ಕಳೆದ ವರ್ಷ, ರಾಧಿಕಾ ಕುಮಾರಸ್ವಾಮಿ ಅಭಿನಯದ ಮತ್ತು ನಿರ್ಮಾಣದ ‘ಭೈರಾದೇವಿ’ ಎಂಬ ಚಿತ್ರ ಬಿಡುಗಡೆಯಾಗಿದ್ದು ನೆನಪಿರಬಹುದು. ದೊಡ್ಡ ಪ್ರಚಾರದೊಂದಿಗೆ ಶುರುವಾದ ಈ ಚಿತ್ರ, ಬಿಡುಗಡೆಯ ನಂತರ ಹೆಚ್ಚು ಸದ್ದು ಮಾಡಲಿಲ್ಲ. ಆ ಚಿತ್ರವನ್ನು ನಿರ್ದೇಶಿಸಿದ್ದ ಶ್ರೀಜೈ, ಇದೀಗ ಸದ್ದಿಲ್ಲದೆ ಹೊಸ ಚಿತ್ರವೊಂದರ ಜೊತೆಗೆ ಬಂದಿದ್ದಾರೆ.
ಶ್ರೀಜೈ ಮೊದಲು ನಿರ್ದೇಶಿಸಿದ ಚಿತ್ರವೆಂದರೆ ಅದು ‘ದುನಿಯಾ’ ವಿಜಯ್ ಅಭಿನಯದ ‘RX ಸೂರಿ’. ಈ ಚಿತ್ರದ ನಂತರ ಅವರು ‘ಭೈರಾದೇವಿ’ ಚಿತ್ರವನ್ನು ಕೈಗೆತ್ತಿಕೊಂಡಿದ್ದರು. ಈ ಚಿತ್ರ ಬಿಡುಗಡೆಯಾಗಿ ಒಂದು ವರ್ಷದ ನಂತರ ಅವರು ಸಂದೀಪ್ ನಾಗರಾಜ್ ಅಭಿನಯದ ಹೊಸ ಚಿತ್ರವನ್ನು ನಿರ್ದೇಶಿಸಿಸುತ್ತಿದ್ದಾರೆ.
ಇದನ್ನು ಓಧಿ: ಸಾಮಾಜಿಕ ಕಾಳಜಿಯುಳ್ಳ ಸಿನಿಮಾ ಕಣ್ಮರೆ : ಸಿ.ಎಂ ವಿಷಾಧ
‘ಪ್ರೊಡಕ್ಷನ್ ನಂ.1’ ಎಂಬ ತಾತ್ಕಾಲಿಕ ಶೀರ್ಷಿಕೆ ಇಟ್ಟು, ಚಿತ್ರವನ್ನು ಘೋಷಣೆ ಮಾಡಲಾಗಿದ್ದು, ಇತ್ತೀಚಿಗೆ ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಚಿತ್ರದ ಸ್ಕ್ರಿಪ್ಟ್ ಪೂಜೆ ಸರಳವಾಗಿ ನೆರವೇರಿದೆ. ತಮ್ಮ ಮೊದಲ ಚಿತ್ರದಲ್ಲಿ ರೌಡಿಸಂ ಕಥೆಯನ್ನು ಹೇಳಿದ್ದ ಶ್ರೀಜೈ, ಈ ಬಾರಿಯೂ ಅಂಥದ್ದೇ ಕಥೆಯನ್ನು ತೆಗೆದುಕೊಂಡಿರುವ ಸಾಧ್ಯತೆ ಇದೆ ಎಂದು ಹೊಸ ಪೋಸ್ಟರ್ ಹೇಳುತ್ತದೆ. ಪೋಸ್ಟರ್‍ನಲ್ಲಿ ರಕ್ತ, ಮಚ್ಚು, ಹೆಣ, ಹಗ್ಗ ಎಲ್ಲವೂ ಇದ್ದು, ಇದೊಂದು ರೌಡಿಸಂ ಚಿತ್ರ ಇರಬಹುದು ಎಂಬ ಸುಳಿವು ನೀಡುತ್ತದೆ.
