ಮನರಂಜನೆ

ಸಂಖ್ಯೆ ತಾತ್ಕಾಲಿಕ, ಜನರ ಪ್ರೀತಿ ಮುಖ್ಯ; ‘ಪುಷ್ಪ 2’ ಯಶಸ್ಸಿನ ಬಗ್ಗೆ ಅಲ್ಲು ಅರ್ಜುನ್

ಟಾಲಿವುಡ್‍ ನಟ ಅಲ್ಲು ಅರ್ಜುನ್‍ ಜೀವನದಲ್ಲಿ, ಕಳೆದೊಂದು ವಾರದಲ್ಲಿ ಏನೆಲ್ಲಾ ಆಗಿ ಹೋಯ್ತು. ಕಳೆದ ವಾರವಷ್ಟೇ ‘ಪುಷ್ಪ 2’ ಚಿತ್ರ ಬಿಡುಗಡೆಯಾಯ್ತು. ಚಿತ್ರವು ಒಂದು ವಾರದಲ್ಲಿ ಸಾವಿರ ಕೋಟಿ ರೂ. ಗಳಿಕೆ ಮಾಡಿ, ಹೊಸ ದಾಖಲೆಯನ್ನೇ ನಿರ್ಮಿಸಿತು. ಅದಾಗುತ್ತಿದ್ದಂತೆಯೇ, ಚಿತ್ರದ ಬಿಡುಗಡೆ ಸಮಾರಂಭದಲ್ಲಿ ನಡೆದು ಒಂದು ದುರ್ಘಟನೆಯಿಂದ ಅರ್ಜುನ್‍, ಒಂದು ರಾತ್ರಿ ಜೈಲಿನಲ್ಲಿ ಕಳೆಯುವಂತಾಯಿತು.

ಅಲ್ಲು ಅರ್ಜುನ್‍, ಶುಕ್ರವಾರ ಅರೆಸ್ಟ್‍ ಆಗುವುದಕ್ಕಿಂತ ಮೊದಲು ಗುರುವಾರ, ನವದೆಹಲಿಯಲ್ಲಿ ನಡೆದು ‘ಪುಷ್ಪ 2’ ಚಿತ್ರದ ಯಶಸ್ಸಿನ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿರುವ ಅಲ್ಲು ಅರ್ಜುನ್‍, ಇದು ಬರೀ ತಂಡದ ಯಶಸ್ಸಲ್ಲ, ದೇಶದ ಯಶಸ್ಸು ಎಂದು ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ‘ಇದು ಬರೀ ನನ್ನ ಯಶಸ್ಸಲ್ಲ. ಇದು ನಮ್ಮ ದೇಶದ ಯಶಸ್ಸು. ಈ ಸಾವಿರ ಕೋಟಿ ಗಳಿಕೆ ಎನ್ನುವುದು ಜನರ ಪ್ರೀತಿಯ ಪ್ರತಿಬಿಂಬ. ಈ ಸಂಖ್ಯೆಗಳೆಲ್ಲಾ ತಾತ್ಕಾಲಿಕ. ಜನರ ಪ್ರೀತಿ ಬಹಳ ಮುಖ್ಯ. ದಾಖಲೆಗಳಿರುವುದೇ ಮುರಿಯುವುದಕ್ಕೆ. ಮುಂದಿನ ಎರಡ್ಮೂರು ತಿಂಗಳು, ಈ ದಾಖಲೆಗಳನ್ನು ನೋಡಿ ಖುಷಿಪಡುತ್ತೇನೆ. 2025ರ ಬೇಸಿಗೆಯ ಹೊತ್ತಿಗೆ, ಈ ದಾಖಲೆಗಳನ್ನು ಬೇರೊಂದು ಚಿತ್ರ ಮುರಿಯಬೇಕು ಎಂಬುದು ನನ್ನಾಸೆ’ ಎಂದರು.

ಇದು ಹೊಸ ಭಾರತ, ನಿಲ್ಲುವುದಿಲ್ಲ, ತಲೆ ಬಗಿಸುವುದಿಲ್ಲ ಎಂದಿರುವ ಅರ್ಜುನ್‍, ‘ಒಂದು ಭಾಷೆಯ ಚಿತ್ರವು ಹಲವು ರಾಜ್ಯಗಳಲ್ಲಿ ಯಶಸ್ವಿಯಾಗಿವೆ. ಇದು ಈ ದೇಶದಲ್ಲಿ ಜನ ಸಿನಿಮಾವನ್ನು ಎಷ್ಟು ಪ್ರೀತಿಸುತ್ತಾರೆ ಎಂಬುದಕ್ಕೆ ಒಂದು ಸಣ್ಣ ಉದಾಹರಣೆ. ಮುಂದೊಂದು ದಿನ ಭಾರತವು ಜಗತ್ತಿನ ಭವಿಷ್ಯವನ್ನು ನಿರ್ಧರಿಸುತ್ತದೆ. ಭಾರತವು ಜಗತ್ತಿನ ಮುಂಚೂಣಿಯಲ್ಲಿರುವ ದೇಶವಾಗುತ್ತದೆ. ಇದು ಹೊಸ ಭಾರತ, ನಿಲ್ಲುವುದಿಲ್ಲ, ತಲೆ ಬಗಿಸುವುದಿಲ್ಲ’ ಎಂದು ಹೇಳಿದ್ದಾರೆ.

ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸಿರುವ ಈ ಚಿತ್ರಕ್ಕೆ ಸುಕುಮಾರ್‍ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ‘ಪುಷ್ಪ 2’ ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಜಗಪತಿ ಬಾಬು, ತಾರಕ್‍ ಪೊನ್ನಪ್ಪ, ರಾವ್‍ ರಮೇಶ್‍, ಫಹಾದ್‍ ಫಾಸಿಲ್‍, ಸುನೀಲ್, ಅನುಸೂಯ ಭಾರದ್ವಾಜ್‍ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಭೂಮಿಕಾ

Recent Posts

ಓದುಗರ ಪತ್ರ: ಕೆ.ಕೆ.ಮಹಮದ್ ಅವರ ಹೇಳಿಕೆ ಪ್ರಬುದ್ಧ ನಡೆ

ಕೇರಳದ ಕೋಯಿಕ್ಕೋಡಿನಲ್ಲಿ ಸುದ್ದಿಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಮಾಜಿ ಪ್ರಾದೇಶಿಕ ನಿರ್ದೇಶಕರಾದ ಕೆ.ಕೆ. ಮಹಮ್ಮದ್…

6 mins ago

ಓದುಗರ ಪತ್ರ: ಡಿಜಿಟಲ್ ಇ-ಸ್ಟ್ಯಾಂಪ್ ವ್ಯವಸ್ಥೆ ನಾಗರಿಕ ಸ್ನೇಹಿ

ಕಂದಾಯ ಇಲಾಖೆ ಡಿಜಿಟಲ್ ಇ-ಸ್ಟ್ಯಾಂಪ್ ವ್ಯವಸ್ಥೆ ಜಾರಿಗೆ ದಿಟ್ಟ ಹೆಜ್ಜೆ ಇಟ್ಟಿದೆ. ಇದು ನಾಗರಿಕ ಸ್ನೇಹಿಯೂ ಆಗಿದೆ. ಇಂದಿಗೂ ತಾಲ್ಲೂಕು…

9 mins ago

ಓದುಗರ ಪತ್ರ: ದ್ವೇಷ ಭಾಷಣಕ್ಕೆ  ಕಾನೂನು ಕಡಿವಾಣ ಸಾಗತಾರ್ಹ

ರಾಜ್ಯದಲ್ಲಿ ಇನ್ನು ಮುಂದೆ, ಜಾತಿ, ಧರ್ಮ ಭಾಷೆ, ಧಾರ್ಮಿಕ ಮತ್ತು ಜನಾಂಗೀಯ ನಿಂದನೆ, ಲೈಂಗಿಕ ದೃಷ್ಟಿಕೋನ ಮತ್ತು ಜನ್ಮ ಸ್ಥಳದ…

23 mins ago

ಡಾ.ಬಿ.ಆರ್.ಅಂಬೇಡ್ಕರ್ ಎಂಬ ಅಮರ ಜಗತ್ತು…

ಮಲ್ಕುಂಡಿ ಮಹದೇವಸ್ವಾಮಿ ವಿಕಲ್ಪಗಳ ಅಲೆಯ ಮೇಲೆ ಸದಾ ತೇಲಿ ಬರುವ ಸಂಕಲ್ಪ  ಬಾಬಾ ಸಾಹೇಬರ ಪಾರ್ಥಿವ ಶರೀರ ಪ್ರಕೃತಿಯಲ್ಲಿ ಲೀನವಾಗುವ…

29 mins ago

ರೈಲ್ವೆ ಮೇಲ್ಸೇತುವೆ; ಭೂ ದರ ಕಗ್ಗಂಟು ಬಗೆಹರಿಯುವುದೇ?

ಚಾಮರಾಜನಗರ: ಚಾ.ನಗರ-ನಂಜನಗೂಡು ಹೆದ್ದಾರಿಯಲ್ಲಿರುವ ಪಣ್ಯದಹುಂಡಿ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಸ್ವಾಧಿನಪಡಿಸಿಕೊಂಡಿರುವ ಭೂಮಿಯ ದರ ನಿಗದಿ ಕಗ್ಗಂಟಿನ ವಿಚಾರ ಅಂತಿಮ…

3 hours ago

ಜನವರಿಗೆ ಚಾ.ಬೆಟ್ಟದ ಅಭಿವೃದ್ಧಿ ಕಾಮಗಾರಿ ಶುರು

ಮೈಸೂರು: ಪ್ರಸಿದ್ಧ ಯಾತ್ರಾ ಸ್ಥಳ ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ಧಿ ಕಾಮಗಾರಿಯು ಕೇಂದ್ರ ಸರ್ಕಾರದ ಪ್ರಸಾದ ಯೋಜನೆಯಡಿ ಜನವರಿ ಮೊದಲ…

3 hours ago