ಮನರಂಜನೆ

ಬಾಲಿವುಡ್‍ಗೆ ರಾಜ್‍ ಶೆಟ್ಟಿ; ಅನುರಾಗ್‍ ಕಶ್ಯಪ್‍ ಚಿತ್ರದಲ್ಲಿ ನಟನೆ

ರಾಜ್‍ ಬಿ. ಶೆಟ್ಟಿ ಇತ್ತೀಚೆಗೆ ಬಹಳ ಸುದ್ದಿಯಲ್ಲಿದ್ದಾರೆ. ಅವರು ಈಗಾಗಲೇ ಅವರ ಒಂದು ಮಲಯಾಳಂ ಚಿತ್ರ ಬಿಡುಗಡೆಯಾಗಿದೆ. ಇನ್ನೊಂದು ಮುಂದಿನ ತಿಂಗಳು ಬಿಡುಗಡೆ ಆಗಲಿದೆ. ಕನ್ನಡದಲ್ಲಿ ಇತ್ತೀಚೆಗೆ ‘ರಕ್ಕಸಪುರದೊಳ್‍’ ಎಂಬ ಚಿತ್ರ ಶುರುವಾಗಿದೆ. ಈ ಮಧ್ಯೆ, ಅವರು ಬಾಲಿವುಡ್‍ಗೆ ಹೊರಟು ನಿಂತಿದ್ದಾರೆ.

ಹೌದು, ಹಿಂದಿಯ ಒಂದು ಚಿತ್ರದಲ್ಲಿ ರಾಜ್‍ ಶೆಟ್ಟಿ ನಟಿಸಿದ್ದಾರೆ. ಈ ಕುರಿತು ಕೆಲವು ದಿನಗಳಿಂದ ಗುಸುಗುಸು ಇದ್ದೇ ಇತ್ತು. ಇತ್ತೀಚೆಗೆ ‘ರಕ್ಕಸಪುರದೊಳ್’ ಚಿತ್ರದ ಪತ್ರಿಕಾಗೋಷ್ಠಿಯ ನಂತರ ರಾಜ್‍ ಶೆಟ್ಟಿ, ಈ ವಿಷಯ ನಿಜ ಎಂದು ಒಪ್ಪಿಕೊಂಡಿದ್ದಾರೆ. ಬಾಲಿವುಡ್‍ನ ಖ್ಯಾತ ನಿರ್ದೇಶಕ ಅನುರಾಗ್‍ ಕಶ್ಯಪ್‍ ನಿರ್ದೇಶನದ ಚಿತ್ರವೊಂದರಲ್ಲಿ ನಟಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ಈ ಕುರಿತು ಮಾತನಾಡಿರುವ ರಾಜ್ ಶೆಟ್ಟಿ, ‘ನಾನು ಅನುರಾಗ್‍ ಕಶ್ಯಪ್‍ ಅವರ ದೊಡ್ಡ ಅಭಿಮಾನಿ. ಇತ್ತೀಚೆಗೆ ಅವರೊಂದು ಸ್ಟೇಟಸ್‍ ಹಾಕಿದ್ದರು. ಅದನ್ನು ನೋಡಿ, ‘ನಿಮ್ಮ ಚಿತ್ರಕ್ಕೆ ನನ್ನಿಂದ ಏನಾದರೂ ಸಹಾಯವಾಗಬೇಕಿದ್ದರೆ ಹೇಳಿ’ ಎಂದು ಮೆಸೇಜ್‍ ಹಾಕಿದ್ದೆ. ಅದಕ್ಕೆ ಅವರು ಒಂದು ಅತಿಥಿ ಪಾತ್ರದಲ್ಲಿ ನಟಿಸುವುದಕ್ಕೆ ಸಾಧ್ಯವಾ ಎಂದು ಕೇಳಿದ್ದರು. ಅವರ ಚಿತ್ರಗಳಲ್ಲಾದರೆ, ಸುಮ್ಮನೆ ಅಲ್ಲಿಂದ ಇಲ್ಲಿಗೆ ಹಾದು ಹೋಗುವ ಪಾತ್ರದಲ್ಲಾದರೂ ನಾನು ನಟಿಸುವುದಕ್ಕೆ ತಯಾರು. ಅವರಿಗೆ ಅದನ್ನೇ ಹೇಳಿದ್ದೆ. ಏಕೆಂದರೆ, ನಾನು ಅವರಿಂದ ಬಹಳ ವಿಷಯ ಕಲಿತಿದ್ದೇನೆ. ಅವರ ಸಿನಿಮಾ ನೋಡಿ ಬೆಳೆದಿದ್ದೇನೆ ಮತ್ತು ಅವರ ಋಣದಲ್ಲಿದ್ದೇನೆ. ಅವರು ಓಕೆ ಅಂದರು. ಮಿಕ್ಕಂತೆ ಪಾತ್ರದ ಬಗ್ಗೆ ಹೆಚ್ಚು ವಿಷಯ ಗೊತ್ತಿಲ್ಲ. ಸದ್ಯದಲ್ಲೇ ಹೋಗಿ ಚಿತ್ರೀಕರಣದಲ್ಲಿ ಭಾಗವಹಿಸುತ್ತೇನೆ’ ಎಂದರು.