ಸಂದೀಪ್ ಈ ಹಿಂದೆ ‘ಅನಂತು vs ನುಸ್ರುತ್’, ‘ಪ್ರಭುತ್ವ’, ‘ಹಾಫ್ ಮೆಂಟ್ಲು’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದು, ಇದೀಗ ಶ್ರೀಜೈ ನಿರ್ದೇಶನದ ಹೊಸ ಚಿತ್ರದಲ್ಲಿ ಮಾಸ್ ಲುಕ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಡ್ರೀಮ್ ವರ್ಲ್ಡ್ ಸಿನಿಮಾಸ್ ಹಾಗೂ ರಾಧಾಕೃಷ್ಣ ಆರ್ಟ್ಸ್ ಬ್ಯಾನರ್‌ನಡಿ ಈ ಹೊಸ ಚಿತ್ರ ನಿರ್ಮಾಣವಾಗಲಿದ್ದು, ಸೋಲೋಮನ್ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ ಹಾಗೂ ಸೆಂಥಿಲ್ ಪ್ರಶಾಂತ್ ಸಂಗೀತ ಸಂಯೋಜಿಸುತ್ತಿದ್ದಾರೆ.
ಹೊಸದಿಲ್ಲಿ : ಮಧ್ಯಪ್ರಾಚ್ಯದ ಸಂಘರ್ಷದಿಂದ ಉಂಟಾಗಿರುವ ಎಲ್‌ಪಿಜಿ ಸಿಲಿಂಡರ್ ಕೊರತೆ ಬಗ್ಗೆ ಸಾರ್ವಜನಿಕರಲ್ಲಿ ಉದಿಸಿದ ಆತಂಕದ ನಡುವೆ, ಕೇಂದ್ರ ಸರ್ಕಾರವು…
ಬೆಂಗಳೂರು : ಬಹುನಿರೀಕ್ಷಿತ 2026ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ-20 ಕ್ರಿಕೆಟ್ ಟೂರ್ನಿಯ ಮೊದಲ ಹಂತದ ವೇಳಾಪಟ್ಟಿಯನ್ನು…
ಮೈಸೂರು : ಸಂಶೋಧನೆ ಮಾಡುವಾಗ ವಿದ್ಯಾರ್ಥಿಗಳು ತಮ್ಮ ಸಂಪೂರ್ಣ ಪರಿಶ್ರಮದಿಂದ ಸಂಶೋಧನೆಗಳನ್ನು ಸಿದ್ಧಪಡಿಸಬೇಕು, AI ತಂತ್ರಜ್ಞಾನದ ಕಡೆ ಮೊರೆಹೋಗುವುದನ್ನು ಕಡಿಮೆ…
ಸಾಲಿಗ್ರಾಮ : ತನ್ನ ಜಮೀನಿಗೆ ಸಂಬಂಧಿಸಿದ ಖಾತೆಯನ್ನು ಮಾಡಿಕೊಡದೆ ಸಾಲಿಗ್ರಾಮ ನಾಡಕಚೇರಿ ಅವರು ಸತಾಯಿಸುತ್ತಿದ್ದಾರೆ ಎಂದು ಮನನೊಂದು ಸಾಲಿಗ್ರಾಮದ ನಾಡ…
ಹೊಸದಿಲ್ಲಿ : ಪಶ್ಚಿಮ ಏಷ್ಯಾದ ಸಂಘರ್ಷ ಪೀಡಿತ ಸಮುದ್ರ ವಲಯದಲ್ಲಿ ವ್ಯಾಪಾರಿ ಹಡಗುಗಳ ಮೇಲೆ ನಡೆದ ದಾಳಿಯಲ್ಲಿ ಇಬ್ಬರು ಭಾರತೀಯರು…
ಗುಂಡ್ಲುಪೇಟೆ : ಪಟ್ಟಣದ ಹೊರವಲಯದ ವಿಜಯಪುರ ಅಮಾನಿ ಕೆರೆಯ ಬಳಿ ವ್ಯಕ್ತಿಯೊಬ್ಬ ಬರ್ಬರವಾಗಿ ಕೊಲೆಯಾಗಿರುವ ಘಟನೆ ನಡೆದಿದೆ. ತಾಲ್ಲೂಕಿನ ಮೂಖಹಳ್ಳಿ…