೂರಿರುವ ಜಾತಿಯತೆ, ಅಸ್ಪೃಶ್ಯತೆ, ಅವಮಾನ, ಗುಲಾಮಗಿರಿಯಿಂದ ಜನರನ್ನು ಬಿಡುಗಡೆ ಮಾಡಬೇಕೆಂಬುದು ಅಂಬೇಡ್ಕರ್ ಅವರ ಉದ್ದೇಶವಾಗಿತ್ತು. ಎಲ್ಲಾ ಧರ್ಮಗಳನ್ನು ಅಧ್ಯಯನ ನಡೆಸಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಎಲ್ಲಾ ಧರ್ಮಗಳಲ್ಲೂ ಮೂಲಭೂತವಾದ ಇದೆ. ಆದರೆ ಬೌದ್ಧ ಧರ್ಮದಲ್ಲಿ ಇದಕ್ಕೆ ಅವಕಾಶವಿಲ್ಲ, ಆದರಿಂದ ಇದು ನನ್ನ ದೇಶದ ಜನರೇ ಆಚರಿಸುತ್ತಿರುವ ಬೌದ್ಧಧಮ್ಮವೇ ಸರಿಯೆಂದು ಮನಗಂಡು ಈ ನೆಲದ ಧಮ್ಮವನ್ನೇ ಸ್ವೀಕರಿಸಿದರು. ಈ ಮೂಲಕ ಅಜ್ಞಾನದಿಂದ ಬದುಕುತ್ತಿದ್ದ ಜನರನ್ನು ಜ್ಞಾನದ ಕಡೆಗೆ ಕೊಂಡೋಯ್ದರು ಎಂದು ಹೇಳಿದರು.
ಇದನ್ನು ಓದು: ಜಡ್ಡುಗಟ್ಟಿದ ಸಮಾಜ ಬದಲಾವಣೆಗೆ ಬುದ್ದ, ಅಂಬೇಡ್ಕರ್ ತತ್ವವೇ ಮದ್ದು : ಸಿಎಂ
ಸುಪ್ರೀಂ ಕೋರ್ಟ್ ನ ಹಿರಿಯ ವಕೀಲರೊಬ್ಬರಿಗೆ ಶೂ ಎಸೆದಿರುವುದನ್ನು ಸಮರ್ಥಿಸಿಕೊಳ್ಳುವ ಜನರಿದ್ದಾರೆ ಎಂದರೆ ಇದಕ್ಕಿಂತ ನೀಚಗೆಟ್ಟ ವ್ಯವಸ್ಥೆ ಇದೆಯೇ ಬೇಸರ ವ್ಯಕ್ತಪಡಿಸಿದರು.
ಧರ್ಮಸ್ಥಳ ಪ್ರಕರಣವನ್ನು ಎಸ್ಐಟಿಗೆ ವಹಿಸಿ ತನಿಖೆ ನಡೆಸಿದರೆ ಪ್ರತಿರೋಧಗಳು ವ್ಯಕ್ತವಾಗುತ್ತವೆ. ಧರ್ಮಸ್ಥಳದ ಪಾವಿತ್ರತೆ ಹಾಳಾಗುತ್ತದೆ ಎಂದು ಪ್ರತಿಭಟನೆ ಮಾಡುತ್ತಾರೆ. ಹಾಗಾದರೆ ಅನ್ಯಾಯವನ್ನು ಪ್ರಶ್ನಿಸುವಂತಿಲ್ಲವೇ ಎಂದರು.
ಅತ್ಯಾಚಾರ, ಕೊಲೆ- ಸುಲಿಗೆ ಇವುಗಳ ವಿರುದ್ಧ ಪ್ರಶ್ನಿಸಬಾರದೆ, ಮತಿಯವಾದವನ್ನು ಬಿತ್ತು ವವರ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರೆ ಬೆದರಿಕೆ ಕರೆಗಳು ಬರುತ್ತವೆ. ಹಾಗಾದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದನ್ನೂ ಪ್ರಶ್ನಿಸಬಾರದೆ? ಅನ್ಯಾಯದ ವಿರುದ್ಧ ಪ್ರತಿಭಟಿಸುವುದು ತಪ್ಪೇ ಎಂದು ಪ್ರಶ್ನೆಸಿದರು.
ಇದೇ ಸಂದರ್ಭದಲ್ಲಿ ಭರಣಿ ಫೋಟೋಗ್ರಪಿಯ ಮಲ್ಲೇಶ್ ಮತ್ತು ಕುಟುಂಬದವರು ಬೌದ್ಧ ಧಮ್ಮವನ್ನು ಸ್ವೀಕರಿಸಿದರು.
