ಮೊದಲು ಅಪ್‍ಗ್ರೇಡ್ ಆಗಬೇಕು. ಚೆನ್ನಾಗಿ ಕೆಲಸ ಕಲಿಯಬೇಕು. ದೊಡ್ಡ ಗುರಿಗಳನ್ನು ಇಟ್ಟುಕೊಳ್ಳಬೇಕು. ಸ್ವಾಭಿಮಾನ ಬೆಳೆಸಿಕೊಳ್ಳಬೇಕು. ಯಾರ ಮುಂದೆಯೇ ನಾವು ಕಡಿಮೆ ಎಂಬ ಯೋಚನೆ ಇರಬಾರದು. ಬೇರೆಯವರೆಲ್ಲರೂ ನಮಗೆ ಗೌರವ ಕೊಡುವಂತೆ ದುಡಿಯಬೇಕು ಎಂದು ನಟ ಯಶ್ ಹೇಳಿದ್ದಾರೆ.
ಯೋಗರಾಜ್ ಭಟ್ ನಿರ್ದೇಶನದ ‘ಮನದ ಕಡಲು’ ಚಿತ್ರವು ಮಾರ್ಚ್.28ರಂದು ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ಯಶ್ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಹಾರೈಸಿದ್ದಾರೆ. ಈ ಸಂದರ್ಭದಲ್ಲಿ ಅವರು ಹಲವು ವಿಷಯಗಳ ಕುರಿತು ಮಾತನಾಡಿದ್ದಾರೆ.
‘ದೊಡ್ಡ ಸ್ಟಾರ್ ನಟರು ತಮ್ಮ ಚಿತ್ರಗಳನ್ನು ಪ್ರಚಾರ ಮಾಡಿದರೆ ಚಿತ್ರ ಗೆಲ್ಲುತ್ತದೆ ಎಂಬ ನಂಬಿಕೆ ಚಿತ್ರರಂಗದಲ್ಲಿದೆ. ಹಾಗಾಗಿ, ಬಹಳಷ್ಟು ಜನ ತಮ್ಮ ಚಿತ್ರಗಳ ಪೋಸ್ಟರ್, ಟೀಸರ್, ಟ್ರೇಲರ್‌ಗಳನ್ನು ದೊಡ್ಡ ನಟರಿಂದ ಬಿಡುಗಡೆ ಮಾಡಿಸುವುದಕ್ಕೆ ಮುಂದಾಗುತ್ತಿದ್ದಾರೆ. ಆದರೆ, ನಾವು ಬರುವುದರಿಂದ ಚಿತ್ರ ಗೆಲ್ಲುವುದು, ಚಿತ್ರ ಗೆಲ್ಲೋದು ನಿಮ್ಮ ಕೆಲಸಗಳಿಂದ ಎಂದು ಯಶ್ ಹೇಳಿದ್ದಾರೆ.
ಅಭಿಮಾನಿಗಳು ಯಾವತ್ತಿದ್ದರೂ ಒಳ್ಳೆಯ ಸಿನಿಮಾಗಳನ್ನು ಹರಸುತ್ತಾರೆ ಎಂದ ಯಶ್, ‘ಹಿಂದೆ ನಾನು ಸಹ ಸಂದರ್ಶನವೊಂದರಲ್ಲಿ ಜನ ಬೇರೆ ಭಾಷೆ ಸಿನಿಮಾಗಳನ್ನೇ ನೋಡುತ್ತಾರೆ ಎಂದು ದೂರಿದ್ದೆ. ಮೊದಲು ನಮ್ಮ ಕೆಲಸವನ್ನು ನಾವು ಸರಿ ಮಾಡಿಕೊಂಡು, ಒಳ್ಳೆಯ ಸಿನಿಮಾಗಳನ್ನು ಕೊಟ್ಟರೆ ಕನ್ನಡಿಗರು ಯಾವತ್ತೂ ನಮ್ಮ ಕೈ ಬಿಟ್ಟಿಲ್ಲ. ಅಭಿಮಾನಿಗಳು ಯಾವತ್ತಿದ್ದರೂ ಒಳ್ಳೆಯ ಸಿನಿಮಾಗಳನ್ನು ಹರಸುತ್ತಾರೆ’ ಎಂದರು.