ರಾಜ್‍ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಗರುಡ ಗಮನ ಋಷಭ ವಾಹನ’ ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ ಚಿತ್ರ ನೋಡಿ ಅನುರಾಗ್ ಕಶ್ಯಪ್‍ ಬಹಳ ಒಳ್ಳೆಯ ಮಾತುಗಳನ್ನು ಆಡಿದ್ದರು. ಶೆಟ್ಟಿ ಕೆಲಸವನ್ನು ಹೊಗಳಿದ್ದಾರೆ. ಆದರೆ, ಅದನ್ನು ತಾನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎನ್ನುತ್ತಾರೆ ರಾಜ್‍. ‘ಅದನ್ನು ಗಂಭೀರವಾಗಿ ತೆಗೆದುಕೊಂಡರೆ, ನಾವು ಸಮರಾಗಿ ಆಗಿಬಿಡುತ್ತೀವಿ. ಅವರು ನನ್ನ ಸ್ಫೂರ್ತಿ. ಅವರ ಸಮನಾಗಿ ಗುರುತಿಸಿಕೊಳ್ಳುವ ಯಾವುದೇ ಆಸಕ್ತಿ ಇಲ್ಲ. ನನಗೆ ಅವರ ಕೆಲಸ ಇಷ್ಟ. ನನಗೆ ಅವರು ಮತ್ತೊಮ್ಮೆ ಗೆಲ್ಲಬೇಕು, ಮತ್ತೆ ಅವರು ಒಂದಿಷ್ಟು ಒಳ್ಳೆಯ ಚಿತ್ರಗಳನ್ನು ಕೊಡಬೇಕು ಎಂಬುದಷ್ಟೇ ಆಸೆ. ಎತ್ತರವಿರುವ ಬೆಟ್ಟವನ್ನು ದೂರದಿಂದಲೇ ನೋಡಿ ಖುಷಿಪಡಬೇಕು, ಹತ್ತಿರ ಹೋಗುವ ಪ್ರಯತ್ನ ಮಾಡಬಾರದು’ ಎಂಬುದು ರಾಜ್‍ ಅಭಿಪ್ರಾಯ.

