prathap simha
ಮೈಸೂರು: ಕನ್ನಡವನ್ನು ಭುವನೇಶ್ವರಿ ಆಗಿ ಒಪ್ಪದ ಬಾನು ಮುಷ್ತಾಕ್ ನಾಡದೇವಿ ರೂಪದಲ್ಲಿನ ಚಾಮುಂಡಿಯನ್ನು ಒಪ್ಪುತ್ತಾರಾ? ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಪ್ರಶ್ನೆ ಮಾಡಿದ್ದಾರೆ.
ಮೈಸೂರು ದಸರಾ ಉದ್ಘಾಟಕರ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಾನು ಮುಷ್ತಾಕ್ ಮುಸ್ಲಿಂ ಅನ್ನುವ ಕಾರಣಕ್ಕೆ ನಾನು ವಿರೋಧಿಸುತ್ತಿಲ್ಲ. ಟಿಪ್ಪು ಜಯಂತಿ ಮಾಡಿ ಎಂದು ಮುಸ್ಲಿಂಮರು ಕೇಳಿರಲಿಲ್ಲ. ಸಿದ್ದರಾಮಯ್ಯ ಮುಸ್ಲಿಂಮರ ಓಲೈಕೆಗಾಗಿ ಟಿಪ್ಪು ಜಯಂತಿ ಮಾಡಿದರು. ಬಾನು ಮುಷ್ತಾಕ್ ರನ್ನು ದಸರಾ ಉದ್ಘಾಟನೆಗೆ ಕರೆಯಿರಿ ಎಂದು ಯಾವ ಮುಸ್ಲಿಂ ಕೇಳಿರಲಿಲ್ಲ. ಅದರೂ ಸಿದ್ದರಾಮಯ್ಯ ಮಾಡಿದರು. ಬಾನು ಮುಷ್ತಾಕ್‌ಗೆ ನೇರವಾಗಿ ಪ್ರಶ್ನೆ ಕೇಳ್ತಿನಿ ಜನ ಸಾಹಿತ್ಯ ಭಾಷಣದಲ್ಲಿ ನಿಮ್ಮ ಭಾಷಣ ಏನಿತ್ತು?
ಮುಸ್ಲಿಂಮರು ಕನ್ನಡ ಕಲಿಯಲು ಭುವನೇಶ್ವರಿ ತಾಯಿ ಮೂರ್ತಿ ಅಡ್ಡಿಯಾಯಿತು ಎಂದು ಬಾನು ಮುಷ್ತಾಕ್ ಹೇಳಿದ್ದಾರೆ. ಭುವನೇಶ್ವರಿಗೆ ಅರಿಶಿನ ಕುಂಕುಮ ಇಟ್ಟಿದ್ದರಿಂದ ಮುಸ್ಲಿಂಮರು ಕನ್ನಡ ಕಲಿಯಲು ಆಗಿಲ್ಲ ಎಂದು ಮುಷ್ತಾಕ್ ಹೇಳಿದ್ದು ಸತ್ಯ ತಾನೇ? ಕನ್ನಡವನ್ನು ಭುವನೇಶ್ವರಿ ಆಗಿ ಒಪ್ಪದ ಬಾನು ಮುಷ್ತಾಕ್ ನಾಡದೇವಿ ರೂಪದಲ್ಲಿನ ಚಾಮುಂಡಿಯನ್ನು ಒಪ್ಪುತ್ತಾರಾ? ಎಂದು ಪ್ರಶ್ನೆ ಮಾಡಿದರು.
