‘ಬಿಗ್ ಬಾಸ್’ ಕಾರ್ಯಕ್ರಮದ 11ನೇ ಅವತರಣಿಕೆಯು ಇದೇ ಸೆಪ್ಟೆಂಬರ್ 29ರಂದು ಸಂಜೆ ಆರಕ್ಕೆ ಪ್ರಾರಂಭವಾಗಲಿದೆ. ಈ ಬಾರಿಯ ವಿಶೇಷತೆಯೆಂದರೆ, ಒಂದು ದಿನ ಮುಂಚೆಯೇ, ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಐವರು ಸ್ಪರ್ಧಿಗಳ ಹೆಸರುಗಳು ಹೊರಬೀಳಲಿವೆ.
ಸರಿ, ಈ ಬಾರಿ ‘ಬಿಗ್ ಬಾಸ್’ನಲ್ಲಿ ಯಾರೆಲ್ಲಾ ಭಾಗವಹಿಸುತ್ತಿದ್ದಾರೆ ಎಂಬ ಪ್ರಶ್ನೆ ಸಹಜ. ಸಾಮಾನ್ಯವಾಗಿ ಕಾರ್ಯಕ್ರಮಕ್ಕೂ ಮೊದಲು ಚಾನಲ್‍ನವರು ಕಾರ್ಯಕ್ರಮದಲ್ಲಿ ಯಾರೆಲ್ಲಾ ಭಾಗವಹಿಸುತ್ತಾರೆ ಎಂಬ ವಿಷಯವನ್ನು ಎಲ್ಲೂ ಬಹಿರಂಗಪಡಿಸಿಲ್ಲ. ಈ ಬಾರಿಯೂ ಅದು ಮುಂದುವರೆದಿದೆ. ಈ ಮಧ್ಯೆ, ಕಾರ್ಯಕ್ರಮದಲ್ಲಿ ಯಾರೆಲ್ಲಾ ಭಾಗವಹಿಸಬಹುದು ಎಂಬ ಚರ್ಚೆ ಶುರುವಾಗಿದ್ದು, ಒಂದಿಷ್ಟು ಹೆಸರುಗಳು ಕೇಳಿ ಬಂದಿವೆ.
ಪ್ರಮುಖವಾಗಿ, ನಟಿ ಪ್ರೇಮಾ, ಅವಳಿ ಸಹೋದರಿಯರಾದ ಅದ್ವಿತಿ ಶೆಟ್ಟಿ ಮತ್ತು ಅಶ್ವಿತಿ ಶೆಟ್ಟಿ, ‘ಗೀತಾ’ ಧಾರಾವಾಹಿ ಖ್ಯಾತಿಯ ಭವ್ಯ ಗೌಡ, ಗಾಯಕಿ ಐಶ್ವರ್ಯಾ ರಂಗರಾಜನ್, ಸುದ್ದಿ ನಿರೂಪಕ ಹರೀಶ್ ನಾಗರಾಜ್, ‘ಗಿಚ್ಚಿ ಗಿಲಿಗಿಲಿ – ಸೀಸನ್ 3’ರ ವಿಜೇತ ಹುಲಿ ಕಾರ್ತಿಕ್, ತುಕಾಲಿ ಸಂತು ಪತ್ನಿ ಮಾನಸ ತಂತು, ‘ಪಾರು’ ಧಾರಾವಾಹಿ ಖ್ಯಾತಿಯ ಮೋಕ್ಷಿತಾ ಪೈ, ‘ಸತ್ಯ’ ಧಾರಾವಾಹಿ ಖ್ಯಾತಿಯ ಗೌತಮಿ ಜಾಧವ್, ಜ್ಯೂನಿಯರ್ ದರ್ಶನ್ ಎಂದು ಖ್ಯಾತಿ ಪಡೆದಿರುವ ಅವಿನಾಶ್, ರೈಡರ್ ಲೇಖಿ ಗೋಸ್ವಾಮಿ ಮುಂತಾದವರ ಹೆಸರುಗಳು ಕೇಳಿಬರುತ್ತಿವೆ. ಇವೆಲ್ಲವೂ ಎಷ್ಟು ಜನ ನಿಜಕ್ಕೂ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಅಥವಾ ಎಷ್ಟು ಜನರ ಹೆಸರು ಸುಳ್ಳೇ ಕೇಳಿ ಬರುತ್ತಿದೆ ಎಂದು ಕಾರ್ಯಕ್ರಮ ಶುರುವಾದಾಗಲೇ ಗೊತ್ತಾಗಬೇಕು.
