ಕನ್ನಡದ ಜನಪ್ರಿಯ ನಿರ್ಮಾಣ ಮತ್ತು ವಿತರಣಾ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್, ನೂರಾರು ಕೋಟಿಗಳನ್ನು ಈಗಾಗಲೇ ಚಿತ್ರರಂಗದಲ್ಲಿ ಹೂಡಿಕೆ ಮಾಡಿದೆ. ಯಶ್ ಅಭಿನಯದ ‘ಟಾಕ್ಸಿಕ್’, ಧ್ರುವ ಸರ್ಜಾ ಅಭಿನಯದ ‘ಕೆಡಿ – ದಿ ಡೆವಿಲ್’ ಮತ್ತು ತಮಿಳಿನ ವಿಜಯ್ ಅಭಿನಯದಲ್ಲಿ ಚಿತ್ರಗಳನ್ನು ನಿರ್ಮಿಸುತ್ತಿದೆ. ಇದೆಲ್ಲದರ ಮಧ್ಯೆ, KVN ಪ್ರೊಡಕ್ಷನ್ಸ್ನ ವೆಂಕಟ್‍ನಾರಾಯಣ್, ಮಲಯಾಳಂನಲ್ಲಿ ಚಿತ್ರವೊಂದನ್ನು ನಿರ್ಮಿಸುವುದಕ್ಕೆ ಸಜ್ಜಾಗಿದ್ದಾರೆ. ಈ ಚಿತ್ರವನ್ನು ಅವರು ತೆಸ್ಪಿಯನ್ ಫಿಲ್ಮ್ಸ್ ಜೊತೆಗೆ ಸೇರಿ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.
ಕಳೆದ ವರ್ಷ ವಿಜಯ್ ಅಭಿನಯದ ಚಿತ್ರವನ್ನು ನಿರ್ಮಿಸುವ ಮೂಲಕ ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದ್ದ KVN ಪ್ರೊಡಕ್ಷನ್ಸ್ ಸಂಸ್ಥೆಯು, ಇದೀಗ ಮಲಯಾಳಂ ಚಿತ್ರವನ್ನು ನಿರ್ಮಿಸುವ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟಿದೆ. ಈ ಚಿತ್ರವನ್ನು ಚಿದಂಬರಂ ನಿರ್ದೇಶನ ಮಾಡುತ್ತಿದ್ದಾರೆ. ಕಳೆದ ವರ್ಷ ಮಲಯಾಳಂನಲ್ಲಿ ಬಿಡುಗಡೆಯಾದ ಅತ್ಯಂತ ಯಶಸ್ವಿ ಚಿತ್ರ ‘ಮಂಜುಮ್ಮೆಲ್ ಬಾಯ್ಸ್’ ನಿರ್ಮಿಸಿದ್ದು, ಇದೇ ಚಿದಂಬರಂ. ಇನ್ನು, ‘ರೋಮಾಂಚನಂ’, ‘ಆವೇಶಂ’ ಮುಂತಾದ ಚಿತ್ರಗಳಿಗೆ ಕಥೆ ಬರೆದಿರುವ ಜೀತು ಮಾಧವನ್ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ.
ಈ ಕುರಿತು ಮಾತನಾಡಿರುವ ವೆಂಕಟ್ ಕೆ ನಾರಾಯಣ್, ’ನಾವು ನಮ್ಮ ಸಂಸ್ಥೆಯಿಂದ ಭಿನ್ನ ಬಗೆಯ, ಸದಭಿರುಚಿಯ ಮನರಂಜನಾತ್ಮಕ ಸಿನಿಮಾಗಳನ್ನ ನೀಡಲು ಮುಂದಾಗಿದ್ದೇವೆ. ಅದರಂತೆ ಹೊಸ ಚಿಂತನೆ ಇರುವ ನಿರ್ದೇಶಕರ ಮೂಲಕ ಪ್ರೇಕ್ಷಕರನ್ನು ತಲುಪುವತ್ತ ಹೆಜ್ಜೆ ಇಟ್ಟಿದ್ದೇವೆ. ಈ ಪ್ರಯತ್ನದಲ್ಲಿ ಇದೀಗ ಮಲಯಾಳಂನಲ್ಲಿ ಚಿತ್ರರಂಗಕ್ಕೆ ಕಾಲಿಡುವುದರ ಜೊತೆಗೆ, ಮಲಯಾಳಂನ ನಮ್ಮ ಮೊದಲ ಚಿತ್ರಕ್ಕಾಗಿ ಚಿದಂಬರಂ ಅವರ ಜೊತೆಗೆ ಕೈಜೋಡಿಸಿದ್ದೇವೆ’ ಎನ್ನುತ್ತಾರೆ.
