ಮನರಂಜನೆ

‘ಬಿಗ್‍ ಬಾಸ್‍’ ನಡೆಸಿಕೊಡಲು ಸುದೀಪ್‍ ವಾಪಸ್ಸಾಗಿದ್ದು ಏಕೆ?

ಕಳೆದ ವರ್ಷ ನಡೆದ ‘ಬಿಗ್‍ ಬಾಸ್‍’ ಕಾರ್ಯಕ್ರಮವೇ ತಮ್ಮ ಕೊನೆಯ ‘ಬಿಗ್‍ ಬಾಸ್‍’ ಆಗಿರಲಿದೆ ಎಂದು ಸುದೀಪ್‍ ಹೇಳಿಕೊಂಡಿದ್ದರು. ಆದರೆ, ‘ಬಿಗ್‍ ಬಾಸ್’ ಕಾರ್ಯಕ್ರಮದ 12ನೇ ಅವತರಣಿಕೆಯನ್ನು ಸುದೀಪ್‍ ಈ ವರ್ಷ ನಡೆಸಿಕೊಡುವುದಷ್ಟೇ ಅಲ್ಲ, ಇನ್ನೂ ನಾಲ್ಕು ಸೀಸನ್‍ಗಳ ನಿರೂಪಣೆ ಮಾಡಲಿದ್ದಾರಂತೆ. ನಡೆಸಿಕೊಡುವುದಿಲ್ಲ ಎಂದು ಹೇಳಿದ್ದ ಸುದೀಪ್‍, ಕಾರ್ಯಕ್ರಮದ ನಿರೂಪಣೆಗೆ ವಾಪಸ್ಸಾಗಿದ್ದೇಕೆ?

ಈ ಕುರಿತು ಇತ್ತೀಚೆಗೆ ಕಾರ್ಯಕ್ರಮದ ಘೋಷಣೆ ಸಂದರ್ಭದಲ್ಲಿ ಮಾತನಾಡಿರುವ ಸುದೀಪ್‍, ‘ನಾನು ವಾಪಸ್ಸು ಬರುತ್ತಿರುವುದಕ್ಕೆ ಕಾರಣವಿದೆ. ಅದಕ್ಕೆ ಮುಖ್ಯ ಕಾರಣ, ಜನರ ಪ್ರೀತಿ. ಬಹಳಷ್ಟು ಜನ ನಾನು ಕಾರ್ಯಕ್ರಮವನ್ನು ಮುಂದುವರೆಸಬೇಕು ಎಂದು ಆಸೆಪಟ್ಟಿದ್ದಾರೆ. ಕಾರ್ಯಕ್ರಮವನ್ನು ತಂಡ ನಡೆಸಿಕೊಡುತ್ತಿರುವ ರೀತಿ, ಅದು ಬೆಳೆಯುತ್ತಿರುವ ರೀತಿ, ಜನ ಅದನ್ನು ಪ್ರೀತಿಯಿಂದ ನೋಡುತ್ತಿರುವ ರೀತಿ. ಇವೆಲ್ಲವೂ ನಾನು ವಾಪಸ್ಸು ಬರುತ್ತಿರುವುದಕ್ಕೆ ಕಾರಣಗಳು ಎಂದರು.

ಇಷ್ಟಕ್ಕೂ ಸುದೀಪ್‍ ಕಾರ್ಯಕ್ರಮದಿಂದ ಹೊರನಡೆಯುವುದಕ್ಕೆ ತೀರ್ಮಾನಿಸಿದ್ದು ಯಾಕೆ? ಈ ಕುರಿತು ಮಾತನಾಡಿರುವ ಅವರು, ಬಿಗ್‍ ಬಾಸ್ ಕಾರ್ಯಕ್ರಮ ಬರೀ ಕನ್ನಡದಲ್ಲಿ ಮಾತ್ರವಲ್ಲ, ಬೇರೆ ಭಾಷೆಗಳಲ್ಲೂ ಪ್ರಸಾರವಾಗುತ್ತಿದೆ. ಬೇರೆ ಭಾಷೆಗಳಲ್ಲಿ ಸ್ಪರ್ಧಿಗಳಿಗೆ ಕೊಡುವ ಸೌಲಭ್ಯ ಇಲ್ಲೂ ಕೊಡಿ ಎಂಬುದು ನನ್ನ ಮೊದಲ ಬೇಡಿಕೆಯಾಗಿತ್ತು. ಕನ್ನಡದ ‘ಬಿಗ್‍ ಬಾಸ್‍’ ಒಳ‍್ಳೆಯ ಫಲಿತಾಂಶವನ್ನು ಕೊಟ್ಟಿದೆ. ಟಿಆರ್‌ಪಿಯಲ್ಲಿ ದಾಖಲೆ ಮಾಡಿದೆ. ಹಾಗಾಗಿ, ಇಲ್ಲಿನ ಕಾರ್ಯಕ್ರಮಕ್ಕೂ ಹೆಚ್ಚಿನ ಪ್ರಾಮುಖ್ಯತೆ ಕೊಡಿ ಎಂದು ಹೇಳಿದ್ದೆ. ಅದಕ್ಕೆ ಚಾನಲ್‍ನವರು ಸೂಕ್ತವಾಗಿ ಸ್ಪಂದಿಸಿದ್ದರಿಂದ ನಾನು ಕಾರ್ಯಕ್ರಮಕ್ಕೆ ವಾಪಸ್ಸಾದೆ’ ಎಂದರು.

