ಮನರಂಜನೆ

‘ತಮ್ಮುಡು’ ಜೊತೆಯಾದ ಸಪ್ತಮಿ; ಹಿಂದಿ ನಂತರ ತೆಲುಗು ಚಿತ್ರದಲ್ಲಿ

ಸಪ್ತಮಿ ಗೌಡ ಅಭಿನಯದ ‘ಯುವ’ ಬಿಡುಗಡೆಯಾಗಿ ಒಂದು ವರ್ಷವಾಗಿದೆ. ಈ ಒಂದು ವರ್ಷದಲ್ಲಿ ಸಪ್ತಮಿ ಅಭಿನಯದ ಯಾವೊಂದು ಚಿತ್ರವೂ ಬಿಡುಗಡೆ ಆಗಿರಲಿಲ್ಲ. ಆ ಸಂದರ್ಭದಲ್ಲೇ ತೆಲುಗು ಚಿತ್ರವೊಂದರಲ್ಲಿ ಅಭಿನಯಿಸುತ್ತಿರುವುದಾಗಿ ಸಪ್ತಮಿ ಗೌಡ ಹೇಳಿಕೊಂಡಿದ್ದರು. ಆ ಚಿತ್ರದ ಟೀಸರ್ ಈಗ ಬಿಡುಗಡೆಯಾಗಿದೆ.

ಅಂದಹಾಗೆ, ಸಪ್ತಮಿ ಗೌಡ ಅಭಿನಯಿಸುತ್ತಿರುವ ತೆಲುಗು ಚಿತ್ರದ ಹೆಸರು ‘ತಮ್ಮುಡು’. ಈ ಚಿತ್ರದಲ್ಲಿ ನಿತಿನ್‍ ನಾಯಕನಾಗಿ ಕಾಣಿಸಿಕೊಂಡರೆ, ವೇಣು ಶ್ರೀರಾಮ್‍ ನಿರ್ದೇಶನ ಮಾಡಿದ್ದಾರೆ. ನಿತಿನ್‍ ಜೊತೆಗೆ ಸಪ್ತಮಿ, ಸ್ವಸ್ತಿಕಾ ವಿಜಯ್‍, ವರ್ಷ ಬೋಳಮ್ಮ ಮುಂತಾದವರು ನಟಿಸಿದ್ದು, ಈ ಚಿತ್ರದಲ್ಲಿ ರಾಣಿ ಎಂಬ ಪಾತ್ರದಲ್ಲಿ ಸಪ್ತಮಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ‘ಮೂಡ್‍ ಆಫ್‍ ತಮ್ಮುಡು’ ಎಂಬ ಟೀಸರ್ ಬಿಡುಗಡೆಯಾಗಿದೆ.

ಸಪ್ತಮಿ ಗೌಡಗೆ ಈಗಾಗಲೇ ಹಿಂದಿ ಚಿತ್ರ ‘ದಿ ವ್ಯಾಕ್ಸಿನ್‍ ವಾರ್’ನಲ್ಲಿ ನಟಿಸಿ ಬಂದಿದ್ದಾರೆ. ಈಗ ಅವರು ತೆಲುಗು ಚಿತ್ರ ‘ತಮ್ಮುಡು’ವಿನಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕಾಗಿ ಸಪ್ತಮಿ ಗೌಡ, ಕುದುರೆ ಸವಾರಿ ಕಲಿತಿದ್ದಾರಂತೆ.

ಕನ್ನಡದ ವಿಷಯಕ್ಕೆ ಬಂದರೆ, ಅಭಿಷೇಕ್‍ ಅಂಬರೀಶ್‍ ಅಭಿನಯದ ‘ಕಾಳಿ’ ಚಿತ್ರದಲ್ಲಿ ಸಪ್ತಮಿ ನಾಯಕಿಯಾಗಿ ನಟಿಸಬೇಕಿತ್ತು. ಆದರೆ, ಚಿತ್ರ ಕಾರಣಾಂತರಗಳಿಂದ ನಿಂತಿದೆ. ಇದಲ್ಲದೆ, ಸತೀಶ್ ನೀನಾಸಂ ಅಭಿನಯದ ‘ರೈಸ್‍ ಆಫ್‍ ಅಶೋಕ’ ಚಿತ್ರದಲ್ಲಿ ಸಪ್ತಮಿ ನಾಯಕಿಯಾಗಿ ನಟಿಸುತ್ತಿದ್ದು, ಈ ಚಿತ್ರ ಇನ್ನಷ್ಟೇ ಬಿಡುಗಡೆ ಆಗಬೇಕಿದೆ. ಇದಲ್ಲದೆ ಅವರು ‘ತಮ’ ಎಂಬ ಹಿಂದಿ ಚಿತ್ರದಲ್ಲೂ ನಟಿಸುತ್ತಿರುವ ಸುದ್ದಿ ಇದೆ.

