ಮನರಂಜನೆ

ಮೇಘಾ ಶೆಟ್ಟಿ ಹುಟ್ಟುಹಬ್ಬಕ್ಕೆ ಮೂರು ಚಿತ್ರತಂಡಗಳ ಉಡುಗೊರೆ

ಮೇಘಾ ಶೆಟ್ಟಿ ಕಿರುತೆರೆಯಲ್ಲಿ ಅದೆಷ್ಟು ದೊಡ್ಡ ಸ್ಟಾರ್ ನಟಿಯಾಗಿ ಗುರುತಿಸಿಕೊಂಡರೂ, ಹಿರಿತೆರೆಯಲ್ಲಿ ಅದೇ ಗೆಲುವನ್ನು ನೋಡುವುದಕ್ಕೆ ಸಾಧ್ಯವಾಗಲಿಲ್ಲ. ‘ಜೊತೆಜೊತೆಯಲಿ’ ಖ್ಯಾತಿಯ ಮೇಘಾ ಶೆಟ್ಟಿ ಅಭಿನಯದ ಮೊದಲ ಎರಡು ಚಿತ್ರಗಳಾದ ‘ಥ್ರಿಬ್ಬಲ್ ರೈಡಿಂಗ್’ ಮತ್ತು ‘ದಿಲ್ ಪಸಂದ್’ ಅಷ್ಟೇನೂ ಸದ್ದು ಮಾಡಲಿಲ್ಲ. ಮೂರನೆಯ ಚಿತ್ರವಾದ ‘ಕೈವ’ ಚಿತ್ರದಲ್ಲಿ ಅವರ ಅಭಿನಯದ ಬಗ್ಗೆ ಮೆಚ್ಚುಗೆ ಕೇಳಿಬಂದರೂ, ಚಿತ್ರ ನಿರೀಕ್ಷೆಯಷ್ಟು ಗೆಲ್ಲಲಿಲ್ಲ.

ಈಗ್ಯಾಕೆ ಮೇಘಾ ಶೆಟ್ಟಿ ವಿಷಯವೆಂದರೆ, ಭಾನುವಾರ ಆಕೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಈ ಸಂದರ್ಭದಲ್ಲೀ ಮೂರೂ ಚಿತ್ರತಂಡಗಳು ಆಕೆಯ ಮೊದಲ ನೋಟ ಬಿಡುಗಡೆ ಮಾಡುವ ಮೂಲಕ ಶುಭ ಕೋರಿದ್ದಾರೆ.

ಈ ಪೈಕಿ ಮೊದಲನೆಯದು ‘ಆಪರೇಷನ್ ಲಂಡನ್ ಕೆಫೆ’. ಇದೊಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಕನ್ನಡ, ಮರಾಠಿ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಈ ಚಿತ್ರ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಇದೊಂದು ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಕವೀಶ್ ಶೆಟ್ಟಿ ನಾಯಕನಾಗಿ ಕಾಣಿಸಿಕೊಂಡರೆ, ಮೇಘಾ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಈಗಾಗಲೇ ಈ ಚಿತ್ರದಲ್ಲಿ ತಮ್ಮ ಭಾಗದ ಕೆಲಸವನ್ನು ಮೇಘಾ ಮುಗಿಸಿದ್ದಾರೆ. ಈ ಚಿತ್ರವನ್ನು ‘ಸಡಗರ’ ರಾಘವೇಂದ್ರ ನಿರ್ದೇಶಿಸುತ್ತಿದ್ದಾರೆ.

ಇದಲ್ಲದೆ, ಪ್ರಜ್ವಲ್‍ ದೇವರಾಜ್‍ ಅಭಿನಯದ ‘ಚೀತಾ’ ಚಿತ್ರಕ್ಕೂ ಮೇಘಾ ನಾಯಕಿಯಾಗಿದ್ದಾರೆ. ‘ಆಪರೇಷನ್‍ ಲಂಡನ್‍ ಕೆಫೆ’ ಚಿತ್ರದ ಪೋಸ್ಟರ್‍ನಲ್ಲಿ ಮೇಘಾ ಸೌಮ್ಯ ಹುಡುಗಿಯಾಗಿ ಕಾಣಿಸಿಕೊಂಡರೆ, ‘ಚೀತಾ’ದಲ್ಲಿ ವ್ಯಘ್ರ ರೂಪ ತಾಳಿದ್ದಾರೆ. ಮುಖಕ್ಕೆಲ್ಲಾ ಕುಂಕುಮ ಬಳಿದುಕೊಂಡು, ಕೈಯಲ್ಲೊಂದು ಲಾಂಗ್ ಹಿಡಿದು, ದುಷ್ಟರ ಸಂಹಾರಕ್ಕೆ ಹೊರಟಿರುವಂತೆ ಕಾಣುತ್ತಾರೆ. ಈ ಚಿತ್ರವನ್ನು ಪ್ರತಿಭಾ ಅವರು ನಿರ್ಮಿಸಿದರೆ, ನೃತ್ಯ ನಿರ್ದೇಶಕ ಕಲೈ ಕುಮಾರ್‍ ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ.

