Vrutha
ಜೀವನದಲ್ಲಿ ಒಂದು ರಾಂಗ್ ಟರ್ನ್ ತೆಗೆದುಕೊಂಡರೆ ಏನೆಲ್ಲಾ ಆಗಬಹುದು? ಅಂಥದ್ದೊಂದು ವಿಷಯವನ್ನಿಟ್ಟುಕೊಂಡು ಹೊಸಬರ ತಂಡವೊಂದು ಸದ್ದಿಲ್ಲದೆ ಒಂದು ಚಿತ್ರ ಮಾಡಿದೆ. ಹೆಸರು ‘ವೃತ್ತ’. ಈ ಚಿತ್ರವು ಇದೇ ಆಗಸ್ಟ್ 01ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಲಕ್ಷಯ್ ಆರ್ಟ್ಸ್ ಬ್ಯಾನರ್ ಅಡಿ ಟಿ.ಶಿವಕುಮಾರ್ ನಿರ್ಮಿಸಿರುವ ಈ ಚಿತ್ರಕ್ಕೆ ಯೋಗೇಶ್ ಗೌಡ ಕಥೆ, ಶಂಕರ ರಾಮನ್ ಅವರ ಸಂಭಾಷಣೆ ಇದೆ. ಇನ್ನು, ಲಿಖಿತ್ ಕುಮಾರ್ ಈ ಚಿತ್ರಕ್ಕೆ ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನ ಮಾಡಿದ್ದಾರೆ.
‘ವೃತ್ತ’ ಅಂದರೆ ನಮಗೆ ಮೊದಲು ನೆನಪಾಗುವುದು ಸರ್ಕಲ್. ಆದರೆ ವೃತ್ಯ ಒಂದು ಭಾವಪೂರ್ಣ ಪಯಣ ಎನ್ನುತ್ತಾರೆ ಲಿಖಿಲ್ ಕುಮಾರ್. ‘ಈ ಚಿತ್ರ ಒಂದು ರಾತ್ರಿ ನಡೆಯುವ ಘಟನಾವಳಿಗಳನ್ನು ಒಳಗೊಂಡಿದೆ. ಇದು ಭಾವಪೂರ್ಣ ರೈಡ್ ಎನ್ನಬಹುದು. ಸಿದ್ದಾರ್ಥ್ ಎಂಬ ಪಾತ್ರದ ಸುತ್ತ ನಡೆಯುವ ಕಥೆ ಇದರಲ್ಲಿದ್ದು, ಸಿದ್ದಾರ್ಥ್‌ಗೆ ಆತನ ಮಸ್ಥಿತಿಯೇ ಶತ್ರು. ಒಂದು ರಾತ್ರಿ, ಒಂದು ಕರೆ ಹಾಗೂ ನಾಯಕ ದಾರಿಯಲ್ಲಿ ತೆಗೆದುಕೊಳ್ಳಬಹುದಾದ ರಾಂಗ್ ಟರ್ನ್‌ನಿಂದ ಏನೆಲ್ಲಾ ಸಂಭವಿಸಲಿದೆ ಎಂಬುವುದು ಚಿತ್ರದ ತಿರುಳು. ಮೊಹಿಯುದ್ದೀನ್ ಇಲ್ಲಿ ಸಿದ್ದಾರ್ಥ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜಯಣ್ಣ ಫಿಲ್ಮ್ಸ್ ಚಿತ್ರದ ವಿತರಣೆ ಮಾಡುತ್ತಿದೆ’ ಎಂದರು.
ಮೂಲತಃ ಸಂಕಲನಕಾರರಾಗಿರುವ ಲಿಖಿತ್, ಎರಡು ಕಿರುಚಿತ್ರಗಳನ್ನೂ ನಿರ್ದೇಶಿಸಿದ್ದರಂತೆ. ‘ಒಂದು ಚಾಲೆಂಜಿಂಗ್ ಕಥೆ ಇಟ್ಟುಕೊಂಡು ಕಥೆ ಮಾಡಬೇಕೆಂಬ ಆಸೆ ಇತ್ತು. ಈಗಾಗಲೇ ಚಿತ್ರದ ಮೋಷನ್ ಪೋಸ್ಟರ್ ಹಾಗೂ ‘ಅದು ಯಾವ ಮಾಯೆಯೋ…’ ಎಂಬ ಹಾಡಿನ ಲಿರಿಕಲ್ ವೀಡಿಯೋ ಬಿಡುಗಡೆಯಾಗಿದ್ದು ಮೆಚ್ಚುಗೆ ವ್ಯಕ್ತವಾಗುತ್ತಿದೆ. ನಮ್ಮ ಚಿತ್ರವನ್ನು ವೀಕ್ಷಿಸಿದ ನಟ ನೀನಾಸಂ ಸತೀಶ್ ಅವರು ಚಿತ್ರದ ಕಂಟೆಂಟ್ ಮೆಚ್ಚಿ ಚಿತ್ರವನ್ನು ಅರ್ಪಿಸುತ್ತಿದ್ದಾರೆ’ ಎಂದರು.
‘ವೃತ್ತ’ ಚಿತ್ರದಲ್ಲಿ ಮೊಹಿಯುದ್ದೀನ್, ಜೊತೆಗೆ ಹರಿಣಿ ಸುಂದರ ರಾಜನ್, ಚೈತ್ರಾ ಆಚಾರ್ ಮುಂತಾದವರು ನಟಿಸಿದ್ದಾರೆ. ಈ ಚಿತ್ರದಲ್ಲಿ ಒಂದೇ ಒಂದು ಹಾಡಿದ್ದು ಆಂಟೋನಿ ಹಾಗೂ ಹರಿ ಕೃಷಾಂತ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಗೌತಮ್ ಕೃಷ್ಣ ಅವರ ಛಾಯಗ್ರಹಣ ಈ ಚಿತ್ರಕ್ಕಿದೆ.
ಬೆಂಗಳೂರು : ಬೆಂಗಳೂರಿನಲ್ಲಿ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಟ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ…
ಬೆಳಗಾವಿ : ಸರ್ಕಾರದಿಂದ ಪಡೆದ ಸಿಎ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣ ಮಾಡಲು ಈಗಿರುವ ಮೂರು ವರ್ಷಗಳ ಮಿತಿಯನ್ನು ಐದು ವರ್ಷಗಳಿಗೆ…
ಮೈಸೂರು : ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಹಾಗೂ ಮುಂಬೈನ ಬಾಂಧ್ರಾ ಪೊಲೀಸ್ ಅಧಿಕಾರಿ ಸೋಗಿನಲ್ಲಿ ನಗರದ ವೈದ್ಯರೊಬ್ಬರಿಗೆ…
ಮೈಸೂರು : ಜಾತಿ ನಿಂದನೆ, ಅಸ್ಪೃಶ್ಯತೆ ಆಚರಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರು ದಾಖಲು ಹಾಗೂ ತನಿಖೆ ನಡೆಸುವ ಉದ್ದೇಶದಿಂದ ಆರಂಭಗೊಂಡಿರುವ…
ಮೈಸೂರು : ಕರ್ನಾಟಕ ಪೊಲೀಸ್ ಅಕಾಡೆಮಿ ಮತ್ತು ಸಾವಿತ್ರಿಬಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯ ನಡುವೆ ಒಡಂಬಡಿಕೆಗೆ…
ಬೆಳಗಾವಿ (ಸುವರ್ಣಸೌಧ) : ಇತ್ತೀಚೆಗೆ ನಿಧನರಾದ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…