ಮನರಂಜನೆ

ಭಾರತದ ಪ್ರಜೆಗಳಾದ ನಾವು ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಗರಿ ; ಸಂಭ್ರಮ ಹಂಚಿಕೊಂಡ ನಿರ್ದೇಶಕ ಚಮರಂ

ಮೈಸೂರು: ಸಿನಿಮಾ ನಿರ್ದೇಶಕ, ಸಾಹಿತಿಯೂ ಆದ ಮೈಸೂರಿನ ಡಾ.ಕೃಷ್ಣಮೂರ್ತಿ ಚಮರು ನಿರ್ದೇಶನದ ಭಾರತೀಯ ಪ್ರಜೆಗಳಾದ ನಾವು ಅತ್ಯುತ್ತಮ ಸಾಮಾಜಿಕ ಕಳಕಳಿಯ ಚಿತ್ರವೆಂದು ರಾಜ್ಯ ಪ್ರಶಸ್ತಿಗೆ ಭಾಜನವಾಗಿದೆ.

ಈ ಖುಷಿಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಾವು ನಿರ್ದೇಶಿಸಿ, ನಿರ್ಮಿಸಿರುವ ಭಾರತದ ಪ್ರಜೆಗಳಾದ ನಾವು ಚಲನ ಚಿತ್ರಕ್ಕೆ ರಾಜ್ಯ ಸರ್ಕಾರದ ಉತ್ತಮ ಸಾಮಾಜಿಕ ಕಳಕಳಿಯುಳ್ಳ ಚಲನಚಿತ್ರ ಎಂಬ ಪ್ರಶಸ್ತಿ ದೊರೆತಿದೆ. ಮೈಸೂರಿನ ಕಲಾವಿದರೇ ಇರುವ ಹಾಗೂ ಮೈಸೂರು ಸುತ್ತಮುತ್ತಲೇ ಚಿತ್ರಿಸಿರುವ ಸಿನಿಮಾ ಇದಾಗಿದೆ. ಸಮಾಜದ ಮೇಲೆ ಒಳ್ಳೆಯ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಪ್ರಶಸ್ತಿ ದೊರೆತಿದೆ. ಇದರಿಂದಾಗಿ ಮೈಸೂರು- ಚಾಮರಾಜನಗರ ಭಾಗಕ್ಕೆ ಉತ್ತಮ ಗೌರವ ದೊರೆತಂತಾಗಿದೆ ಎಂದರು.

ಸಂವಿಧಾನ ಪೀಠಿಕೆ ಅಡಿಯಲ್ಲಿ ಎಲ್ಲರೂ ಭ್ರಾತೃತ್ವ, ಸಮಾನತೆಗಳ ಶಪಥ ಮಾಡುತ್ತೇವೆ. ಆದರೆ ಜಾತಿ, ಧರ್ಮದ ನೆಲೆಯಲ್ಲೇ ಇವುಗಳ ಪಾಲನೆ ಮಾಡುವುದಿಲ್ಲ. ಸಂಘರ್ಷಕ್ಕೆಡೆ ಮಾಡದೇ ಇವನ್ನು ಹೇಗೆ ಸ್ಥಾಪಿಸಬಹುದೆಂಬ ಆಶಯ ಸಿನಿಮಾದ್ದಾಗಿದೆ. ಜಾತಿ, ಧರ್ಮದ ಹೆಸರಿನಲ್ಲಿ ಹಕ್ಕುಗಳನ್ನು ಕಸಿಯುತ್ತಿದ್ದು, ಇವುಗಳನ್ನು ಪ್ರಯತ್ನಿಸಿದರೆ ಹೇಗೆ ದೊರಕಿಸಿಕೊಡಬಹುದೆಂಬ ಸಂದೇಶ ಚಿತ್ರದಲ್ಲಿದೆ ಎಂದರು.