ಸಮಿತಿಯ ಅಧ್ಯಕ್ಷ ಪ್ರೊ. ಡಿ.ನಂಜುಂಡಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಹ ಕಾರ್ಯದರ್ಶಿ ಎಚ್. ಶಿವರಾಜ್, ಉಪಾಧ್ಯಕ್ಷ ಪಿ. ಮಹದೇವ್, ಎಸ್ಸಿ-ಎಸ್ಟಿ ನೌಕರರ ಸಂಘದ ರಾಜ್ಯಾಧ್ಯಕ್ಷ ಡಿ. ಚಂದ್ರಶೇಖರಯ್ಯ, ಎಂ. ಸಾವಕಯ್ಯ, ಆರ್. ನಟರಾಜ್, ನಿಸರ್ಗ ಸಿದ್ದರಾಜು, ಮಹದೇವಸ್ವಾಮಿ, ಶ್ರೀನಿವಾಸ್, ಜಗದೀಶ್, ಚಿದಂಬರಮೂರ್ತಿ, ಉತ್ತಂಬಳ್ಳಿ ನಾಗರಾಜು, ಎಸ್.ಮಹೇಶ್, ದಸಂಸ ಮುಖಂಡ ಚೋರನಹಳ್ಳಿ ಶಿವಣ್ಣ, ಕುಡ್ಲಾಪುರ ಕುಮಾರಸ್ವಾಮಿ, ಕೆ. ಎಂ. ಪುಟ್ಟು, ಮಲ್ಲಿಕಾರ್ಜುನಸ್ವಾಮಿ, ಪುಟ್ಟಸ್ವಾಮಿ, ನಂಜುಂಡ ಸ್ವಾಮಿ, ವಸಂತ್ ಕುಮಾರ್, ಸಣ್ಣಯ್ಯ ಲಕ್ಕೂರು, ಡಾ. ಶಶಿಕುಮಾರ್, ರಾಘವೇಂದ್ರ ಅಪುರಾ, ನಿರಂಜನ್, ಪ್ರಶಾಂತ್, ಸಿದ್ದರಾಜು, ಅಂತರಸಂತೆ ಮಂಚಯ್ಯ, ಡಾ. ಶ್ರೀನಿವಾಸ್ ಮಣಗಳ್ಳಿ ಕಲಾವಿದರಾದ ಆನಂದ್, ಪುನೀತ್, ಸುರೇಶ ಕಂದೇ ಗಾಲ, ಶಾಕ್ಯ ಪ್ರಕಾಶ್, ವಿಜಯ್ ಸೋನಿ, ಸಚಿನ್, ಮುಂತಾದವರು ಹಾಜರಿದ್ದರು.
ಹುಣಸೂರು: ಹಾಡಿಗಳ ಅರಣ್ಯ ಹಕ್ಕು ಸಮಿತಿಗಳ ಪ್ರತಿನಿಧಿಗಳಿಂದ ಅರಣ್ಯ ಪ್ರವೇಶ ಅಭಿಯಾನ ಹುಣಸೂರು: ತಾಲ್ಲೂಕಿನ ಆದಿವಾಸಿಗಳು ೨೦೦೬ರ ಆರಣ್ಯ ಹಕ್ಕು…
ಕೆ.ಬಿ.ರಮೇಶ ನಾಯಕ ೨೦೧೩-೧೪, ೨೦೧೪-೧೫ನೇ ಸಾಲಿನಲ್ಲಿ ಪ್ರವೇಶ ಪಡೆದು ಉತ್ತೀರ್ಣರಾದವರಿಗೆ ಪದವಿ ಪ್ರಮಾಣಪತ್ರ ಮುಕ್ತ ವಿವಿಯ ಇನ್‌ಹೌಸ್‌ನಲ್ಲಿ ಪ್ರವೇಶ ಪಡೆದಿದ್ದವರಿಗೆ…
ಕಡಿಮೆ ದರದಲ್ಲಿ ಊಟ, ತಿಂಡಿ ನೀಡುತ್ತಿದ್ದ ಕ್ಯಾಂಟೀನ್ ಮುಚ್ಚಿದ್ದರಿಂದ ಕೂಲಿ ಕಾರ್ಮಿಕರಿಗೆ, ಬಡವರಿಗೆ ತೊಂದರೆ ಎಚ್.ಡಿ.ಕೋಟೆ: ಅನೇಕ ವಿದ್ಯಾರ್ಥಿಗಳಿಗೆ, ಕೂಲಿ…
ನಾಲ್ವರು ನಿವೃತ್ತ ಪೊಲೀಸ್ ಅಧಿಕಾರಿಗಳ ನೇತೃತ್ವದ ಕ್ಷಿಪ್ರ ಕಾರ್ಯಪಡೆ ರಚನೆಗೆ ಒಪ್ಪಿಗೆ ಮೈಸೂರು: ಶಿಕ್ಷಣ, ಸಾಮಾಜಿಕ, ಆರೋಗ್ಯ ಮತ್ತಿತರ ಸೇವಾ…
ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರ ಮೈಸೂರು : ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ತಂಬಾಕು ಬೆಳೆಗಾರರ ಸಮಸ್ಯೆಗಳು ಹಾಗೂ ಮಾರಾಟ…