ಇನ್ನು, ಮೇಘಾ ಅಭಿನಯದ ಮತ್ತೊಂದು ಚಿತ್ರ ‘ಗ್ರಾಮಾಯಣ’. ಹೆಸೆರೇ ಹೇಳುವಂತೆ ಇದೊಂದು ಗ್ರಾಮೀಣ ಸೊಗಡಿನ ಚಿತ್ರವಾಗಿದ್ದು, ಮೇಘಾ ಇದರಲ್ಲಿ ಹಳ್ಳಿ ಹುಡುಗಿಯಾಗಿ ಮತ್ತು ವಿನಯ್‍ ರಾಜಕುಮಾರ್‍ ಜೋಡಿಯಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಮೇಘಾ ಸೈಕಲ್‍ ಮೇಲೆ ಕುಳಿತು, ಮುಗ್ಧ ಲುಕ್ ಕೊಟ್ಟಿದ್ದಾರೆ. ಈ ಚಿತ್ರವನ್ನು ಲಹರಿ ಸಂಸ್ಥೆಯ ಮನೋಹರ್ ನಾಯ್ಡು ಮತ್ತು ಕೆ.ಪಿ. ಶ್ರೀಕಾಂತ್‍ ನಿರ್ಮಿಸಿದರೆ, ದೇವನೂರು ಚಂದ್ರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

ಮೊದಲ ಮೂರು ಚಿತ್ರಗಳು ಅಷ್ಟೇನೂ ಹೆಸರು ತಂದುಕೊಡದಿದ್ದರೂ, ಈ ಮೂರು ಚಿತ್ರಗಳ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟಿದ್ದಾರೆ. ಆ ನಿರೀಕ್ಷೆಗಳಿಗೆ ತಕ್ಕ ಹಾಗೆ ಚಿತ್ರಗಳು ಮೂಡಿಬರುತ್ತವಾ ಎಂಬುದನ್ನು ಕಾದು ನೋಡಬೇಕು.

ಭೂಮಿಕಾ

Recent Posts

ಹೈಕೋರ್ಟ್‌ಗೆ ಎರಡು ವಾರ ಚಳಿಗಾಲದ ರಜೆ: ಜನವರಿ.5ರಿಂದ ಕಲಾಪ ಪುನಾರಂಭ

ಬೆಂಗಳೂರು: ಹೈಕೋರ್ಟ್‌ಗೆ ಡಿಸೆಂಬರ್.‌20ರಿಂದ 31ರವರೆಗೆ ಎರಡು ವಾರ ಚಳಿಗಾಲದ ರಜೆ ಇರುತ್ತದೆ. ಹೊಸ ವರ್ಷದ ಮೊದಲ ದಿನ ರಜೆ ಇರಲಿದ್ದು,…

19 mins ago

ಮಾಜಿ ಸಚಿವ ಕೆ.ಎನ್‌ ರಾಜಣ್ಣ ಭೇಟಿ ಮಾಡಿದ ಡಿಸಿಎಂ

ಬೆಂಗಳೂರಿನಲ್ಲಿ ಮಾಜಿ ಸಚಿವ ಕೆ.ಎನ್‌ ರಾಜಣ್ಣ ಅವರ ನಿವಾಸಕ್ಕೆ ತೆರಳಿದ ಡಿಕೆ ಅವರು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ .…

23 mins ago

ಮಹದೇಶ್ವರ ಬೆಟ್ಟದ 108 ಅಡಿ ಪ್ರತಿಮೆ ಮುಂದೆ ರೀಲ್ಸ್‌ ಪ್ರಕರಣ: ಮಹಿಳೆ ಹಾಗೂ ಚಾಲಕನ ವಿರುದ್ಧ ಪ್ರಕರಣ ದಾಖಲು

ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ 108 ಅಡಿ ಪ್ರತಿಮೆ ಮುಂಭಾಗದಲ್ಲಿ ರೀಲ್ಸ್ ಮಾಡಿದ್ದ ಮಹಿಳೆ ಹಾಗೂ ಹಿಟಾಚಿ…

56 mins ago

ಕರ್ನಾಟಕದಲ್ಲಿ ಮೈಕೊರೆಯುವ ಚಳಿ : 7ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌

ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಚಳಿಯ ಅಬ್ಬರ ಅಧಿಕವಾಗಿದ್ದು ರಾಜ್ಯದ ಹಲವು ಭಾಗಗಳಲ್ಲಿ ತೀವ್ರ ಚಳಿ ಕಂಡುಬರುತ್ತಿದೆ . ಹವಮಾನ ಇಲಾಖೆಯ…

1 hour ago

ಪಲ್ಸ್‌ ಪೋಲಿಯೋ ಅಭಿಯಾನ ಆರಂಭ : 5 ವರ್ಷದೊಳಗಿನ ನಿಮ್ಮ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಿ !

ಕರ್ನಾಟಕದಾದ್ಯಂತ ಇಂದು ರಾಷ್ಟ್ರೀಯಾ ಪಲ್ಸ್‌ ಪೋಲಿಯೋ ಅಭಿಯಾನ 2025 ಚಾಲನೆ ಹೊರಡಿಸಲಾಗಿದ್ದು , ಡಿ.24 ವರೆಗೆ ಈ ಅಭಿಯಾನದಲ್ಲಿ 5…

1 hour ago

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ:  ಚಳಿಗಾಲದ ಸಂಸತ್ ಅಧಿವೇಶನದ ಒಂದು ವಾರೆನೋಟ

ದೆಹಲಿ ಕಣ್ಣೋಟ -ಶಿವಾಜಿ ಗಣೇಶನ್‌  ಹತ್ತೊಂಬತ್ತು ದಿನಗಳ ಸಂಸತ್ತಿನ ಚಳಿಗಾಲದ ಅಧಿವೇಶನ ಮುಕ್ತಾಯಗೊಂಡಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಎಂದಿನಂತೆ…

2 hours ago