ಶಿವರಾಜಕುಮಾರ್ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ತಮ್ಮ ಮನೆಯಲ್ಲಿರುವುದಿಲ್ಲ, ಮನೆಯತ್ತ ಬರಬೇಡಿ, ಇದ್ದೇಲ್ಲೇ ಹಾರೈಸಿ ಎಂದು ಮೊದಲೇ ಸಾಮಾಜಿಕ ಜಾಲತಾಣಗಳ ಮೂಲಕ ಮನವಿ ಮಾಡಿಕೊಂಡಿದ್ದರು. ಹಾಗಾಗಿ, ಯಾವುದೇ ಸಂಭ್ರಮಾಚರಣೆ ಇರಲಿಲ್ಲ.
ಆದರೆ, ಶಿವರಾಜಕುಮಾರ್ ಹುಟ್ಟುಹಬ್ಬದ ಸಂದರ್ಭದಲ್ಲಿ ‘ಭೈರತಿ ರಣಗಲ್’ ಚಿತ್ರದ ಟೀಸರ್, ‘45’ ಚಿತ್ರದ ಮೊದಲ ನೋಟ, ‘ಉತ್ತರಕಾಂಡ’ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಇನ್ನು, ‘ಶಿವಗಣ’, ‘ದಳವಾಯಿ, ‘ಜಾವ’ ಮುಂತಾದ ಚಿತ್ರಗಳು ಘೋಷಣೆಯಾಗಿವೆ.
ಕಳೆದ ವರ್ಷ ಶಿವರಾಜಕುಮಾರ್ ಹುಟ್ಟುಹಬ್ಬದ ಸಂದರ್ಭದಲ್ಲಿ ‘ಇನ್ಸ್ಪೆಕ್ಟರ್ ವಿಕ್ರಮ್ ರಿಟರ್ನ್ಸ್’, ಅಜೇಯ್ ರಾವ್ ಜೊತೆಗೆ ಒಂದು ಚಿತ್ರ, ‘ಧೀರ’ ಸೇರಿದಂತೆ ಕೆಲವು ಚಿತ್ರಗಳು ಘೋಷಣೆಯಾಗಿದ್ದವು. ಈ ಒಂದು ವರ್ಷದಲ್ಲಿ ಸಂದೇಶ್ ನಾಗರಾಜ್ ನಿರ್ಮಾಣದಲ್ಲಿ ಒಂದು ಚಿತ್ರ, ಆರ್. ಚಂದ್ರು ನಿರ್ಮಾಣದಲ್ಲಿ ಒಂದು ಚಿತ್ರ, ದಿನಕರ್ ತೂಗುದೀಪ ನಿರ್ದೇಶನದ ಒಂದು ಚಿತ್ರ, ಹೇಮಂತ್ ರಾವ್ ನಿರ್ದೇಶನದ ‘ಭೈರವನ ಕೊನೆಯ ಪಾಠ’, ಕಾರ್ತಿಕ್ ಅದ್ವೈತ್ ನಿರ್ದೇಶನದ ಹೊಸ ಚಿತ್ರಗಳು ಘೋಷಣೆಯಾಗಿವೆ.
ಇಷ್ಟೊಂದು ಚಿತ್ರಗಳ ಪೈಕಿ ‘ಭೈರವನ ಕೊನೆಯ ಪಾಠ’ ಚಿತ್ರ ಮೊದಲು ಶುರುವಾಗುವ ಸಾಧ್ಯತೆ. ಈಗಾಗಲೇ ಇತ್ತೀಚೆಗೆ ಚಿತ್ರದ ಮೊದಲ ನೋಟ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಶಿವರಾಜಕುಮಾರ್, ಭೈರವ ಎಂಬ ಯೋಧನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಆಗಸ್ಟ್ನಿಂದ ಚಿತ್ರೀಕರಣ ಶುರುವಾಗಲಿದೆ.
ಇನ್ನು, ಆಗಸ್ಟ್ 15ರಂದು ‘ಭೈರತಿ ರಣಗಲ್’ ಬಿಡುಗಡೆ ಆಗಲಿದೆ ಎಂದು ಹೇಳಲಾಗಿತ್ತು. ಇಂದು ಚಿತ್ರದ ಟೀಸರ್ ಬಿಡುಗಡೆ ಆಗಿದ್ದು, ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿದೆ. ಆಗಸ್ಟ್ 15ರಂದು ಬಿಡುಗಡೆ ಆಗಬೇಕಿದ್ದ ಚಿತ್ರ, ಇದೀಗ ಸೆಪ್ಟೆಂಬರ್‍ಗೆ ಮುಂದೂಡಲಾಗಿದೆ.
ಬೆಂಗಳೂರು: ಸರ್ಕಾರಿ ಆಸ್ಪತ್ರೆಯಲ್ಲಿ ಜನೌಷಧಿ ಕೇಂದ್ರ ಮುಚ್ಚುವ ರಾಜ್ಯ ಸರ್ಕಾರದ ಆದೇಶಕ್ಕೆ ಧಾರವಾಡ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಸರ್ಕಾರಿ ಆಸ್ಪತ್ರೆಯ…
ಮೈಸೂರು: ಜಗತ್ಪ್ರಸಿದ್ಧ ಮೈಸೂರು ಅರಮನೆಯ ವರಾಹ ಗೇಟ್‌ನ ಮುಖ್ಯದ್ವಾರದ ಮೇಲ್ಛಾವಣಿ ಕುಸಿದು ಬಿದ್ದಿದ್ದು, ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಸಾರ್ವಜನಿಕರು ಆಗಮಿಸುವ…
ಬೆಳಗಾವಿ: ದ್ವೇಷ ಭಾಷಣ ವಿಧೇಯಕ ಮಂಡನೆ ವಿಚಾರಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿಯವರು ದ್ವೇಷ ಭಾಷಣ ಮಾಡದೇ…
ಮೈಸೂರು: ಅಕ್ರಮವಾಗಿ ಶ್ರೀಗಂಧ ಶೇಖರಣೆ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಮೈಸೂರಿನ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮೈಸೂರಿನ ಕೆಸರೆಯಲ್ಲಿ ಈ ಘಟನೆ…
ಬೆಂಗಳೂರು: ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಇಂದು ಕೂಡ 60 ಇಂಡಿಗೋ ವಿಮಾನಗಳ ಹಾರಾಟ ರದ್ದಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯಲ್ಲಿರುವ ಕೆಂಪೇಗೌಡ…
ನಂಜನಗೂಡಿನ ಸದ್ವೈದ್ಯ ಶಾಲಾ ಸಂಸ್ಥಾಪಕರಾಗಿದ್ದ ಬಿ.ವಿ.ಪಂಡಿತರು ಆಯುರ್ವೇದ ಉತ್ಪನ್ನಗಳನ್ನು ರೂಪಿಸಿದ ಹಿರಿಮೆ ಹೊಂದಿದ್ದಾರೆ. ದಂತಧಾವನ ಚೂರ್ಣ (ನಂಜನಗೂಡು ಹಲ್ಲು ಪುಡಿ)…