ಬೆಂಗಳೂರು: ಎಲ್ಲರಂತೆ ನಮಗೂ ಕಷ್ಟ ಬರುತ್ತದೆ, ಯುವ ಹಾಗೂ ವಿನಯ್ ತಲೆ ಬಗ್ಗಿಸಿಕೊಂಡು ನಡೆಯಬೇಕು ಎಂದು ನಟ ರಾಘವೇಂದ್ರ ರಾಜ್ ಕುಮಾರ್ ಹೇಳಿದ್ದಾರೆ.
ಈ ಬಗ್ಗೆ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ಅಭಿಮಾನಿಗಳು ನನ್ನ ಮಕ್ಕಳಿಗೆ ಇಷ್ಟೊಂದು ಯಶಸ್ಸು ಕೊಡುತ್ತಿದ್ದಾರೆ ಅಂತ ಅಂದುಕೊಂಡಿರಲಿಲ್ಲ. ಒಬ್ಬ ತಂದೆಯಾಗಿ ಇದಕ್ಕಿಂತ ಬೇರೆ ಸಂತೋಷ ಬೇಡ. ಅಭಿಮಾನಿಗಳ ಪ್ರೀತಿಯನ್ನು ನಮ್ಮ ಕುಟುಂಬದವರು ತಲೆ ಬಗ್ಗಿಸಿಕೊಂಡು ಕಾಪಾಡಿಕೊಂಡು ನಡೆಯಬೇಕು ಎಂದರು.
ವಿನಯ್ ಹಾಗೂ ಯುವ ಕಷ್ಟ ಪಟ್ಟು ತಲೆ ಬಗ್ಗಿಸಿಕೊಂಡು ಮುಂದೆ ನಡೆಯಬೇಕು. ಪ್ರತಿಯೊಂದು ಕೆಲಸದಲ್ಲಿ ಚಾಲೆಂಜ್ ಇರುತ್ತದೆ. ಯಾವುದನ್ನೂ ಸುಮ್ಮನೆ ಸಂಪಾದನೆ ಮಾಡಲು ಆಗುವುದಿಲ್ಲ. ಅಭಿಮಾನಿಗಳೇ ನಮಗೆ ಶಕ್ತಿ ಹಾಗೂ ಪ್ರೋತ್ಸಾಹ ಎಂದು ರಾಘವೇಂದ್ರ ರಾಜ್ ಕುಮಾರ್ ಹೇಳಿದ್ದಾರೆ.
ಕಷ್ಟ-ಸುಖ ಅನ್ನೋದು ಎಲ್ಲರಿಗೂ ಬರುತ್ತದೆ. ಹಾಗೆಯೇ ನಮಗೂ ಬರುತ್ತದೆ. ಆದರೆ ಏನೇ ಬಂದರೂ ನಾವು ಧೈರ್ಯವಾಗಿ ಎದುರಿಸಬೇಕು ಎಂದು ಕಿವಿಮಾತು ಹೇಳಿದರು.
ಮೈಸೂರು: ಸಂಸತ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಎಸಗಿರುವುದನ್ನು ಖಂಡಿಸಿ ಮೈಸೂರು ವಿಶ್ವವಿದ್ಯಾನಿಲಯದ…
ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಗ್ಗೆ ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ…
ಬೆಳಗಾವಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಕ್ಷೇಪಾರ್ಹ ಹೇಳಿಕೆ ಖಂಡಿಸಿ ಕಾಂಗ್ರೆಸ್…
ಮೈಸೂರು: ಸ್ನೇಹಮಯಿ ಕೃಷ್ಣಗೆ ಫಂಡಿಂಗ್ ಮಾಡುತ್ತಿರುವವರು ಯಾರು ಅನ್ನೋದು ಗೊತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಕಿಡಿಕಾರಿದ್ದಾರೆ. ಮುಡಾ ಪ್ರಕರಣಕ್ಕೆ…
ನವದೆಹಲಿ: ಸಂಸತ್ ಭವನದ ಸಂಕೀರ್ಣದಲ್ಲಿ ಬಿಜೆಪಿ ಸಂಸದರು ನನ್ನನ್ನು ತಳ್ಳಿದ್ದಾರೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ…
ಬೆಳಗಾವಿ: ಕೇಂದ್ರ ಗ್ರಹ ಸಚಿವ ಅಮಿತ್ ಶಾ ಅವರು ಡಾ.ಬಿ.ಆರ್. ಅಂಬೇಡ್ಕರ್ ಕುರಿತು ನೀಡಿರುವ ಹೇಳಿಕೆ ವಿರುದ್ಧ ದೇಶಾದ್ಯಂತ ವ್ಯಾಪಕ…