ಬರೀ ನಟನೆಯಷ್ಟೇ ಸಿನಿಮಾ ಅಲ್ಲ, ಬೇರೆ ವಿಷಯಗಳ ಬಗ್ಗೆಯೂ ಗಮನಹರಿಸಬೇಕು ಎಂದ ಯಶ್, ‘ವೃತ್ತಿ ಬದುಕನ್ನು ಹೇಗೆ ರೂಪಿಸಿಕೊಳ್ಳಬೇಕು, ಟ್ರೆಂಡ್ ಹೇಗಿದೆ, ಜವಾಬ್ದಾರಿ ಏನು ಎಂಬುದನ್ನು ತಿಳಿದುಕೊಂಡು ಬರಬೇಕು’ ಎಂದರು.
ದೊಡ್ಡ ಕವಲಂದೆ : ಗಬ್ಬೆದ್ದು ನಾರುತ್ತಿರುವ ಚರಂಡಿಯ ಕೊಳಚೆ ನೀರಿನಿಂದ ಗ್ರಾಮ ಸ್ಥರಿಗೆ ಸಾಂಕ್ರಾಮಿಕ ರೋಗಗಳು ಹರಡು ತ್ತಿದ್ದು, ಗ್ರಾಮ…
ಸರಗೂರು : ಪಟ್ಟಣ ಪಂಚಾಯಿತಿ ವ್ಯಾಪ್ತಿ ಯಲ್ಲಿ ಬೀದಿ ನಾಯಿಗಳ ಹಾವಳಿಯಿಂದ ಜನ ಸಾಮಾನ್ಯರು ತತ್ತರಿಸಿ ಆತಂಕದಲ್ಲಿದ್ದರೂ ನಿಯಂ ತ್ರಣ…
ನುರಿತ ತಜ್ಞರ ತಂಡದಿಂದ ಕೆರೆ ಸ್ವಚ್ಛತೆ ಆರಂಭಿಸಲು ತಯಾರಿ ಮೈಸೂರು : ಪ್ರವಾಸಿಗರು ಹಾಗೂ ವಾಯುವಿಹಾರಿಗಳ ನೆಚ್ಚಿನ ತಾಣವಾದ ಕುಕ್ಕರಹಳ್ಳಿ…
ಮೈಸೂರು ನಗರದ ಪ್ರತಿಯೊಂದೂ ವಾರ್ಡ್‌ನ ಪ್ರತಿ ಮಾರ್ಗದಲ್ಲೂ ಮೈಸೂರು ಮಹಾ ನಗರ ಪಾಲಿಕೆಯಿಂದ ವಾರ್ಡ್ ಸಂಖ್ಯೆ, ವಾರ್ಡ್‌ನ್ನು ಪ್ರತಿನಿಧಿಸುವ ಪಾಲಿಕೆ…
ಮೈಸೂರಿನ ಎಲ್ಲ ವಾರ್ಡ್‌ಗಳಲ್ಲೂ ಮಹಾನಗರ ಪಾಲಿಕೆಯಿಂದ ಕಸ ವಿಂಗಡಣೆಯನ್ನು ಮೂಲದಿಂದಲೇ ಅಂದರೆ ಮನೆಮನೆಗಳಲ್ಲೇ ಹಸಿ ಕಸ ಮತ್ತು ಒಣ ಕಸ…
ರಾಜ್ಯಸರ್ಕಾರವು ವಿಧಾನಸಭೆಯಲ್ಲಿ ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ (ತಡೆಗಟ್ಟುವಿಕೆ) ಮಸೂದೆ ೨೦೨೫’ ಅನ್ನು ಮಂಡಿಸಿದೆ. ಈ ಮಸೂದೆ…