ಭೂಮಿಕಾ

Recent Posts

ಎಸ್ಐಆರ್ ಪ್ರಕ್ರಿಯೆ ರದ್ದಾಗಬೇಕು: ಸಚಿವ ಯತೀಂದ್ರ ಸಿದ್ದರಾಮಯ್ಯ

ಮೈಸೂರು: ರಾಜ್ಯದಲ್ಲಿ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆ ರದ್ದಾಗಬೇಕು ಎಂದು ಸಚಿಚ ಯತೀಂದ್ರ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಈ ಬಗ್ಗೆ ಮೈಸೂರಿನಲ್ಲಿಂದು ಸುದ್ದಿಗಾರರ…

4 mins ago

ನಾಡಹಬ್ಬ ಮೈಸೂರು ದಸರಾ: ಸಂಪ್ರದಾಯದಂತೆ ಪ್ರಮೋದಾ ದೇವಿ ಒಡೆಯರ್ ಗೆ ಆಹ್ವಾನ

ಮೈಸೂರು: ಮೈಸೂರು ದಸರಾ ಮಹೋತ್ಸವ ರಂಗೇರುತ್ತಿದೆ. ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಅವರಿಗೆ ದಸರಾಗೆ ಆಹ್ವಾನಿಸಲಾಗಿದೆ. ಈ ಬಗ್ಗೆ ಮಾತನಾಡಿದ…

13 mins ago

ಕೊಡಗು: ಭಾರೀ ಗಾಳಿ ಮಳೆಗೆ ಪಿಕಪ್ ವಾಹನದ ಮೇಲೆ ಬಿದ್ದ ಮರ: ಕೂದಲೆಳೆಯಲ್ಲಿ ಪಾರಾದ ಚಾಲಕ

ಕೊಡಗು: ಭಾರೀ ಗಾಳಿ ಮಳೆಗೆ ಪಿಕಪ್ ವಾಹನದ ಮೇಲೆ ಮರ ಬಿದ್ದಿದ್ದು, ಕೂದಲೆಳೆ ಅಂತರದಲ್ಲಿ ಚಾಲಕ ಪಾರಾಗಿದ್ದಾನೆ. ಕೂಡುಮಂಗಳೂರು ದೊಡ್ಡಮ್ಮತಾಯಿ…

7 hours ago

ಓದುಗರ ಪತ್ರ: ಗೊಬ್ಬಳಿ ಮರ ಬಸ್‌ನಿಲ್ದಾಣದ ಆವರಣ ಸ್ವಚ್ಛವಾಗಿರಲಿ

ಸಾಂಸ್ಕೃತಿಕ ನಗರಿ ಮೈಸೂರಿನ ದಕ್ಷಿಣ ಭಾಗದ ಜೆ. ಪಿ. ನಗರದ ಅಕ್ಕಮಹಾದೇವಿ ರಸ್ತೆಯ ಗೊಬ್ಬಳಿ ಮರ ಬಸ್ ನಿಲ್ದಾಣವು ಪ್ರತಿನಿತ್ಯ…

7 hours ago

ಓದುಗರ ಪತ್ರ: ಮಹಾತ್ಮರ ರಾಮರಾಜ್ಯದ ಕಲ್ಪನೆಯ ಸಂದೇಶ ಸಾಕಾರಗೊಳ್ಳಲಿ

ಗಾಂಧಿ ಜಯಂತಿಯಾದ ಅ.೨ರಂದು ದೇಶಾದ್ಯಂತ ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ನೆನೆಯಲಾಗುತ್ತದೆ. ಬಾಪು ಎಂದೇ ಕರೆಯಲ್ಪಡುವ ಗಾಂಧೀಜಿ ಈ ದೇಶದ ಸ್ವಾತಂತ್ರಕ್ಕಾಗಿ…

7 hours ago

ಓದುಗರ ಪತ್ರ: ಇಬ್ಬರು ಮಹಾನ್ ನಾಯಕರ ಆಶಯ ಮುಂದಿನ ಪೀಳಿಗೆಗೆ ದಾಟಿಸಲಿ

ದೇಶದ ಇತಿಹಾಸದಲ್ಲಿ ಅಕ್ಟೋಬರ್ ೨ಕ್ಕೆ ವಿಶೇಷವಾದ ಸ್ಥಾನವಿದೆ. ಈ ದಿನ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನದ ಜೊತೆಗೆ, ಭಾರತದ ಮಾಜಿ…

7 hours ago