ಬಳ್ಳಾರಿ: ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಪಡೆದು ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿರುವ ನಟ ದರ್ಶನ್‌ಗೆ ಜೈಲಾಧಿಕಾರಿಗಳು ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಬಳ್ಳಾರಿ ಜೈಲಿನಲ್ಲಿ ನಟ ದರ್ಶನ್ ಭಾರೀ ಅಹಂಕಾರ ಹಾಗೂ ದರ್ಪ ತೋರಿಸುತ್ತಿದ್ದಾರೆ ಎನ್ನಲಾಗಿದ್ದು, ದರ್ಶನ್‌ಗೆ ಜೈಲಾಧಿಕಾರಿಗಳು ಕ್ಲಾಸ್ ತೆಗೆದುಕೊಂಡು, ಬುದ್ಧಿವಾದ ಹೇಳಿದ್ದಾರೆ ಎನ್ನಲಾಗಿದೆ.
ನೀವು ಜೈಲಿನಲ್ಲಿ ಎಷ್ಟು ದಿನ ಇರುತ್ತೀರಿ ಅಷ್ಟು ದಿನ ಜೈಲಿನ ನಿಯಮಗಳನ್ನು ಪಾಲನೆ ಮಾಡಬೇಕು. ಖೈದಿಗಳಿಗೆ ಶಿಕ್ಷೆ ಜೊತೆಗೆ ನಡವಳಿಕೆ ಸರಿಯಾಗುತ್ತದೆ ಎಂದು ಕೋರ್ಟ್ ಜೈಲಿಗೆ ಕಳುಹಿಸುತ್ತದೆ. ಆದರೆ ನೀವು ಜೈಲಿನ ಶಿಸ್ತನ್ನು ಉಲ್ಲಂಘನೆ ಮಾಡುತ್ತಿದ್ದೀರಿ ಎಂದು ಹೇಳಿದ್ದಾರೆ.
ಸೌಲಭ್ಯಗಳಿಗಾಗಿ ಪದೇ ಪದೇ ಜೈಲು ಸಿಬ್ಬಂದಿಗೆ ಕಿರಿಕಿರಿ ಮಾಡುತ್ತಿದ್ದೀರಿ. ನಾವು ಕಾನೂನು ಪ್ರಕಾರ ಏನು ಮಾಡಲು ಸಾಧ್ಯ ಅಷ್ಟನ್ನು ಮಾತ್ರ ಕೊಡುತ್ತೇವೆ. ಅದನ್ನು ಬಿಟ್ಟು ಹೆಚ್ಚಿನದನ್ನು ಕೊಡಲು ಸಾಧ್ಯವಿಲ್ಲ. ನಿಮಗೆ ಹೆಚ್ಚಿನ ಸೌಲಭ್ಯ ಬೇಕು ಎಂದರೆ ಕೋರ್ಟ್‌ಗೆ ಅರ್ಜಿ ಹಾಕಿ ಎಂದು ನಟ ದರ್ಶನ್‌ಗೆ ಜೈಲರ್ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ವಿಐಪಿಗಳು ಬಂದಾಗ ಇಲ್ಲವೆ, ದೊಡ್ಡ ಸಮಾರಂಭಗಳು ಇಲ್ಲವೆ ಪ್ರತಿಭಟನೆಗಳನ್ನು ಹಮ್ಮಿಕೊಂಡಿದ್ದ ಸಂದರ್ಭದಲ್ಲಿ ಮಾಧ್ಯಮಗಳಲ್ಲಿ ಬಿಗಿ ಬಂದೋಬಸ್ತ್ ಪದ ಬಳಕೆಯ ಪರಿಚಯ…
ರಾಜ್ಯದ ನೂತನ ರಾಜ್ಯಪಾಲರಾಗಿ ಡಾ.ಸುಧಾ ಯಾದವ್ ಅವರನ್ನು ನೇಮಕ ಮಾಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಆದೇಶ ಹೊರಡಿಸಿದ್ದು, ರಾಜ್ಯದ ರಾಜ್ಯಪಾಲರಾಗಿ…
ಔಷಧಿಗಳ ನೈಜ ದರಕ್ಕೂ ಮತ್ತು ಮಾರಾಟ ದರಕ್ಕೂ ಅಜಗಜಾಂತರ ವ್ಯತ್ಯಾಸ ಇರುವುದನ್ನು ಇತ್ತೀಚೆಗೆ ದೇಶದ ಸರ್ವೋಚ್ಚ ನ್ಯಾಯಾಲಯ ಗಮನಿಸಿ ತೀವ್ರ…
ಪಂಜುಗಂಗೊಳ್ಳಿ ಅವರ ವಾರದ ಅಂಕಣ ಬಡಪಾಯಿಗಳ ಸೇವೆ ಮಾಡಿ ಜನರ ಹೃದಯ ಗೆದ್ದ ಮಾತೆ ಮದರ್ ಥೆರೇಸಾ ಈಗ ನಮ್ಮ…
ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ ಅಂತೂ ನಾಲ್ಕು ಹುಡುಗರು ಸ್ಟೇಷನ್ ಒಳಗೆ ಹೋದರು ಎಂದರೆ ಮತ್ತೊಂದು ಸಂಕಟ ಶುರು ಪಿಎಸ್ಐ…
ನವೀನ್ ಡಿಸೋಜ ಒಂದೇ ದಿನದಲ್ಲಿ ಕೊಡಗಿನ ಪ್ರಮುಖ ಪ್ರವಾಸಿ ತಾಣಗಳ ವೀಕ್ಷಣೆ; ವಯಸ್ಕರಿಗೆ ೪೦೦, ಮಕ್ಕಳಿಗೆ ೩೦೦ ರೂ.ದರ ಮಡಿಕೇರಿ:…