ಸಿನಿಮಾದಲ್ಲಿ ನಾಲ್ಕು ಹೋರಾಟ ಗೀತೆಗಳಿವೆ. ಸುಮಾರು ೫೦ ಲಕ್ಷ ರೂ. ಬಜೆಟ್‌ನಲ್ಲಿ ಚಿತ್ರ ನಿರ್ಮಿಸಲಾಗಿದೆ. ಇಂತಹ ಚಿತ್ರಗಳನ್ನು ಬೆಂಬಲಿಸುವ ಮನಸ್ಥಿತಿಯವರು ರಾಜ್ಯದಲ್ಲಿ ಕಡಿಮೆ. ಆದರೆ ತಮಿಳುನಾಡಿನಲ್ಲಿ ಇಂತಹದೊಂದು ಚಿತ್ರ ನಿರ್ಮಾಣವಾದರೆ ಸ್ಟಾರ್‌ಗಳೂ ವೀಕ್ಷಿಸಿ, ಒಂದಷ್ಟು ಒಳ್ಳೆಯ ಮಾತನ್ನಾಡುತ್ತಾರೆ. ಇದರಿಂದಾಗಿ ಅವರ ಅಭಿಮಾನಿಗಳೂ ಸಿನಿಮಾ ನೋಡುತ್ತಾರೆ. ಈ ಪ್ರವೃತ್ತಿ ಇಲ್ಲಿಯೂ ಬೆಳೆಯಬೇಕೆಂದು ಆಶಿಸಿದರು.

ಇದನ್ನು ಓದಿ: ʼಸುವರ್ಣ ಕರ್ನಾಟಕ ಕಣ್ಮಣಿʼ ರಾಜ್ಯ ಪ್ರಶಸ್ತಿ ಪಡೆದ ಯುವಕವಿ ಕೃಷ್ಣಮೂರ್ತಿ ಗಣಿಗನೂರು

ನಟ ಬಿ.ಸುರೇಶ್ ಅವರು ಅತಿಥಿ ಪಾತ್ರದಲ್ಲಿ ನಟಿಸಿ ಅದ್ಭುತ ಸಂದೇಶ ನೀಡಿದ್ದಾರೆ. ಜೊತೆಗೆ ಹಿರಿಯ ನಟ ಬಲ ರಾಜವಾಡಿ ಗಮನ ಸೆಳೆಯುತ್ತಾರೆ. ರಂಗಕರ್ಮಿ ಬರ್ಟಿ ಒಲಿವೇರಾ ಅವರು, ಇವರೇ ಚಿತ್ರದ ನಿಜವಾದ ನಾಯಕ ಎನ್ನುವಷ್ಟರ ಮಟ್ಟಿಗೆ ಅಭಿನಯಿಸಿದ್ದಾರೆ. ಯುವ ರಂಗನಟಿ ಪುಷ್ಪಲತ, ಯುವ ರಂಗನಟ ಸತೀಶ್ ಪೊನ್ನಾಚಿ, ಹಿರಿಯ ರಂಗನಟರಾದ ಗೋಪಾಲಕೃಷ್ಣ, ಮಹದೇವಮೂರ್ತಿ, ಆಲೂರು ದೊಡ್ಡನಿಂಗಪ್ಪ ಅಭಿನಯ ಪರಿಪಕ್ವದಿಂದ ಕೂಡಿದೆ. ಬಹುಜನ ಚಳವಳಿಯ ಕವಿ ಹನಸೋಗೆ ಸೋಮಶೇಖರ್ ಅವರ ಬಹುಜನ ಗೀತೆಗಳನ್ನು ಬಹಳ ಸಂದರ್ಭೋಚಿತವಾಗಿ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಚಿತ್ರದ ಆಶಯವನ್ನು ಈ ಗೀತೆಗಳು ಹೆಚ್ಚಿಸಿವೆ ಎಂದರು.

