ಅಂತಾರಾಷ್ಟ್ರೀಯ

ಗಾಜಾ ಆಸ್ಪತ್ರೆ ಸ್ಫೋಟ: ಇಸ್ರೇಲ್-ಹಮಾಸ್ ನಡುವೆ ಆರೋಪ-ಪ್ರತ್ಯಾರೋಪ

ಟೆಲ್ ಅವಿವ್ : ಗಾಜಾದಲ್ಲಿನ ಆಸ್ಪತ್ರೆಯಲ್ಲಿ ಮಂಗಳವಾರ ಸಂಭವಿಸಿದ ಭಾರಿ ಸ್ಫೋಟದಲ್ಲಿ ಕನಿಷ್ಠ 500 ಜನರು ಮೃತಪಟ್ಟಿದ್ದಾರೆ ಎಂದು ಹಮಾಸ್ ಆಡಳಿತದ ಆರೋಗ್ಯ ಸಚಿವಾಲಯದ ಮೂಲಗಳನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.

ಈ ಘಟನೆ ಭಾರಿ ಆಕ್ರೋಶಕ್ಕೆ ಗುರಿಯಾಗಿದೆ. ಇಸ್ರೇಲಿ ವಾಯುದಾಳಿಯು ಅಮಾಯಕರನ್ನು ಕೊಂದಿದೆ ಎಂದು ಸ್ಥಳೀಯ ಅಧಿಕಾರಿಗಳು ಆರೋಪಿಸಿದ್ದರೆ, ಹಮಾಸ್ ಉಗ್ರರ ರಾಕೆಟ್ ದಾಳಿ ಕೈಕೊಟ್ಟು ಈ ಅವಘಡ ಸಂಭವಿಸಿದೆ ಎಂದು ಇಸ್ರೇಲ್ ಪ್ರತ್ಯಾರೋಪ ಮಾಡಿದೆ.

“ಈ ಘಟನೆಗೆ ಇಸ್ಲಾಮಿಕ್ ಜಿಹಾದ್ ಕಾರಣವಾಗಿದ್ದು, ಅದು ಉಡಾಯಿಸಿದ ರಾಕೆಟ್ ವಿಫಲಗೊಂಡು ಗಾಜಾದ ಆಸ್ಪತ್ರೆಗೆ ಅಪ್ಪಳಿಸಿದೆ ಎಂಬುದನ್ನು ವಿವಿಧ ಮೂಲಗಳ ಗುಪ್ತಚರ ಮಾಹಿತಿಗಳು ತಿಳಿಸಿವೆ” ಎಂದು ಇಸ್ರೇಲ್ ಸೇನೆ ಹೇಳಿದೆ.

ಈ ಘಟನೆ ಸಂದರ್ಭದಲ್ಲಿ ಇಸ್ರೇಲ್ ಆಸ್ಪತ್ರೆ ಸಮೀಪ ಯಾವುದೇ ವೈಮಾನಿಕ ಕಾರ್ಯಾಚರಣೆ ನಡೆಸುತ್ತಿರಲಿಲ್ಲ ಹಾಗೂ ಅಲ್ಲಿ ಬಳಸಿದ ರಾಕೆಟ್‌ಗಳು ತಮ್ಮ ಸಾಧನಕ್ಕೆ ಹೋಲಿಕೆಯಾಗುತ್ತಿಲ್ಲ ಎಂದು ವಕ್ತಾರ ಡೇನಿಯಲ್ ಹಗಾರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹಮಾಸ್ ಉಗ್ರ ಸಂಘಟನೆಯ ಮಿತ್ರ ಗುಂಪು ಇಸ್ಲಾಮಿಕ್ ಜಿಹಾದ್ ಕೂಡ ಹೇಳಿಕೆ ಬಿಡುಗಡೆ ಮಾಡಿದೆ. “ಗಾಜಾದಲ್ಲಿನ ಬ್ಯಾಪ್ಟಿಸ್ಟ್ ಅರಬ್ ನ್ಯಾಷನಲ್ ಆಸ್ಪತ್ರೆಯ ಮೇಲೆ ಬಾಂಬ್ ದಾಳಿ ಮೂಲಕ ನಡೆಸಿದ ಬರ್ಬರ ಹತ್ಯಾಕಾಂಡದಲ್ಲಿನ ತನ್ನ ಹೊಣೆಗಾರಿಕೆಯಿಂದ ಸುಳ್ಳುಗಳ ಹೆಣಿಗೆಗಳ ಮೂಲಕ ಹಾಗೂ ಪ್ಯಾಲೆಸ್ಟೀನ್‌ನ ಇಸ್ಲಾಮಿಕ್ ಜಿಹಾದ್ ಚಳವಳಿಯ ಕಡೆ ಬೆರಳು ತೋರಿಸುವ ಮೂಲಕ ತಪ್ಪಿಸಿಕೊಳ್ಳಲು ಜಿಯೋನಿಸ್ಟ್ ಶತ್ರು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ” ಎಂದು ಅದು ಆರೋಪಿಸಿದೆ.

