ಅಂತಾರಾಷ್ಟ್ರೀಯ

ವಿಮಾನ ದುರಂತ: ಕಝಾಕಿಸ್ತಾನದಲ್ಲಿ ಪ್ರಯಾಣಿಕರಿದ್ದ ವಿಮಾನ ಪತನ

ಮಾಸ್ಕೋ:ಅಜರ್‌ಬೈಜಾನ್‌ನಿಂದ ರಷ್ಯಾಕ್ಕೆ ತೆರಳುತ್ತಿದ್ದ ಎಂಬ್ರೆಯರ್‌ ಪ್ರಯಾಣಿಕ ವಿಮಾನವೊಂದು ಕಝಾಕಿಸ್ತಾನದ ಅಕ್ಟೌ ನಗರದ ಸಮೀಪದಲ್ಲಿ ಪತನಗೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ವಿಮಾನ ಅಜರ್‌ಬೈಜಾಣ್‌ ಏರ್‌ಲೈನ್ಸ್‌ ನಿರ್ವಹಿಸುತ್ತಿದ್ದ ವಿಮಾನ ಇದಾಗಿದ್ದು, ಐವರು ಸಿಬ್ಬಂದಿಯೊಂದಿಗೆ ಅಂದಾಜು 67 ಮಂದಿ ಪ್ರಯಾಣಿಸುತ್ತಿದ್ದರು.ಇದು ಅಜೆರ್‌ಬೈಜಾನ್‌ನ ರಾಜಧಾನಿ ಬಾಕುವಿನಿಂದ ರಷ್ಯಾದ ಚೆಚೆನ್ಯಾದ ಗ್ರೋಜ್ನಿಗೆ ಸಂಚಾರ ಮಾಡುತ್ತಿತ್ತು. ಆದರೆ ಅಕ್ಟೌ ನಗರದಿಂದ ಸರಿಸುಮಾರು 3 ಕಿ.ಮೀ.ಇರುವಾಗ
ಗ್ರೋಜ್ನಿಯ ಮಂಜಿನಿಂದಾಗಿ ತನ್ನ ಸ್ಥಳ ಮಾರ್ಗವನ್ನು ಬದಲಾಯಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಇನ್ನು ವಿಮಾನ ನಿಲ್ದಾಣದ ಸಮೀಪದಲ್ಲೇ ತೆರೆದ ಮೈದಾನದಲ್ಲಿ ವಿಮಾನವನ್ನು ಲ್ಯಾಂಡ್‌ ಮಾಡಲಾಗಿದ್ದು, ನೆಲಕ್ಕೆ ಅಪ್ಪಳಿಸುತ್ತಿದ್ದಂತೆ ತಕ್ಷಣವೇ ಬೆಂಕಿ ಹೊತ್ತಿಕೊಂಡಿದೆ. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿಯವರು ಬೆಂಕಿಯನ್ನು ಆರಿಸಿದ್ದಾರೆ. ಹೀಗಾಗಿ ವಿಮಾನದ ಹಿಂಭಾಗದ ತುದಿಯಲ್ಲಿರುವ ತುರ್ತು ನಿರ್ಗಮನದಿಂದ ಪ್ರಯಾಣಿಕರನ್ನು ಡಿಬೋರ್ಡಿಂಗ್‌ ಮಾಡಲಾಗಿದೆ. ಆದರೆ ಈ ವಿಮಾನದಲ್ಲಿ ಪ್ರಯಾಣಿಕರಲ್ಲಿ 12 ಮಂದಿ ಬದುಕುಳಿದ್ದಾರೆ ಎಂಬ ಮಾಹಿತಿಯನ್ನು ಕಝಾಕಿಸ್ತಾನದ ತುರ್ತು ಸಚಿವಾಲಯ ತನ್ನ ಹೇಳಿಕೆಯಲ್ಲಿ ಪ್ರಕಟಿಸಿದೆ.

ಅರ್ಚನ ಎಸ್‌ ಎಸ್

Share
Published by
ಅರ್ಚನ ಎಸ್‌ ಎಸ್

Recent Posts

ಅಡುಗೆ ಅನಿಲ ಸೋರಿಕೆಯಾಗಿ ಅಗ್ನಿ ಅವಘಡ: ದಂಪತಿಗೆ ಗಂಭೀರ ಗಾಯ

ಚಾಮರಾಜನಗರ: ಅಡುಗೆ ಅನಿಲ ಸೋರಿಕೆಯಾಗಿ ಅಗ್ನಿ ಅವಘಡ ಸಂಭವಿಸಿದ ಪರಿಣಾಮ ದಂಪತಿಗೆ ಗಂಭೀರ ಗಾಯಗಳಾಗಿರುವ ಘಟನೆ ಚಾಮರಾಜನಗರದ ರೈಲ್ವೆ ಬಡಾವಣೆಯಲ್ಲಿ…

15 mins ago

ಕನ್ನಡ ಶಾಲೆಗಳ ಉಳಿವಿಗೆ ಆಗ್ರಹಿಸಿ ವಾಟಾಳ್‌ ನಾಗರಾಜ್‌ ಪ್ರತಿಭಟನೆ

ಮಂಡ್ಯ: ರಾಜ್ಯದಲ್ಲಿರುವ ಕನ್ನಡ ಶಾಲೆಗಳನ್ನು ಉಳಿಸುವಂತೆ ಆಗ್ರಹಿಸಿ ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಪ್ರತಿಭಟನೆ ನಡೆಸಿದರು. ಮಂಡ್ಯ ಜಿಲ್ಲಾಧಿಕಾರಿ ಕಚೇರಿ…

24 mins ago

ನಾಳೆ ಕೇರಳ, ತಮಿಳುನಾಡಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ

ಕೇರಳ: ಕೇರಳ ಮತ್ತು ತಮಿಳುನಾಡು ಚುನಾವಣೆಗೆ ದಿನಾಂಕ ಘೋಷಣೆಯಾಗಲು ಕೆಲವೇ ದಿನಗಳು ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಮಾರ್ಚ್.‌11ರಂದು ಪ್ರಧಾನಿ…

25 mins ago

ಬಂಡೀಪುರ: ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಹುಲಿಗಳ ದರ್ಶನ

ಗುಂಡ್ಲುಪೇಟೆ: ಸೋಮವಾರ ಬೆಳಗ್ಗೆ ಬಂಡೀಪುರದ ಸಫಾರಿಗೆ ಹೋಗಿದ್ದ ಪ್ರವಾಸಿಗರು ಏಕಕಾಲದಲ್ಲಿ ಸಫಾರಿಗೆ ತೆರಳಿದ್ದ ವೇಳೆ ಕಿರುಬನ ಕೊಳಚಿ ಕೆರೆಯಲ್ಲಿ ಒಂದು…

1 hour ago

ಹನೂರು: ಬೆಟ್ಟಳ್ಳಿ ಮಾರಮ್ಮ ದೇವಸ್ಥಾನಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜು ಭೇಟಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು  ಹನೂರು: ಪಟ್ಟಣದಲ್ಲಿ ನಡೆಯುತ್ತಿರುವ ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವದ ಪ್ರಯುಕ್ತ…

1 hour ago

ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವ: ವಿಜೃಂಭಣೆಯಿಂದ ನಡೆದ ತಂಪುಜ್ಯೋತಿ ಹಾಗೂ ರಥೋತ್ಸವ

ಮಹಾದೇಶ್ ಎಂ.ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಪಟ್ಟಣದ ಗ್ರಾಮದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವದ ಎರಡನೇ ದಿನ…

2 hours ago