ಅಂತಾರಾಷ್ಟ್ರೀಯ

ಹಮಾಸ್‌ ನಾಶದ ಹೊರತು ಗಾಜಾ ಯುದ್ಧ ಕೊನೆಗೊಳ್ಳುವುದಿಲ್ಲ: ನೆತನ್ಯಾಹು

ಗಾಜಾ: ಇಸ್ರೇಲ್‌- ಹಮಾಸ್‌ ಬಂಡುಕೋರರ ನಡುವಿನ ಯುದ್ಧ ನಿಲ್ಲುವುದು ಇಸ್ರೇಲ್‌ ತನ್ನೆಲ್ಲಾ ಗುರಿಗಳನ್ನು ನಿರ್ದಿಷ್ಟವಾಗಿ ಸಾಧಿಸುವವರೆಗೆ, ಹಮಾಸ್‌ ನಾಶವಾಗದ ಹೊರತು ಗಾಜಾ ಯುದ್ದ ಕೊನೆಗೊಳ್ಳುವುದಿಲ್ಲ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ತಿಳಿಸಿದ್ದಾರೆ.

ಮೂರು ತಿಂಗಳ ಹಿಂದೆ ಹಮಾಸ್‌ ನಮ್ಮ ಮೇಲೆ ಭೀಕರ ಹತ್ಯಾಕಾಂಡ ನಡೆಸಿದೆ ಎಂದು ಅವರು ತಮ್ಮ ಹೇಳಿಕೆಯಲ್ಲಿ ವಿವರಿಸಿದ್ದಾರೆ.

ಹಮಾಸ್‌ನ್ನು ನಾಶಗೊಳಿಸಿ ನಮ್ಮ ಒತ್ತೆಯಾಳುಗಳನ್ನು ಮರಳಿ ಕರೆತರಲಾಗುವುದು ಮತ್ತು ಗಾಜಾದಿಂದ ಇಸ್ರೇಲ್‌ಗೆ ಎಂದಿಗೂ ತೊದರೆಯಾಗದಂತೆ ನೋಡಿಕೊಳ್ಳುವುದಕ್ಕಾಗಿ ಇಸ್ರೇಲ್‌ ಸರ್ಕಾರ ರಕ್ಷಣಾ ಪಡೆಗೆ ನಿರ್ದೇಶನ ನೀಡಿದೆ. ನಮ್ಮ ಗುರಿಯನ್ನು ನಿರ್ದಿಷ್ಟವಾಗಿ ಸಾಧಿಸುವವರೆಗೆ ಯುದ್ಧ ನಿಲ್ಲಿಸುವುದಿಲ್ಲ ಎಂದು ಅವರು ವಿವರಿಸಿದ್ದಾರೆ.

ಈ ಯುದ್ಧದಲ್ಲಿ ಹಮಾಸ್‌ಗೆ ಯಾವುದೇ ವಿನಾಯಿತಿಯನ್ನು ನೀಡುವುದಿಲ್ಲ. ಇಲ್ಲಿ ಭದ್ರತೆಯನನು ಮರು ಸ್ಥಾಪಸುವವರೆಗೆ ಹೋರಾಟ ನಿಲ್ಲುವುದಿಲ್ಲ. ಯುದ್ಧದಲ್ಲಿ ಸಂಪೂರ್ಣವಾಗಿ ಜು ಸಾಧಿಸುವವರೆಗೆ ಬೇರೆ ಎಲ್ಲವನ್ನೂ ಬದಿಗಿಡಬೇಕು ಮತ್ತು ಸೇನೆಯೊಂದಿಗೆ ನಾವು ಮುಂದುವರೆಯಬೇಕು ಎಂದು ಅವರು ಹೇಳಿದ್ದಾರೆ.

andolanait

Share
Published by
andolanait
Tags: gazaisreal

Recent Posts

ಬೆಂಜಮಿನ್‌ ನೆತನ್ಯಾಹುಗೆ ಪ್ರಾಸ್ಟೇಟ್‌ ಕ್ಯಾನ್ಸರ್:‌ ಪ್ರಾರಂಭಿಕ ಹಂತದಲ್ಲೇ ಚಿಕಿತ್ಸೆ

ಇಸ್ರೇಲ್:‌ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರು ತಮ್ಮ ಆರೋಗ್ಯದ ಕುರಿತು ಮಾಹಿತಿ ಬಹಿರಂಗಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು,…

12 mins ago

ಮುಂದಿನ ಎರಡು ತಿಂಗಳು ಕುಡಿಯುವ ನೀರಿಗೆ ಸಮಸ್ಯೆ: ಸಚಿವ ಪ್ರಿಯಾಂಕ್‌ ಖರ್ಗೆ

ಬೆಂಗಳೂರು: ಮುಂದಿನ ಎರಡು ತಿಂಗಳು ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.…

25 mins ago

ಅಲ್ಪಸಂಖ್ಯಾತರಿಗೆ ಕಾಂಗ್ರೆಸ್‌ನಿಂದ ಅನ್ಯಾಯ : ಕಾಂಗ್ರೆಸ್‌ಗೆ ಎಚ್ಚರಿಕೆ ನೀಡಿದ ಮುಸ್ಲಿಂ ಧರ್ಮಗುರುಗಳು

ಮಂಡ್ಯ : ರಾಜ್ಯ ಕಾಂಗ್ರೆಸ್‌ನಲ್ಲಿ ಅಲ್ಪಸಂಖ್ಯಾತ ನಾಯಕರ ವಿರುದ್ಧ ಕೈಗೊಂಡ ಶಿಸ್ತು ಕ್ರಮ ಇದೀಗ ಭಾರಿ ರಾಜಕೀಯ ಚರ್ಚೆಗೆ ಕಾರಣವಾಗಿದೆ.…

33 mins ago

ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿದ ಪ್ರಕರಣ: ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದ ಬ್ರಾಹ್ಮಣ ಮಹಾಸಭಾ

ಬೆಂಗಳೂರು: ಸಿಇಟಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆದ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ಬ್ರಾಹ್ಮಣ ಮಹಾಸಭಾ ಪತ್ರ…

45 mins ago

ತಂದೆ ಕೆಸಿಆರ್‌ಗೆ ಸೆಡ್ಡು: ಹೊಸ ಟಿಆರ್‌ಎಸ್‌ ಪಕ್ಷ ಸ್ಥಾಪಿಸಿದ ಕವಿತಾ

ಹೈದರಾಬಾದ್: ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಪುತ್ರಿ ಮತ್ತು ಮಾಜಿ ಸಂಸದೆ ಕೆ.ಕವಿತಾ ತಮ್ಮ ಹೊಸ ರಾಜಕೀಯ…

1 hour ago

ಮದ್ದೂರು ಉತ್ಸವಕ್ಕೆ ವಿಧ್ಯುಕ್ತ ಚಾಲನೆ

ಮದ್ದೂರು : ಐತಿಹಾಸಿಕ ಮದ್ದೂರು ಉತ್ಸವ-2026ಕ್ಕೆ ಮಂಡ್ಯ ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಇಂದು…

1 hour ago