ದಾಳಿಗೆ ವ್ಯಾಪಕ ಖಂಡನೆ : ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಇಸ್ರೇಲ್‌ಗೆ ಭೇಟಿ ನೀಡುತ್ತಿರುವ ಸಂದರ್ಭದಲ್ಲಿಯೇ ಈ ಭಯಾನಕ ದಾಳಿ ನಡೆದಿದೆ. “ಗಾಜಾದಲ್ಲಿನ ಅಲ್- ಅಹ್ಲಿ ಅರಬ್ ಆಸ್ಪತ್ರೆಯಲ್ಲಿ ನಡೆದ ಸ್ಫೋಟ ಮತ್ತು ಅದರ ಪರಿಣಾಮ ಉಂಟಾದ ಭಾರಿ ಜೀವ ಹಾನಿಯಿಂದ ನನಗೆ ಆಕ್ರೋಶ ಹಾಗೂ ದುಃಖ ಉಂಟಾಗಿದೆ” ಎಂದು ಬೈಡನ್ ಹೇಳಿಕೆ ನೀಡಿದ್ದಾರೆ.

ಈ ಭೀಕರ ವಾಯು ದಾಳಿಯನ್ನು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಬಲವಾಗಿ ಖಂಡಿಸಿದ್ದಾರೆ. ಇದು ‘ಭಯಾನಕ ದಾಳಿ’ ಎಂದಿದ್ದಾರೆ. “ಸಂತ್ರಸ್ತರ ಕುಟುಂಬದವರಿಗಾಗಿ ನನ್ನ ಹೃದಯ ಮಿಡಿಯುತ್ತಿದೆ. ಆಸ್ಪತ್ರೆಗಳು ಮತ್ತು ವೈದ್ಯಕೀಯ ಸಿಬ್ಬಂದಿಯು ಅಂತಾರಾಷ್ಟ್ರೀಯ ಮಾನವೀಯ ಕಾನೂನಿನ ಅಡಿ ರಕ್ಷಣೆ ಹೊಂದಿವೆ” ಎಂದು ಗುಟೆರಸ್ ಹೇಳಿದ್ದಾರೆ.

ಬೈಡನ್ ಜತೆಗಿನ ಸಭೆ ರದ್ದು : ಆಸ್ಪತ್ರೆ ಮೇಲಿನ ಬಾಂಬ್ ದಾಳಿ ವಿರೋಧಿಸಿ ಇರಾನ್‌ನ ಟೆಹರಾನ್‌ನಲ್ಲಿನ ಬ್ರಿಟನ್ ಮತ್ತು ಫ್ರಾನ್ಸ್ ರಾಯಭಾರ ಕಚೇರಿಗಳ ಹೊರಗೆ ನೂರಾರು ಮಂದಿ ಪ್ರತಿಭಟನೆ ನಡೆಸಿದ್ದಾರೆ. ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ, ಒಂದು ದಿನದ ಸಾರ್ವಜನಿಕ ಶೋಕ ಪ್ರಕಟಿಸಿದ್ದಾರೆ. ದಾಳಿಗೆ ಇಸ್ರೇಲ್ ಮತ್ತು ಅಮೆರಿಕ ಕಾರಣ ಎಂದು ದೂಷಿಸಿದ್ದಾರೆ.

