ಜೆರುಸಲೇಮ್ : ಹಮಾಸ್ ಉಗ್ರರ ಮೇಲೆ ಯುದ್ಧ ತೀವ್ರಗೊಳಿಸಿರುವ ಇಸ್ರೇಲ್, ಗಾಜಾ ಪಟ್ಟಿಯಲ್ಲಿ ನಿರಂತರ ಏರ್‌ಸ್ಟ್ರೈಕ್ ನಡೆಸುತ್ತಿದೆ. ಹಮಾಸ್ ಉಗ್ರರ ಬಿಲಗಳನ್ನು ಹುಡುಕಿ ಹುಡುಕಿ ಧ್ವಂಸ ಮಾಡುತ್ತಿದೆ. ಆದರೆ ಇಸ್ರೇಲ್ ಹೆಜ್ಜೆ ಹೆಜ್ಜೆಗೂ ಹಮಾಸ್ ಉಗ್ರರು ನಡೆಸುತ್ತಿರುವ ಭೀಕರತೆಗೆ ಬೆಚ್ಚಿ ಬೀಳುತ್ತಿದೆ. ಇಸ್ರೇಲ್ ಮಾತ್ರವಲ್ಲ ಜಗತ್ತೇ ಹಮಾಸ್ ಉಗ್ರರ ಕ್ರೂರಿ ವರ್ತನೆಗೆ ಮರುಗುತ್ತಿದೆ. ನಿರಂತರ ಪ್ರತಿದಾಳಿ ನಡೆಸುತ್ತಿರುವ ಇಸ್ರೇಲ್ ವಿರುದ್ಧ ಪ್ರತೀಕಾರಕ್ಕೆ ಹಮಾಸ್ ಉಗ್ರರು 40 ಇಸ್ರೇಲ್ ಮಕ್ಕಳ ಶಿರಚ್ಛೇಧ ಮಾಡಿದ್ದಾರೆ ಎಂದು ಇಸ್ರೇಲ್ ಮಾಧ್ಯಮ ವರದಿ ಮಾಡಿದೆ. ಈ ಕುರಿತು ವಿಡಿಯೋಗಳು ಬಹಿರಂಗವಾಗಿದೆ.
ಇಸ್ರೇಲ್ ಒಳ ನುಗ್ಗಿ ಹಮಾಸ್ ಉಗ್ರರು ಶನಿವಾರದಿಂದ ನಡೆಸಿರುವ ಭೀಕರ ಹತ್ಯೆಯಲ್ಲಿ 40 ಮಕ್ಕಳ ಶಿರಚ್ಚೇಧ ಮಾಡಿರುವ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಇಸ್ರೇಲ್ ಸೈನಿಕರು ಕಾರ್ಯಾಚರಣೆಯಲ್ಲಿ ಹಲವು ಭಾಗದಲ್ಲಿ ಮಕ್ಕಳು, ಪೋಷಕರು ಸೇರಿದಂತೆ ಕುಟುಂಬಗಳನ್ನೇ ಹತ್ಯೆ ಮಾಡಿರುವ ಘಟನೆಗಳೇ ಎದುರಾಗುತ್ತಿದೆ. ಇಸ್ರೇಲ್ ಮನೆಗಳ ಮೇಲೆ ದಾಳಿ ಮಾಡಿದ ಹಮಾಸ್ ಉಗ್ರರು ಶಿರಚ್ಚೇಧ ಮಾಡಿದ್ದಾರೆ. ಇದರಲ್ಲಿ 40ಕ್ಕೂ ಹೆಚ್ಚು ಮಕ್ಕಳೇ ಇದ್ದಾರೆ.
ಎಳೆ ಹಸಗೂಸು, ಒಂದು ವರ್ಷದಿಂದ 14 ವರ್ಷದ ಮಕ್ಕಳನ್ನೂ ಬಿಡದೇ ಶಿರಚ್ಛೇಧ ಮಾಡಲಾಗಿದೆ. ಇನ್ನು ಹೆಣ್ಣು ಮಕ್ಕಳು, ಮಹಿಳೆಯರು ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಹಲವು ಕುಟುಂಬಗಳು ತಮ್ಮ ಮಕ್ಕಳನ್ನು ರಕ್ಷಣೆ ಮಾಡಲು ಹೋಗಿ ತಾವೇ ಹಮಾಸ್ ಉಗ್ರರ ಗುಂಡೇಟಿಗೆ ಬಲಿಯಾಗಿದ್ದಾರೆ. ಇನ್ನು ಈ ಮಕ್ಕಳನ್ನು ಹಮಾಸ್ ಉಗ್ರರು ಶಿರಚ್ಚೇಧ ಮಾಡಿದ್ದಾರೆ.
900 ಇಸ್ರೇಲ್ ನಾಗರೀಕರನ್ನು ಹಮಾಸ್ ಉಗ್ರರು ಹತ್ಯೆ ಮಾಡಿದ್ದಾರೆ. 2,600 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇಸ್ರೇಲ್ ಒಳಗೆ ಹಮಾಸ್ ಉಗ್ರರು ನಡೆಸಿದ ಭೀಕರತೆ ಅಮೆರಿಕ ಕೆರಳಿದೆ. ಅಮೆರಿಕ ಆಪರೇಶನ್ ಫೋರ್ಸ್ ಇದೀಗ ಇಸ್ರೇಲ್‌ಗೆ ಬಂದಿಳಿದಿದೆ. ಕಾರ್ಯಾಚರಣೆ ತೀವ್ರಗೊಳ್ಳುತ್ತಿದೆ. ಗಾಜಾದ ಮೇಲಿನ ದಾಳಿ ಜೊತೆಗೆ ಇಸ್ರೇಲ್ ಒಳಗಿರುವ ಹಮಾಸ್ ಉಗ್ರರ ಸದೆಬಡಿಯಲು ಕಾರ್ಯಾಚರಣೆ ತೀವ್ರಗೊಂಡಿದೆ.
ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಾಣಿಗಳಿಗೆ ಕುಡಿಯುವ ನೀರಿನ ಸಮಸ್ಯೆಗೆ ಈಗ ಬ್ರೇಕ್ ಹಾಕಲಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಅರಣ್ಯಾಧಿಕಾರಿಗಳು…
ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಜೀವ ರಕ್ಷಕ ಔಷಧಿಗಳ ಕೊರತೆಯಿರುವುದು ನಿಜ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.…
ಬೆಂಗಳೂರು: ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ನಟಿ ರನ್ಯಾರಾವ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು, ಡಿಐಆರ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದೇಗೆ ಎಂಬ…
ಹಾಸನ: ಕೌಟುಂಬಿಕ ಕಲಹದಿಂದ ಬೇಸತ್ತು ತಾಯಿ-ಮಗ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಕಬ್ಬಳ್ಳಿ…
ಬೆಂಗಳೂರು: ಗ್ರೇಟರ್ ಬೆಂಗಳೂರು ವಿಧೇಯಕಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸಂಪೂರ್ಣ ವಿರೋಧ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಈ…
ಸಮತೋಲನದ ಬಜೆಟ್!... ಮೂಡಿ ಬಂದಿದೆ ಸರ್ವರ ಹಿತ ಏಳ್ಗೆಯ ಕರ್ನಾಟಕದ ಮಾದರಿ ಜನಪರ ಬಜೆಟ್! ಮುಖ್ಯಮಂತ್ರಿಗಳ ಅನುಭವದ ಮೂಸೆಯಲಿ ಸುಸ್ಥಿರ…