ಮನರಂಜನೆ

ಸತ್ಯಪ್ರಕಾಶ್ ‍ನಿರ್ದೇಶನದಲ್ಲಿ ಧೀರೇನ್‍ ಹೊಸ ಸಿನಿಮಾ

ರಾಮ್‍ಕುಮಾರ್ ಮಗ ಧೀರೇನ್‍ ರಾಮ್‍ಕುಮಾರ್ ಅಭಿನಯದ ‘ಪಬ್ಬಾರ್’ ಎಂಬ ಚಿತ್ರ ಕೆಲವು ದಿನಗಳ ಹಿಂದೆ ಪ್ರಾರಂಭವಾಗಿತ್ತು. ಈ ಚಿತ್ರವನ್ನು ಶಿವರಾಜಕುಮಾರ್ ಮತ್ತು ಗೀತಾ ಶಿವರಾಜಕುಮಾರ್ ನಿರ್ಮಿಸುತ್ತಿದ್ದು, ಚಿತ್ರದ ಚಿತ್ರೀಕರಣ ಪ್ರಗತಿಯಲ್ಲಿದೆ.

ಅದಕ್ಕೂ ಮೊದಲೇ, ಧೀರೇನ್‍ ಸದ್ದಿಲ್ಲದೆ ಇನ್ನೊಂದು ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ‘X&Y’ ಚಿತ್ರದ ನಂತರ ‘ರಾಮಾ ರಾಮಾ ರೇ’ ಖ್ಯಾತಿಯ ನಿರ್ದೇಶಕ ಡಿ. ಸತ್ಯ ಪ್ರಕಾಶ್‌ ಹೊಸ ಚಿತ್ರದೊಂದಿಗೆ ಘೋಷಿದ್ದಾರೆ. ಈ ಬಾರಿ ಅವರು ರಾಮ್‍ಕುಮಾರ್ ಮಗ ಧೀರೇನ್‍ ಜೊತೆಗೆ ಹೊಸ ಚಿತ್ರವೊಂದನ್ನು ನಿರ್ದೇಶಿಸುತ್ತಿದ್ದು, ಈ ಚಿತ್ರಕ್ಕೆ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಈ ಚಿತ್ರವನ್ನು ಆರ್‌.ವಿ ಮಲ್ಟಿ ಸಿನಿಸ್ ಕ್ರಿಯೇಟರ್ಸ್‌ ಸಂಸ್ಥೆಯು ನಿರ್ಮಿಸುತ್ತಿದ್ದು, ದೀಪಾವಳಿ ಪ್ರಯುಕ್ತ ಚಿತ್ರದ ಹೊಸ ಪೋಸ್ಟರ್ ಬಿಡುಗಡೆಯಾಗಿದೆ.

ಇದನ್ನು ಓದಿ: ಕಮ್ಯುನಿಸ್ಟ್ ನಾಯಕ ‘ಗುಮ್ಮಡಿ ನರಸಯ್ಯ’ನಾದ ಶಿವರಾಜಕುಮಾರ್

ದೀಪಾವಳಿ ಪ್ರಯುಕ್ತ ಶಿವರಾಜಕುಮಾರ್ ಮತ್ತು ಗೀತಾ ಶಿವರಾಜಕುಮಾರ್ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ‘ಪಬ್ಬಾರ್’ ಚಿತ್ರೀಕರಣ ಸಂಪೂರ್ಣವಾದ ನಂತರ ಹೊಸ ಚಿತ್ರ ಪ್ರಾರಂಭವಾಗುವ ಸಾಧ್ಯತೆ ಇದೆ.