ಇನ್ನು, ‘ಕಾಂತಾರ – ಅಧ್ಯಾಯ 1’ರಲ್ಲಿ ಸಪ್ತಮಿ ನಟಿಸುತ್ತಾರಾ? ಎಂಬ ಪ್ರಶ್ನೆ ಇದಕ್ಕೂ ಮೊದಲು ಕೇಳಿಬಂದಿತ್ತು. ಇದು ‘ಕಾಂತಾರ’ದ ಹಿಂದಿನ ಕಥೆಯಾದ್ದರಿಂದ ಇಲ್ಲಿ ಲೀಲಾ ಪಾತ್ರವೂ ಇರುವುದಿಲ್ಲ, ತಾನೂ ನಟಿಸುತ್ತಿಲ್ಲ ಎಂದು ಸಪ್ತಮಿ ಗೌಡ ಸ್ಪಷ್ಟಪಡಿಸಿದ್ದಾರೆ.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಕರುನಾಡ ಹೆಮ್ಮೆ…

ಭಾರತೀಯ ಚಿತ್ರರಂಗದ ಹಲವಾರು ಭಾಷೆಗಳಲ್ಲಿ ಸಹಜ ನಟನೆಯ ಪ್ರಸದ್ಧಿ ಪಡೆದು... ಮೇರುನಟರಾಗಿ ಕಲಾಸೇವೆಗಾಗಿ ತಮನ್ನು ತಾವು ಮುಡಿಪಿಟ್ಟು ಭಾರತೀಯ ಚಿತ್ರರಂಗದ…

1 hour ago

ಓದುಗರ ಪತ್ರ: ಪಾಲಿಕೆ ಯೋಜನೆ ಸ್ವಾಗತಾರ್ಹ

ಜನನ ಹಾಗೂ ಮರಣ ಪ್ರಮಾಣ ಪತ್ರ ಪಡೆಯಲು ಜನರು ಮೈಸೂರು ಮಹಾ ನಗರ ಪಾಲಿಕೆಗೆ ಅರ್ಜಿ ಸಲ್ಲಿಸಿ ಪದೇ ಪದೇ…

1 hour ago

ಓದುಗರ ಪತ್ರ: ಯುಪಿಐ ಶುಲ್ಕ: ಚರ್ಚೆಯ ನಂತರ ಕ್ರಮ ಕೈಗೊಳ್ಳಿ

ದೇಶದಾದ್ಯಂತ ಸಣ್ಣ ಪುಟ್ಟ ವ್ಯಾಪಾರಗಳಿಂದ ಹಿಡಿದು ದೇಶದ ಬಹುದೊಡ್ಡ ವ್ಯಾಪಾರ ವಹಿವಾಟಿನವರೆಗೆ ಯುಪಿಐ ಮೂಲಕವೇ ಹಣ ಪಾವತಿಸಲು ಕೇಂದ್ರ ಸರ್ಕಾರ…

1 hour ago

ಬದಲಾದ ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಬ್ರಿಕ್ಸ್ ಪಾತ್ರ

ಡಾ. ಬಸವರಾಜ್ ಇಟ್ನಾಳ ಇತ್ತೀಚೆಗೆ ಬ್ರಿಕ್ಸ್ ಶೃಂಗ ಸಭೆ ದೆಹಲಿಯಲ್ಲಿ ನಡೆಯಿತು. ಬ್ರಿಕ್ಸ್ ದೇಶಗಳ ಪರಸ್ಪರ ಸಹಕಾರ ಮತ್ತು ಸ್ಥಳೀಯ…

1 hour ago

ಬಿಹಾರದಲ್ಲಿ ಯುಸಿಸಿಗೆ ನಿತೀಶ್, ಚಿರಾಗ್ ಪಕ್ಷಗಳ ಭಿನ್ನರಾಗ

ದೆಹಲಿ ಕಣ್ಣೋಟ: ಶಿವಾಜಿ ಗಣೇಶನ್‌  ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕಳೆದ ಹನ್ನೊಂದು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಬಿಜೆಪಿ…

1 hour ago

ಕೆಡ್ಲಿ ಬಾಳ್ಲಿ ನಮ್‌ ಬದ್ಕ್‌ ನಾಮ್‌ ನೋಡ್ಬೇಕು ಕಣ ಕುಸೋ

ಚಂದ್ರಶೇಖರ್ ಮೂರ್ತಿ ಕೆ.ಎಸ್. ಊರಿಂದ ಊರಿಗೆ ಬಸ್ ಹತ್ತಿ ಇಳಿದು ದುಡಿಮೆ ಮಾಡೋದು ಇದೆಯಲ್ಲ ಅದು ಅನುಭವಿಸುವ ಊರು ಬಿಟ್ಟ…

1 hour ago