“ಗಾಜಾದ ಆಸ್ಪತ್ರೆಯಲ್ಲಿನ ಪ್ಯಾಲೆಸ್ಟೀನ್ ಸಂತ್ರಸ್ತರನ್ನು ಗಾಯಗೊಳಿಸಿದ ಅಮೆರಿಕ- ಇಸ್ರೇಲ್ ಬಾಂಬ್‌ಗಳ ಜ್ವಾಲೆಗಳು ಜಿಯೋನಿಸ್ಟ್‌ಗಳನ್ನು ಶೀಘ್ರದಲ್ಲಿಯೇ ಆಹುತಿ ಪಡೆಯಲಿದೆ” ಎಂದಿದ್ದಾರೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜತೆ ಜೋ ಬೈಡನ್ ಮಾತುಕತೆ ನಡೆಸಿದ್ದಾರೆ. ಆದರೆ ಬುಧವಾರ ಬೈಡನ್ ಜತೆ ಅಮ್ಮಾನ್‌ನಲ್ಲಿ ನಿಗದಿಯಾಗಿದ್ದ ಪ್ರಾದೇಶಿಕ ಸಭೆಯನ್ನು ಜೋರ್ಡಾನ್ ರದ್ದುಗೊಳಿಸಿದೆ. ಜೋರ್ಡಾನ್ ರಾಜ ಅಬ್ದುಲ್ಲಾ II, ಪ್ಯಾಲೆಸ್ಟೀನ್ ಅಧ್ಯಕ್ಷ ಮಹಮೌದ್ ಅಬ್ಬಾಸ್, ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾಹ್ ಎಲ್ ಸಿಸ್ಸಿ ಅವರು ಬೈಡನ್ ಜತೆಗಿನ ಸಭೆಯಲ್ಲಿ ಪಾಲ್ಗೊಳ್ಳಬೇಕಿತ್ತು.

andolanait

Share
Published by
andolanait

Recent Posts

ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಲು ಯತ್ನಿಸಿದ್ದರು: ಸಿಎಂ ಡಿಕೆಶಿ ಬಾಂಬ್

ಬೆಂಗಳೂರು: ತಮ್ಮ ವಿರುದ್ಧವೂ ಸ್ಟಿಂಗ್ ಆಪರೇಷನ್ ನಡೆಸಲು ಸಂಚು ರೂಪಿಸಲಾಗಿತ್ತು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.…

13 hours ago

ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಶಾಕ್!

ನವದೆಹಲಿ: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ…

14 hours ago

ಎಸ್‌ಐಆರ್‌ ವಿರುದ್ಧ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

ಬೆಂಗಳೂರು: ದೇಶಾದ್ಯಂತ ತೀವ್ರ ವಿವಾದ ಸೃಷ್ಟಿಸಿರುವ ಮತದಾರರ ಪಟ್ಟಿ ಪರಿಷ್ಕರಣೆ(ಎಸ್‍ಐಆರ್) ಸಂಬಂಧ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‍ಕುಮಾರ್ ವಜಾ ಮತ್ತು…

15 hours ago

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌ಗೆ ಮತ್ತೆ ಶಾಕ್‌

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ಗೆ ಕಾನೂನು ಸಂಕಷ್ಟಗಳು ಮತ್ತಷ್ಟು ಬಿಗಿಯಾಗುತ್ತಿವೆ.…

15 hours ago

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ: 75ನೇ ವಯಸ್ಸಿನಲ್ಲಿ ನಿಧನ

ಮುಂಬೈ: ಬಾಲಿವುಡ್ ಚಿತ್ರರಂಗಕ್ಕೆ ಆಘಾತಕಾರಿ ಸುದ್ದಿ. ಹಿರಿಯ ನಟ ನಾನಾ ಪಾಟೇಕರ್ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಗೋವಾದ…

18 hours ago

ಓದುಗರ ಪತ್ರ: ಪಿಎಚ್‌ಸಿಗಳಲ್ಲಿ ಬಿಪಿ, ಶುಗರ್ ಮಾತ್ರೆಗಳು ಸಿಗುವಂತೆ ಕ್ರಮ ಕೈಗೊಳ್ಳಿ

ಮೈಸೂರು ಜಿ ಎಚ್.ಡಿ.ಕೋಟೆ ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶುಗರ್ ಮತ್ತು ಬಿಪಿಗೆ ಹಾಗೂ ಇತರೆ ಕಾಯಿಲೆಗಳಿಗೆ ಸಂಬಂಧಪಟ್ಟ…

19 hours ago