ಸದ್ಯಕ್ಕೆ ಚಿತ್ರಕ್ಕೆ ಪ್ರೊಡಕ್ಷನ್‍ ನಂಬರ್‍ 1 ಎಂದು ಕರೆಯಲಾಗುತ್ತಿದ್ದು, ಸದ್ಯದಲ್ಲೇ ಚಿತ್ರದ ಹೆಸರು ಅಧಿಕೃತವಾಗಿ ಘೋಷಣೆಯಾಗಲಿದೆ. ಕಲಾವಿದರು, ತಂತ್ರಜ್ಞರ ಪಟ್ಟಿ ಸಹ ಹೊರಬೀಳಲಿದೆ.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಬೀದಿ ನಾಯಿಗಳ ಹಾವಳಿ ತಪ್ಪಿಸಿ

ಮೈಸೂರು ನಗರದ ರಿಂಗ್ ರಸ್ತೆಯಲ್ಲಿರುವ ಹಂಚ್ಯಾ-ಸಾತಗಳ್ಳಿ ‘ಬಿ’ ವಲಯದಲ್ಲಿ (ವಿಟಿಯು ಕಾಲೇಜು ಬಳಿ) ಬೀದಿ ನಾಯಿಗಳ ಹಾವಳಿ ವಿಪರೀತವಾಗಿದ್ದು, ಸ್ಥಳೀಯ…

4 mins ago

ಓದುಗರ ಪತ್ರ: ತಾಣ..ಬಾಣ !

ತಾಣ..ಬಾಣ ! ಬೇಕಿದ್ದರೆ ಬಿಟ್ಟೇವು ಒಂದಲ್ಲ, ಎರಡು ದಿನ.. ಶಾಲಾ ತಾಣ! ಬಿಟ್ಟಿರುವುದು ಹೇಗೆ ? ಸಾಮಾಜಿಕ ಜಾಲತಾಣ ಎಂಬುದು…

8 mins ago

ಓದುಗರ ಪತ್ರ: ಬೋಗಾದಿ- ಗದ್ದಿಗೆ ಜೋಡಿ ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಸಿ

ಮೈಸೂರಿನ ಬೋಗಾದಿ -ಗದ್ದಿಗೆ ಜೋಡಿ ರಸ್ತೆಯಲ್ಲಿ ವಾಹನಗಳ ಸಂಚಾರ ಹೆಚ್ಚಾಗಿದ್ದರಿಂದ ದಾಸನಕೊಪ್ಪಲು ಬಸ್ ನಿಲ್ದಾಣದ ಬಳಿ ಎರಡು ಕಡೆಯೂ ಒಂದು…

10 mins ago

ಓದುಗರ ಪತ್ರ: ನದಿ ತೀರದಲ್ಲಿ ಸ್ವಚ್ಛತೆ ಕಾಪಾಡಿ

ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ಸನಿಹದಲ್ಲಿ ಹರಿಯುವ ಕಪಿಲಾ ನದಿ ತೀರದಲ್ಲಿ ಪುಣ್ಯ ಸ್ನಾನ ಮಾಡುವವರು ಬಟ್ಟೆಗಳನ್ನು ಅಲ್ಲಿಯೇ ಬಿಟ್ಟು ಹೋಗುವುದರಿಂದ…

13 mins ago

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ: ಬಿಹಾರದಲ್ಲಿ ನಿತೀಶ್ ಕುಮಾರ್ ಆಡಳಿತಕ್ಕೆ ಎಳ್ಳುನೀರು

ಬಿಹಾರ ವಿಧಾನಸಭೆಗೆ ಚುನಾವಣೆ ನಡೆದು ಮೂರೂವರೆ ತಿಂಗಳಾಗುವಷ್ಟರಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾವಣೆಗೆ ಏಕಿಷ್ಟು ಆತುರ? ಏನು ಕಾರಣ ಎನ್ನುವುದಕ್ಕೆಲ್ಲ ಉತ್ತರ…

3 hours ago

ಕೊಡಗಿನಲ್ಲಿ ಜೀತ ಪದ್ಧತಿ ಇನ್ನೂ ಜೀವಂತ

ಕೃಷ್ಣ ಸಿದ್ದಾಪುರ ತೋಟದ ಮಾಲೀಕನ ದೌರ್ಜನ್ಯಕ್ಕೆ ತುತ್ತಾದ ೮ ಕುಟುಂಬಗಳ ೨೬ ಮಂದಿ ರಕ್ಷಣೆ; ಸಾಬೀತಾಗದ ಆರೋಪ  ಸಿದ್ದಾಪುರ: ವ್ಯವಸ್ಥೆಯಲ್ಲಿ ಶತಮಾನಗಳಿಂದ…

3 hours ago