ಸಂವಿಧಾನದ ಆಶಯದ ಚಿತ್ರ ಮಾಡಿದರು. ಆ ಚಿತ್ರವು ಬಿಡುಗಡೆಗೂ ಮುನ್ನವೇ ಅನೇಕ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ. ಉತ್ತಮ ಸಭಾಂಷಣೆ, ಉತ್ತಮ ಕಥೆ, ಉತ್ತಮ ಪ್ರಾದೇಶಿಕ ಸಿನಿಮಾ ಸೇರಿದಂತೆ ೩೦ಕ್ಕೂ ಅಧಿಕ ಪ್ರಶಸ್ತಿಗಳನ್ನು ವಿವಿಧ ವಿಭಾಗಗಳಲ್ಲಿ ಗಳಿಸಿದೆ. ಈ ಎಲ್ಲ ಕಾರಣದಿಂದ ನಮ್ಮ ಸಿನಿಮಾಕ್ಕೆ ರಾಜ್ಯ ಪ್ರಶಸ್ತಿ ದೊರೆತಿದೆ ಎಂದು ಹೇಳಿದರು.

ಸಾಮಾಜಿಕ ಹೋರಾಟಗಾರ್ತಿ ಮತ್ತು ಸಿನಿಮಾ ಪೋಷಕ ನಟಿ ಪ್ರೇಮಾ ಬೋಧಿ ಮಾತನಾಡಿ, ಡಾ.ಕೃಷ್ಣಮೂರ್ತಿ ಚಮರಂ ಅವರಿಗೆ ಬಾಲ್ಯದಿಂದಲು ಸಿನಿಮಾ ಮೇಲೆ ಅತ್ಯಂತ ಪ್ರೀತಿ ಹೊಂದಿದ್ದರು. ಸಿನಿಮಾ ನೋಡುವುರು, ಸಿನಿಮಾ ಬಗ್ಗೆ ಪತ್ರಿಕೆಗಳಲ್ಲಿ ಓದುವ ಅಭ್ಯಾಸ ಬೆಳೆದಿತ್ತು. ಇದರಿಂದಾಗಿ ಅವರು ಸಿನಿಮಾ ಹಾಡುಗಳಿಗೆ ತಮ್ಮದೇ ಆದ ಸಾಹಿತ್ಯ ಬರೆಯುವುದು. ಕಥೆಗಳನ್ನು ಬರೆಯುವುದು ಅವ್ಯಾಸವಾಗಿತ್ತು. ಸಾಮಾಜಿಕ ಕ್ಷೇತ್ರಕ್ಕೆ ಕಾಲಿಟ್ಟು ಹೋರಾಟಗಳನ್ನು ನಡೆಸಿದ ಮೇಲೆ ತನ್ನ ಸಿನಿಮಾಗಳ ಮೂಲಕ ಸಾಮಾಜಿಕ ಕೆಲಸವನ್ನು ಮಾಡಬೇಕು ಎಂದು ನಿರ್ಧರಿಸಿ ಸಂವಿಧಾನದ ಮಹತ್ವ, ನಾಗರಿಕರ ಜವಾಬ್ದಾರಿಯನ್ನು ಹೇಳಲು ಹೊರಟ್ಟಿದ್ದಾರೆ ಎಂದು ಹೇಳಿದರು.

ಇದೆ ಸಂದರ್ಭದಲ್ಲಿ ನಟ ಶಿವಾಜಿ ಮತ್ತು ಕೈಲಾಸ್ ಕುಟ್ಟಪ್ಪ ಅವರು ಡಾ.ಚಮರಂ ಅವರನ್ನು ಸನ್ಮಾನಿಸಿ ಅಭಿನಂದಿಸಿದರು. ಸಿನಿಮಾ ನಿರ್ದೇಶಕ ಮೈಸೂರು ರಾಜು, ಮಂಜುನಾಥ, ಅಕ್ರಮ್, ಮಹದೇವ ಮೂರ್ತಿ, ಅರಸಿಕೆರೆ ರಾಜು, ನೆಲೆ ಹಿನ್ನೆಲೆ ಗೋಪಾಲ ಕೃಷ್ಣ, ಸತೀಶ್ ಪೊನ್ನಾಚಿ, ಪುಷ್ಪಲತಾ, ಸುಪ್ರೀತ್ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಆಂದೋಲನ ಡೆಸ್ಕ್