ಇನ್ನು, ಸೋಮವಾರ ಕಾರ್ಯಕ್ರಮದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸುದೀಪ್, ಯಾವುದೇ ಕಾರಣಕ್ಕೂ ಉದ್ಘಾಟನಾ ಕಾರ್ಯಕ್ರಮದವರೆಗೂ ತಮಗೆ ಸ್ಪರ್ಧಿಗಳ ಹೆಸರು ಹೇಳಬೇಡಿ ಎಂದು ಚಾನಲ್‍ನವರಿಗೆ ಹೇಳುತ್ತೇನೆ ಎಂದರು. ‘ಒಂದು ಪಕ್ಷ ಸ್ಪರ್ಧಿಗಳ ಹೆಸರುಗಳು ಲೀಕ್ ಆದರೆ, ನನ್ನಿಂದ ಆಗಿರಬಹುದು ಎಂದು ಅವರಿಗೆ ಅನ್ನಿಸಬಾರದು. ಹಾಗಾಗಿ, ಕಾರ್ಯಕ್ರಮದಲ್ಲಿ ಯಾರೆಲ್ಲಾ ಭಾಗವಹಿಸುತ್ತಿದ್ದಾರೆ ಎಂಬ ವಿಷಯಗಳನ್ನು ನಾನು ತಿಳಿದುಕೊಳ್ಳುವುದಕ್ಕೆ ಹೋಗುವುದಿಲ್ಲ. ಉದ್ಘಾಟನಾ ದಿನದಂದೇ ನೇರವಾಗಿ ತಿಳಿದುಕೊಳ್ಳುತ್ತೇನೆ’ ಎಂದರು.
ಬೆಂಗಳೂರು : ಗೃಹಲಕ್ಷ್ಮಿ ಯೋಜನೆ ಕುರಿತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸದನಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ. ಆದ್ದರಿಂದ ಸಚಿವರು 1.20…
ಬೆಂಗಳೂರು: ಕಾರಾಗೃಹ ಹಾಗೂ ಸುಧಾರಣಾ ಇಲಾಖೆಯ ಡಿಜಿಪಿಯಾಗಿ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ರಾಜ್ಯದ…
ಬೆಳಗಾವಿ: ಬಿಜೆಪಿಯು ದ್ವೇಷ ರಾಜಕಾರಣದಲ್ಲಿ ತೊಡಗಿದ್ದು, ಕಾಂಗ್ರೆಸ್ ನಾಯಕರ ಮೇಲೆ ಸುಳ್ಳು ಕೇಸುಗಳನ್ನು ಹಾಕಿ ಅಪಪ್ರಚಾರ ಮಾಡುತ್ತಿದೆ. ಬಿಜೆಪಿಯ ಈ…
ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಎಸ್.ಎನ್.ಹೆಗ್ಡೆ ಅವರು ಇಂದು ಮೈಸೂರಿನಲ್ಲಿ ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. ಪ್ರೊ.ಎಸ್.ಎನ್.ಹೆಗ್ಡೆ…
ಮೈಸೂರು: ಎರಡು ದಿನಗಳ ಹಿಂದೆ ಮೈಸೂರಿನ ಅಶೋಕ ಪುರಂ ರೈಲ್ವೆ ವರ್ಕ್ ಶಾಪ್ ಬಳಿ ಇರುವ ಮರದ ಕೊಂಬೆ ಮೇಲೊಂದು…
ಶಿವಮೊಗ್ಗ: ಜಿಲ್ಲೆಯಲ್ಲಿ ಮತ್ತೆ ಮಂಗನ ಕಾಯಿಲೆ ಕಾಣಿಸಿಕೊಂಡಿದ್ದು, ಮಲೆನಾಡು ಭಾಗದ ಕಾಡಂಚಿನ ಗ್ರಾಮಗಳಲ್ಲಿ ಆತಂಕ ಶುರುವಾಗಿದೆ. ಪಾಸಿಟಿವ್ ಕೇಸ್ಗಳು ಮತ್ತಷ್ಟು…