‘ಬಿಗ್ ಬಾಸ್‍ – ಸೀಸನ್‍ 12’ ಕಾರ್ಯಕ್ರಮದ ಬಗ್ಗೆ ಅಧಿಕೃತವಾಗಿ ಘೋಷಣೆಯಾಗಿದೆಯಾದರೂ, ಕಾರ್ಯಕ್ರಮ ಶುರುವಾಗುವುದಕ್ಕೆ ಇನ್ನೂ ಸಮಯವಿದೆ. ಸುದೀಪ್‍ ಅಭಿನಯದ ಹೊಸ ಚಿತ್ರ ‘ಮ್ಯಾಕ್ಸ್ 2’ ಸದ್ಯದಲ್ಲೇ ಪ್ರಾರಂಭವಾಗಲಿದೆ. ಅದರ ಚಿತ್ರೀಕರಣ ಮುಗಿದೆ ನಂತರ, ‘ಬಿಗ್‍ ಬಾಸ್‍ – ಸೀಸನ್‍ 12’ ಶುರುವಾಗುವ ಸಾಧ್ಯತೆ ಇದೆ.

ಆಂದೋಲನ ಡೆಸ್ಕ್

Recent Posts

ಮೈಸೂರು ವಿ.ವಿ | ಯುಜಿಸಿ ಉದ್ದೇಶಿತ ಹೊಸ ನಿಯಾಮವಳಿ ಜಾರಿಗೆ ಒತ್ತಾಯ

ಮೈಸೂರು : ವಿಶ್ವವಿದ್ಯಾನಿಲಯಗಳ ಕ್ಯಾಂಪಸ್‌ನಲ್ಲಿ ಜಾತಿ, ಧರ್ಮ,ಲಿಂಗ ಆಧಾರಿತ ಶೋಷಣೆಯನ್ನು ತಡೆಗಟ್ಟಲು ಯುಜಿಸಿಯ ಉದ್ದೇಶಿತ ಹೊಸ ನಿಯಮಾವಳಿಗಳ ಜಾರಿಗೆ ಒತ್ತಾಯಿಸಿ…

55 mins ago

ಸರ್ಕಾರಿ ನೌಕರರಿಗೆ ತಿಂಗಳಿಗೊಮ್ಮೆ ಖಾದಿ ಧಿರಿಸು ಕಡ್ಡಾಯ

ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ಖಾದಿ ಬಟ್ಟೆ ಬಳಕೆ ಕಡ್ಡಾಯಗೊಳಿಸಲಾಗಿದೆ. ಪ್ರತಿ ತಿಂಗಳ ಮೊದಲ ಶನಿವಾರ ಖಾದಿ ಬಟ್ಟೆ…

1 hour ago

ಕ್ಯಾಂಪಸ್‌ಗಳಲ್ಲಿ ಜಾತಿ ತಾರತಮ್ಯ : ಯುಜಿಸಿ ನಿಯಮಾವಳಿಗೆ ʻಸುಪ್ರೀಂʼ ತಡೆ

ಹೊಸದಿಲ್ಲಿ : ಮಹತ್ವದ ಬೆಳವಣಿಗೆಯಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಹೊಸ ನಿಯಮಗಳಿಗೆ ಸರ್ವೋಚ್ಚ ನ್ಯಾಯಾಲಯ ತಡೆ ನೀಡಿದೆ. ವಿಶ್ವವಿದ್ಯಾಲಯ…

2 hours ago

ಕರ್ನಾಟಕ ಪೊಲೀಸರಿಗೆ ಸಿಹಿಸುದ್ದಿ : ಜನ್ಮದಿನ, ವಿವಾಹ ವಾರ್ಷಿಕೋತ್ಸವಕ್ಕೂ ರಜೆ

ಬೆಂಗಳೂರು : ಹಬ್ಬ-ಹರಿದಿನಗಳನ್ನೂ ಲೆಕ್ಕಿಸದೆ ಜನರಿಗಾಗಿ ದುಡಿಯುವ ಪೊಲೀಸರಿಗೆ ಕರ್ನಾಟಕ ಪೊಲೀಸ್ ಇಲಾಖೆ ಸಿಹಿಸುದ್ದಿ ನೀಡಿದ್ದು, ಜನ್ಮದಿನ ಮತ್ತು ವಿವಾಹ…

2 hours ago

ಭಾರತ-ಕೆನಡಾ ನಡುವೆ ಎಲೆಕ್ಟ್ರಿಕ್ ವಾಹನ ಒಪ್ಪಂದ : ಎಚ್‌ಡಿಕೆ ನೇತೃತ್ವದಲ್ಲಿ ದ್ವಿಪಕ್ಷೀಯ ಚರ್ಚೆ

ಹೊಸದಿಲ್ಲಿ : ನಿರ್ಣಾಯಕ ಅಪರೂಪದ ಖನಿಜಗಳು, ಇವಿ ಚಲನಶೀಲತೆ, ಉತ್ಪಾದನೆ ಮತ್ತು ಸುಸ್ಥಿರ ಕೈಗಾರಿಕಾ ಅಭಿವೃದ್ಧಿ ಕ್ಷೇತ್ರಗಳಲ್ಲಿನ ಸಹಕಾರವನ್ನು ಬಲಪಡಿಸಲು…

3 hours ago

ಮುಡಾ ಕೇಸ್‌ನಲ್ಲಿ ಸಿಎಂʼಗೆ ನಿರಾಳ : ʻಸತ್ಯ ಮೇವ ಜಯತೆʻ ಫ್ಲೇ ಕಾರ್ಡ್‌ ಹಿಡಿದು ಕಾಂಗ್ರೆಸ್‌ ಸಂಭ್ರಮ

ಮೈಸೂರು : ಮುಡಾ ಹಗರಣದಲ್ಲಿ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ, ಪತ್ನಿ ಪಾರ್ವತಿ ಮತ್ತು ಇತರರ ಮೇಲೆ ಬಿ ರಿಪೋರ್ಟ್…

3 hours ago