Recent Posts

ಪುರಾವೆ ಇಲ್ಲದೇ ಯಾರ ಮೇಲೂ ತನಿಖೆ ಮಾಡಲ್ಲ: ಬಿ.ವೈ.ವಿಜಯೇಂದ್ರ

ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ನೊಟೀಸ್ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯೆ…

31 mins ago

ಎಚ್.ಡಿ.ಕೋಟೆ: ಬಸ್‌ ವ್ಯವಸ್ಥೆ ಇಲ್ಲದೇ ಶಾಲಾ ವಿದ್ಯಾರ್ಥಿಗಳ ಪರದಾಟ

ಎಚ್.ಡಿ.ಕೋಟೆ: ಬಸ್‌ ವ್ಯವಸ್ಥೆ ಇಲ್ಲದೇ ಶಾಲಾ ವಿದ್ಯಾರ್ಥಿಗಳು ಪರದಾಟ ನಡೆಸುತ್ತಿರುವ ಘಟನೆ ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ನಡೆದಿದೆ. ತಾಲ್ಲೂಕಿನ…

44 mins ago

ನಿರ್ಮಲಾನಂದನಾಥ ಶ್ರೀಗಳ ಸಮ್ಮುಖದಲ್ಲೇ ಬಹಿರಂಗವಾಗಿ ಕ್ಷಮೆಯಾಚಿಸಿದ ಎಚ್.ಡಿ.ಕುಮಾರಸ್ವಾಮಿ

ಮಂಡ್ಯ: ವಿಸಿ ಫಾರ್ಮ್‌ನ ಕೃಷಿ ಮೇಳದ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶ್ರೀಗಳ ಸಮ್ಮುಖದಲ್ಲೇ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.…

57 mins ago

ಸರ್ಕಾರದ ವೈಫಲ್ಯದ ವಿರುದ್ಧ ಕೈ ಶಾಸಕರೇ ಅವಿಶ್ವಾಸ ನಿರ್ಣಯ ಮಂಡಿಸಿದ್ರೂ ಅಚ್ಚರಿಯಿಲ್ಲ: ವಿಜಯೇಂದ್ರ

ಬೆಂಗಳೂರು: ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದ ವೈಫಲ್ಯಗಳ ವಿರುದ್ಧ ಕಾಂಗ್ರೆಸ್ ಶಾಸಕರೇ ಅವಿಶ್ವಾಸ ನಿರ್ಣಯ ಮಂಡಿಸಿದರೂ ಅಚ್ಚರಿ ಇಲ್ಲ ಎಂದು…

1 hour ago

ಹುಣಸೂರು| ಗುರುಪುರದ ಬಳಿ ಒಂದು ವರ್ಷದ ಹುಲಿ ಮರಿ ಸೆರೆ

ಹುಣಸೂರು: ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಗುರುಪುರದ ಬಳಿಯ ಜಮೀನೊಂದರಲ್ಲಿ ಓಡಾಡುತ್ತಿದ್ದ ಒಂದು ವರ್ಷದ ಹುಲಿ ಮರಿಯನ್ನು ಅರಣ್ಯಾಧಿಕಾರಿಗಳು ಸೆರೆ…

2 hours ago

ಇಡಿಯಿಂದ ನನಗೆ ಕಿರುಕುಳ ನೀಡಲಾಗುತ್ತಿದೆ: ಡಿಸಿಎಂ ಡಿ.ಕೆ.ಶಿವಕುಮಾರ್‌ ಆಕ್ರೋಶ

ಬೆಂಗಳೂರು: ನ್ಯಾಷನಲ್‌ ಹೆರಾಲ್ಡ್‌ ಹಾಗೂ ಯಂಗ್‌ ಇಂಡಿಯಾ ಸಂಸ್ಥೆಗಳಿಗೆ ದೇಣಿಗೆ ನೀಡಿದ್ದಕ್ಕೆ ಇಡಿ ಸಮನ್ಸ್‌ ನೀಡಿದೆ. ಆ ಮೂಲಕ ನಮಗೆ…

3 hours ago