ಈ ಹೊಸ ಚಿತ್ರದ ಪೋಸ್ಟರ್ ಬಿಡುಡೆಯಾಗಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ. ತಾಯಿಯೊಬ್ಬಳು ನಗರದತ್ತ ನಡೆದು ಹೋಗುತ್ತಿರುವ ಮತ್ತು ಆಕೆಯನ್ನು ಅವಳ ಮಗ ನೋಡುತ್ತಿರುವ ದೃಶ್ಯವಿದೆ. ಇದೊಂದು ತಾಯಿ-ಮಗನ ಸೆಂಟಿಮಮೆಂಟ್‍ನ ಚಿತ್ರವಿರಬಹುದು ಎಂದು ಹೇಳಲಾಗುತ್ತಿದೆ.
KVN ಪ್ರೊಡಕ್ಷನ್ಸ್ ಸಂಸ್ಥೆಯ ಮೊದಲ ಮಲಯಾಳಂ ಚಿತ್ರಕ್ಕೆ ಶೈಜು ಖಾಲೆದ್ ಛಾಯಾಗ್ರಹಣ, ಸುಶಿನ್ ಶ್ಯಾಮ್ ಸಂಗೀತವಿದೆ. ಇನ್ನು, ಕಲಾವಿದರ ಪಟ್ಟಿ ಇನ್ನಷ್ಟೇ ಬಿಡುಗಡೆ ಆಗಬೇಕಿದೆ.
ಬೆಂಗಳೂರು: ಅತಿ ಹೆಚ್ಚು ಅಭಿಮಾನಿ ಬಳಗ ಹೊಂದಿರುವ ಐಪಿಎಲ್‌ನ 2 ತಂಡಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್…
ಟೆಹರಾನ್: ಟೆಹರಾನ್ ಮೇಲೆ ಅಮೇರಿಕಾ ನಡೆಸಿದ ಬೃಹತ್ ದಾಳಿಯಲ್ಲಿ ಇರಾನಿನ ಮಿಲಿಟರಿ ಪಡೆಯ ಉನ್ನತ ಕಮಾಂಡರ್‌ಗಳನ್ನು ಹತ್ಯೆ ಮಾಡಲಾಗಿದೆ. ಈ…
ಮಡಿಕೇರಿ: ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ತೆರಳಿದ್ದ ಕೇರಳ ಮೂಲದ ಐಟಿ ಉದ್ಯೋಗಿ ಶರಣ್ಯಾ ನಾಪತ್ತೆಯಾಗಿ ಮೂರು ದಿನಗಳು ಕಳೆದರೂ ಈವರೆಗೂ…
ಭಾರತೀಯ ರೈಲ್ವೆ ಇಲಾಖೆಯು ಕಾಯ್ದಿರಿಸುವ ಮುಂಗಡ ಟಿಕೆಟ್ ರದ್ದತಿಯ ಬಗ್ಗೆ ಹೊಸ ನಿಯಮವನ್ನು ಏಪ್ರಿಲ್ ೧ರಿಂದ ಜಾರಿಗೆ ತಂದಿದೆ. ಪ್ರಯಾಣಿಸುವ…
ಮೈಸೂರು ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಕೌಂಟರ್‌ಗಳ ಸಂಖ್ಯೆ ಕಡಿಮೆ ಇರುವುದರಿಂದ ನಿಧಾನಗತಿಯಲ್ಲಿ ಕೆಲಸ ಸಾಗುತ್ತಿದೆ. ಹಿರಿಯ…
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ! ಜನಪ್ರಿಯ ಕವಿ ಗೋಪಾಲಕೃಷ್ಣ ಅಡಿಗರ ಕವನದ ಈ ಸಾಲು ಇಂದಿನ ಕಾಲಮಾನದ ಜನಮಾನಸಕ್ಕೆ…