ಇನ್ನು ಅರಿಶಿನ ಕುಂಕುಮ ಬಗ್ಗೆ ಯಾಕೆ ಬಾನು ಮುಷ್ತಾಕ್‌ಗೆ ತಕಾರರು, ಕಿರಿಕಿರಿ ಇದೆ. ಹಿಂದೂಗಳ ಮನೆಯಲ್ಲಿ ಯಾರೇ ಸುಮಂಗಲಿ ಹೋದರು ಕುಂಕುಮ ಕೊಡುತ್ತಾರೆ. ದೇವಸ್ಥಾನಕ್ಕೆ ಹೋದರೆ ಕುಂಕುಮ ಪ್ರಸಾದವಾಗಿ ಕೊಡುತ್ತಾರೆ. ಇಂತಹ ಕುಂಕುಮವೇ ಬಾನು ಮುಷ್ತಾಕ್‌ಗೆ ಕಿರಿಕಿರಿ ಉಂಟು ಮಾಡಿದೆ. ಅರಿಶಿನ ಕುಂಕುಮ ಬಗ್ಗೆ ಬಾನು ಮುಷ್ತಾಕ್‌ಗೆ ದ್ವೇಷದ ಭಾವನೆ ಇದೆ. ನೀವು ನಂಬಿರುವ ನಿಮ್ಮ ಅಲ್ಲಾ ನಿಮ್ಮನ್ನು ಮಸೀದಿಗೆ ಕರೆಸಿಕೊಳ್ಳುವುದಿಲ್ಲ. ನಮ್ಮ ದೇವರು ಹೇಗೆ ಕರೆಸಿಕೊಳ್ಳುತ್ತಾರೆ? ತಮಿಳುನಾಡಿನಲ್ಲಿ ಮುಸ್ಲಿಂಗೆ ಮಾತೃ ಭಾಷೆ ತಮಿಳು. ಕರ್ನಾಟಕದಲ್ಲಿ ಯಾಕೆ ಮುಸ್ಲಿಂರಿಗೆ ಮಾತೃ ಭಾಷೆ ಕನ್ನಡ ಆಗಲ್ಲ? ತಲೆ ಮಾಸಿದ ಕಾಂಗ್ರೆಸ್ ನಾಯಕರು ನನಗೂ ಪ್ರಶ್ನೆ ಮಾಡಿದ್ದಾರೆ. ಇಸ್ಲಾಂ, ಕಿಶ್ಚಿಯನ್ ಅಕ್ರಮಣಕಾರಿ ಆಗಿ ಭಾರತಕ್ಕೆ ಬಂದವರು. ನಮ್ಮ ಆಚಾರ, ವಿಚಾರ, ಸಂಸ್ಕೃತಿ ಒಡೆದು ಹಾಕಲು ಯತ್ನಿಸಿದ್ದು ಘಜ್ನಿ, ಮೊಘಲರು. ಇದೇ ರೀತಿ ನಮ್ಮ ನಂಬಿಕೆಯನ್ನು ಬಾನು ಮುಷ್ತಾಕ್ ಒಡೆಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇನ್ನು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ಸ್ವಾಗತಿಸಿದ ಸಂಸದ ಯದುವೀರ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷರು, ವಿಪಕ್ಷ ನಾಯಕರು ಏನೂ ಮಾತಾಡ್ತಾರಾ ಅದೇ ನಮ್ಮ ಮಾತು. ಅದೇ ನಮ್ಮ ನಿಲುವು. ನಮ್ಮ ಪಕ್ಷದ ನಿಲುವನ್ನೆ ನಾನು ಮಾತಾಡಿದ್ದೇನೆ. ಮೈಸೂರಿಗರಿಗೆ ಒಂದು ಪ್ರಶ್ನೆ ಕೇಳ್ತಿನಿ ಭುವನೇಶ್ವರಿ ಬಗ್ಗೆ ಅವಮಾನಕಾರಿಯಾಗಿ ಮಾತಾಡಿದ ಬಾನು ಮುಷ್ತಾಕ್ ದಸರಾ ಉದ್ಘಾಟಿಸಬೇಕಾ? ಜನರೆ ಹೇಳಲಿ ಎಂದರು.
ಹನೂರು : ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿರುವ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು…
ಶಿವಮೊಗ್ಗ: ಕಾಂಗ್ರೆಸ್ ಸೋತಿರುವ 84 ವಿಧಾನಸಭಾ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ಸಂಘಟನೆ ಬಲಪಡಿಸಲು ಪಾದಯಾತ್ರೆ ಆರಂಭಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷ ಬಿ.ಕೆ.…
ಹನೂರು: ಚಾಮರಾಜನಗರ ಎಂದರೆ ನನಗೆ ಬಲು ಪ್ರೀತಿ, ನನ್ನ ಕ್ಷೇತ್ರದ ಪಕ್ಕದಲ್ಲೇ ಚಾಮರಾಜನಗರ ಜಿಲ್ಲೆ ಇದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕು ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕಳೆದ ಎರಡು ದಿನಗಳಿಂದ ಹನೂರು ತಾಲೂಕಿನಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಗೆ…
ಜನರ ಹಿತ ಕಾಯಲಿ! ನಕಲಿ ವೈದ್ಯರು, ಕಲಬೆರಿಕೆ ಔಷಧದ ಹಾವಳಿಯಿಂದ ಜನ ಬೇಸ್ತುಬಿದ್ದಿರುವಾಗ ನೈಜ ದರಕ್ಕಿಂತ ಅತ್ಯಧಿಕ ದರಕ್ಕೆ ಔಷಧಿ ಮಾರಾಟ…